ಅಜಿತ್‌ ಪವಾರ್‌ ಸೇರಿ 9 ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ ಎನ್‌ಸಿಪಿ

ಮುಂಬೈ : ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಕ್ರಾಂತಿ ಉಂಟಾಗಿದ್ದು, ಭಾನುವಾರ ಎನ್‌ಸಿಪಿ ಪಾಳಯದ ಅಜಿತ್‌ ಪವಾರ್‌ ಹಾಗೂ 8 ಇತರೆ ಶಾಸಕರು ಮಹಾರಾಷ್ಟ್ರ ಸರ್ಕಾರದ ಜತೆ ಸೇರಿದ್ದಾರೆ. ಅಜಿತ್ ಪವಾರ್‌ ಡಿಸಿಎಂ ಆಗಿದ್ದು, ಇತರೆ 8 ಮಂದಿ ಎನ್‌ಸಿಪಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿನ್ನೆಲೆ ಇವರ ವಿರುದ್ಧ ಎನ್‌ಸಿಪಿ ಅನರ್ಹತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಮಹಾರಾಷ್ಟ್ರ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ಗೆ ಅನರ್ಹತೆ ಅರ್ಜಿ ಕಳಿಸಿದ್ದಾರೆ. ಡಿಸಿಎಂ ಅಜಿತ್ ಪವಾರ್ ಹಾಗೂ ಹಾಗೂ ಎಂಟು ಶಾಸಕರ ವಿರುದ್ದ ಅನರ್ಹತೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಬಿಜೆಪಿ ಜತೆ ಸೇರಿ ಬಂಡೆದ್ದವರ ವಿರುದ್ಧ ಕ್ರಮಕ್ಕೆ ಎನ್‌ಸಿಪಿ ಮುಂದಾಗಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.

ಏಕನಾಥ್ ಶಿಂಧೆ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅಜಿತ್ ಪವಾರ್ ಮತ್ತು ಇತರ ಎಂಟು ಜನರ ವಿರುದ್ಧ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಅನರ್ಹತೆ ಅರ್ಜಿ ಸಲ್ಲಿಸಿದೆ. ಅಷ್ಟೇ ಅಲ್ಲದೆ, ಎನ್‌ಸಿಪಿಯ ಶ್ರೇಣಿ ಮತ್ತು ಫೈಲ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಬಳಿ ಇದೆ ಎಂದು ತಿಳಿಸುವ ಇ-ಮೇಲ್ ಅನ್ನು ಭಾರತದ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. 1999 ರಲ್ಲಿ ಶರದ್ ಪವಾರ್ ಸ್ಥಾಪಿಸಿದ ಎನ್‌ಸಿಪಿ ಈಗ ವಿಭಜನೆಯಾಗಿದ್ದು, ಶಿವಸೇನೆ ಹಾದಿ ಹಿಡಿದಿದೆ. ಛಗನ್ ಭುಜಬಲ್ ಮತ್ತು ದಿಲೀಪ್ ವಾಲ್ಸೆ ಪಾಟೀಲ್ ಅವರಂತಹ ಕಟ್ಟಾ ಶರದ್ ಪವಾರ್ ನಿಷ್ಠಾವಂತರು ಸೇರಿದಂತೆ ಇತರ ಎಂಟು ಎನ್‌ಸಿಪಿ ಶಾಸಕರನ್ನು ಮಂತ್ರಿ ಮಾಡಲಾಯಿತು.

ಇದನ್ನೂ ಓದಿಎನ್‌ಸಿಪಿ ಇಬ್ಬಾಗ : ಶಿಂಧೆ ಸರ್ಕಾರಕ್ಕೆ ಬೆಂಬಲ, ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪ್ರಮಾಣ

