ಮುಂಬಯಿ ಮಾದರಿಯಲ್ಲಿ ಕಾರ್ಯಚರಣೆ ಮಾಡಲು ಕ್ರಮ: ಲಿಂಬಾವಳಿ

ಬೆಂಗಳೂರು: ಪ್ರತಿ ಜಿಲ್ಲೆಯಲ್ಲೂ ಕೋವಿಡ್‌ ವಾರ್‌ ರೂಂ, ಹೆಲ್ಪ್‌ ಲೈನ್‌ ಇದೆ. ರಾಜ್ಯದ 57 ತಾಲ್ಲೂಕುಗಳಲ್ಲಿ ಕೋವಿಡ್‌ ಆರೈಕೆ ಕೇಂದ್ರ ಕೇಂದ್ರವನ್ನು ತೆರೆಯಲಾಗಿದ್ದು, ಉಳಿದ ತಾಲ್ಲೂಕುಗಳಲ್ಲಿ ಕೇಂದ್ರಗಳ ಕಾರ್ಯರಾಂಭಕ್ಕೆ ಸರಕಾರ ಮುಂದಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಅರವಿಂದ ಲಿಂಬಾವಳಿ ಅವರು ʻಇನ್ನು ಮುಂದೆ ಯಾರಿಗೆ ಕೋವಿಡ್‌ ಚಿಕಿತ್ಸೆಯಾಗಿ ಆಸ್ಪತ್ರೆಗಳಲ್ಲಿ ನಿಗದಿಯಾಗುವ ಹಾಸಿಗೆ ಲಭ್ಯತೆಯ ಬಗ್ಗೆ ಎಸ್‌ಎಂಎಸ್‌ ಕಳುಹಿಸುತ್ತೇವೆ. ಸೋಂಕಿತರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಹಾಸಿಗೆ ನಿಗದಿಪಟ್ಟ ಕಡೆ ತಲುಪಲು ಈಗ ತೆಗೆದುಕೊಳ್ಳುತ್ತಿರುವ ಹನ್ನೆರಡು ಗಂಟೆಯ ಸಮಾಯವಕಾಶವನ್ನು ಕಡಿಮೆ ಮಾಡಿದ್ದು ಸಂಬಂಧಪಟ್ಟ ರೋಗಿಗಳು ಅವರಿಗೆ ನಿಗದಿಯಾದ ಆಸ್ಪತ್ರೆಗೆ 4 ಗಂಟೆಯ ಒಳಗೆ ಹೋಗಬೇಕು ಎಂದು ಹೇಳಿದರು.

ಇದನ್ನು ಓದಿ: ಬೆಡ್ ಹಗರಣದ ಹಿಂದೆ ಯಾರಿರಬಹುದು?

ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪನವರು ನನಗೆ ಬಿಬಿಎಂಪಿಯಲ್ಲಿನ ವಾರ್‌ ರೂಂ ಹಾಗೂ ಟೆಲಿ ಕಮ್ಯೂನಿಕೇಷನ್ಸ್‌ ಬಗ್ಗೆ ಜವಾಬ್ದಾರಿಯನ್ನು ನೀಡಿದ್ದಾರೆ. ಈಗಾಗಲೇ ನಾನು ವಾರ್‌ ರೂಂ ಹಾಗೂ ಬಿಬಿಎಂಪಿಗೆ ಭೇಟಿ ನೀಡಿ ಸುಧೀರ್ಘವಾಗಿ ಸಮಾಲೋಚನೆ ಮಾಡಿರುವೆ.  ಇಂದೂ ಸಹ ಕೋವಿಡ್‌ ನಿರ್ವಹಣೆಗಾಗಿ ಆಸ್ಪತ್ರೆಗಳಿಗೆ ನಿಯೋಜನೆಗೊಂಡಿರುವ ನೋಡಲ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ ಎಂದು ಹೇಳಿದರು.

