ನವದೆಹಲಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಪಕ್ಷದಿಂದ ಪಕ್ಷಗಳಿಗೆ ಪಕ್ಷಾಂತರ ಪರ್ವ ಆರಂಭಗೊಂಡಿದ್ದು ನೆನ್ನೆ ದಿನ ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ. ಆಯಂಟನಿ ಅವರ ಮಗ ಅನಿಲ್ .ಕೆ. ಆಯಂಟನಿ ಅವರು ಕೇಂದ್ರ ಸಚಿವರಾದ ಪೀಯೂಷ್ ಗೋಯಲ್, ವಿ. ಮುರಳಿಧರನ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರಿದ್ದರು.
ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಅನಿಲ್ .ಕೆ. ಆಯಂಟನಿ ಅವರ ತಂದೆ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎ.ಕೆ. ಆಯಂಟನಿ ಅವರು ತಮ್ಮ ಮಗ ಬಿಜೆಪಿ ಸೇರಿದ್ದು ಅತ್ಯಂತ ನೋವಿನ ವಿಚಾರ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎ.ಕೆ. ಆಯಂಟನಿ ಹೇಳಿದ್ದಾರೆ. ಅದೊಂದು ತಪ್ಪು ನಿರ್ಧಾರ ಎಂದು ತೀವ್ರ ಬೇಸರಗೊಂಡಿದ್ದ ಹೊರಹಾಕಿದ್ದು, ‘ಬಿಜೆಪಿ ಸೇರಿರುವ ಮಗ ಅನಿಲ್ ನಿರ್ಧಾರ ಅತ್ಯಂತ ನೋವಿನ ವಿಚಾರವಾಗಿದೆ. ದೇಶದ ವಿವಿಧತೆಯಲ್ಲಿ ಏಕತೆಯನ್ನು ಬಿಜೆಪಿ ಹಾಳು ಮಾಡಲು ಯತ್ನಿಸುತ್ತಿದೆ. ಸ್ವಾತಂತ್ರ್ಯ ಬಂದಾಗಿನಿಂದ ನೆಹರೂ ಕುಟುಂಬ ಏಕತೆಯನ್ನು ಕಾಪಾಡಲು ಕೆಲಸ ಮಾಡುತ್ತಿದೆ.
ಇದನ್ನೂ ಓದಿ : ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಪುತ್ರ ಅನಿಲ್ ಆಂಟನಿ ಬಿಜೆಪಿ ಸೇರ್ಪಡೆ
ನನಗೀಗ 82 ವರ್ಷ. ಜೀವನದ ಅಂತ್ಯಕಾಲದಲ್ಲಿದ್ದೇನೆ. ನನ್ನ ಕೊನೆಯ ಉಸಿರಿರುವರೆಗೂ ಕಾಂಗ್ರೆಸ್ ಕಾರ್ಯಕರ್ತನಾಗಿ ಇರುತ್ತೇನೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಧ್ವನಿ ಎತ್ತುತ್ತಲೇ ಇರುತ್ತೇನೆ’ಎಂದು ತಿರುವನಂತಪುರದಲ್ಲಿ ಆಯಂಟನಿ ಸುದ್ದಿಗಾರರಿಗೆ ತಿಳಿಸಿದರು.
ಮಗನ ಕುರಿತಂತೆ ಯಾವುದೇ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು,’ಅನಿಲ್ ಕುರಿತಂತೆ ಮಾತನಾಡಿದ್ದು ಇದೇ ಮೊದಲು ಮತ್ತು ಕೊನೆಯ ಬಾರಿಯಾಗಲಿದೆ’ ಎಂದು ಹೇಳಿದ್ದಾರೆ. ಆಯಂಟನಿ ಅವರ ಮಗ ಅನಿಲ್ ಕೆ. ಆಯಂಟನಿ ಅವರು ಕೇಂದ್ರ ಸಚಿವರಾದ ಪೀಯೂಷ್ ಗೋಯಲ್, ವಿ. ಮುರಳಿಧರನ್ ಅವರ ನೇತೃತ್ವದಲ್ಲಿ ನವದೆಹಲಿಯಲ್ಲಿ ಇಂದು ಬಿಜೆಪಿ ಸೇರಿದರು.