– ಬಿ. ಶ್ರೀಪಾದ ಭಟ್
ಈಗಾಗಲೇ ಅಪಾಯಕಾರಿ ಜೀವ ವಿರೋಧಿ ವಿಚಾರಗಳನ್ನು, ಚಾತುರ್ವರ್ಣ ಸಿದ್ಧಾಂತವನ್ನು ಸಮರ್ಥಿಸುವ ‘ಭಾರತೀಯ ಜ್ಞಾನ’ದ ಪೊಸಿಷನ್ ಪೇಪರ್ಸ್‌ನ್ನು ಮುಖ್ಯ ಥೀಮ್ ಎಂದು ಪರಿಗಣಿಸಿದ್ದಾರೆ.
ಎನ್‌ಇಪಿ ಕುರಿತಾದ ಚರ್ಚೆಯಲ್ಲಿ ಅನೇಕರು ‘ಅದರಲ್ಲಿ ಹಲವು ಒಳ್ಳೆಯ ಅಂಶಗಳಿವೆ, ಅದನ್ನು ಬಳಸಿಕೊಳ್ಳಬೇಕು’ ಎಂದು ಪ್ರತಿಪಾದಿಸಿದ್ದರು. ಆದರೆ ಕಸ್ತೂರಿ ರಂಗನ್ ಸಮಿತಿ ಶಿಫಾರಸ್ಸನ್ನು ಆಧರಿಸಿದ ಇಡೀ ಎನ್ಇಪಿ ಯ ಆತ್ಮವೇ ಆರ್‌ಎಸ್ಎಸ್ ನ ಚಾತುರ್ವರ್ಣ ಸಿದ್ಧಾಂತವನ್ನು ಪ್ರತಿಪಾದಿಸುತ್ತಿರುವಾಗ, ವೃತ್ತಿಪರ ಶಿಕ್ಷಣದ ನೆಪದಲ್ಲಿ ವಂಚಿತ ಸಮುದಾಯಗಳ ಮಕ್ಕಳ ಶಿಕ್ಷಣವನ್ನು ವಂಚಿಸುವ ವಿಚಾರಗಳನ್ನು ಜಾರಿಗೊಳಿಸಲು ಮುಂದಾಗಿರುವಾಗ ಮತ್ತು ಮುಖ್ಯವಾಗಿ ಸಂವಿಧಾನದ ಆಶಯ, ವೈಜ್ಞಾನಿಕ ಮನೋಧರ್ಮ ಮತ್ತು ವೈಚಾರಿಕತೆಯನ್ನು ಪರಿಗಣಿಸದಿರುವಾಗ ಯಾವುದು ಒಳ್ಳೆಯ ಅಂಶಗಳು ಎನ್ನುವ ಪ್ರಶ್ನೆಗೆ ಉತ್ತರವಿರಲಿಲ್ಲ.
ಈಗ ಬುಟ್ಟಿಯಿಂದ ಹಾವುಗಳು ಹೊರಬರುತ್ತಿವೆ. ಎನ್ಇಪಿ ಹೆಸರಿನಲ್ಲಿ ಪೊಸಿಷನ್ ಪೇಪರ್ಸ್ ಎನ್ನುವ ಬ್ರಾಹ್ಮಣೀಕರಣ, ಚಾತುರ್ವರ್ಣ ಪದ್ಧತಿಯ ಸಮರ್ಥನೆಯ ಪಠ್ಯ ಕ್ರಮ ರೂಪಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಎನ್‌ಸಿಎಫ್ ರಚಿಸುತ್ತಿದ್ದಾರೆ. ಇದಕ್ಕೆ ಅನುಗುಣವಾಗಿ ಎನ್‌ಸಿಇಆರ್‌ಟಿಯನ್ನು ಸಮಗ್ರವಾಗಿ ಬದಲಾಯಿಸುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಈಗ ‘Malavia mission- teacher training programme’ ಎನ್ನುವ ದಸ್ತಾವೇಜು ಬಿಡುಗಡೆಗೊಳಿಸಿದ್ದಾರೆ. ಭವಿಷ್ಯದ ತಲೆಮಾರು ರೂಪಿಸುವ ಈ ಶಿಕ್ಷಕರ ತರಬೇತಿ ಯೋಜನೆಲ್ಲಿ ಏನಿದೆ?
ಶಿಕ್ಷಕರ ತರಬೇತಿಗಾಗಿ ಎಂಟು ‘ಥೀಮ್’ಗಳನ್ನು ಗುರುತಿಸಿದ್ದಾರೆ. ಅದರ ‘holistic concept’ ಥೀಮ್‌ನ ಅಡಿಯಲ್ಲಿ ‘ಭಗವದ್ಗೀತ, ಭಾರತೀಯ ಕೇಂದ್ರಿತ ಪಾವಿತ್ರ್ಯತೆಯ ಜೀವನ, ವೈಯಕ್ತಿಕವಾಗಿ ಪಾವಿತ್ರ್ಯತೆಯ ಬೆಳವಣಿಗೆ, ದೇಹ, ಮನಸ್ಸು, ಆತ್ಮ, ಬೌದ್ಧಿಕತೆಯ ಸಮಗ್ರ ಬೆಳವಣಿಗೆ, ಗುರು-ಶಿಷ್ಯ ಪರಂಪರೆಯ ವಿಚಾರ, ಬೋಧನೆ- ಕಲಿಕೆಗಾಗಿ ಗುರುಕುಲ ಪದ್ಧತಿಯ ಅಗತ್ಯ.
