ಆರೋಪಿಗಳು ದೇವಸ್ಥಾನದ ಆಡಳಿತ ಸಮಿತಿಯಲ್ಲಿರುವವರು ಎಂದು ವರದಿಯಾಗಿದೆ ಅತ್ಯಾಚಾರ
ಮಧ್ಯಪ್ರದೇಶ: ರಾಜ್ಯದ ಸತ್ನಾ ಜಿಲ್ಲೆಯ ಮೈಹಾರ್‌ನ ಶಾರದಾ ದೇವಾಲಯದ ಆವರಣದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ದೇವಸ್ಥಾನದ ಸಮಿತಿಯ ದುಷ್ಕರ್ಮಿಗಳಿಬ್ಬರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಜುಲೈ 28ರ ಶುಕ್ರವಾರ ನಡೆದಿದೆ. ಗುರುವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ಬಾಲಕಿಯನ್ನು ಶುಕ್ರವಾರ ಮುಂಜಾನೆ ದೇವಸ್ಥಾನದ ಆವರಣದಲ್ಲಿ ಅಂಗಡಿಗಳನ್ನು ನಡೆಸುತ್ತಿದ್ದ ಕೆಲವರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಆರೋಪಿಗಳು ದೇವಸ್ಥಾನದ ಉದ್ಯೋಗಿಗಳಲ್ಲ ಎಂದು ದೇವಸ್ಥಾನದ ಸಮಿತಿಗೆ ಸಂಬಂಧಿಸಿದ ವ್ಯಕ್ತಿಗಳು ಹೇಳಿಕೊಂಡಿದ್ದರು. ಆದರೆ ದೇವಸ್ಥಾನದ ರಿಜಿಸ್ಟರ್‌ಗಳು ಮತ್ತು ಇತರ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿದ ನಂತರ ಇಬ್ಬರೂ ಆರೋಪಿಗಳು ದೇವಸ್ಥಾನದ ಸಮಿತಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಐಎಎನ್‌ಎಸ್ ವರದಿ ಮಾಡಿದೆ.
ಇದನ್ನೂ ಓದಿ: ಮಂಗಳೂರು: ದಲಿತ ಬಾಲಕಿಯ ರೇಪ್; 3 ಸಂಘಪರಿವಾರದ ದುಷ್ಕರ್ಮಿಗಳ ಸೆರೆ; ಇನ್ನಿಬ್ಬರು ನಾಪತ್ತೆ
ಬಾಲಕಿಯ ಚಿಕಿತ್ಸೆಗಾಗಿ ಆಡಳಿತ ಮಂಡಳಿ 50 ಸಾವಿರ ರೂ.ಗಳನ್ನು ಬಾಲಕಿಯ ಪೋಷಕರಿಗೆ ನೀಡಿದೆ. ಸಂತ್ರಸ್ಥೆ ಸತ್ನಾದಿಂದ 70 ಕಿಮೀ ದೂರದಲ್ಲಿರುವ ರೇವಾದ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯಕೀಯ ವರದಿಯು ಬಾಲಕಿಯ ಮೇಲೆ “ಕ್ರೂರವಾಗಿ ಅತ್ಯಾಚಾರ” ನಡೆಸಲಾಗಿದೆ ಎಂದು ದೃಢಪಡಿಸಿದೆ.
“ವೈದ್ಯರಿಂದ ಅಂತಿಮ ವರದಿಯನ್ನು ನಾನು ಇನ್ನೂ ಸ್ವೀಕರಿಸಿಲ್ಲ. ಆದರೆ, ಆಕೆಗೆ ಪ್ರಜ್ಞೆ ಬಂದಿದೆ ಎಂದು ತಿಳಿದು ಬಂದಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ, ಘಟನೆಯ ಬಗ್ಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಳವಳ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದಾಗಿ ಹೇಳಿದ್ದಾರೆ. “ಮೈಹಾರ್‌ನಲ್ಲಿ ನನ್ನ ಮಗಳ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ನನ್ನ ಹೃದಯ ನೋವಿನಿಂದ ತುಂಬಿದೆ. ನಾನು ಸಂಕಟದಲ್ಲಿದ್ದೇನೆ. ಪೊಲೀಸರು ಅಪರಾಧಿಗಳನ್ನು ಬಂಧಿಸಿದ್ದಾರೆ. ನನ್ನ ಮಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅಪರಾಧಿಯನ್ನು ಬಿಡುವುದಿಲ್ಲ, ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಚೌಹಾಣ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮಣಿಪುರ: 7 ಕುಕಿ ಮಹಿಳೆಯರ ಮೇಲೆ ರೇಪ್ ಆರೋಪ, ನಿರಾಕರಿಸಿದ ಸಿಎಂ ಬಿರೇನ್ ಸಿಂಗ್
मैहर में बेटी के साथ दुष्कर्म की जानकारी मिली है, मन पीड़ा से भरा हुआ है, व्यथित हूं।
मैंने पुलिस को निर्देश दिए हैं कि कोई भी अपराधी बचना नहीं चाहिए
पुलिस ने अपराधियों को गिरफ्तार कर लिया है ।प्रशासन को निर्देश दिए हैं कि बेटी के समुचित इलाज की व्यवस्था की जाए ।
कोई भी…
— Shivraj Singh Chouhan (@ChouhanShivraj) July 28, 2023
ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಕೂಡ ಅಮಾನವೀಯ ಕೃತ್ಯವನ್ನು ಖಂಡಿಸಿದ್ದು, ಘಟನೆಯನ್ನು 2013 ರ ಡಿಸೆಂಬರ್‌ನಲ್ಲಿ ನಡೆದ ದೆಹಲಿಯ ನಿರ್ಭಯಾ ಪ್ರಕರಣದೊಂದಿಗೆ ಹೋಲಿಸಿದ್ದಾರೆ. ಬಿಜೆಪಿ ಸರ್ಕಾರದ ಅಡಿಯಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಅವರು ಪ್ರಶ್ನಿಸಿದ್ದಾರೆ.
“ಮೈಹಾರ್‌ನಲ್ಲಿ ಬಾಲಕಿಯೊಬ್ಬಳ ಮೇಲೆ ನಡೆದ ಬಲತ್ಕಾರದ ಘಟನೆ ಅತ್ಯಂತ ಖಂಡನೀಯ. ಇದು ನಿರ್ಭಯಾ ಪ್ರಕರಣದಂತೆಯೇ ಆಗಿದೆ. ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಘಟನೆಗಳು ಶಿವರಾಜ್ ಸರ್ಕಾರ ಸಹೋದರಿಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಭದ್ರತೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮಗಳಿಗೆ ಉತ್ತಮ ಚಿಕಿತ್ಸೆ ಹಾಗೂ 1 ಕೋಟಿ ರೂಪಾಯಿ ಆರ್ಥಿಕ ನೆರವು ಕೂಡಲೇ ನೀಡಬೇಕು” ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಕಮಲ್ ನಾಥ್ ಹೇಳಿದ್ದಾರೆ.
ವಿಡಿಯೊ ನೋಡಿ: ನನ್ನ ಮಗಳನ್ನು ರೇಪ್ ಮಾಡಿ ಕೊಂದವರಿಗೆ ಶಿಕ್ಷೆಯಾಗಬೇಕು – ಸೌಜನ್ಯ ತಾಯಿ Janashakthi Media