ಜಸ್ಟೀಸ್‌ ನಾಗಮೋಹನ್‌ ದಾಸ್‌ ವರದಿಯಲ್ಲಿ ತಾಂತ್ರಿಕವಾಗಿ ಸಮಸ್ಯೆ ಇದ್ದರೂ ತಾತ್ವಿಕವಾಗಿ ಸರಿ ಇದೆ: ಕೋಟಿಗಾನಹಳ್ಳಿ ರಾಮಯ್ಯ

ಬೆಂಗಳೂರು : ಪರಿಶಿಷ್ಟ ಜಾತಿಗಳ (ಎಸ್‌ಸಿ) ಒಳಮೀಸಲಾತಿ ಜಾರಿ ಸಂಬಂಧ ಜಸ್ಟೀಸ್ ನಾಗಮೋಹನ್‌ ಅವರು ಸರ್ಕಾರಕ್ಕೆ ನೀಡಿರುವ ವರದಿಯನ್ನು ಆಗಸ್ಟ್‌ 16 ರಂದು ಸಭೆಯಲ್ಲಿ ಸಕಾರ ಅಂಗೀಕರಿಸಿ ಜಾರಿಗೊಳಿಸಬೇಕು ಎಂದು ‌ʼಸಾಮಾಜಿಕ ನ್ಯಾಯಕ್ಕಾಗಿ ಸಮಾನ ಮನಸ್ಕರುʼ ಸಭೆಯಲ್ಲಿ ಏಕ ನಿರ್ಣಯ ಕೈಗೊಳ್ಳಲಾಯಿತು. ಎಂದು ಸಂಘಟಕರು ತಿಳಿಸಿದರು.  ಜಸ್ಟೀಸ್‌

ಜಸ್ಟೀಸ್‌ ನಾಗಮೋಹನ್‌ ದಾಸ್‌ ಆಯೋಗದ ಸಮಿತಿ ನೀಡಿರುವ ಪರಿಶಿಷ್ಟ ಜಾತಿ (ಎಸ್‌ಸಿ) ಒಳ ಮೀಸಲಾತಿ ವರದಿಯಲ್ಲಿ ತಾಂತ್ರಿಕವಾಗಿ ಏನೇ ಸಮಸ್ಯೆ ಇದ್ದರೂ, ಅದು ತಾತ್ವಿಕವಾಗಿ ಸರಿ ಇದೆ ಎಂದು ಹಿರಿಯ ಸಾಹಿತಿಗಳಾದ ಜಸ್ಟೀಸ್ ನಾಗಮೋಹನ್‌ ಹೇಳಿದರು. ಬೆಂಗಳೂರು

ಇದನ್ನೂ ಓದಿ: ಮತಗಳನ್ನು ಕದಿಯುವ ಸಲುವಾಗಿ ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೈ ಜೋಡಿಸಿದೆ ತೆಜೇಸ್ವಿ ಯಾದವ ಆರೋಪ

ಒಳಮೀಸಲಾತಿ ಜಾರಿ ಕುರಿತು ಬೆಂಗಳೂರಿನ ಶಾಸಕರ ಭವನದಲ್ಲಿ ಬುಧವಾರ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಇಂತಹದ್ದೊಂದು ಚಾರಿತ್ರಿಕ ಸಂದಭದಲ್ಲಿ ನಾಗರೀಕ ಸಮಾಜಕ್ಕೆ ಪ್ರತಿಕ್ರಿಯಿಸಬೇಕಾದ ಹೊಣೆಗಾರಿಕೆ ಇದೆ. ಈ ಬಗ್ಗೆ ಪರ-ವಿರೋಧ ಇದೆ ಎನ್ನುವ ಬಗ್ಗೆ ನನಗೆ ಒಮ್ಮತ. ಒಳಮೀಸಲಾತಿ ಕುರಿತು ನಮಗೆ ಖಚಿತವಾದ ನಿಲುವು ಇರಬೇಕು. ಆದ್ದರಿಂದ, ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು” ಎಂದು ಆಗ್ರಹಿಸಿದರು.