ಅಧಿಕಾರಿಗಳೊಂದಿಗೆ ನಡೆದ ಚರ್ಚೆಯಲ್ಲಿ ಕೋವಿಡ್‌ ಕಾರ್ಯಪಡೆಯ ಸಹಾಯವಾಣಿ ಕೇಂದ್ರದ 1912 ಸಂಖ್ಯೆಗೆ ಬರುವ ಕರೆಗಳನ್ನು ಸ್ವೀಕರಿಸಲು 9 ನಿಮಿಷ ಸಮಯವಕಾಶ ಆಗುತ್ತಿದೆ. ಹೆಚ್ಚು ಕರೆಗಳು ಬರುತ್ತಿರುವುದರಿಂದ ಈ ರೀತಿಯಾಗುತ್ತಿದೆ. ಪ್ರಸಕ್ತ ಕಾರ್ಯಚರಣೆ ಮಾಡುತ್ತಿರುವ 60 ಲೈನ್‌ಗಳನ್ನು 250 ಲೈನ್‌ ಹೆಚ್ಚಿಸಲು ಸೂಚಿಸಲಾಗಿದೆ. ಅಲ್ಲದೆ, ನೋಡಲ್‌ ಅಧಿಕಾರಿಗಳು ಕರ್ತವ್ಯಕ್ಕೆ ಗೈರಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಅವರು ಸರಿಯಾಗಿ ಕರ್ತವ್ಯ ನಿರ್ವಹಿಸಲು ಸೂಕ್ತ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನು ಓದಿ: ದಂಧೆಯ ರೂವಾರಿಗಳು ಬಿಜೆಪಿಯವರೇ : ದಿನೇಶ್‌ ಗುಂಡೂರಾವ್‌

ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಂಬಯಿ ನಲ್ಲಿ ಯಾವ ರೀತಿಯ ಕ್ರಮಗಳನ್ನು ಅನುಸರಿಸಲಾಗಿದ್ದು ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲಿ ಅನುಸರಿಸುವ ಬಗ್ಗೆ ಚರ್ಚೆ ನಡೆದಿದೆ. ವಾರ್ಡ್‌ ಮಟ್ಟದಲ್ಲಿ ಇದನ್ನು ಕಾರ್ಯಾರಂಭ ಮಾಡಲಾಗುವುದು. ವಾರ್ಡ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ವಾರ್ಡ್‌ ಮಟ್ಟದಲ್ಲಿ ೫೦ ಜನರ ಕೋವಿಡ್‌ ನಿರ್ವಹಣೆ ತಂಡ ಕೆಲಸ ಮಾಡುಲು ತಯಾರಿ ಮಾಡಲಾಗುತ್ತಿದೆ. ಈಗಾಗಲೇ ದಿನವೊಂದಕ್ಕೆ ವಾರ್ಡ್‌ಗಳಲ್ಲಿ 100 ರಿಂದ 150 ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಅತ್ಯಂತ ಸಮರ್ಕವಾಗಿ ಕೋವಿಡ್‌ ವಿರುದ್ಧ ಹೋರಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ವಲಯ ಮಟ್ಟದಲ್ಲಿ ವಾರ್‌ ರೂಂ ಮೂಲಕ ಟೆಲಿಪೋನ್‌ ಕಾರ್ಯನಿರ್ವಹಿಸಲಿದೆ. ವಾರ್ಡ್‌ ಮಟ್ಟದ ಕಾರ್ಯಾಪಡೆಯನ್ನು ನಿಯೋಜನೆ ಮಾಡಲಾಗುವುದು. ಇದರಲ್ಲಿ ಡಾಕ್ಟರ್‌ಗಳು ನರ್ಸ್‌ಗಳು ಸೇರಿದಂತೆ ಎಲ್ಲರನ್ನು ಬಳಸಿಕೊಳ್ಳುತ್ತೇವೆ. ಆರೋಗ್ಯದಲ್ಲಿ ಸಮಸ್ಯೆ ಎದುರಾದ ಮಂದಿ ವಾರ್ಡ್‌ಗೆ ಭೇಟಿ ನೀಡಿದಾಗ ಅವರ ಆರೋಗ್ಯವನ್ನು ಪರಿಶೀಲಿಸಲಾಗುವುದು. ಅವರಿಗೇನಾದರೂ ಕೋವಿಡ್‌ ದೃಢಪಟ್ಟಲ್ಲಿ ತಕ್ಷಣದಲ್ಲೆ ಅವರನ್ನು ಯಾವ ರೀತಿಯ ಆರೈಕೆ ಮಾಡಬೇಕು ಮತ್ತು ಯಾವ ಆಸ್ಪತ್ರೆಗೆ ದಾಖಲಿಸಬೇಕೆಂದು ವಾರ್ಡ್‌ಕಾರ್ಯಪಡೆಯೇ ನಿರ್ಧರಿಸಲಿದೆ ಎಂದು ಸಚಿವರು ಹೇಳಿದರು.

ಇದನ್ನು ಓದಿ: ಆರೋಗ್ಯ ಸಚಿವರ ಕ್ಷೇತ್ರದಲ್ಲಿ ಜಂಬೋ ಆಕ್ಸಿಜನ್‌ ಸಿಲಿಂಡರ್‌ ಕಳ್ಳತನ

ವಾರ್ಡ್‌ ಮಟ್ಟದ ಕಾರ್ಯಾಚರಣೆಯನ್ನು ಈಗಾಗಲೇ ಮುಂಬಯಿ ಮತ್ತು ಚೆನ್ನೈನಲ್ಲಿ ನಡೆಸಲಾಗುತ್ತಿದೆ. ಅದೇ ಮಾದರಿಯಲ್ಲಿ ಸಮಿತಿಗಳ ಅಡಿಯಲ್ಲಿ ಮಾಡಲು ಮುಂದಾಗುವುದು ಎಂದು ಹೇಳಿದರು.

