ಮೂರು ಕೃಷಿ ಕಾಯ್ದೆಗಳು: ಅದಾನಿ-ಅಂಬಾನಿ ಕನೆಕ್ಷನ್

‘ಸರ್ಕಾರ್ ಕೀ ಅಸ್ಲೀ ಮಜ್ಬೂರಿ- ಅಂಬಾನಿ ಅದಾನಿ ಔರ್ ಜಮಾಖೋರಿ’

ಭಾರತ್ ಬಂದ್‌ಗೆ ವ್ಯಾಪಕ ಜನಸ್ಪಂದನೆಯ ನಂತರವೂ ಮೋದಿ ಸರಕಾರ ರೈತರ ಆಗ್ರಹಗಳಿಗೆ ಕಿವಿಗೊಡದಿರುವ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ತಮ್ಮ ಹೋರಾಟವನ್ನು ತೀವ್ರಗೊಳಿಸುವುದರ ಭಾಗವಾಗಿ ಅಂಬಾನಿ ಮತ್ತು ಅದಾನಿ ಕಂಪನಿಗಳ ಬಹಿಷ್ಕಾರಕ್ಕೆ ಕರೆ ನೀಡಿವೆ. ಇದು ಸಹಜವಾಗಿಯೇ ಕಳೆದ ಆರು ವರ್ಷಗಳಲ್ಲಿ ‘ಅಚ್ಛೇ ದಿನ್’ಗಳನ್ನು ಕಂಡಿರುವ ಅದಾನಿ ಅಂಬಾನಿಗಳು ಕ್ರುದ್ಧರಾಗುವಂತೆ

ಮಾಡಿರುವಂತೆ ಕಾಣುತ್ತದೆ-ವಿಶೇಷವಾಗಿ ಅದಾನಿ ಕಂಪನಿಗಳ ವಕ್ತಾರರನ್ನು. ಭಾರತ ಆಹಾರ ನಿಗಮ(ಎಫ್‌ಸಿಐ)ದ ಆಧುನಿಕ ಹಗೇವುಗಳ ನಿರ್ಮಾಣದ ಮತ್ತು ನಿರ್ವಹಣೆಯ ಕಾಂಟ್ರಾಕ್ಟ್ ಪಡೆದಿರುವ ಅದಾನಿ ಗುಂಪಿನ ವಕ್ತಾರರು “ನಮ್ಮ ಕಂಪನಿಗೆ ಧಾನ್ಯ ಸಂಗ್ರಹದ ಪ್ರಮಾಣವನ್ನಾಗಲೀ, ಧಾನ್ಯ ಬೆಲೆಯನ್ನಾಗಲೀ ನಿರ್ಧರಿಸುವುದರಲ್ಲಿ ಯಾವುದೇ ಪಾತ್ರ ಇಲ್ಲ., ನಾವು ಎಫ್‌ಸಿಐ ಗೆ ಸೇವಾದಾರರು/ಮೂಲರಚನೆ ಒದಗಿಸುವವರು ಮಾತ್ರ”ಎಂದು ‘ಸ್ಪಷ್ಟೀಕರಣ’ನೀಡುತ್ತ ಇದು “ನಮ್ಮಂತಹ ಜವಾಬ್ದಾರಿಯುತ ಕಾರ್ಪೊರೇಟ್‌ನ ಹೆಸರು ಕೆಡಿಸುವ ಮತ್ತು ಸಾರ್ವಜನಿಕರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ”ಎಂದಿರುವುದಾಗಿ ವರದಿಯಾಗಿದೆ(ಇಂಡಿಯನ್ ಎಕ್ಸ್ಪ್ರೆಸ್, ಡಿ.9) ಆದರೆ ಇದಕ್ಕೆ ಸಂಬಂಧಪಟ್ಟಂತೆ ಒಂದು ಮಾಹಿತಿ ಕುತೂಹಲಕಾರಿಯಾಗಿದೆ.