“ಜಸ್ಟೀಸ್ ನಾಗಮೋಹನ್‌ ದಾಸ್‌ ಆಯೋಗದ ವರದಿಯನ್ನು ಸುಟ್ಟು ಪ್ರತಿಭಟನೆ ಮಾಡುವುದನ್ನು ನೋಡುತ್ತಿದ್ದರೆ ದುರಾದೃಷ್ಟ ಎನಿಸುತ್ತದೆ. ನಮ್ಮ ಸಂವಿಧಾನ ಆಶಯವೇ ಬಾತೃತ್ವ; ಅಂದರೆ, ಸಹೋದರತ್ವ. ಅದಕ್ಕೂ ನಮಗೂ ಸಂಬಂಧ ಇಲ್ಲವೇನೋ ಎಂಬ ಮನಸ್ಥಿತಿಯನ್ನು ನಾನು ಕಾಣುತ್ತಿದ್ದೇನೆ. ಎಲ್ಲ ಪಕ್ಷಗಳ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ನಾಟಕ ಆಡುತ್ತಿದ್ದಾರೆ. ವರದಿ ಜಾತಿ ವಿಳಂಭಕ್ಕಾಗಿಯೂ ಕೆಲಸ ನಡೆಯುತ್ತಿದೆ” ಎಂದರು.

“ಒಳಮೀಸಲಾತಿ ಆಶಯದಲ್ಲಿ ತಪ್ಪಾಗಿದೆ ಎಂದು ನನಗೆ ಅನಿಸುತ್ತಿಲ್ಲ. ಜನಸಂಖ್ಯೆ ಆಧಾರದಲ್ಲಿ ಸವಲತ್ತು ತೆಗೆದುಕೊಳ್ಳಬೇಕು ಎಂಬ ವಾದ ಸರಿ ಇದೆ. ಆದರೆ, ಅದು ಹೋಮೋಜಿನಿಯಸ್‌ ಆಗಿಲ್ಲ. ನಾವು ಸಂಖ್ಯೆಯನ್ನೇ ನೋಡುವುದಾದರೆ, ಇದರಲ್ಲಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಅನ್ಯಾಯಾಯ ಆಗುತ್ತದೆ. ಬಾಬಾ ಸಾಹೇಬ ಅಂಬೇಡ್ಕರ ಅವರೂ ಕೂಡ ಇದರ ಬಗ್ಗೆ ಮಾತನಾಡಿದ್ದಾರೆ. ಜಸ್ಟೀಸ್‌ ನಾಗಮೋಹನ್‌ ದಾಸ್‌ ಕೂಡ, ʼನಾವು ಊಟ ಮಾಡುವಾಗ, ಉಣ್ಣದೇ ಇರುವವರ ತಟ್ಟೆಗೂ ತುತ್ತು ಹೋಗಬೇಕುʼ ಎಂದು ಹೇಳಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಲು ಯಾವ ಕಾನೂನು ಬೇಕಾಗಿಲ್ಲ. ನಮ್ಮ ಸಮುದಾಯಗಳನ್ನು ದತ್ತಾಂಶಕ್ಕೆ ಇಳಿಸಿರುವುದು ಸರಿಯಾದ ಕ್ರಮವಲ್ಲ. ವೈಯಕ್ತಿಕವಾಗಿ ನನ್ನ ಅಭಿಪ್ರಾಯದಲ್ಲಿ, ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು. ಇದರಲ್ಲಿ ತಾಂತ್ರಿಕವಾಗಿ ಏನೇ ತಪ್ಪುಗಳಿದ್ದರೂ, ತಾತ್ವಿಕವಾಗಿ ಸರಿ ಇದೆ” ಎಂದು ಅವರು ಒಳಮೀಸಲಾತಿ ಜಾರಿಗೆ ಒತ್ತಾಯಿಸಿದ್ದರು.

ಪ್ರಸ್ತಾವಿಕ ಮಾತುಗಳನ್ನಾಡಿದ ಡಾ.ರವಿಕುಮಾರ್‌ ಬಾಗಿ, “ಒಳಮೀಸಲಾತಿ ಸಂಬಂಧ ಈವರೆಗೆ ಆಗಿರುವ ಜಸ್ಟೀಸ್‌ ಸದಾಶಿವ ಹಾಗೂ ಮಾಧುಸ್ವಾಮಿ ವರದಿಗೆ ಹೋಲಿಸಿದರೆ, ಜಸ್ಟೀಸ್ ನಾಗಮೋಹನ್‌ ದಾಸ್‌ ಆಯೋಗದ ವರದಿ ಬಹುತೇಕರಿಗೆ ಒಪ್ಪಿತವಾಗಿದೆ. ಆದ್ದರಿಂದ, ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು. ಆ ಮೂಲಕ ತಳ ಸಮುದಾಯಗಳಿಗೆ ಹಾಗೂ ವಂಚಿತ ಸಮುದಾಯಗಳಿಗೆ ಅವಕಾಶ ಕಲ್ಪಿಸಿಕೊಡಬೇಕು” ಎಂದು ಹೇಳಿದರು.

“ಅಲಕ್ಷಿತ ಸಮುದಾಯಗಳ ನೋವು ಏನು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ, ನಮ್ಮ ನೋವು ಅವರಿಗೆ ಗೊತ್ತಿರುವುದರಿಂದ ಸಮುದಾಯದ ಮುಖಂಡರ ಸಭೆ ಕರೆದು ಒಮ್ಮತದಿಂದ ವರದಿ ಜಾರಿ ಮಾಡಬೇಕು ಒತ್ತಾಯಿಸಲು ಸಮಾನಮನಸ್ಕರ ಸಭೆ ಕರೆದಿದ್ದೇವೆ. ಯಾರಿಗೆ ಹೆಚ್ಚಿನ ಅನ್ಯಾಯ ಆಗಿದೆಯೋ ಅವರಿಗೆ ಸ್ವಲ್ಪ ಹೆಚ್ಚಿನ ಪಾಲು ಸಿಗಲಿ, ಇದೇ ಸಾಮಾಜಿಕ ನ್ಯಾಯ. ಇದನ್ನು ಪ್ರತಿಪಾದಿಸುವುದೇ ನಿಜವಾದ ಅಂಬೇಡ್ಕರ್‌ ವಾದ. ಈ ಗನಡೆಯುತ್ತಿರುವ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿ ಮಾಡಬೇಕು” ಎಂದು ಆಗ್ರಹಿಸಿದರು.

“ಒಳಮೀಸಲಾತಿ ಜಾರಿಗೆ ಯಾವ ರೀತಿಯ ಒತ್ತಡ ಹೇರಬಹುದೋ ಅದರ ದಾರಿಗಳನ್ನು ನಾವು ಹುಡುಕಬೇಕು. ಆ ಕೆಲಸವನ್ನು ಈಗಾಗಗಲೇ ಹಲವರು ಮಾಡುತ್ತಿದ್ದಾರೆ. ಆದರೆ, ಒಳಮೀಸಲಾತಿ ಜಾರಿ ಆಗಲೇಬೇಕು ಎಂಬ ಕಾರಣಕ್ಕೆ ನಾವು ಕೆಲಸ ಮಾಡಬೇಕು. ನಾವೆಲ್ಲರೂ ಹಂಚಿ ಉಣ್ಣುವುದಕ್ಕೆ ತಯಾರಿದ್ದಮೇಲೆ ಸ್ವಲ್ಪ ವ್ಯತ್ಯಾಸಗಳಾಗಬಹುದು. ವರದಿಯಲ್ಲಿ ಸಮಸ್ಯೆಗಳನ್ನು ಮುಂದೆ ಸರಿಪಿಡಿಸಿಕೊಳ್ಳೋಣ, ಸರ್ಕಾರ ಕೂಡಲೇ ವರದಿಯನ್ನು ಜಾರಿ ಮಾಡಬೇಕು” ಎಂದು ಆಗ್ರಹಿಸಿದರು.

ಚಿಂತಕರಾದ ಪ್ರೊ. ಸಿ.ಜಿ.ಲಕ್ಷ್ಮಿಪತಿ ಮಾತನಾಡಿ, “ಜಸ್ಟೀಸ್ ನಾಗಮೋಹನ್‌ ದಾಸ್‌ ಅವರು ಸಾಕಷ್ಟು ದತ್ತಾಂಶ ಸಂಗ್ರಹಿಸಿ ವರದಿ ತಯಾರಿಸಿದ್ದಾರೆ. ಯಾವುದೇ ಸಮೀಕ್ಷೆಗಳು ಶೇಕಡ ನೂರರಷ್ಟು ಸರಿ ಇರುವುದಿಲ್ಲ. ರದಿ ವಿರೋಧಿಸುತ್ತಿರುವವರು ಊಹಾತ್ಮಕ ವಿಚಾರಗಳನ್ನು ಕೈಬಿಡಬೇಕು, ವರದಿಯಲ್ಲಿ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳುವುವುದಕ್ಕೆ ಅವಕಾಶ ಇದೆ” ಎಂದರು.

“ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳೂ ಒಗ್ಗಟ್ಟಿನಿಂದ ಒಳಮೀಸಲಾತಿಗೆ ಜಾರಿಗೆ ಒತ್ತಾಯಿಸಬೇಕು. ಏಕೆಂದರೆ, ಇದೇ ಸಂದರ್ಭವನ್ನು ಬಳಸಿಕೊಂಡು ಕೋಮುವಾದಿ ಶಕ್ತಿಗಳು ದಲಿತ ಹಾಗೂ ತಳ ಸಮುದಾಯಗಳನ್ನು ಒಡೆಯುವ ಕೆಲಸ ಮಾಡುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ನಕಾರಾತ್ಮಕ ಪ್ರಚಾರ ನಡೆಸಲಾಗುತ್ತಿದೆ. ಅದಕ್ಕೆ ಪ್ರತಿಯಾಗಿ ನಾವೂ ಕೂಡ ಒಂದಷ್ಟು ಕೆಲಸ ಮಾಡಬೇಕು. ಪಳಮೀಸಲಾತಿ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ನಾವು ಟ್ರೆಂಡ್‌ ಸೃಷ್ಟಿಸಬೇಕು. ನಮ್ಮ ತಂತ್ರ ಮೇಲುಗೈ ಸಾಧಿಸಿದರೆ ವರದಿ ಜಾರಿಗೆ ವಿರೋಧಿಸುತ್ತಿರುವವರನ್ನು ನಿಯಂತ್ರಣಕ್ಕೆ ತರಬಹುದು” ಎಂದು ಸಲಹೆ ನೀಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿ ಡಾ. ಹುಲಿಕುಂಟೆ ಮೂರ್ತಿ, “ಈ ಸಭೆಯಲ್ಲಿ ಹೊಲೆಯರು, ಮಾದಿಗರು, ಒಕ್ಕಲಿಗರು, ಲಂಬಾಣಿ ಮತ್ತು ಭೋವಿ ಸೇರಿದಂತೆ ಎಲ್ಲ ಸಮುದಾಯದವರೂ ಇದ್ದಾರೆ. ನಾವೆಲ್ಲರೂ ದಲಿತ ಚಳವಳಿ ಸೇರಿದಂತೆ ವಿವಿಧ ಸಂಘಟನೆಯಲ್ಲಿ ನಾವೆವೆಲ್ಲರೂ ಸಕ್ರಿಯರಾಗಿದ್ದೇವೆ. ಒಳಮೀಸಲಾತಿ ವಿವಾದವನ್ನು ಮುಂದಿಟ್ಟುಕೊಂಡು ಸಮುದಾಯಗಳನ್ನು ಒಡೆಯುವುದಕ್ಕೆ ಕೋಮುವಾದಿಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಅದಕ್ಕಾಗಿ ನಮ್ಮಲ್ಲೇ ಕೆಲವರನ್ನು ಬಳಸಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಪ್ರಭುತ್ವ ಯಾವಾಗ ಬದಲಾಗುತ್ತದೆ ಎಂಬುದನ್ನು ನಾವು ನಿರೀಕ್ಷೆ ಮಾಡಲು ಸಾಧ್ಯವೀಲ್ಲ. ಒಂದು ಒತ್ತಡದ ಗುಂಪಾಗಿ ನಾವು ಇಲ್ಲಿ ಸೇರಿದ್ದೇವೆ. ೧೬ ತಾರೀಕು ಸರ್ಕಾರ ಸಭೆ ನಡೆಸಲಿದೆ, ಅದಕ್ಕೆ ನಾವು ಸಾಕಷ್ಟು ಒತ್ತಡ ಹೇರಬೇಕಾಗಿದೆ” ಎಂದರು.

