ಮೋದಿ ಅಜೇಯರಲ್ಲ ಎಂಬುದನ್ನು ಚಳುವಳಿಗಳು ತೋರಿಸಿಕೊಟ್ಟಿವೆ

ಡಾ|| ವಿಜುಕೃಷ್ಣನ್

ಸಾಮೂಹಿಕ ಚಳುವಳಿಗಳು ಮತ್ತು ಪ್ರಯತ್ನಗಳೇ, ನರೇಂದ್ರ ಮೋದಿ ಅಜೇಯರಲ್ಲ ಎಂಬ ಅಭಿಪ್ರಾಯವನ್ನು ಮತ್ತು ವಿಶ್ವಾಸವನ್ನು ಜನರಿಗೆ ನೀಡಿವೆ. ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ, ಫೆಡರಲ್ ಹಕ್ಕುಗಳಿಗಾಗಿ ನಿಸ್ವಾರ್ಥವಾಗಿ ಶ್ರಮಿಸಿದ ಸಾವಿರಾರು ಜನರನ್ನು ನಾವು ಮರೆಯಲು ಸಾಧ್ಯವಿಲ್ಲ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದ ಬಿಜೆಪಿ ಆಡಳಿತದ ವಿರುದ್ಧ ಒಂದು ಸ್ಥಿರವಾದ, ಅವಿರತ ಹೋರಾಟ ನಡೆಸಿದವರು ರೈತರು, ಕಾರ್ಮಿಕರು. ‘ರೈತ ಮತ್ತು ಕಾರ್ಮಿಕ ಚಳವಳಿಗಳು ಪ್ರೇರಕ ಶಕ್ತಿಯಾಗಿ ನಿಂತರೆ, ಗೆಲುವು ಸಾಧ್ಯ ಎಂಬ ವಾತಾವರಣ ಮತ್ತು ಆತ್ಮವಿಶ್ವಾಸವನ್ನು ಮೂಡಿಸಿದವು. ಚಳವಳಿ

ಇತ್ತೀಚಿನ ಲೋಕಸಭಾ ಚುನಾವಣೆಯ ಫಲಿತಾಂಶಗಳು, ಜನಾಂದೋಲನಗಳ ಗೆಲುವಿನೊಂದಿಗೆ, ಸರ್ವಾಧಿಕಾರಿ, ಕೋಮುವಾದಿ ಮತ್ತು ಕಾರ್ಪೊರೇಟ್  ಪರ ಆಡಳಿತ ನಡೆಸುತ್ತಿದ್ದ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ.ಗೆ ಬಲವಾದ ವಿರೋಧವನ್ನು ಬಹಿರಂಗಪಡಿಸಿತು. ದಶಕದ ಹಿಂದೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದ ಬಿಜೆಪಿ ಆಡಳಿತದ ವಿರುದ್ಧ ಒಂದು ಸ್ಥಿರವಾದ, ಅವಿರತ ಹೋರಾಟ ನಡೆಸಿದವರು ರೈತರು ಮತ್ತು ಕಾರ್ಮಿಕರು.

ನಿರಂಕುಶ ಮತ್ತು ಜನವಿರೋಧಿ ಮೋದಿ ಸರಕಾರ 2014ರಲ್ಲಿ ಭೂಸ್ವಾಧೀನ ಸುಗ್ರೀವಾಜ್ಞೆ ಹೊರಡಿಸಿದ ಕೂಡಲೇ ಅದರ ವಿರುದ್ಧ, ಸಮಸ್ಯೆಗಳ ಆಧಾರದಲ್ಲಿ ಐಕ್ಯತೆಯನ್ನು ಸ್ಥಾಪಿಸಿ  ‘ಭೂಮಿ ಅಧಿಕಾರ ಆಂದೋಲನ’ನಡೆಸಿದ ಹೋರಾಟಗಳ ಜೊತೆಗೆ, ವಿರೋಧ ಪಕ್ಷಗಳೂ ಸಂಸತ್ತಿಗೆ ಮುತ್ತಿಗೆ ಹಾಕಿದ್ದರಿಂದ ಆ ಸುಗ್ರೀವಾಜ್ಞೆಯನ್ನು ಸರ್ಕಾರ ಅನಿವಾರ್ಯವಾಗಿ ಹಿಂಪಡೆಯಬೇಕಾಯಿತು. ಇದು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಮೊದಲ ಸೋಲು. ನಿಸ್ಸಂದೇಹವಾಗಿ, ಸಮಸ್ಯೆಗಳನ್ನು ಕೈಗೆತ್ತಿಕೊಂಡು ಐಕ್ಯ ಹೋರಾಟಗಳ ಪ್ರಯತ್ನದಿಂದ ಮಾತ್ರ ಇದು ಸಾಧ್ಯವಾಯಿತು.ಚಳವಳಿ