ಮಾರ್ಚ್ 2014ರಲ್ಲಿ ಎಫ್‌ಸಿಐಗೆ ಭಾರತ ಸರಕಾರದಿಂದ ಬರಬೇಕಾಗಿದ್ದ ಹಣ ರೂ. 45,633 ಕೋಟಿ. ಮಾರ್ಚ್ 2020ರ

ವೇಳೆಗೆ ಇದು ರೂ. 2,49,000 ಕೋಟಿ ಆಗಿದೆ. ಭಾರತ ಸರಕಾರ ಮಾಡಿಕೊಂಡ ಈ ಹಣಕಾಸು ಫಜೀತಿಯಿಂದಾಗಿ ಎಫ್‌ಸಿಐ

ಈಗ 3.5ಲಕ್ಷ ಕೋಟಿ ರೂ.ಗಳ ಸಾಲದಲ್ಲಿ ಮುಳುಗಿದೆಯಂತೆ. ಎಫ್‌ಸಿಐನ ದುರಾಡಳಿತ ಮತ್ತು ಅದನ್ನು ಶಿಥಿಲಗೊಳಿಸುವುದು ಅದಾನಿಗೆ ಆಹಾರಧಾನ್ಯಗಳ ಸಾರ್ವಜನಿಕ ದಾಸ್ತಾನಿನಲ್ಲಿ ಪ್ರಭಾವ ಬೀರಲು ಅನುವು ಮಾಡಿಕೊಡಲಿಕ್ಕಾಗಿ ಹೆಣೆದ ಮಹಾ ಕಾರ್ಯತಂತ್ರ, ಈ ಸರಕಾರದ ಕೃಷಿ ಕಾಯ್ದೆಗಳು ಈ ಪ್ರಕ್ರಿಯೆಯನ್ನು ಮುಂದೊಯ್ಯುವ, ಕ್ರೋಡೀಕರಿಸುವ ಕೆಲಸ ಮಾಡುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರ ‘ಸರ್ಕಾರ್ ಕೀ ಅಸ್ಲೀ ಮಜ್ಬೂರಿ- ಅಂಬಾನಿ ಅದಾನಿ ಔರ್ ಜಮಾಖೋರಿ’(ಸರ್ಕಾರದ ಅಸಲೀ ಅಸಹಾಯಕತೆ-ಅಂಬಾನಿ ಅದಾನಿ ಮತ್ತು ಜಮಾಕೋರತೆ) ಎಂಬ ಘೋಷಣೆಯನ್ನು ನೆನಪಿಸಿಕೊಳ್ಳಬಹುದು.

***

ಇನ್ನೊಂದು ಮಾಹಿತಿ-ಹರ್ಯಾಣ ಸರಕಾರದ ಪಟ್ಟಣ ಮತ್ತು ಗ್ರಾಮ ಯೋಜನಾ ನಿರ್ದೇಶನಾಲಯ ಈ ಮೂರು ಸುಗ್ರೀವಾಜ್ಞೆಗಳನ್ನು ಹೊರಡಿಸುವ ಒಂದು ತಿಂಗಳ ಮೊದಲು, ಮೇ 2020ರಲ್ಲಿ, ಪಾಣೀಪತ ಜಿಲ್ಲೆಯಲ್ಲಿ ಅದಾನಿ ಅಗ್ರೊ

ಲಾಜಿಸ್ಟಿಕ್ಸ್ ಕಂಪನಿಗೆ ಕೃಷಿ ಉತ್ಪನ್ನಗಳಿಗೆ 1000 ದಾಸ್ತಾನು ವ್ಯವಸ್ಥೆಗಳನ್ನು ನಿರ್ಮಿಸಲು ಭೂಬಳಕೆ ಬದಲಾವಣೆಗೆ ಅನುಮತಿ ಮಂಜೂರು ಮಾಡಿತು ಎಂದು ವರದಿಯಾಗಿದೆ.

