ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಜಾರಿ ನಿರ್ದೇಶನಾಲಯ (ಇ.ಡಿ) ಮುಂದೆ ಗುರುವಾರ ಹಾಜರಾಗಲಿದ್ದಾರೆ
ಈ ಹಿಂದೆ ಅನಾರೋಗ್ಯದ ಕಾರಣದಿಂದ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಇಂದು ಬೆಳಗ್ಗೆ 10 ಗಂಟೆಗೆ ಇಡಿ ಕಚೇರಿಗೆ ಸೋನಿಯಾ ಆಗಮಿಲಸಲಿದ್ದಾರೆ. ಕೋಟ್ಯಂತರ ರೂಪಾಯಿ ಹಣ ದುರ್ಬಳಕೆ ಆರೋಪದ ಮೇಲೆ ಈಗಾಗಲೇ ರಾಹುಲ್ ಗಾಂಧಿಯವರನ್ನು ಇಡಿ ವಿಚಾರಣೆ ಮಾಡಿತ್ತು. ನಾಲ್ಕು ದಿನಗಳ ಕಾಲ ರಾಹುಲ್ ವಿಚಾರಣೆ ನಡೆಸಿತ್ತು. ಇದೀಗ ಸೋನಿಯಾರವರನ್ನು ಇಡಿ ವಿಚಾರಣೆಗೆ ಒಳಪಡಿಸುತ್ತಿದೆ.
ಸೋನಿಯಾ ಗಾಂಧಿಯವರು ವಿಚಾರಣೆಗೆ ಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಕಾಂಗ್ರೆಸ್ ಕಚೇರಿ ಸುತ್ತಲೂ ಬ್ಯಾರಿಕೇಡ್ ಅಳವಡಿಸಿದ್ದಾರೆ.
ಇಂದು ಕಾಂಗ್ರೆಸ್ ಪ್ರತಿಭಟನೆ: ಸೋನಿಯಾ ಗಾಂಧಿ ಅವರನ್ನು ಇಡಿ ಪ್ರಶ್ನಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಲು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯ ಮೂಲಕ ತನ್ನ ಆಕ್ರೋಶವನ್ನು ವ್ಯಕ್ತಪಡಿಸುವ ಸಾಧ್ಯತೆಯಿದೆ. ಆಯಾ ರಾಜ್ಯಗಳ ರಾಜಧಾನಿಯಲ್ಲಿ ಮತ್ತು ಇತರೆ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಯಲಿದೆ.
ಸೋನಿಯಾ ಗಾಂಧಿ ಅವರ ವಿಚಾರಣೆ ಖಂಡಿಸಿ ಇಂದು ಬೆಂಗಳೂರು ಸೇರಿದಂತೆ ಹಲವೆಡೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ,ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಡಿಕೆ ಶಿವಕುಮಾರ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ.
ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್?:
ನ್ಯಾಷನಲ್ ಹೆರಾಲ್ಡ್ ಎನ್ನುವುದು ಮಾಜಿ ಪ್ರಧಾನಿ ದಿ. ಜವಾಹರ್ ಲಾಲಾ ನೆಹರೂ ಅವರ ಕನಸಿನ ಪತ್ರಿಕೆ. 1938ರಲ್ಲಿ ನೆಹರೂ ಇದರ ಮಾತೃಸಂಸ್ಥೆ ನ್ಯಾಷನಲ್ ಹೆರಾಲ್ಡ್ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಸ್ಥಾಪಿಸಿ, ಅಲ್ಲಿಂದ ನ್ಯಾಷನಲ್ ಹೆರಾಲ್ಡ್ ಸ್ಥಾಪಿಸಿದ್ರು. ಸದ್ಯ ಇದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಕಂಪನಿಯ ಯಂಗ್ ಇಂಡಿಯಾ ಲಿಮಿಟೆಡ್ ಒಡೆತನದಲ್ಲಿದೆ.
ನ್ಯಾಷನಲ್ ಹೆರಾಲ್ಡ್ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ 5,000 ಸ್ವಾತಂತ್ರ್ಯ ಹೋರಾಟಗಾರರನ್ನು ತನ್ನ ಷೇರುದಾರರನ್ನಾಗಿ ಮಾಡಿತು. ಕಂಪನಿಯು ಇಂಗ್ಲಿಷ್ ದೈನಿಕ ನ್ಯಾಷನಲ್ ಹೆರಾಲ್ಡ್ ಅನ್ನು ಪ್ರಕಟಿಸಿತು. ಜೊತೆಗೆ ಉರ್ದುವಿನಲ್ಲಿ ಕ್ವಾಮಿ ಅವಾಜ್ ಮತ್ತು ಹಿಂದಿಯಲ್ಲಿ ನವಜೀವನ್ ಅನ್ನು ಪ್ರಕಟಿಸಿತು.
2008ರಲ್ಲಿ ಸ್ಥಗಿತ, 2016ರಲ್ಲಿ ಪುನಾರಂಭ
ಆದಾಗ್ಯೂ, ಮಾತೃಸಂಸ್ಥೆಯು ಸಾಲದ ಸುಳಿಯಲ್ಲಿ ಸಿಲುಕಿದ ನಂತರ 2008 ರಲ್ಲಿ ಪತ್ರಿಕೆಗಳನ್ನು ಮುಚ್ಚಲಾಯಿತು. ಈ ಹಿಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ 90.25 ಕೋಟಿ ಬಡ್ಡಿ ರಹಿತ ಸಾಲವನ್ನು ತೆಗೆದುಕೊಂಡಿತ್ತು. 2010ರ ವೇಳೆಗೆ ಎಜಿಎಲ್ 1057 ಷೇರುದಾರರನ್ನು ಹೊಂದಿತ್ತು, ಆದರೆ, ತೀವ್ರ ನಷ್ಟದಲ್ಲಿದ್ದ ಈ ಕಂಪನಿಯ ಷೇರುಗಳನ್ನು 2011ರಲ್ಲಿ ಯಂಗ್ ಇಂಡಿಯಾ ಸಂಸ್ಥೆಗೆ ವರ್ಗಾವಣೆ ಮಾಡಲಾಗಿತ್ತು. 2016ರಿಂದ ಮ್ತತೊಮ್ಮೆ ಮುದ್ರಣ ಪ್ರಾರಂಭಿಸಿತು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಮುಖ್ಯ ಆರೋಪವೇನು?
ಸಾಲದ ಸುಳಿಗೆ ಸಿಲುಕಿದ್ದ ಎಜೆಎಲ್ ಅನ್ನು 90.21 ಕೋಟಿ ರೂ.ಗೆ ಈ ಹೊಸ ಕಂಪನಿ ಖರೀದಿಸುತ್ತದೆ. ಇದೇ ವೇಳೆ, ವೈಐಎಲ್‌ಗೆ 50 ಲಕ್ಷ ರೂ. ಅನ್ನು ಕಾಂಗ್ರೆಸ್ ಖಜಾನೆಯಿಂದ ವರ್ಗಾವಣೆ ಮಾಡಲಾಗಿರುತ್ತದೆ. ದೆಹಲಿಯ 5ಎ ಬಹುದ್ದೂರ್ ಷಾ ಜಾಫರ್ ಮಾರ್ಗದಲ್ಲಿರುವ ಹೆರಾಲ್ಡ್ ಹೌಸ್ ನವೀಕರಣಕ್ಕೆ ಒಂದು ಕೋಟಿ ರೂ. ಸಾಲವನ್ನು ವೈಐಎಲ್ ನೀಡುತ್ತದೆ. ಎಜೆಎಲ್ ಹೊಂದಿದ ಅನೇಕ ಆಸ್ತಿಗಳ ಪೈಕಿ ಹೆರಾಲ್ಡ್ ಹೌಸ್ ಕೂಡ ಒಂದು. ಎಜೆಎಲ್‌ನ ಒಟ್ಟು ಆಸ್ತಿಗಳ ಮೌಲ್ಯ ಅಂದಾಜು 1600 ಕೋಟಿ ರೂ.ನಿಂದ 5,000 ಕೋಟಿ ರೂ.ವರೆಗೂ ಇದೆ. ಎಜೆಎಲ್ ಮತ್ತು ಯಂಗ್ ಇಂಡಿಯಾ ಲಿ. ನಡುವೆ ನಡೆದ ವ್ಯವಹಾರ ಕಾನೂನುಗಳನ್ನು ಮೀರಿದೆ, ಅಕ್ರಮ ನಡೆದಿದೆ ಎಂಬುದು ಮುಖ್ಯ ಆರೋಪ.
ಗಂಭೀರ ಆರೋಪ ಮಾಡಿದ್ದ ಸುಬ್ರಮಣಿಯನ್ ಸ್ವಾಮಿ
ನ್ಯಾಷನಲ್ ಹೆರಾಲ್ಡ್‌ನಲ್ಲಿ ಅವ್ಯವಹಾರ ನಡೆದಿದೆ ಅಂತ ಮೊದಲು ಆರೋಪಿಸಿದ್ದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ. 2012 ರಲ್ಲಿ ಸುಬ್ರಮಣ್ಯಂ ಸ್ವಾಮಿ ಅವರು ಸೋನಿಯಾ, ರಾಹುಲ್ ಮತ್ತು ಇತರ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣವನ್ನು ದಾಖಲಿಸಿದರು., ಅದರ ಲಾಭವನ್ನು ಅನುಭವಿಸುವುದರ ಹೊರತಾಗಿ ಕಂಪನಿಯ ₹ 16 ಶತಕೋಟಿ ಮೌಲ್ಯದ ಆಸ್ತಿಯನ್ನು ದೋಚಲು “ದುರುದ್ದೇಶದಿಂದ” AJL ಅನ್ನು ( ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ) ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಕೇಸ್‌ನ ಪ್ರಮುಖ ಟೈಮ್‌ಲೈನ್
ಆಗಸ್ಟ್1, 2014 ರಂದು , ಯಾವುದೇ ಅಕ್ರಮ ಹಣ ವರ್ಗಾವಣೆಯು ಇದರಲ್ಲಿ ಭಾಗಿಯಾಗಿದೆಯೇ ಎಂದು ತನಿಖೆ ಮಾಡಲು ED ಪ್ರಕರಣವನ್ನು ಕೈಗೆತ್ತಿಕೊಂಡಿತು.
ಡಿಸೆಂಬರ್7, 2015 ರಂದು , ದೆಹಲಿ ಹೈಕೋರ್ಟ್ ಏಳು ಆರೋಪಿಗಳ ಮೇಲ್ಮನವಿಗಳನ್ನು ರದ್ದುಗೊಳಿಸಿತು, ಡಿಸೆಂಬರ್ 9 ರಂದು ವಿಚಾರಣಾ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗುವಂತೆ ಕೇಳಿತು.
ಫೆಬ್ರವರಿ12, 2016 ರಂದು , ಸುಪ್ರೀಂ ಕೋರ್ಟ್ ಆರೋಪಿಗಳಿಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡುವಾಗ ಅವರ ವಿರುದ್ಧದ ಪ್ರಕ್ರಿಯೆಗಳನ್ನು ರದ್ದುಗೊಳಿಸಲು ನಿರಾಕರಿಸಿತು.
2018 ರಲ್ಲಿ , ಕೇಂದ್ರವು ಶಾಶ್ವತ ಗುತ್ತಿಗೆಯನ್ನು ಕೊನೆಗೊಳಿಸಲು ಮತ್ತು ಹೆರಾಲ್ಡ್ ಹೌಸ್ ಆವರಣದಿಂದ AJL ಅನ್ನು ಹೊರಹಾಕಲು ನಿರ್ಧರಿಸಿತು, 1962 ರಲ್ಲಿ ಕಂಪನಿಗೆ ಕಟ್ಟಡವನ್ನು ಗುತ್ತಿಗೆಗೆ ನೀಡಲಾದ ಪ್ರಕಟಣೆಯಲ್ಲಿ ಇನ್ನು ಮುಂದೆ ಭಾಗಿಯಾಗಿಲ್ಲ ಎಂದು ವಾದಿಸಿದರು.
ಏಪ್ರಿಲ್ 2019 ರಲ್ಲಿ , ಸುಪ್ರೀಂ ಕೋರ್ಟ್, ಆದಾಗ್ಯೂ, ಸಾರ್ವಜನಿಕ ಆವರಣದ (ಅನಧಿಕೃತ ನಿವಾಸಿಗಳನ್ನು ಹೊರಹಾಕುವ) ಕಾಯಿದೆ, 1971 ರ ಅಡಿಯಲ್ಲಿ AJL ವಿರುದ್ಧದ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿತು.
ಅದೇ ವರ್ಷ ಈ ಪ್ರಕರಣದಲ್ಲಿ ₹64 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಶಾಶ್ವತವಾಗಿ ಮುಟ್ಟುಗೋಲು ಹಾಕಿಕೊಂಡಿತ್ತು.
ಮೇ 2020 ರಲ್ಲಿ , ಪ್ರಕರಣಕ್ಕೆ ಸಂಬಂಧಿಸಿ ಮುಂಬೈನಲ್ಲಿ ₹16.38 ಕೋಟಿ ಮೌಲ್ಯದ ಒಂಬತ್ತು ಅಂತಸ್ತಿನ ಕಟ್ಟಡವನ್ನು ಇಡಿ ಲಗತ್ತಿಸಿತು.
ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ಕಾಂಗ್ರೆಸ್ ಮೋತಿಲಾಲ್ ವೋರಾ ಸೇರಿದಂತೆ ಆರೋಪಿಗಳು ‘ಅಪರಾಧದ ಆದಾಯ’ವನ್ನು ಬಳಸಿದ್ದಾರೆ – ಹರ್ಯಾಣದಲ್ಲಿ AJL ಗೆ ಮಂಜೂರು ಮಾಡಿದ ಭೂಮಿ – ಮತ್ತು ಕಟ್ಟಡವನ್ನು ನಿರ್ಮಿಸಲು ಸಾಲಕ್ಕಾಗಿ ಸಿಂಡಿಕೇಟ್ ಬ್ಯಾಂಕ್‌ನ ದೆಹಲಿ ಶಾಖೆಯಲ್ಲಿ ಅಡಮಾನ ಇಟ್ಟಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ.
ಫೆಬ್ರವರಿ 2021 ರಲ್ಲಿ , ಪ್ರಕರಣದಲ್ಲಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ಸಾಕ್ಷ್ಯವನ್ನು ಮುನ್ನಡೆಸುವ ತನ್ನ ಮನವಿಯನ್ನು ವಿಚಾರಣಾ ನ್ಯಾಯಾಲಯವು ರದ್ದುಗೊಳಿಸುವುದರ ವಿರುದ್ಧ ಸ್ವಾಮಿ ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸಿದರು.
ಏಪ್ರಿಲ್ 2022 ರಲ್ಲಿ , ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇಡಿ ಪ್ರಧಾನ ಕಛೇರಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.
ಜೂನ್ 13 2022 ಐದು ದಿನಗಳ ಕಾಲ ಇಡಿ ರಾಹುಲ್ ಗಾಂಧಿಯವರನ್ನು ವಿಚಾರಣೆ ನಡೆಸಿತ್ತು. ಐದು ದಿನಗಳಲ್ಲಿ ಸುಮಾರು 50 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ವ್ಯಾಪಕ ಪ್ರತಿಭಟನೆ ನಡೆಸಿತ್ತು.
ಜುಲೈ 21 : ಸೋನಿಯಾ ಗಾಂಧಿ ವಿಚಾರಣೆ.