ಅನೇಕ ಸಮಸ್ಯೆಗಳ ವಿರುದ್ದ ಹೋರಾಟ ;

ಈ ಗೆಲುವಿಗಷ್ಟೇ ಹೋರಾಟ ನಿಲ್ಲಲಿಲ್ಲ. ಜನರ ಜೀವನೋಪಾಯದ ಮೇಲಿನ ದಾಳಿ, ನೋಟು ಅಮಾನ್ಯೀಕರಣದಿಂದ ಉಂಟಾದ ಬಿಕ್ಕಟ್ಟು, ಗೋ ರಕ್ಷಣೆಯ ಹೆಸರಿನಲ್ಲಿ ದಾಳಿ, ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣ ಮತ್ತು ಅವುಗಳ ಮಾರಾಟದ ವಿರುದ್ಧ, ಅರಣ್ಯ ಹಕ್ಕುಗಳನ್ನು ಕಸಿದುಕೊಳ್ಳುವುದರ ವಿರುದ್ಧ ಮತ್ತು ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್‌ (Monetization pipeline) ನಂತಹ ಅನೇಕ ಸಮಸ್ಯೆಗಳ ವಿರುದ್ದ ಹೋರಾಟಗಳನ್ನು ಪ್ರಾರಂಭಿಸಿದರು. ಕೇಂದ್ರೀಯ ಕಾರ್ಮಿಕ ಸಂಘಗಳ ಜಂಟಿ ವೇದಿಕೆ (Joint Platform of Central Trade Unions) ಯು ಸುದೀರ್ಘ ಕಾಲದವರೆಗೆ ಅಸ್ತಿತ್ವದಲ್ಲಿದೆ ಜೊತೆಗೆ, ಆಯಾ ಸಂಘಗಳು ದಶಕಗಳಿಂದ ನವ ಉದಾರವಾದಿ ನೀತಿಗಳನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅವರ ಅನುಭವಗಳೂ ಕೂಡ ರೈತ ಚಳವಳಿಗೆ ಪ್ರಯೋಜನವಾಯಿತು. 2017 ರ ಜೂನ್ ನಲ್ಲಿ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ಮಂದಾಸಿರ್  ನಲ್ಲಿ ನಡೆದ ಪೋಲೀಸರ ಗುಂಡಿನ ದಾಳಿಯಲ್ಲಿ ರೈತರು ಸಾವನ್ನಪ್ಪಿದ ನಂತರ, “ಅಖಿಲ ಭಾರತ ಸಂಘರ್ಷ ಸಮನ್ವಯ” ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ವಿವಿಧ ರೀತಿಯಲ್ಲಿ ಹೋರಾಟವನ್ನು ಸಂಘಟಿಸಿದೆ.

ನಾಸಿಕ್‌  ನಿಂದ ಮುಂಬೈವರೆಗೆ ಕಿಸಾನ್ ಲಾಂಗ್ ಮಾರ್ಚ್  ;

2018 ರ ಮಾರ್ಚ್‌ನಲ್ಲಿ ನಾಸಿಕ್‌  ನಿಂದ ಮುಂಬೈವರೆಗೆ ದೀರ್ಘವಾಗಿ ಸಾಗಿದ ಕಿಸಾನ್ ಲಾಂಗ್ ಮಾರ್ಚ್ ಅನ್ನು ಜನರ ಆಕಾಂಕ್ಷೆಗಳಿಗೆ ಅನುಗುಣವಾಗಿ ಆಯೋಜಿಸಲಾಗಿತ್ತು. ಈ ಲಾಂಗ್ ಮಾರ್ಚ್ ಬಿಜೆಪಿಯನ್ನು ಸೋಲಿಸುವುದು ಸಾಧ್ಯವೆಂದೂ, ಬಿಜೆಪಿ ಅಜೇಯ ಶಕ್ತಿ ಎಂಬ ಅಭಿಪ್ರಾಯ ಕೇವಲ ಕಾರ್ಪೊರೇಟ್ ಮಾಧ್ಯಮಗಳ ಪ್ರಚಾರ ಸೃಷ್ಟಿ ಮಾತ್ರ ಎಂಬ ಸ್ಪಷ್ಟವಾದ ಸಂದೇಶವನ್ನು ರವಾನಿಸಿತು. ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ರೈತರ ವಿರೋಧಿ ಎಂಬ ಘೋಷಣೆಯು ಬಿಜೆಪಿ ಆಡಳಿಕ್ಕೆ ವಿರೋಧವಾದ ವಾತಾವರಣವನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 2019ರಲ್ಲಿ ಪುಲ್ವಾಮಾ ಘಟನೆ, ಬಾಲಾಕೋಟ್ ವೈಮಾನಿಕ ದಾಳಿ ಆ ನಂತರ… ತೀವ್ರ ರಾಷ್ಟ್ರೀಯವಾದಿ ಪ್ರಚಾರದ ಹಿನ್ನೆಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೂ… ಅದಕ್ಕೂ ಹಿಂದೆ ನಡೆದ ಚುನಾವಣೆಗಳಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌  ಗಢದಲ್ಲಿ ಬಿಜೆಪಿ ಸೋತಿದ್ದನ್ನು ಮರೆಯುವಂತಿಲ್ಲ.ಚಳವಳಿ

ಐತಿಹಾಸಿಕ ರೈತರ ಮತ್ತು ಕಾರ್ಮಿಕರ ಹೋರಾಟ ;

ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಆಯ್ಕೆಯಾದ ನಂತರ ಹೋರಾಟಗಳು ತೀವ್ರಗೊಂಡವು. ತೀವ್ರವಾದ ದಬ್ಬಾಳಿಕೆಯನ್ನು ಎದುರಿಸುತ್ತಿದ್ದ 750 ಸಂಗಾತಿಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು, ಐತಿಹಾಸಿಕ ರೈತರ ಮತ್ತು ಕಾರ್ಮಿಕರ ಐಕ್ಯ ಹೋರಾಟ ನಡೆಸಿದರು. ಇದರ ಫಲವಾಗಿ, ನರೇಂದ್ರ ಮೋದಿ ಅನಿವಾರ್ಯವಾಗಿ ತಮ್ಮ ಸೋಲನ್ನು ಒಪ್ಪಿಕೊಂಡು, ಕಾರ್ಪೊರೇಟ್ ಪರವಾದ ಮೂರು ಕೃಷಿ ಕಾನೂನುಗಳು ಮತ್ತು 4 ಕಾರ್ಮಿಕ ಸಂಹಿತೆಗಳನ್ನು ಹಿಂತೆಗೆದುಕೊಂಡದ್ದು, ಹೋರಾಟಗಾರರ ನಡುವೆ ಭರವಸೆ ಮೂಡಿತು. ಸಂಯುಕ್ತ ಕಿಸಾನ್ ಮೋರ್ಚಾ, ಒಂದು ವಿನೂತನವಾದ ಸಮಸ್ಯೆಗಳ-ಆಧಾರದ ಮೇಲೆ ಐಕ್ಯತೆಯೊಂದಿಗೆ, ವರ್ಗಗಳಲ್ಲಿನ ವಿಸ್ತೃತ ಶ್ರೇಣಿಗಳ ರೈತರನ್ನು ಮುಂದೆ ತೆಗೆದುಕೊಂಡು ಹೋಗಿದೆ. ಈ ಹೋರಾಟ ನಡೆದ ಸಂದರ್ಭವಾದರೂ ಎಂಥದ್ದು ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ. ಕರೋನಾ ಸಾಂಕ್ರಾಮಿಕ ರೋಗದ ಕುರಿತಾದ ಭಯದಿಂದೊಂದಿಗೆ, ಜೊತೆಗೆ ಸರ್ಕಾರ ವಿಧಿಸಿದ ಕಠಿಣವಾದ ಲಾಕ್‌ ಡೌನ್‌ನಿಂದ, ದೊಡ್ಡ ಸಂಖ್ಯೆಯಲ್ಲಿ ಜನರು ತಮ್ಮ ಮನೆಗಳಿಗೆ ಸೀಮಿತವಾಗಿದ್ದ ಸಮಯದಲ್ಲಿ ರೈತರ ಈ ಹೋರಾಟ ನಡೆಯಿತು ಎಂಬುದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಹೋರಾಟಗಾರರು ಮೊದಲು ಮಹಾಮಾರಿ ಎನ್ನುವ ಭಯದ ಮೇಲೆ ವಿಜಯ ಸಾಧಿಸಿದರು. ಅದರ ನಂತರ ಅವರು ಸಾಮ್ರಾಜ್ಯದ ದಬ್ಬಾಳಿಕೆಯ ಮೇಲೆ ವಿಜಯ ಸಾಧಿಸಿದರು. ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಂಡಾಗ, ಹೋರಾಟಗಾರರ ಅಂತಿಮ ಯಶಸ್ಸನ್ನು ತಡೆಯುವಲ್ಲಿ, ಆಡಳಿತ ವರ್ಗ ಮಾಡಿದ ಯಾವುದೇ ಸಣ್ಣ ಪ್ರಯತ್ನವೂ ಆಳುವವರ ನೆರವಿಗೆ ಬರದಂತೆ ನೋಡಿಕೊಂಡರು.

ಇದನ್ನು ಓದಿ : ಸಮ್ಮಿಶ್ರ ಸರ್ಕಾರದಲ್ಲಿ ಸಂವಿಧಾನದ ಬದ್ಧತೆಯನ್ನು ನರೇಂದ್ರ ಮೋದಿ ನೆನಪಿಸಿಕೊಳ್ಳುತ್ತಾರೆಯೇ?

ಮುಜಾಫರ್‌  ನಗರ ಕಿಸಾನ್ ಮಜ್ದೂರ್ ಮಹಾ ಪಂಚಾಯತ್ ಕಾರ್ಮಿಕರು ಮತ್ತು ರೈತರ ಒಗ್ಗಟ್ಟಿನಿಂದ ಬಿಜೆಪಿಯ ವಿಭಜಕ ರಾಜಕೀಯವನ್ನು, ಕೋಮುವಾದಿ ಅಜೆಂಡಾವನ್ನು ಸೋಲಿಸುತ್ತೇವೆ ಎಂದು ಸ್ಪಷ್ಟವಾಗಿ ಘೋಷಿಸಿದೆ. ಎಸ್.ಕೆ.ಎಂ. ಕಾರ್ಪೊರೇಟ್ ಶೋಷಣೆಯ ವಿರುದ್ಧ ನಿರ್ಣಾಯಕ ಪಾತ್ರ ವಹಿಸಿದೆ.  ಇದು ಮೊದಾನಿ ಮಾದರಿಗೆ ವಿರುದ್ಧವಾಗಿದೆ. ರೈತರನ್ನು ಅದಾನಿ, ಅಂಬಾನಿಗಳ ಹಿತಾಶಕ್ತಿಗಳ ವಿರುದ್ದವಾಗಿ ದಿಟ್ಟವಾಗಿ ನಿಲ್ಲಿಸಿದೆ. ಅದಾನಿ, ಅಂಬಾನಿಗಳು, ನಮ್ಮನ್ನು ಆಳುವ ಸರ್ಕಾರಕ್ಕೆ ಸೇರಿದ ಕಾರ್ಪೊರೇಟ್ ಕುಬೇರರಂತೆ ಚಿತ್ರಿಸಲಾಗಿದೆ.  ತಮ್ಮ ಲಾಭಕ್ಕಾಗಿ ಮಾತ್ರವೇ, ಲಕ್ಷಾಂತರ ರೈತರು ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ಬಲಿಕೊಡಲು ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆಂದು ಜನತೆಗೆ ತಿಳಿಯಿತು. ಈ ಸಂದೇಶವು ವಿರೋಧ ಪಕ್ಷಗಳಿಗೂ ವಿಸ್ತರಿಸಿ, ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಅನೇಕ ರೀತಿಯ ಅಭಿಯಾನ ;

