ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020ಯ ಕುರಿತು ರಾಜ್ಯಮಟ್ಟದ ವೆಬಿನಾರ್ ಅನ್ನು ಸೆ.16ರಂದು SFI, AISF NSUI,VJDS, ಹಾಗೂ AISA, VBV ಸಂಘಟನೆಗಳು ಆಯೋಜಿಸಿವೆ.
ವೆಬಿನಾರ್ ಕುರಿತು ಮಾಹಿತಿ ನೀಡಿರುವ ಭಾರತ ವಿದ್ಯಾರ್ಥಿ ಫೆಡರೇಷನ್ ರಾಜ್ಯಾಧ್ಯಕ್ಷ ಅಮರೇಶ ಕಡಗದ, ವೆಬಿನಾರ್ ಅನ್ನು ಮಾಜಿ ಶಾಸಕ ವೈ.ಎಸ್.ವಿ.ದತ್ತ ಉದ್ಘಾಟನೆ ಮಾಡಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಯ ಹಿಂದಿರುವ ರಾಜಕೀಯ ಹುನ್ನಾರ ಕುರಿತು ಚಿಂತಕ ಡಾ: ಸಿದ್ದನಗೌಡ ಪಾಟೀಲ್ ಮಾತನಾಡಲಿದ್ದಾರೆ, ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಹೆಣ್ಣು ಮಕ್ಕಳ ಶಿಕ್ಷಣ ಕುರಿತು ಸಾಹಿತಿ, ಹೋರಾಟಗಾರ್ತಿ ಕೆ.ನೀಲಾ ಮಾತನಾಡಲಿದ್ದಾರೆ. ಉನ್ನತ ಶಿಕ್ಷಣದ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಗಳು ಮತ್ತು ಪ್ರತಿರೋಧ ಕುರಿತು ರಾಮನಗರ ಸ್ನಾತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ ಪ್ರೊ. ಡಿ.ಡೊಮಿನಿಕ್ ವಿವರಣೆ ನೀಡಲಿದ್ದಾರೆ, ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಸಾಮಾಜಿಕ ನ್ಯಾಯ ಕುರಿತು ವಕೀಲ ಅನಂತ ನಾಯ್ಕ ಮಾತನಾಡುವವರು, ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ಐಕ್ಯ ಹೋರಾಟ ಕುರಿತು ಪ್ರಗತಿಪರ ಚಿಂತಕ ಕ್ಲಿಫ್ಟಾನ್ ಡಿ ರೊಜಾರಿಯೋ ಮಾತನಾಡುತ್ತಾರೆ.
ಸಭೆ ಸಭೆಯ ಅಧ್ಯಕ್ಷತೆಯನ್ನು NSUI ರಾಜ್ಯ ಅಧ್ಯಕ್ಷರಾದ ಮಂಜುನಾಥ ಗೌಡ ವಹಿಸಲಿದ್ದಾರೆ. ಈ ವೆಬಿನಾರ್ನಲ್ಲಿ ಸಾಹಿತಿಗಳು, ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು, ಪತ್ರಕರ್ತರು, ವಕೀಲರು, ವಿವಿಧ ರಂಗದಲ್ಲಿ ಕೆಲಸ ಮಾಡುವವರು ಭಾಗವಹಿಸಲಿದ್ದಾರೆ.
ಸೆ.16ರಂದು 11 ಗಂಟೆಯಿAದ ಜೂಮ್ ಅಪ್ ಮೂಲಕ ID 5992672821 ಮತ್ತು ಪಾಸ್ವರ್ಡ್ AILUKARNA3 ಹಾಕಿ ವೆಬಿನಾರ್ನಲ್ಲಿ ಭಾಗವಹಿಸಬಹುದು.