ಮತ್ತೊಂದು ಮಾಹಿತಿ- ಕಳೆದ ವರ್ಷ ಎಪ್ರಿಲ್ ಮತ್ತು ಮೇ ತಿಂಗಳ ನಡುವೆ ಅದಾನಿ ಗುಂಪು 9 ಕೃಷಿ ಮೂಲರಚನೆ ಮತ್ತುಸಾಗಾಣಿಕೆ ಕಂಪನಿಗಳನ್ನು ತೆರೆದಿದೆ.

***

ಮತ್ತಷ್ಟು ಸಂಬಂಧಿತ ಸುದ್ದಿಗಳು

ಅಕ್ಟೋಬರ್ 4 ರಂದು ಕೇಂದ್ರ ಕೃಷಿ ಮಂತ್ರಿಗಳು ಹೊಸ ಕೃಷಿ ಧೋರಣೆಯ ಪರಿಣಾಮಗಳ ಕುರಿತು ‘ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ‘ನ ಸಂಪಾದಕೀಯ ನಿರ್ದೇಶಕರೊಂದಿಗೆ ಸಂವಾದ ನಡೆಸಿದರು. ಇದನ್ನು ಪ್ರಸ್ತುತಪಡಿಸಿದ್ದು ‘ಅದಾನಿ’!

***

ಕಳೆದ ತಿಂಗಳು ಪ್ರಧಾನಿಗಳು ತಮ್ಮ ‘ಮನ್ ಕೀ ಬಾತ್’ನಲ್ಲಿ ಈ ಹೊಸ ಕಾಯ್ದೆಗಳ ಪ್ರಯೋಜನ ಪಡೆದ ಇಬ್ಬರು ರೈತರು

ಜಿತೇಂದ್ರ ಭೋಯ್ ಮತ್ತು ಮಹಮ್ಮದ್ ಅಸ್ಲಾಂರವರ ಉದಾಹರಣೆಗಳನ್ನು ಕೊಟ್ಟರು. ರೈತರ ‘ದಿಲ್ಲಿ ಚಲೋ’ವನ್ನು ತಡೆಯುವ ಸರಕಾರದ ಪ್ರಯತ್ನಗಳಿಂದಾಗಿ ದಿಲ್ಲಿ ಸುತ್ತಮುತ್ತ ಪರಿಸ್ಥಿತಿ ಗಂಭೀರಗೊಳ್ಳಲಾರಣಭಿಸಿದಾಗ ‘ಇಂಡಿಯ ಟುಡೇ’ ಈ ಕಾಯ್ದೆಗಳ ‘ಯಶೋಗಾಥೆಗಳ ಬಗ್ಗೆ ನವದೆಹಲಿ, ಉತ್ತರಾಖಂಡದ ರೂರ್ಕಿ, ಮತ್ತು ಮಧ್ಯಪ್ರದೇಶದ ಹರ್ದಾ ಮತ್ತು ದೇವಸ್‌ನಿಂದ ‘ಗ್ರೌಂಡ್ ರಿಪೋರ್ಟ್ಗಳನ್ನು, ಅಂದರೆ ತಾವೇ ಆ ರೈತರ ಬಳಿ ಹೋಗಿ ಮಾಹಿತಿ ಸಂಗ್ರಹಿಸಿದಂತೆ ವರದಿಗಳನ್ನು ಪ್ರಕಟಿಸಿತು, ಮೊದಲು ತನ್ನ ವೆಬ್‌ಸೈಟಿನಲ್ಲಿ, ನಂತರ ತನ್ನ ಸುದ್ದಿ ವಾಹಿನಿಯಲ್ಲೂ. ಅದರ ‘ಪ್ರಸಿದ್ಧ’ನಿರೂಪಕರು “ಕೆಲವು ನಿರ್ದಿಷ್ಟ ಅಧ್ಯಯನಗಳು ಹೊಸ ಕಾಯ್ದೆಗಳಿಂದ ಒಂದು ನಿರ್ದಿಷ್ಟ ವಿಭಾಗಕ್ಕೆ ಸಂತೋಷವಾಗಿದೆ ಎಂಬುದನ್ನು ತೋರಿಸುತ್ತವೆ”ಎಂದು ಟಿಪ್ಪಣಿ ಮಾಡಿದರು. ವಾಸ್ತವವಾಗಿ ಈ ಎಲ್ಲ ‘ಮಾಹಿತಿ’ಗಳ, ‘ಗ್ರೌಂಡ್‍ ರಿಪೋರ್ಟ್‍ ಗಳ ಮೂಲ ಕೇಂದ್ರ ಸುದ್ದಿ ಮಂತ್ರಿಗಳ ಕಚೇರಿ ಎಂದು ತಿಳಿದು ಬಂದಿರುವುದಾಗಿ ‘ನ್ಯೂಸ್‌ಲಾಂಡ್ರಿ’ವೆಬ್ ಪತ್ರಿಕೆ ಹೇಳಿದೆ (ಡಿ.10).