ಎನ್‌ಸಿಪಿ ಒಡೆಯಲು ಬಿಜೆಪಿ ಬಯಸಿತ್ತು : ಎನ್‌ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಮೊಮ್ಮಗ, ಶಾಸಕ ರೋಹಿತ್ ಪವಾರ್, ಪಕ್ಷವನ್ನು ಒಡೆಯುವ ಬಿಜೆಪಿಯ ‘ಉದ್ದೇಶ’ದ ಬಗ್ಗೆ ಹಿರಿಯ ನಾಯಕರಿಗೆ ಸುಳಿವು ಇತ್ತು. ಆದರೆ, ಆಡಳಿತದ ಮೈತ್ರಿಕೂಟದೊಂದಿಗೆ ಕೈಜೋಡಿಸುವ ಅಜಿತ್ ಪವಾರ್ ಅವರ ತ್ವರಿತ ನಡೆಯ ಬಗ್ಗೆ ಸುಳಿವು ಇರಲಿಲ್ಲ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಪುಣೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್ ಪವಾರ್, ತಾನು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಜೊತೆಗಿದ್ದೇನೆ ಎಂದರು. ‘ಅಜಿತ್ ಪವಾರ್ ಬಿಜೆಪಿಯೊಂದಿಗೆ ಕೈಜೋಡಿಸುವ ಬಗ್ಗೆ ನಮಗೆ ಯಾವುದೇ ಸುಳಿವಿರಲಿಲ್ಲ. ಆದರೆ, ಬಿಜೆಪಿಯು ಎನ್‌ಸಿಪಿಯನ್ನು ಒಡೆಯಲು ಉತ್ಸುಕವಾಗಿದೆ, ನಮಗೆ ಇದು ತಿಳಿದಿತ್ತು’ ಎಂದಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ, ನನ್ನಂತಹವರು ರಾಜಕೀಯಕ್ಕೆ ಸೇರುವ ಮೂಲಕ ತಪ್ಪು ಮಾಡಿದ್ದೇವೆಯೇ ಎಂದು ನಮಗೆ ಆಶ್ಚರ್ಯವಾಗುತ್ತದೆ. ಅಜಿತ್ ಪವಾರ್ ಅವರ ನಡೆಯ ಬಗ್ಗೆ ಕೇಳಿದ ಪ್ರಶ್ನೆಗೆ, ತಮ್ಮ ಚಿಕ್ಕಪ್ಪ ಈ ರೀತಿ ಮಾಡಿದ್ದಕ್ಕೆ ನನಗೆ ನೋವಾಗಿದೆ. ‘ಅವರು (ಅಜಿತ್ ಪವಾರ್) ವೈಯಕ್ತಿಕವಾಗಿಯೂ ನನಗೆ ಸಹಾಯ ಮಾಡಿದ್ದಾರೆ. ಆದರೆ, ರಾಜಕೀಯವಾಗಿ, ನಾವೆಲ್ಲರೂ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಜೊತೆಗಿದ್ದೇವೆ’ ಎಂದು ಅವರು ಹೇಳಿದರು.

ಇದು ಬಿಜೆಪಿಯ ತಂತ್ರ : ಮಹಾರಾಷ್ಟ್ರ ಹಾಗೂ ದೇಶದಲ್ಲಿ ಕೋಮು ವಿಭಜನೆಯನ್ನು ಸೃಷ್ಟಿಸುವ ಬಿಜೆಪಿ ತಂತ್ರಗಳಿಗೆ ನಮ್ಮಲ್ಲಿನ ಕೆಲವರು ಬಲಿಯಾಗಿದ್ದಾರೆ ಎಂದು ಆರೋಪಿಸಿದರು. ಶಾಂತಿಪ್ರಿಯ ನಾಗರಿಕರಲ್ಲಿ ಭಯವನ್ನು ಉಂಟುಮಾಡುವ ಶಕ್ತಿಗಳ ವಿರುದ್ಧ ನಾವು ಹೋರಾಡಬೇಕಾಗಿದೆ ಎಂದು ಶರದ್‌ ಪವಾರ್ ಕರೆ ನೀಡಿದರು.‌

ಇಂದು ಕರಾದ್ ನಲ್ಲಿ ಎನ್‌ಸಿಪಿ ಕಾರ್ಯಕರ್ತರು ಹಾಗೂ ಬೆಂಬಲಿಗರ ಶಕ್ತಿ ಪ್ರದರ್ಶನ ನಡೆಸಿ ಮಾತನಾಡುತ್ತಾ, ಪಕ್ಷ ಬಿಟ್ಟು ಹೋಗುವವರನ್ನ ನೋಡುವುದು ನನಗೆ ಹೊಸ ಅಭ್ಯಾಸವೇನಲ್ಲ, 1980ರಲ್ಲಿ 50 ಶಾಸಕರು ಬಿಟ್ಟು ಹೋದಾಗಲೇ ನಾನು ಹೆದರಿಕೊಂಡಿಲ್ಲ ಇನ್ನು ಈಗ ತಲೆಕೆಡಿಸಿಕೊಳ್ತೀನಾ? ಎಂದು ಪ್ರಶ್ನಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *