ಮುಂಬೈ : ಶಿವಸೇನೆಯ(ಶಿಂಧೆ ಬಣ) ಉಪನಾಯಕ ನರೇಂದ್ರ ಭೋಂಡೇಕರ್ ತಮ್ಮ ಸ್ನಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಪತ್ರ ಬರೆದಿದ್ದು, ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಭೋಂಡೇಕರ್ ಅವರು ಮಹಾರಾಷ್ಟ್ರ ವಿಧಾನಸಭೆಯ ಭಂಡಾರಾದಿಂದ ಶಾಸಕರಾಗಿ ಆಯ್ಕೆಯಾದರು.
ಇದನ್ನೂ ಓದಿ : ವಿಶ್ವವಿಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ ನಿಧನ
ಭೋಂಡೇಕರ್ ಅವರ ರಾಜೀನಾಮೆಯ ಹಿಂದಿನ ಪ್ರಮುಖ ಕಾರಣವೆಂದರೆ ಅವರನ್ನ ಹೊಸ ಕ್ಯಾಬಿನೆಟ್’ಗೆ ಸೇರಿಸಿಕೊಳ್ಳದಿರುವುದು ಎಂದು ನಂಬಲಾಗಿದೆ. ಈ ವಿಚಾರವಾಗಿ ಕೆಲಕಾಲ ಕೋಪಗೊಂಡಿದ್ದು ಭೋಂಡೇಕರ್ ಸಾರ್ವಜನಿಕವಾಗಿ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದರು.
ತಮ್ಮ ಶ್ರಮ ಮತ್ತು ಸಮರ್ಪಣೆಗೆ ತಕ್ಕ ಮನ್ನಣೆ ಸಿಕ್ಕಿಲ್ಲ ಎಂದು ನಂಬಿದ್ದ ಅವರು ಈ ನಿರ್ಲಕ್ಷದಿಂದ ನೋವಾಗಿದೆ ಎಂದದ್ದರು.
ಇದನ್ನೂ ನೋಡಿ : ಒಂದು ದೇಶ ಒಂದು ಚುನಾವಣೆ ಸರ್ವಾಧಿಕಾರಕ್ಕೆ ಮುನ್ನುಡಿಯೇ? – ಕೃಷ್ಣ ಪ್ರಸಾದ್ Janashakthi Media