ಬಿಜೆಪಿಯನ್ನು ಶಿಕ್ಷಿಸಬೇಕು ಎಂಬ  ಕಿಸಾನ್ ಸಂಯುಕ್ತ ಮೋರ್ಚಾದ ಘೋಷಣೆ ದೇಶಾದ್ಯಂತ ಹಬ್ಬಿತ್ತು. ಬಿಜೆಪಿಯ ಕಾರ್ಪೊರೇಟ್ ಪರ ಮತ್ತು ಕೋಮುವಾದಿ ನೀತಿಗಳನ್ನು ಬಹಿರಂಗಪಡಿಸುವ ಎಸ್.ಕೆ.ಎಂ – ಜೆ.ಸಿ.ಟಿ.ಯು. (Joint Committee of Trade Unions -JCTU) ಅನೇಕ ರೀತಿಯ ಅಭಿಯಾನಗಳನ್ನು ಕೈಗೆತ್ತಿಕೊಂಡಿತು. ಅಗ್ನಿವೀರ್ ಯೋಜನೆಯ ವಿರುದ್ಧದ ಅಭಿಯಾನ, ಮಹಿಳಾ ಕುಸ್ತಿಪಟುಗಳೊಂದಿಗೆ ಆಳುವ ಪಕ್ಷದ ನಾಯಕರು ನಡೆದುಕೊಂಡ ರೀತಿಯ ಬಗ್ಗೆ ಮತ್ತು ಇತರ ಸಮಸ್ಯೆಗಳನ್ನು ಕೂಡಾ ತೆಗೆದುಕೊಂಡಿತು. ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರ ಪ್ರತಿಭಟನೆಯಿಂದಾಗಿ, ಬಿಜೆಪಿ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ಗ್ರಾಮೀಣ ಪ್ರದೇಶಗಳಿಗೆ ಹೋಗಲು ಸಾಧ್ಯವಾಗಲಿಲ್ಲ. ಕಾರ್ಮಿಕ ಸಂಘಗಳ ಸಮನ್ವಯದೊಂದಿಗೆ ವ್ಯಾಪಕ ಸಾಹಿತ್ಯ, ಪೋಸ್ಟರ್  ಗಳ ಪ್ರಚಾರವನ್ನು ಆಯೋಜಿಸಲಾಯಿತು. ಲಖೀಂಪುರ ಖೇರಿ ಘಟನೆಗೆ ಕಾರಣವಾದ ಐವರು ರೈತರನ್ನು ಮತ್ತು ಒಬ್ಬ ಪತ್ರಕರ್ತರ ಮೇಲೆ ವಾಹನ ಹರಿಸಿ ಅವರ ಸಾವಿಗೆ ಕಾರಣರಾದ ಅಜಯ್ ಮಿಶ್ರಾ, ಆತನ ಮಗನ ವಿರುದ್ದ ನಿರಂತರ ಹೋರಾಟ ನಡೆಸಿದರು.ಚಳವಳಿ

