ಹೊಸ ವರ್ಷ ತರಲಿ ಹರ್ಷ

ಹೊಸ ವರ್ಷ ತರಲಿ ಹರ್ಷ

– ಗುರುರಾಜ ದೇಸಾಯಿ

ಅಂಕಿಗಳು’ ಎಂಬ ಕ್ಯಾಲೆಂಡರ್
ಆಟವನ್ನು ತಿರುಗಿಸವ ಸಮಯ
ಇದು ಪ್ರತಿ ವರ್ಷದ ಅಭಯ

ಹೊಸ ವರ್ಷ
ಬರುವುದು ವರ್ಷ ವರ್ಷ
ಇರಬೇಕು ನಮ್ಮೊಳಗೆ
ದೇಶ ಕಟ್ಟುವ ಹರ್ಷ
ಇದು ಮಾನವೀಯತೆಯ ಸ್ಪರ್ಷ.

ಮನದೊಗಿರುವ ಕ್ರೌರ್ಯ,
ತಾತ್ಸಾರ, ಜಿಗುಪ್ಸೆ, ವಂಚನೆಗಳ
ಮೂಟೆ ಕಟ್ಟಿ ಬಿಸಾಕೋಣ ಆಚೆ.
ಬೆನ್ನಿಗೆ ನಿಂತ, ಕೈ ಹಿಡಿದು ನಡೆಸಿದ
ಅಂಕಿಗಳ ಸಂಖ್ಯೆ ಹೆಚ್ಚಾಗಲಿ ಈಚೆ

ಸೌಹಾರ್ಧತೆ ಬೆಳೆಸೋಣ
ಪರಿಸರ ಉಳಿಸೋಣ
ಸಂವಿಧಾನ ರಕ್ಷಿಸೋಣ
ಹಕ್ಕುಗಳ ಕೇಳೋಣ
ನಾಡಿಗಾಗಿ ದುಡಿಯೋಣ.

ಎರಡು ಸಾವಿರದ ಇಪ್ಪತ್ತಾರು
ತರದಿರಲಿ ಆಪತ್ತು
ಜೀವನವಾಗಿರಲಿ ಗಮ್ಮತ್ತು
ಅಂದುಕೊಂಡ ಆಶಯ
ಮೂಡಲಿ ಸದಾಶಯ
ಹೊಸವರ್ಷದ ಶುಭಾಶಯ

Donate Janashakthi Media

Leave a Reply

Your email address will not be published. Required fields are marked *