ಈಗಾಗಲೇ ಮೊದಲನೇ ಲಸಿಕೆ ಪಡೆದವರು ಎರಡನೇ ಲಸಿಕೆ ಪಡೆಯಲು ಸಮಸ್ಯೆ ಎದುರಾಗಿದೆ. ಅದನ್ನು ಸಮರ್ಥವಾಗಿ ನಿರ್ವಹಣೆ ಮಾಡಲಾಗುವುದು. ಈಗಾಗಲೇ 57 ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾರ್‌ ರೂಂಗಳಲ್ಲಿ ಡ್ಯಾಶ್‌ಬೋರ್ಡ್‌ಗಳನ್ನು ಅಳವಡಿಸಲಾಗುತ್ತಿದೆ. ಅದರಲ್ಲಿ ಆಕ್ಸಿಜನ್‌, ಹಾಸಿಗೆ, ಐಸಿಯು, ವೆಂಟಿಲೇಟರ್‌ ವಿವರಗಳು ಪ್ರದರ್ಶನಗೊಳ್ಳಲಿದೆ. ಇವು ಮಂಗಳವಾದದಿಂದಲೇ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.

ಆಸ್ಪತ್ರೆಗಳ್ಲಲಿ ದಾಖಲಾಗುವ ರೋಗಿಗಳಿಗೆ ಆಧಾರ್‌ ಆಧಾರಿತ ಬಯೋಮೆಟ್ರಿಕ್‌ ಸಿಸ್ಟ್‌ ಅಳವಡಿಸಲಾಗುತ್ತಿದೆ. ಅದು ರೋಗಿ ದಾಖಲಾಗುವಾಗ ಮತ್ತು ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವಾಗ ರೋಗಿಯಿಂದ ಬೆರಳಚ್ಚು ಯಂತ್ರದಲ್ಲಿ ದಾಖಲಾಗುವಂತೆ ಕ್ರಮವಹಿಸಲಾಗುವುದು. ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆಗೆ ಸಂಬಂಧಿಸಿದಂತೆ ಇನ್ನು ಮುಂದೆ ಬುಲೆಟಿನ್‌ ಬಿಡುಗಡೆ ಕ್ರಮವಹಿಸಲಾಗುವುದು.

ಇದನ್ನು ಓದಿ: ಕೋವಿಡ್ ನಿರ್ವಹಣೆಯಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ರಾಜಕೀಯ ಪಕ್ಷಗಳು

ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆ ಸಂಬಂಧಿಸಿದಂತೆ ಇನ್ನು ರೈಲ್ವೆ ಟಿಕೆಟ್‌ ಕಾಯ್ದಿರಿಸುವಂತೆ ಕಾರ್ಯಾಚರಣೆ ಮಾಡಲಾಗುವುದು. ಬೆಡ್‌ ಖಾಲಿ ಇದೆ. ಬೆಡೆ ಕಾಯ್ದಿರಿಸುವ ಕಾರ್ಯ ಪ್ರಗತಿಯಲ್ಲಿದೆ. ಬೆಡ್‌ ಕಾಯ್ದಿರಿಸಲಾಗಿ ಈ ರೀತಿಯ ಪ್ರತಿ ಹಂತದ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.

ಹಾಸಿಗೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿಸಿದ ಸಚಿವರು ಹಾಸಿಗೆ ಹಂಚಿಕೆ ಮತ್ತು ವಾರ್‌ ರೂಂಗಳಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಮ್ಯಾಕ್‌ ಐಡಿಯಿಂದ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪಾಳಿ ಬದಲಿಸಿ ಕೆಲಸ ಮುಗಿಸಿಕೊಂಡು ಹೋಗುವ ಸಿಬ್ಬಂದಿಗಳು ಮ್ಯಾಕ್‌ ಐಡಿಯನ್ನು ಮತ್ತೊಂದು ಪಾಳಿಗೆ ಹಾಜರಾಗುವ ಸಿಬ್ಬಂದಿಗಳಿಗೆ ನೀಡುತ್ತಾರೆ. ಇನ್ನು ಮುಂದೆ ಪಾಳಿ ಅವಧಿಯಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಗಳ ಹೆಸರು ಮ್ಯಾಕ್‌ ಐಡಿಯಲ್ಲಿ ಬರುವಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *