ಸರ್ಕಾರದಿಂದ ಖಾಸಗಿ ಶಾಲೆಗಳ ದಾಖಲಾತಿಗೆ ಹೊಸ ರೂಲ್ಸ್

ಕರ್ನಾಟಕ ಸರ್ಕಾರವು ಖಾಸಗಿ ಶಾಲೆಗಳ ದಾಖಲಾತಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳು ಪೋಷಕರ ಸಂದರ್ಶನ ಮತ್ತು ಇಚ್ಛೆಯ ಶುಲ್ಕವನ್ನು ನಿಷೇಧಿಸುತ್ತವೆ. ಇದನ್ನೂ ಓದಿ: ಸಂವಿಧಾನ ಚೌಕಟ್ಟಿನಲ್ಲಿ ಎಲ್ಲಾ ಸಮುದಾಯಗಳಿಗೆ ಸಮಾನವಾದ ಅವಕಾಶಗಳನ್ನು ಕಲ್ಪಿಸಬೇಕು ಆಹಾರ ಸಚಿವ:- ಕೆಹೆಚ್.ಮುನಿಯಪ್ಪ

ಪ್ರಮುಖ ನಿಯಮಗಳು:

  • ವಿದ್ಯಾರ್ಥಿಗಳು ಅಥವಾ ಪೋಷಕರಿಗೆ ಯಾವುದೇ ಪರೀಕ್ಷೆ ಅಥವಾ ಸಂದರ್ಶನವನ್ನು ನಡೆಸುವಂತಿಲ್ಲ.
  • ಶಾಲೆಗಳು ತಮ್ಮ ಶುಲ್ಕವನ್ನು ನೋಟಿಸ್‌ಬೋರ್ಡ್, ವೆಬ್‌ಸೈಟ್ ಮತ್ತು ಎಸ್‌ಎಟಿಎಸ್‌ನಲ್ಲಿ ಪ್ರಕಟಿಸಬೇಕು.
  • ಶುಲ್ಕದ ಸಂಪೂರ್ಣ ವಿವರವನ್ನು ಶಾಲೆಯ ಮಾಹಿತಿ ಪುಸ್ತಕದಲ್ಲಿ ಮುದ್ರಿಸಬೇಕು.
  • ಅಧಿಸೂಚಿಸಿದ ಶುಲ್ಕವನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಶುಲ್ಕವನ್ನು ಪೋಷಕರಿಂದ ಸಂಗ್ರಹಿಸುವಂತಿಲ್ಲ.
  • ಖಾಸಗಿ ಶಾಲೆಗಳು 25% ಆರ್‌ಟಿಇ ಸೀಟುಗಳನ್ನು ಕಡ್ಡಾಯವಾಗಿ ಮೀಸಲಿಡಬೇಕು.
  • ಎಸ್‌ಸಿ/ಎಸ್‌ಟಿ ಆಡಳಿತ ಮಂಡಳಿಯ ಶಾಲೆಗಳಲ್ಲಿ 50% ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಮೀಸಲಾತಿ ಇರಬೇಕು.
  • ಸಹಶಿಕ್ಷಣ ಶಾಲೆಗಳಲ್ಲಿ ಒಟ್ಟು ಪ್ರವೇಶದ 50% ಹೆಣ್ಣುಮಕ್ಕಳಿಗೆ ಮೀಸಲಾತಿ ನೀಡಬೇಕು.

ಈ ನಿಯಮಗಳನ್ನು ಉಲ್ಲಂಘಿಸುವ ಶಾಲೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ.

ಇದನ್ನೂ ಓದಿ:ಈ 35 ಔಷಧ ಉತ್ಪಾದನೆ ನಿಲ್ಲಿಸುವಂತೆ ಕೇಂದ್ರ ಸೂಚನೆ

 

Donate Janashakthi Media

Leave a Reply

Your email address will not be published. Required fields are marked *