ನಾಲ್ಕು ರಾಜ್ಯಗಳ ಗ್ರಾಮೀಣ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೀನಾಯ ಸೋಲು  ;

ಚುನಾವಣಾ ಫಲಿತಾಂಶದ ಮೇಲೆ ಈ ಪ್ರಚಾರಗಳೆಲ್ಲದರ ಪ್ರಭಾವ ಇದೆ. ರೈತ ಚಳವಳಿಗಳಿಗೆ,  ಹೋರಾಟಗಳಿಗೆ ಪ್ರಮುಖ ಕೇಂದ್ರವಾಗಿದ್ದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಬಹುತೇಕ ಗ್ರಾಮೀಣ ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ‘ನ್ಯೂ ​​ಇಂಡಿಯನ್ ಎಕ್ಸ್‌ಪ್ರೆಸ್’ ನಲ್ಲಿ ಜಿತೇಂದ್ರ ಚೌಬೆ ಅವರ ವರದಿಯ ಪ್ರಕಾರ, ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ, ಹರಿಯಾಣ ಮತ್ತು ಮಹಾರಾಷ್ಟ್ರದ ಐದು ಕೃಷಿ ಆಧಾರಿತ ಪ್ರದೇಶಗಳಲ್ಲಿ ಬಿಜೆಪಿ 38 ಸ್ಥಾನಗಳನ್ನು ಕಳೆದುಕೊಂಡಿದೆ. ಮಹಾರಾಷ್ಟ್ರದಲ್ಲಿಯೂ ಕೃಷಿ ಆಧಾರಿತ ಪ್ರದೇಶದಲ್ಲಿ ಬಿಜೆಪಿ 12 ಸ್ಥಾನಗಳನ್ನು ಕಳೆದುಕೊಂಡಿದೆ. ಪಶ್ಚಿಮ ಯುಪಿಯಲ್ಲಿ, ಮುಜಾಫರ್‌  ನಗರ, ಸಹರಾನ್‌  ಪುರ, ಕೈರಾನಾ, ನಗೀನಾ, ಮೊರಾದಾಬಾದ್, ಸಂಭಾಲ್, ರಾಂಪುರ್  ಮತ್ತು ಮುಖ್ಯವಾಗಿ ಅಜಯ್ ಮಿಶ್ರಾ ತೇನಿ ಸ್ಪರ್ಧಿಸಿದ್ದ ಲಖಿಂಪುರ್ ಖೇರಿ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತರು. ಪಂಜಾಬ್‌ನಲ್ಲಿ ಒಂದೇ ಒಂದು ಸ್ಥಾನವನ್ನು ಬಿಜೆಪಿ ಗೆಲ್ಲಲು ಸಾಧ್ಯವಾಗಲಿಲ್ಲ.  ಹರಿಯಾಣದಲ್ಲಿ ಐದು ಸ್ಥಾನಗಳನ್ನು ಕಳೆದುಕೊಂಡಿತು. ರಾಜಸ್ಥಾನದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಒಟ್ಟು 25 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಕೃಷಿ ಆಧಾರಿತ ಪ್ರದೇಶದಲ್ಲಿ ಬಿಜೆಪಿ 11 ಸ್ಥಾನಗಳನ್ನು ಕಳೆದುಕೊಂಡಿತು. ಮಹಾರಾಷ್ಟ್ರದ ಈರುಳ್ಳಿ ಬೆಳೆಯುವ ಪ್ರದೇಶದಲ್ಲಿ ಇಬ್ಬರು ಕೇಂದ್ರ ಸಚಿವರು ಸೋಲು ಕಂಡಿದ್ದಾರೆ. ಎನ್.ಡಿ.ಎ. 12 ಸ್ಥಾನಗಳನ್ನು ಕಳೆದುಕೊಂಡರೆ, ಬಿಜೆಪಿಗೆ ಒಂದು ಸ್ಥಾನವೂ ಬರಲಿಲ್ಲ. ಕೃಷಿ ಸಚಿವ ಅರ್ಜುನ್ ಮುಂಡಾ ಕೂಡ ಜಾರ್ಖಂಡ್ ನಲ್ಲಿ ಸೋತಿದ್ದಾರೆ.ಚಳವಳಿ

