ಸೂರತ್ : ಸೂರತ್ನಲ್ಲಿ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೇ ಕಾಂಗ್ರೆಸ್ ತನ್ನ ಅಭ್ಯರ್ಥಿ ನೀಲೇಶ್ ಕುಂಬಾನಿಯನ್ನು ಪಕ್ಷದಿಂದ 6ವರ್ಷಗಳ ಕಾಲ ಉಚ್ಛಾಟಿಸಿದೆ.
ನೀಲೇಶ್ ಕುಂಬಾನಿಯನ್ನು ಮುಂದಿನ ಆರು ವರ್ಷಗಳವರೆಗೆ ಪಕ್ಷದ ಸದಸ್ಯತ್ವದಿಂದ ಅಮಾನತುಗೊಳಿಸಲು ಕಾಂಗ್ರೆಸ್ ಶಿಸ್ತು ಸಮಿತಿ ನಿರ್ಧರಿಸಿದೆ.
ಇದನ್ನು ಓದಿ : ಮತದಾನದ ಹಕ್ಕು ಪೋರೈಸಿ ಪ್ರಾಣ ಬಿಟ್ಟ ವೃದ್ಧರು
ನಾಮಪತ್ರ ರದ್ದಿಗಾಗಿ ತೋರಿರುವ ನಿರ್ಲಕ್ಷ್ಯ ಹಾಗೂ ಬಿಜೆಪಿ ಜೊತೆಗಿನ ಒಡನಾಟವನ್ನು ಉಲ್ಲೇಖಿಸಿ ಉಚ್ಛಾಟಿಸಿರುವ ಬಗ್ಗೆ ಕಾಂಗ್ರೆಸ್ ಶಿಸ್ತುಸಮಿತಿ ಹೇಳಿದೆ.
ಸೂರತ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಬಾನಿ ನಾಮಪತ್ರ ತಿರಸ್ಕೃತಗೊಂಡಿತ್ತು.
ಇದನ್ನು ನೋಡಿ : “ಶೃತಿ ಮೆಡಂ ಶಕ್ತಿ ಯೋಜನೆ ನಮಗೆ ಬಲ ತಂದಿದೆ” ಬಾಯಿ ಇದೆ ಅಂತ ಹೆಂಗೆಂಗೊ ಮಾತಾಡಿದ್ರೆ ಹೇಗೆ ಮೆಡಂ” – ಮಹಿಳೆಯರ ಆಕ್ರೋಶ