ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ತರಾತುರಿಯಲ್ಲಿ ಯಾರನ್ನು ಮೆಚ್ಚಿಸಲು ಜಾರಿಗೆ ಮಾಡಿಲು ಆದೇಶ ಮಾಡಿದ್ದು, ಸರಿಯಲ್ಲ ಸರ್ಕಾರ ತನ್ನ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ರಾಜ್ಯ ಸಮತಿಯು ಒತ್ತಾಯ ಮಾಡಿದೆ.
ಈ ಕುರಿತು ಸಂಘಟನೆಯ ರಾಜ್ಯಾಧ್ಯಕ್ಷರಾದ ಅಮರೇಶ ಕಡಗದ, ರಾಜ್ಯ ಕಾರ್ಯದರ್ಶಿ ವಾಸುದೇವ ರಡ್ಡಿ ಪತ್ರಿಕೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ಜಾರಿ ಮಾಡವು ಕುರಿತು ರಾಜ್ಯದ ವಿಧಾನಸಭೆಯಲ್ಲಿ ಸಮಗ್ರವಾಗಿ ಚರ್ಚೆ ಮಾಡಬೇಕೆಂದು ಫೆಬ್ರವರಿ 2020 ರಿಂದಲೂ ಸರ್ಕಾರಕ್ಕೆ ಹೋರಾಟದ ಮೂಲಕ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದೆ ಅಲ್ಲದೆ ರಾಜ್ಯದ ವಿರೋಧ ಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ರವರಿಗೆ ಮನವಿ ಪತ್ರ ಸಲ್ಲಿಸಿ ಸಮಗ್ರ ಚರ್ಚೆಗೆ ಒತ್ತಾಯಿಸಿದೆವು ಆದರೆ ಅವರು ನಮ್ಮ ಮನವಿಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ. ವಿಪಕ್ಷ ನಾಯಕ ಸಿದ್ಧರಾಮಯ್ಯನವರು ಮಾತ್ರ ಶಿಕ್ಷಣ ನೀತಿ ಬೇಡ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ, ಇದು ಸ್ವಾಗತದ ವಿಚಾರ. ಅಧಿವೇಶನದಲ್ಲಿ ಹಾಗೂ ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದು SFI ಆಗ್ರಹಿದೆ.
ಶಿಕ್ಷಣವು ಸಂವಿಧಾನದ ಒಕ್ಕೂಟ ವ್ಯವಸ್ಥೆಯಲ್ಲಿ ಬರುತ್ತಿದ್ದು ಕೇಂದ್ರ ಸರ್ಕಾರವು ಸರ್ವಾಧಿಕಾರಿ ತನ್ನದಿಂದ ಯಾವುದೇ ರೀತಿಯಲ್ಲಿ ಚರ್ಚೆ ಮಾಡದೆ ಹಿಟ್ಲರ್ ಆಡಳಿತ ನಡೆಸುತ್ತದೆ ಅದೇ ಮಾದರಿಯಲ್ಲಿ ರಾಜ್ಯದ ನೂತನ ಉನ್ನತ ಶಿಕ್ಷಣ ಸಚಿವರು ಯಾರನ್ನು ಮೆಚ್ಚಿಸಲು ತಾವು ಕೂಡ ಸರ್ವಾಧಿಕಾರತ್ವ ಮಾದರಿಯಲ್ಲಿ ಆದೇಶವನ್ನು ಜಾರಿ ಮಾಡಿರಿವುದು ಸರಿಯಲ್ಲ ಎಂದು ಎಸ್.ಎಫ್.ಐ ಆಕ್ಷೇಪ ವ್ಯಕ್ತಪಡಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿ ಮಾಡಬೇಕಾದರೆ ರಾಜ್ಯದ ವಿಧಾನ ಸಭೆಯಲ್ಲಿ ಚರ್ಚಿಸಿ, ಉಪನ್ಯಾಸಕರು ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ತಜ್ಞರು,ಸಾಹಿತಿಗಳು, ಉಪನ್ಯಾಸಕರು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಮಗ್ರವಾಗಿ ಚರ್ಚಿಸಿ ಜಾರಿಗೆ ಮಾಡುವ ಕುರಿತು ಚಿಂತನೆ ಮಾಡಲಿ, ಅದರಲ್ಲಿ ಕನ್ನಡ ಭಾಷೆಯ ಕುರಿತು ಗೊಂದಲಗಳಿವೆ ಅಲ್ಲದೆ ಖಾಸಗಿ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಒಳಗೊಂಡಿದೆ ಮತ್ತು ತರಾತುರಿಯಲ್ಲಿ ಜಾರಿಗೆ ಮಾಡಲು ಹೊರಟಿರುವ ರಾಜ್ಯ ಸರ್ಕಾರಕ್ಕೆ ಸಂಘಟನೆಯ ಪ್ರಶ್ನೆ ಏನೆಂದರೆ ರಾಜ್ಯದ ಬಹುತೇಕ ಪದವಿ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲ, ಶೌಚಾಲಯಗಳಿಲ್ಲ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ವಿಶ್ರಾಂತಿ ಕೊಠಡಿಗಳಿಲ್ಲ ಬಹುತೇಕ ಕಾಲೇಜುಗಳಲ್ಲಿ ಪೂರ್ಣಪ್ರಮಾಣದಲ್ಲಿ ಉಪನ್ಯಾಸಕರ ಇಲ್ಲ ಇನ್ನು ಪ್ರಾಥಮಿಕ ಶಿಕ್ಷಣ ಇದಕ್ಕಿಂತ ತುಂಬಾ ಹೀನಾಯ ಸ್ಥಿತಿಯಲ್ಲಿ ಇದೆ, ಸರಕಾರ ಮೊದಲು ಪೂರ್ಣಪ್ರಮಾಣದಲ್ಲಿ ಶಿಕ್ಷಕ ಉಪನ್ಯಾಸಕರನ್ನು ಭರ್ತಿ ಮಾಡಿಕೊಳ್ಳಲಿ ಮೂಲಭೂತ ಸೌಲಭ್ಯಗಳನ್ನು ಕೊಡಲಿ, ಇರುವಂತ ಶಿಕ್ಷಣ ಪದ್ಧತಿಯನ್ನು ಬಲಿಷ್ಠಗೊಳಿಸಲಿ ಅದು ಬಿಟ್ಟು ಹೆಸರಿಗೋಸ್ಕರ ನೂತನ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರುವುದರ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುವ ಪದ್ಧತಿಗೆ ಸರಕಾರ ಕೈ ಹಾಕಿದೆ ಎಂದು ಎಸ್.ಎಫ್.ಐ ಆಕ್ರೋಶ ವ್ಯಕ್ತಪಡಿಸಿದೆ.