ರೈತರ ಹೋರಾಟದ ಪ್ರಮುಖ ನಾಯಕರ ಗೆಲುವು ;

ರೈತರ ಹೋರಾಟದ ಪ್ರಮುಖ ನಾಯಕರು ಮತ್ತು ಅಖಿಲ ಭಾರತ ಕಿಸಾನ್  ಸಭಾದ ಉಪಾಧ್ಯಕ್ಷರು, ರಾಜಸ್ಥಾನದ ಶಹಜಾನ್‌  ಪುರದ ಗಡಿಯಲ್ಲಿ 13 ತಿಂಗಳ ಕಾಲ ಹೋರಾಟಕ್ಕೆ ನೇತೃತ್ವ ವಹಿಸಿದ್ದ ಅಮ್ರಾರಾಮ್ ಅವರು ಸಿಕಾರ್ ಲೋಕಸಭಾ ಕ್ಷೇತ್ರದಿಂದ ಸಿಪಿಐ(ಎಂ) ಅಭ್ಯರ್ಥಿಯಾಗಿ, ಇಂಡಿಯಾ ಮೈತ್ರಿಕೂಟದ ಬೆಂಬಲದೊಂದಿಗೆ ಗೆಲುವು ಸಾಧಿಸಿದರು.  ಬಿಹಾರದಲ್ಲಿಯೂ ಸಹ, ಸಂಯುಕ್ತ ಕಿಸಾನ್ ಮೋರ್ಚಾದ ಕರೆಗಳ ಜಂಟಿ ಹೋರಾಟದಲ್ಲಿ ಗಟ್ಟಿಯಾಗಿ ನಿಂತು ಬೆಂಬಲಿಸಿದ ಪ್ರಮುಖ ನಾಯಕ, ಅಖಿಲ ಭಾರತ ಕಿಸಾನ್ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜಾ ರಾಮ್ ಸಿಂಗ್  ಅವರು ಕರಾಕಟ್  ಕ್ಷೇತ್ರದಿಂದ, ಮತ್ತೊಬ್ಬ ನಾಯಕ ಸುಧಾಮ ಪ್ರಸಾದ್ ಅವರು ಅರಾಹ್  ಕ್ಷೇತ್ರದಿಂದ ‘ಇಂಡಿಯಾ’ ಮೈತ್ರಿಕೂಟದ ಬೆಂಬಲದೊಂದಿಗೆ ಆಯ್ಕೆಯಾಗಿದ್ದಾರೆ. ಈ ಇಬ್ಬರೂ ಸಿಪಿಐ(ಎಂ.ಎಲ್- ಲಿಬರೇಷನ್) ಅಭ್ಯರ್ಥಿಗಳು. ತಮಿಳುನಾಡಿನ ದಿಂಡಿಗಲ್‌  ನಿಂದ 4 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿರುವ ಸಿಪಿಐ(ಎಂ) ಅಭ್ಯರ್ಥಿ ಸಚ್ಚಿದಾನಂದಂ  ರವರಿಗೂ ಸಹಾ ‘ಇಂಡಿಯಾ’ ಮೈತ್ರಿಕೂಟ ಬೆಂಬಲಿಸಿದೆ. ಅವರು ಅಲ್  ಇಂಡಿಯಾ ಕಿಸಾನ್ ಸಭಾ(ಎಐಕೆಎಸ್)ದ ನಾಯಕರೂ ಆಗಿದ್ದಾರೆ. ಬೇರೆ ರಾಜ್ಯಗಳನ್ನು ಅವಲೋಕಿಸಿದಾಗ ಈ ಹೋರಾಟಗಳ ಪ್ರಭಾವ ಇನ್ನೂ ಹೆಚ್ಚು ಸ್ಪಷ್ಟವಾಗುತ್ತದೆ.ಚಳವಳಿ