ಶಿಕ್ಷಣ ತಜ್ಞರಾದ ಬಿ.ಶ್ರೀಪಾದ ಭಟ್‌ ಮಾತನಾಡಿ, “ಕುಂಬಾರರ ಅನುಸೂಯಮ್ಮ ಅವರಿಗೆ ಅನ್ಯಾಯ ದಲಿತ ಸಮುದಾಯ ಜಾತಿ ನೋಡದೆ ಹೋರಾಟ ಮಾಡಿತ್ತು. ಆದರೆ, ಸಮುದಾಯದೊಳಗಿನ ಅಪನಂಬಿಕೆ ಸರಿಯಲ್ಲ. ನಾಗಮೋಹನ್‌ ದಾಸ್‌ ಆಯೋಗದ ಸಮೀಕ್ಷೆ ಜಾರಿ ಆಗಿಯೇ ಆಗುತ್ತದೆ. ಆದರೆ, ಮೊದಲು ಸಮುದಾಯಗಳ ಒಳಗಿನ ಅಪನಂಬಿಕೆ ದೂರು ಮಾಡುವ ಕೆಲಸವನ್ನು ನಾವು ಮಾಡಲೇಬೇಕು. ಅದರ ನೇತೃತ್ವವನ್ನು ಸಮುದಾಯದ ಹಿರಿಯರು ವಹಿಸಿಕೊಳ್ಳಬೇಕು; ಒಂದು ಸಮಿತಿ ರಚನೆ ಆಗಬೇಕು.” ಎಂದು ಸಲಹೆ ನೀಡಿದರು.

“ಪರಿಶಿಷ್ಟ ಜಾತಿಯೊಳಗಿನ ಅತಿ ಹಿಂದುಳಿದ ವರ್ಗದವರಿಗೂ ಪಾಲು ಸಿಗಬೇಕು. ವರದಿಯ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ಎಸ್‌ಸಿ- ಎಸ್‌ಟಿ ಆಯೋಗ ಇದೆ. ಆದರೆ, ಅದಕ್ಕೆ ಈವರೆಗೆ ಅಧ್ಯಕ್ಷರ ನೇಮಕ ಆಗಿಲ್ಲ. ನೋಡಲ್‌ ಏಜೆನ್ಸಿಯಾಗಿ ಅದಕ್ಕೆ ಎಲ್ಲಾ ಸಾಂವಿಧಾನಿಕ ಅಧಿಕಾರವಿದೆ. ಬಹಿರಂಗವಾಗಿ ವರದಿಯನ್ನು ಸುಟ್ಟು ಟೀಕೆ ಮಾಡುವುದರಿಂದ ಮತ್ತಷ್ಟು ಅಪನಂಬಿಕೆ ಹುಟ್ಟುತ್ತದೆ. ಇದಕ್ಕಾಗಿ ನಾವೆಲ್ಲರೂ ರಾಜ್ಯದಾದ್ಯಂತ ಹೋರಾಡಿ ಕೆಲಸ ಮಾಡಬೇಕಿದೆ” ಎಂದು ಶ್ರೀಪಾದ್‌ ಭಟ್‌ ಹೇಳಿದರು.

ಹಿರಿಯ ಪತ್ರಕರ್ತರಾದ ಹರ್ಷಕುಮಾರ್‌ ಕುಗ್ವೆ ಮಾತನಾಡಿ, “ಒಳಮೀಸಲಾತಿ ಮಾತ್ರವೇ ಸಮುದಾಯಗಳ ನಡುವೆ ಒಗ್ಗಟ್ಟು ತರುವುದಕ್ಕೆ ಸಾಧ್ಯ ಎಂದು ನಾವೆಲ್ಲರೂ ಹಿಂದಿನಿಂದಲೂ ಪ್ರತಿಪಾದಿಸಿದ್ದೇವೆ. ಜಸ್ಟೀಸ್ ನಾಗಮೋಹನ್‌ ದಾಸ್‌ ಆಯೋಗದ ವರದಿಯೇ ಅಂತಿಮವಲ್ಲ.. ಅದರಲ್ಲಿ ಸುಧಾರಿಸಬೇಕಾದ ಸಾಕಷ್ಟು ಅಂಶಗಳೂ ಇದೆ. ಆದರೆ, ಈವರೆಗೆ ಆಗಿರುವ ವರದಿಗಳಲ್ಲಿ ನಾಗಮೋಹನ್‌ ದಾಸ್‌ ವರದಿ ಬಹಳಷ್ಟು ಉತ್ತಮವಾಗಿದೆ. ಆದ್ದರಿಂದ, ಈ ವರದಿಯನ್ನು ನಾವು ಒಪ್ಪಿಕೊಳ್ಳಬಹುದು. ಸದಾಶಿವ ಹಾಗೂ ಮಾಧುಸ್ವಾಮಿ ವರದಿಗಳು ಸಾಕಷ್ಟು ಅವೈಜ್ಞಾನಿಕವಾಗಿ ಇದ್ದವು. ಆ ಸಾಲಿನಲ್ಲಿ ಇದನ್ನು ತೆಗೆದುಹಾಕುವಂತ ವರದಿ ಖಂಡಿತ ಅಲ್ಲ” ಎಂದರು.

“ವರದಿಯಲ್ಲಿರುವ ಕೊರತೆಗಳನ್ನು ಸಾಕಷ್ಟು ಪಟ್ಟಿ ಮಾಡಬಹುದು, ಅದನ್ನು ಸರ್ಕಾರದ ಗಮನಕ್ಕೆ ತಂದು ಶಿಫಾರಸ್ಸುಗಳನ್ನು ನೀಡೋಣ. ಸದಾಶಿವ ಆಯೋಗದ ವರದಿ ಬೇಡವೇ ಬೇಡ ಎಂಬ ಕೂಗು ಬಂದಿತ್ತು. ಆದರೆ, ನಾಗಮೋಹನ್‌ ದಾಸ್‌ ಆಯೋಗದ ವರದಿಯನ್ನು ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ. ಸುಧಾರಣೆ ಬೇಕಿದ್ದರೆ ಕಾಲಮಿತಿಯೊಳಗೆ ಮಾಡಿಕೊಳ್ಳಬಹುದು. ಆದರೆ, ವರದಿ ಮಾತ್ರ ತಕ್ಷಣದಿಂದಲೇ ಜಾರಿ ಆಗಲೇಬೇಕು. ಜಾರಿ ಮುಂದೂಡಿದರೆ ಇಡೀ ಸಮುದಾಯಕ್ಕೆ ಅನ್ಯಾಯ ಮಾಡಿದಂತೆ ಆಗುತ್ತದೆ” ಎಂದರು.

ಪತ್ರಕರ್ತರಾದ ಡಾ. ವಾಸು ಮಾತನಾಡಿ, “ಒಳಮೀಸಲಾತಿ ಜಾರಿ ವಿಳಂಭ ಆಗಿರುವುದರಿಂದ ಇದೀಗ ಭಾವನಾತ್ಮಕ ವಿಷಯವಾಗಿದೆ; ಸಮುದಾಯದೊಳಗೆ ಅಪನಂಬಿಕೆ ಉಂಟಾಗಿದೆ. ಇನ್ನೂ ತಡವಾದರೆ ಅಪನಂಬಿಕೆ ಮತ್ತಷ್ಟು ಸ್ಪೋಟ ಆಗಲಿದೆ. ನಾನು ವರದಿಯನ್ನು ಸಂಪೂರ್ಣ ಓದಿದ್ದು, ಬಹುತೇಕ ನ್ಯಾಯಬದ್ಧವಾಗಿದೆ. ಸಮುದಾಯದೊಳಗಿನ ಆತಂಕ ಹಾಗೂ ಆಕ್ರೋಶವನ್ನು ನಾವು ಮತ್ತು ಸರ್ಕಾರ ಅರ್ಥ ಮಾಡಿಕೊಳ್ಳಬೇಕು” ಎಂದರು.

“ಶನಿವಾರದ ಒಳಗೆ ಸರ್ಕಾರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಇಂದಿರಾ ಸಾಹನಿ ವರದಿ ಬಳಿಕ ಹಿಂದುಳಿದ ವರ್ಗಗಳ ಆಯೋಗಕ್ಕೆ ಮಾತ್ರ ಶಿಫಾರಸ್ಸು ಮಾಡುವ ಅವಕಾಶ ಇದೆ. ಅದನ್ನು ಬದಲಾವಣೆ ಮಾಡುವ ಅವಕಾಶ ಯಾವಗಲೂ ಇದೆ. ಮುಂದೆ ನಮ್ಮ ಬೇಡಿಕೆ ಇದೇ ಆಗಿರಬೇಕು. ಶೋಷಿತ ಸಮುದಾಯಗಳ ನಡುವಿನ ಬಿರುಕು ಶಮನಕ್ಕೆ ಇದು ಸಕಾಲ. ಇಲ್ಲೀತನಕ ದಲಿತ ಸಮುದಾಯಗಳು ಬಹಳ ವಿವೇಕದಿಂದ ನಡೆದುಕೊಂಡಿವೆ. ಬಲಾಢ್ಯ ಜಾತಿಗಳ ನಡೆದುಕೊಳ್ಳುವಂತೆ ವರ್ತಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮಾತುಕತೆ ಇರಬುದು ಅಷ್ಟೇ. ಈವರೆಗಿನ ಬೆಳವಣಿಗೆಗಳನ್ನು ಗಮನಿಸಿದರೆ, ನಾವು ಸಂಬಂಧಪಟ್ಟ ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತನಾಡಬೇಕಿದೆ” ಎಂದರು. ಜಸ್ಟೀಸ್‌

