ನವದೆಹಲಿ: ಸೋಮವಾರದ ದಿನದ ಅಂತ್ಯಕ್ಕೆ 12,286ರ ಕೋವಿಡ್-19 ಪ್ರಕರಣಗಳ ಹೊಸ ಸೋಂಕುಗಳು ವರದಿಯಾಗಿ ಮತ್ತೆ ಏರಿಕೆ ಹಂತದಲ್ಲಿದೆ. ಇದುವರೆಗೆ ಒಟ್ಟಾರೆಯಾಗಿ 1,11,24,527 ಕ್ಕೆ ಕೋವಿಡ್ ಪ್ರಕರಣ ಏರಿದೆ. 91 ಹೊಸ ಸಾವಿನೊಂದಿಗೆ ಒಟ್ಟಾರೆ ಸಾವು 1,57,248 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯ ಇಂದು ತಿಳಿಸಿದೆ.
ಕೊರೊನಾ ಸೋಂಕಿತರಲ್ಲಿ ಚೇತರಿಸಿಕೊಂಡವರ ಸಂಖ್ಯೆ 1,07,98,921ಕ್ಕೆ ಏರಿಕೆಯಾಗಿದ್ದು, ಇದು ರಾಷ್ಟ್ರೀಯ ಕೋವಿಡ್-19 ಚೇತರಿಕೆ ಶೇಕಡಾ 97.07 ರಷ್ಟಾಗಿದೆ. ಆದರೆ ಸಾವಿನ ಪ್ರಮಾಣವು ಶೇಕಡಾ 1.41 ರಷ್ಟಾಗಿದೆ.
ಶೇಕಡಾ 70 ರಷ್ಟು ಸಾವುಗಳು ಸಹ ಅನ್ಯ ಕಾಯಿಲೆಗಳಿಂದಾಗಿ ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 1,68,358 ಎಂದು ದಾಖಲಿಸಲಾಗಿದೆ, ಇದು ಒಟ್ಟು ಸೋಂಕಿತರಲ್ಲಿ ಶೇಕಡಾ 1.51 ರಷ್ಟಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ ಮಾರ್ಚ್ 01ರವರೆಗೆ 21,76,18,057 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ ಸೋಮವಾರದಂದು 7,59,283ರಷ್ಟು ಮಾದರಿಗಳನ್ನು ಪತ್ತೆ ಮಾಡಲಾಗಿದೆ.
ಲಸಿಕೆ ಅಭಿಯಾನ ಆರಂಭವಾದ ನಂತರದಿಂದ ಇಲ್ಲಿಯವರೆಗೆ ಒಟ್ಟು 1,48,54,136 ಜನರಿಗೆ ಕೋವಿಡ್-19 ಲಸಿಕೆ ನೀಡಲಾಗಿದೆ. ದೇಶದಲ್ಲಿ ಈವರೆಗೆ ಒಟ್ಟು 1,57,248 ಸಾವುಗಳು ಸಂಭವಿಸಿದ್ದು, ಮಹಾರಾಷ್ಟ್ರದಲ್ಲಿ 52,184, ತಮಿಳುನಾಡಿನಲ್ಲಿ 12,501, ಕರ್ನಾಟಕದಲ್ಲಿ 12,336, ದೆಹಲಿಯಲ್ಲಿ 10,911, ಪಶ್ಚಿಮ ಬಂಗಾಳದಲ್ಲಿ 10,268, ಉತ್ತರಪ್ರದೇಶದಲ್ಲಿ 8,727 ಮತ್ತು ಆಂಧ್ರಪ್ರದೇಶದಲ್ಲಿ 7,169 ಕೋವಿಡ್ ಕಾರಣದಿಂದ ಸಾವುಗಳು ಸಂಭವಿಸಿವೆ.