ಮೋದಿ ಅಜೇಯರಲ್ಲ ;

ವಾಸ್ತವವಾಗಿ, ಈ ಸಾಮೂಹಿಕ ಚಳುವಳಿಗಳು ಮತ್ತು ಪ್ರಯತ್ನಗಳೇ, ನರೇಂದ್ರ ಮೋದಿ ಅಜೇಯರಲ್ಲ ಎಂಬ ಅಭಿಪ್ರಾಯವನ್ನು ಮತ್ತು ವಿಶ್ವಾಸವನ್ನು ಜನರಿಗೆ ನೀಡಿವೆ. ಯುವಜನರು, ವಿದ್ಯಾರ್ಥಿ, ಮಹಿಳಾ ಹೋರಾಟಗಳು, ತುಳಿತಕ್ಕೊಳಗಾದವರು ಮತ್ತು ಸಿಎಎ (ಪೌರತ್ವ ತಿದ್ದುಪಡಿ ಕಾಯಿದೆ)  ವಿರುದ್ಧವಾಗಿ ನಡೆದ ಐತಿಹಾಸಿಕ ಹೋರಾಟದ ಪಾತ್ರಗಳೂ ಸಹ ಇದರಲ್ಲಿ ಒಳಗೊಂಡಿದೆ. ಭಿನ್ನಾಭಿಪ್ರಾಯದಿಂದ ಕೂಡಿದ ನಿರ್ಭಿತ ದ್ವನಿ ಎತ್ತಿದ್ದಕ್ಕಾಗಿ, ವರ್ಷಗಟ್ಟಲೆ ಜೈಲುಗಳಲ್ಲಿ ನರಳುತ್ತಿರುವ ಅನೇಕರು ಕೂಡ, ನಿಸ್ಸಂದೇಹವಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ, ಫೆಡರಲ್ ಹಕ್ಕುಗಳಿಗಾಗಿ ನಿಸ್ವಾರ್ಥವಾಗಿ ಶ್ರಮಿಸಿದ ಸಾವಿರಾರು ಜನರನ್ನು ನಾವು ಮರೆಯಲು ಸಾಧ್ಯವಿಲ್ಲ. ಧ್ರುವ ರಾಥಿ ಮತ್ತು ರವೀಶ್ ಕುಮಾರ್ ಮತ್ತು ವಿವಿಧ ವಿರೋಧ ಪಕ್ಷಗಳ ನಾಯಕರು ಮತ್ತು ನಾಗರಿಕ ಸಮಾಜದ ಸಂಘಟಿತ ಪ್ರಯತ್ನದ ಫಲವಾಗಿ ಮಾತ್ರ ನಿರಂಕುಶ ಬಿಜೆಪಿಯನ್ನು ತಿರಸ್ಕರಿಸಲಾಯಿತು. ‘ರೈತ ಮತ್ತು ಕಾರ್ಮಿಕ ಚಳವಳಿಗಳು’ ಪ್ರೇರಕ ಶಕ್ತಿಯಾಗಿ ನಿಂತರೆ, ಗೆಲುವು ಸಾಧ್ಯವಾಗುತ್ತದೆ ಎಂಬ ವಾತಾವರಣ ಮತ್ತು ಆತ್ಮವಿಶ್ವಾಸವನ್ನು ಮೂಡಿಸಿದವು.ಚಳವಳಿ

(ಲೇಖಕರು ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ)

 

ಇದನ್ನು ನೋಡಿ : ಹಿಂದಿ ರಾಜ್ಯಗಳಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ : ಸೀಟು ಮತಗಳಿಕೆ ಕುಸಿದ 5 ರಾಜ್ಯಗಳುJanashakthi Media

 

Donate Janashakthi Media

Leave a Reply

Your email address will not be published. Required fields are marked *