ಹಿರಿಯ ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, “ನಾಗಮೋಹನ್‌ ದಾಸ್‌ ಆಯೋಗದ ವರದಿ ಸರ್ಕಾರದ ಕೈಗೆ ಹೋಗಿರುವುದೇ ಚಾರಿತ್ರಿಕವಾದ್ದು, ಅದನ್ನು ನಾವೆಲ್ಲರೂ ಒಪ್ಪಿಕೊಂಡು ಪೋಷಿಸಬೇಕು; ಸಾಯಿಸಬಾರದು. ಪೋಷಣೆ ಮಾಡುತ್ತಲೇ ಅದರಲ್ಲಿರುವ ಸಣ್ಗಪುಟ್ಟ ಲೋಪದೋಷಗಳ ನಿವಾರಣೆ ಮಾಡಬೇಕು. ಸಮಸ್ಯೆಗಳಿದ್ದರೆ ಅದನ್ನು ಮುಂದಿನ ದಿನಗಳಲ್ಲಿ ಆಯೋಗ ರಚಿಸುವ ಮೂಲಕ ಪರಿಹರಿಸಬಹುದು” ಎಂದು ಕಿವಿಮಾತು ಹೇಳಿದರು.

ದಲಿತ ಸಂಘಷ ಸಮಿತಿ (ಅಂಬೇಡ್ಕರ್‌ ವಾದ) ಮಾವಳ್ಳಿ ಶಂಕರ್‌ ಮಾತನಾಡಿ, “ನಾಗಮೋಹನ್‌ ದಾಸ್‌ ಆಯೋಗ ನೀಡಿರುವ ಪ್ರವರ್ಗ ʼಎʼ- ʼಬಿʼ ಹಾಗೆಯೇ ಉಳಿಸಿಕೊಳ್ಳಬೇಕು. ʼಇʼ ಅಲ್ಲಿರುವ ಎಕೆ- ಎಡಿ ಅನ್ನು ʼಸಿʼ ಗೆ ವರ್ಗಾವಣೆ ಮಾಡಿದರೆ ಅಸಮಾಧಾನ ಶಮನ ಆಗುತ್ತದೆ. ಉಳಿದಂತೆ, ನಾವು ಏನೇ ಮಾತನಾಡಿದರೂ ಅದು ಕೇವಲ ಮಾತುಗಳಾಗಿ ಮಾತ್ರ ಉಳಿಯುತ್ತದೆ” ಎಂದರು.