ಇಂಡಿಯಾ ಟುಡೇ ವೆಬ್‌ಸೈಟಿನಲ್ಲಿ ಪ್ರಕಟವಾಗುವ ಹಿಂದಿನ ದಿನ ಈ ‘ಯಶೋಗಾಥೆ’ಯ ‘ಗ್ರೌಂಡ್ ರಿಪೋರ್ಟ್‍ ಗಳು’

ಮುಖ್ಯಧಾರೆಯ ಮಾಧ್ಯಮಗಳ ಹಲವು ಪತ್ರಕರ್ತರಿಗೆ ಆ ಕಚೇರಿಯಿಂದಲೇ ವಾಟ್ಸ್ಆಪ್ ಮೂಲಕ ಸಿಕ್ಕಿದ್ದವು ಎಂದೂ ತಿಳಿದು ಬಂದಿದೆ. ಅಂದರೆ ಸರಕಾರದ ಅಘೋಷಿತ ಜಾಹೀರಾತು!

***

ಮಾತುಕತೆಗಳು ನಡೆಯುತ್ತಿದ್ದಂತೆಯೇ, ಡಿಸೆಂಬರ್ 7ರಂದು ಸುಮಾರು 20 ರೈತರ ನಿಯೋಗವೊಂದು ಕೃಷಿ ಮಂತ್ರಿಗಳನ್ನು

ಭೇಟಿ ಮಾಡಿ ಮೂರು ಕೃಷಿ ಕಾಯ್ದೆಗಳಿಗೆ ಬೆಂಬಲ ಸೂಚಿಸಿತು ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತು. ಇವರಲ್ಲಿ ಹಲವು ಮಂದಿ ಬಿಜೆಪಿಯ ಕಟ್ಟಾ ಬೆಂಬಲಿಗರು ಎಂದು ಇಂಡಿಯನ್ ಎಕ್ಸ್ ಪ್ರೆಸ್(ಡಿ.9) ವರದಿ ಮಾಡಿದೆ. ಆದ್ದರಿಂದಲೇ ಬಹುಶಃ ಸರಕಾರ ಮಾತುಕತೆಗಳ ವಿಷಯದಲ್ಲಿ ಅಪ್ರಾಮಾಣಿವಾಗಿದೆ ಎಂದು ರೈತ ಸಂಘಟನೆಗಳು ಅವನ್ನು ತಿರಸ್ಕರಿಸಿರುವುದು. ಈ ಸರಕಾರದ ಬಗ್ಗೆ ಬಹುಪಾಲು ರೈತ ಸಂಘಟನೆಗಳಿಗೆ ವಿಶ್ವಾಸ ಇಲ್ಲವಾಗುತ್ತಿದೆ ಎಂಬುದಂತೂ ಈ 15 ದಿನಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

ಕೃಪೆ: ಪಿಮಹಮ್ಮದ್, ಆಂದೋಲನ

***

ಆದರೂ ರೈತ ಸಂಘಟನೆಗಳು ಮೂರು ಕಾಯ್ದೆಗಳಿಗೆ ತಿದ್ದುಪಡಿಗಳ ಸರಕಾರದ ‘ಪ್ರಸ್ತಾವ’ಗಳನ್ನು ಪರಿಶೀಲಿಸಿ ಮಾತುಕತೆಗಳನ್ನು ಪುನರಾರಂಭಿಸಬೇಕು ಎಂದು ಮತ್ತೊಮ್ಮೆ ಮನವಿ ಮಾಡಿಕೊಂಡ ಡಿಸೆಂಬರ್ 10ರ ಪತ್ರಿಕಾ ಗೋ಼ಷ್ಠಿಯಲ್ಲೂ, ಕೃಷಿ ಮಂತ್ರಿಗಳೊಂದಿಗೆ ಭಾಗವಹಿಸಿದ್ದ, ಬಳಕೆದಾರರ ವ್ಯವಹಾರಗಳ ಮಂತ್ರಿಗಳು ಪ್ರಶ್ನೆಯೊಂದಕ್ಕೆಉತ್ತರಿಸುತ್ತ, ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ ಎಂದು ಮಾಧ್ಯಮಗಳು ತಮ್ಮ ‘ತನಿಖಾ ಕೌಶಲ’ಗಳನ್ನು ಬಳಸಿಕೊಂಡು ಕಂಡುಹಿಡಿಯಬೇಕು ಎಂದು ಸಲಹೆ ನೀಡಿದರು! (ದಿ ಹಿಂದು, ಡಿ.11)

***

ರೈತರೇನೂ ದಾರಿ ತಪ್ಪಿಲ್ಲ, ಈಗ ಯಾರೂ ಅವರ ದಾರಿ ತಪ್ಪಿಸಲು ಸಾಧ್ಯವಿಲ್ಲ, ವಾಸ್ತವವಾಗಿ ಸರಕಾರವೇ ರೈತರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆಯೋ ಅಥವ ಸ್ವತಃ ಅದನ್ನೇ ಅದರ ಗೆಳೆಯರು ದಾರಿ ತಪ್ಪಿಸುತ್ತಿದ್ದಾರೋ ಎಂಬ ಸಂದೇಹ ಹಲವರಿಗೆ ಈಗ ಉಂಟಾಗುತ್ತಿದೆ. ಈ ನಡುವೆ ರೈತರು ಮತ್ತು ಅವರ ಉತ್ಪನ್ನಗಳನ್ನು ಕೊಳ್ಳುವವರ ನಡುವೆ ದಲ್ಲಾಳಿಗಳ ಹಸ್ತಕ್ಷೇಪವನ್ನು ತಡೆಯಲಿಕ್ಕಾಗಿಯೇ ಈ ಕಾಯ್ದೆಗಳು ಎನ್ನುವ ಸರಕಾರದ ಮಾತನ್ನು ಕೆಲವರು ಸರಕಾರದ ವಿರುದ್ಧವೇ ತಿರುಗಿಸಿದ್ದಾರೆ, ನಾವು ಅಂಬಾನಿ-ಅದಾನಿಯವರೊಡನೇ ಮಾತುಕತೆ ನಡೆಸುತ್ತೇವೆ, ನೀವ್ಯಾಕೆ ಮಧ್ಯದಲ್ಲಿ ಎಂಬ ಗೇಲಿಮಾತೂ ಕೇಳಬಂದಿದೆ!

ಹೋಗಿ ,ನಿಮ್ಮ ಬಾಸ್‍ ಕರೆ ತನ್ನಿ ಹೇಳು ಮಧ್ಯವರ್ತಿ ಬೇಡಾ ಅಂದೆನಲ್ಲ.

ಅಂಬಾನಿ-ಅದಾನಿ ಮಾತ್ರ

ಕೃಪೆ: ಅರವಿಂದ ತೆಗ್ಗಿನಮಠ, ಬಟ್‍ ಸರ್‍. ಕಾಂ

Donate Janashakthi Media

Leave a Reply

Your email address will not be published. Required fields are marked *