ನವದೆಹಲಿ: ಕಳೆದದೈ ವರ್ಷಗಳಲ್ಲಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು ಒಟ್ಟಾರೆ ₹88,882 ಕೋಟಿಯಷ್ಟು ಮೊತ್ತ ವಿದೇಶದಿಂದ ದೇಣಿಗೆಯನ್ನು ಸಂಗ್ರಹಿಸಿಕೊಂಡಿದೆ ಎಂದು ವರದಿಯಾಗಿದ್ದು, ಅದರಲ್ಲೂ ಕಳೆದ ವರ್ಷ ಅತಿ ಹೆಚ್ಚು ವಿದೇಶಿ ದೇಣಿಗೆಯನ್ನು ಪಡೆಯುವ ಎರಡನೇ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ.
2018 ರಿಂದ 2022ರ ನಡುವೆ ಈ ದೇಣಿಗೆ ಬಂದಿದ್ದು, ಎನ್ಜಿಓ ಸಂಸ್ಥೆಗಳು ವಿದೇಶಿ ದೇಣಿಗೆ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ಅನೇಕ ಎನ್ಜಿಓಗಳ ಮೇಲೆ ದಾಳಿಗಳು ನಡೆದಿದ್ದವು. ಇದರೊಂದಿಗೆ ಹಲವಾರು ಎನ್ಜಿಓಗಳ ಪರವಾನಗಿಯನ್ನು ರದ್ದುಪಡಿಸಿತ್ತು. ಆದರೂ ವರ್ಷದಿಂದ ವರ್ಷಕ್ಕೆ ವಿದೇಶಿ ದೇಣಿಗೆ ಪಡೆದುಕೊಳ್ಳುವ ಪ್ರಮಾಣ ಏರಿಕೆಯಾಗುತ್ತಲೇ ಇದೆ.
ಇದನ್ನು ಓದಿ: ವಿದೇಶಿ ಬಂಡವಾಳದ ಒತ್ತಡ ಮತ್ತು ಒಂದು ಕೈಲಾಗದ ಸರಕಾರ
ಇದರ ಬಗ್ಗೆ ಗೃಹ ಸಚಿವಾಲಯವು ಮಾಹಿತಿ ನೀಡಿದ್ದು, 2018ಯಿಂದ 2022ರ ನಡುವೆ ವಿದೇಶಿ ಕೊಡುಗೆಗಳ ಕಾಯ್ದೆಯಡಿಯಲ್ಲಿ ಒಟ್ಟು 1,827 ಎನ್ಜಿಒಗಳು ನೋಂದಣಿಯನ್ನು ರದ್ದುಗೊಳಿಸಿಸಲಾಗಿದೆ. ವಿದೇಶಿ ನಿಧಿಯು 2019-20ರಲ್ಲಿ 16,306 ಕೋಟಿ ರೂ., 2020-21ರಲ್ಲಿ 17,059 ಕೋಟಿ ರೂ., 2021-22ರಲ್ಲಿ 22,085ರೂ.ಗೆ ಏರಿದೆ ಎಂದು ಬಹಿರಂಗಪಡಿಸಿದೆ. 2017ರಿಂದ 2021ರ ನಡುವೆ 6,677 ಎನ್ಜಿಓಗಳ ನೋಂದಣಿ ರದ್ದುಗೊಂಡಿದೆ. ಅಷ್ಟೇ ಅಲ್ಲದೇ ಸದ್ಯಕ್ಕೆ ದೇಶದಲ್ಲಿ ವಿದೇಶಿ ದೇಣಿಗೆ ಸ್ವೀಕರಿಸಲು 16,383 ಎನ್ಜಿಓಗಳಿಗೆ ಅರ್ಹತೆಯಿದೆ.
2019-20, 2020-2021, 2021-22ರ 3 ಹಣಕಾಸು ವರ್ಷಗಳಲ್ಲಿ ರಾಜ್ಯವಾರು ವಿಭಜಿಸಿದಾಗ ದೆಹಲಿ ಮೂಲದ ಎನ್ಜಿಓಗಳು ಅತಿಹೆಚ್ಚು ವಿದೇಶಿ ಹಣವನ್ನು ಪಡೆಯುತ್ತಿವೆ. 2019-20 ಹಾಗೂ 2020-21ರಲ್ಲಿ ಅತಿ ಹೆಚ್ಚು ವಿದೇಶಿಗಳನ್ನು ಹೊಂದಿದ್ದ ತಮಿಳುನಾಡು ಹೊಂದಿತ್ತು. ಆದರೆ 2021– 22ರಲ್ಲಿ ತಮಿಳುನಾಡನ್ನು ಕರ್ನಾಟಕ ಹಿಂದಿಕ್ಕಿ ಎರಡನೇ ಅತಿ ಹೆಚ್ಚು ವಿದೇಶಿ ಹಣವನ್ನು ಸ್ವೀಕರಿಸುವ ರಾಜ್ಯವಾಗಿ ಹೊರಹೊಮ್ಮಿದೆ. ಮಹಾರಾಷ್ಟ್ರ ನಿರಂತರವಾಗಿ ನಾಲ್ಕನೇ ಸ್ಥಾನದಲ್ಲಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