ಇದನ್ನೂ ಓದಿ:ಎನ್‌ಇಪಿಗೆ ವಿಷಯಗಳ ಸೇರ್ಪಡೆ ಕುರಿತ ಸಮಿತಿಯ ಶಿಫಾರಸ್ಸು ಅವೈಜ್ಞಾನಿಕ: ಎಐಡಿಎಸ್‌ಓ
ಪ್ರಾಚೀನ ಕಾಲದ ತಕ್ಷಶಿಲಾ, ನಳಂದ, ವಿಕ್ರಮಶಿಲಾಗಳಲ್ಲಿ ಬೋಧಿಸಿದ ಶಿಕ್ಷಣದ ಅಳವಡಿಕೆ. ವಿವೇಕಾನಂದ, ಅರಬಿಂದೋ, ಮಾಳವೀಯ ರಂತಹವರ ಅಧ್ಯಯನ.’Human values, ethics, personality development and environment education’ ಉಪ ಥೀಮ್‌ನಲ್ಲಿ ಪುರುಷಾರ್ಥ, ಧರ್ಮ, ಅರ್ಥ, ಕರ್ಮ, ಮೋಕ್ಷ, ತ್ಯಾಗ, ಸತ್ಯ ಮುಂತಾದವುಗಳ ಶಿಕ್ಷಣ, ವಸುದೈವ ಕುಟುಂಬಂನ ಪರಿಕಲ್ಪನೆಯ ಬೋಧನೆ ಮತ್ತು ಕಲಿಕೆ.
ಈಗಾಗಲೇ ಅಪಾಯಕಾರಿ ಜೀವ ವಿರೋಧಿ ವಿಚಾರಗಳನ್ನು, ಚಾತುರ್ವರ್ಣ ಸಿದ್ಧಾಂತವನ್ನು ಸಮರ್ಥಿಸುವ ‘ಭಾರತೀಯ ಜ್ಞಾನ’ದ ಪೊಸಿಷನ್ ಪೇಪರ್ಸ್‌ನ್ನು ಮುಖ್ಯ ಥೀಮ್ ಎಂದು ಪರಿಗಣಿಸಿದ್ದಾರೆ. ಇದರ ಜೊತೆಗೆ ಅನುಬಂಧ ಚಾತುಷ್ಟ್ಯ, ಪಂಚ ಮಹಾ ಭೂತ, ಪಂಚ ಕೋಶಗಳು, ಪಂಚಪ್ರಾಣಗಳು ಇತ್ಯಾದಿ ಶಿಕ್ಷಣ. ಧರ್ಮ, ಪುಣ್ಯ, ಆತ್ಮ, ಕರ್ಮ, ಯಜ್ಞ, ಶಕ್ತಿ, ವರ್ಣ, ಜಾತಿ, ಮೋಕ್ಷ, ಲೋಕ, ದಾನ, ಇತಿಹಾಸ, ಪುರಾಣಗಳ ಶಿಕ್ಷಣ. ಜೊತೆಗೆ ಪ್ರಜಾತಂತ್ರ, ಲೋಕತಂತ್ರ, ಸ್ವರಾಜ್ಯ ಮುಂತಾದವುಗಳ ಕಲಿಕೆ.
ಇನ್ನುಳಿದ ಹತ್ತು ಪುಟಗಳಲ್ಲಿ ಈ ಯೋಜನೆಗಾಗಿ 111 ವಿಶ್ವವಿದ್ಯಾಲಯಗಳನ್ನು ಕೇಂದ್ರಗಳಾಗಿ ಗುರುತಿಸಿದ್ದಾರೆ. ಜೊತೆಗೆ ತಂತ್ರಜ್ಞಾನ ಕಲಿಕೆ, ಸಂಶೋಧನೆ ಇತ್ಯಾದಿ ಕುರಿತು ವಿವರಿಸಿದ್ದಾರೆ. ಇಂತಹ ಅಪಾಯಕಾರಿ ಯೋಜನೆಗೆ ವಿವರಣೆ ಅಗತ್ಯವಿಲ್ಲ. ಪ್ರಭುತ್ವ ಫ್ಯಾಸಿಸಂನ ಬೆಳವಣಿಗೆಗೆ ಪ್ರಜೆಗಳ ಮೌನವೂ ಸಹ ತನ್ನ ಕೊಡುಗೆ ನೀಡುತ್ತದೆ ಎನ್ನುವ ಕಟುಸತ್ಯ ಮತ್ತೆ ಮತ್ತೆ ಸಾಬೀತಾಗುತ್ತಿದೆ.
ವಿಡಿಯೋ ನೋಡಿ:ಅಸಹಜ ಸಾವುಗಳಲ್ಲಿ ಹರಿದ ನೆತ್ತರಿಗೆ ಉತ್ತರ ಕೊಡಿ – ಕೆ.ಎಸ್. ವಿಮಲಾ Janashakthi Media