ಪ್ರೊ. ಎಸ್‌.ಗೋವಿಂದಯ್ಯ ಮಾತನಾಡಿ, “ಎಪ್ಪತ್ತರ ದಶಕದ ದಲಿತ ಚಳವಳಿಯಲ್ಲೆ ನಾವೆಲ್ಲೂ ಸಾಂಸ್ಕೃತಿಕ ದಿಕ್ಕಲ್ಲಿ ನಡೆಯುತ್ತಿದ್ದೆವು. ಅಲ್ಲಿಂದಾಚೆಗೆ ಸಾಂಸ್ಕೃತಿಕ ವಿಚಾರ ನಮ್ಮದಲ್ಲ ಎನ್ನುವಂತೆ ದಲಿತ ನಾಯಕರು ಅಂದುಕೊಂಡ ಬಳಿಕವೇ ಸಾಕಷ್ಟು ಬಿರುಕು ಮೂಡಿದೆ. 90 ರ ದಶಕದ ಬಳಿಕ ಪ್ರಜ್ಞಾಪೂವಕವಾಗಿ ನಾವು ಸಾಂಸ್ಕೃತಿಕತೆಯನ್ನು ಪ್ರಜ್ಞಾಪೂರ್ವಕವಾಗಿ ಜೀವಂತವಾಗಿ ಇಟ್ಟಿಸಿದ್ದರೆ ಇಂದು ಒಳಮೀಸಲಾತಿ ಸಮಸ್ಯೆಯೇ ಬರುತ್ತಿರಲಿಲ್ಲ. 70 ದಶಕದಲ್ಲಿ ದಲಿತ ಮತ್ತು ದಲಿತೇತರ ಎಂಬುದೇ ಇರಲಿಲ್ಲ. ಕುಂಬಾರರ ಪರವಾಗಿ ದಲಿತ ಸಮುದಾಯ ಪಾದಯಾತ್ರೆ ಮಾಡಿ ಸರ್ಕಾರದ ವಿರುದ್ಧ ಚಳವಳಿ ಮಾಡಿತ್ತು. ಆ ಬದ್ಧತೆಯನ್ನು ನಮ್ಮ ಹೋರಾಟಗಾರರು ಎನಿಸಿಕೊಂಡವರು ಪಾಲಿಸಿದಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ” ಎಂದರು.

“ಇದೊಂದು ಐತಿಹಾಸಿಕ ಸಭೆಯಾಗಿದೆ, ಏಕೆಂದರೆ, ಕರ್ನಾಟಕ ಜಾತ್ಯತೀತ ನೆಲೆ, ವಚನ ಚಳವಳಿಯ ಮುಂದುವರಿದ ಭಾಗವೇ ದಲಿತ ಚಳವಳಿ. ಈ ಪರಿಜ್ಞಾನ ಉಳಿಸಿಕೊಂಡಿದಿದ್ದರೆ ಈಗಿನ ಸಮಸ್ಯೆ ಬರುತ್ತಿರಲಿಲ್ಲ. ಇಂದು ಹೊಲೆಯರು- ಮಾದಿಗರು ಇಂದು ಬೀದಿ ಜಗಳಕ್ಕೆ ನಿಂತಿದ್ದಾರೆ. ಅವರಿಗೆ ಬುದ್ದಿ ಹೇಳುವ ದಲಿತೇತರ ಪ್ರಜ್ಞಾವಂತರು ಮುಂದೆ ಬರುತ್ತಿಲ್ಲ. ನಮಗೆ ಇರುವುದು ಇನ್ನು ಕೇವಲ ಮೂರು ದಿನ,16 ಕ್ಕೆ ಅಂತಿಮ ತೀರ್ಮಾನ ಆಗುತ್ತದೆ. ಒಂದು ವೇಳೆ ಸಂಪುಟ ಉಪ ಸಮಿತಿಗೆ ಕಳುಹಿಸಿದರೆ ಸಮಾಜಿಕ ನ್ಯಾಯಕ್ಕೆ ಎಸಗುವ ದೊಡ್ಡ ದ್ರೋಹವಾಗುತ್ತದೆ” ಎಂದರು.

ಬೆಂಗಳೂರಿನ ಶಾಸಕರ ಭವನದಲ್ಲಿ ಬುಧವಾರ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಹಿರಿಯ ಸಾಹಿತಿಗಳು, ಚಿಂತಕರು, ಶಿಕ್ಷಣ ತಜ್ಞರು, ದಲಿತ ಚಳವಳಿಯ ಮುಖಂಡರು, ಪ್ರಾಧ್ಯಾಪಕರು, ಲಿಂಗತ್ವ ಅಲ್ಪಸಂಖ್ಯಾತರು, ವಿದ್ಯಾರ್ಥಿ ಸಂಘಟನೆಗಳ ನಾಯಕರು ಹಾಗೂ ಒಳಮೀಸಲಾತಿ ಪರ ಹೋರಾಟಗಾರರು ಭಾಗವಹಿಸಿದ್ದರು.

ಇದನ್ನೂ ನೋಡಿ: ಪುಷ್ಪಗಳಲ್ಲಿ ಅರಳಿದ ‘ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ’Janashakthi Media   ಜಸ್ಟೀಸ್‌

Donate Janashakthi Media

Leave a Reply

Your email address will not be published. Required fields are marked *