ಜಾಲಹಳ್ಳಿ: ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷರ ವಿರುದ್ದ ನಡೆದಂತ ಹೋರಾಟಗಳ ಮಾದರಿಯಲ್ಲಿ ಇಂದು ರೈತರು ಸರಕಾರಗಳು ಅನುಸರಿಸುವ ಕೃಷಿ ವಿರೋಧಿ ನೀತಿಯ ವಿರುದ್ದ ಚಳವಳಿ ರೂಪಿಸಬೇಕಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಜು ಕೃಷ್ಣನ್ ಹೇಳಿದರು. ಜಾಲಹಳ್ಳಿ
ಅವರು ದೇವದುರ್ಗ ತಾಲೂಕಿನ ಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕರ್ನಾಟಕ ಪ್ರಾಂತ ರೈತ ಸಂಘ ಹಮ್ಮಿಕೊಂಡಿರುವ ರೈತರ ರಾಜ್ಯ ಮಟ್ಟದ ಅಧ್ಯಯನ ಶಿಬಿರದ ಅಂಗವಾಗಿ “ನಾರಾಯಣಪೂರು ಬಲದಂಡೆ ಕಾಲುವೆ ಇತಿಹಾಸ, ನೀರಾವರಿ ಮತ್ತು ರೈತರ ಸವಾಲುಗಳು” ವಿಷಯ ಕುರಿತು ನಡೆದ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು. ಜಾಲಹಳ್ಳಿ
ರಾಯಚೂರು ಜಿಲ್ಲೆಯ ಬಹುಪಾಲು ಜಮೀನು ನೀರಾವರಿಗೊಳಪಟ್ಟಿದೆ. ಇಡೀ ಜಿಲ್ಲೆ ಹಸಿರಿನಿಂದ ಕಂಗೋಳಿಸುತ್ತಿದೆ. ರೈತರು ಕಷ್ಟಪಟ್ಟು ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಿದ್ದಾರೆ. ಆದರೂ ಅನ್ನದಾತ ಆರ್ಥಿಕವಾಗಿ ಸಬಲರಾಗುತ್ತಿಲ್ಲಾ ಅನ್ನುವದು ಕಳವಳಕಾರಿಯಾಗಿದೆ. ನೀರಾವರಿ ಪ್ರದೇಶಗಳಲ್ಲಿ ರೈತರು ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ಕಷ್ಟಪಟ್ಟು ಭತ್ತ, ಮೆಣಸಿನಕಾಯಿ, ಹತ್ತಿ ಬೆಳೆ ಬೆಳೆಯುತ್ತಾರೆ ಅವುಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲಾ.
ಇದನ್ನೂ ಓದಿ: ಕೆಪಿಎಸ್‌ಸಿ ದ್ರೋಹ: ಭಾನುವಾರ ಮುಖ್ಯಮಂತ್ರಿಗೆ ರಕ್ತದಿಂದ ಪತ್ರ ಬರೆಯಲಿರುವ ಪರೀಕ್ಷಾರ್ಥಿಗಳು!
ಉತ್ಪದನೆ ವೆಚ್ಚ ಹೆಚ್ಚಾಗುತ್ತಿದೆ. ಬೆಳೆದ ಬೆಳೆಯ ಬೆಲೆ ಕಡಿಮೆ ಇದೆ. ಕೃಷಿಯಲ್ಲಿ ಆದಾಯಕ್ಕಿಂತ ಖರ್ಚ ಹೆಚ್ಚಾಗಿ ಸಂಕಷ್ಠಕ್ಕೆ ಗುರಿಯಾಗಿದ್ದಾರೆ. ಅವೈಜ್ಞಾನಿಕವಾದ ಕಾಲುವೆಗಳ ನಿರ್ಮಾಣದಿಂದ ಟೆಲೆಂಡ ರೈತರ ಜಮೀನಿಗಳಿಗೆ ನೀರು ತಲುಪುತ್ತಿಲ್ಲಾ. ಹೊಲಗಳಲ್ಲಿ ಕಾಲುವೆಗಳು ಕಾಣುತ್ತವೆ ಆದರೆ ಕಾಲುವೆಯಲ್ಲಿ ನೀರು ಬರುತ್ತಿಲ್ಲಾ. ರೈತರ ಸಮಸ್ಯಗಳಿಗೆ ಸ್ಪಂದಿಸಬೇಕಾದ ಸರಕಾರಗಳು ಕೃಷಿ ವಲವನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಅಡ್ಡಾದಿಡ್ಡಿಯಾಗಿ ಮಾರಾಟ ಮಾಡುತ್ತಿವೆ ಎಂದರು.
ರಾಯಚೂರು ಜಿಲ್ಲೆಯಲ್ಲಿ ನಡೆದ ನಾರಾಯಣಪೂರು ಬಲದಂಡೆ ಕಾಲುವೆ ಹೋರಾಟದ ಇತಿಹಾಸವನ್ನು ಕುರಿತು ನ್ಯಾಯವಾದಿ ಬಸನಗೌಡ ದೇಸಾಯಿ ಮತಾನಾಡಿದರು. ಎನ್‌ಆರ್‌ಬಿಸಿ ಕಾಲುವೆ ಹೋರಾಟದ ರೂವಾರಿ ಚಂದ್ರಶೇಖರ ಬಾಳೆ, ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ, ಜಿಲ್ಲೆಯ ಹಿರಿಯ ಹೋರಾಟಗಾರ ರಾಘವೇಂದ್ರ ಕುಷ್ಠಗಿ, ಜಿ.ಪಂ.ಮಾಜಿ ಸದಸ್ಯ ಸಿ.ಎಸ್.ಪಾಟೀಲ್, ಸಿಐಟಿಯು ಮುಖಂಡ ಗಿರಿಯಪ್ಪ ಪೂಜಾರಿ ಮಾತನಾಡಿದರು. ಕ.ಪ್ರಾ.ರೈತ ಸಂಘದ ರಾಜ್ಯ ಕಾರ್ಯದರ್ಶಿ ಯಶವಂತ, ಮುಖಂಡರಾದ ಡಾ.ಹನುಂತ್ರಾಯ ನಾಡಗೌಡ ಅರಕೇರಾ, ವಿ.ಎಂ.ಮೇಟಿ, ಮಲ್ಲಣ್ಣ ಸಾಹುಕಾರ ನಾಗರಾಳ, ಶರಣಪ್ಪ ಬಳೆ, ದೇವಿಂದ್ರ ಹೆಗಡೆ, ಕ.ಪ್ರಾ.ರೈ.ಸಂಘದ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವಿರೇಶ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಾರಾಯಣಪೂರು ಬಲದಂಡೆ ಕಾಲುವೆಯ ಹೋರಾಟದ ರೂವಾರಿ ಚಂದ್ರಶೇಖರ ಬಾಳೆ ಹಾಗೂ ಇನ್ನಿತರ ಪ್ರಮುಖ ಹೋರಾಟಗಾರರನ್ನು ಸನ್ಮಾನಿಸಲಾಯಿತು.
ಇದನ್ನೂ ನೋಡಿ: ಗ್ರೇಟರ್ ಬೆಂಗಳೂರಿನಿಂದ ಯಾರಿಗೆ ಲಾಭ? ಜನ ಸಾಮನ್ಯರಿಗೆ ಅನುಕೂಲವೇ? Janashakthi Media