ಜುಲೈ 10ರಂದು ನಡೆದ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍ಕೆಎಂ)ದ ಸರ್ವ ಸದಸ್ಯ ಸಭೆ ಕನಿಷ್ಟ ಬೆಂಬಲ ಬೆಲೆ(ಎಂಎಸ್‍ಪಿ)ಯನ್ನು ಖಾತ್ರಿಪಡಿಸುವ ಕಾನೂನು ಸೇರಿದಂತೆ ಡಿಸೆಂಬರ್ 9, 2021ರಂದು ಒಕ್ಕೂಟ ಸರಕಾರದೊಂದಿಗೆ ನಡೆದ ಒಪ್ಪಂದದ ಜಾರಿಗಾಗಿ ಮತ್ತೆ ಚಳುವಳಿ ಆರಂಭಿಸಲು ನಿರ್ಧರಿಸಿದೆ.
ಪ್ರತ್ಯೇಕ ಒಕ್ಕೂಟ ಕೃಷಿ ಬಜೆಟನ್ನು ಮಂಡಿಸಬೇಕು, ಇದರಲ್ಲಿ ಜಿಡಿಪಿಯ ಸಾಕಷ್ಟು ಪಾಲನ್ನು ಒದಗಿಸಬೇಕು ಎಂದೂ ಎಸ್‍ಕೆಎಂ ಆಗ್ರಹಿಸಿದೆ.
ಈ ನಿರ್ಧಾರವನ್ನು ಜುಲೈ11ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್‍ಕೆಎಂ ಮುಖಂಡರು ಪ್ರಕಟಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಹನ್ನನ್ ಮೊಲ್ಲ, ಯುಧ್‍ವೀರ್ ಸಿಂಗ್, ಸುನಿಲಂ, ಅವಿಕ್ ಸಾಹ, ಪಿ ಕೃಷ್ಣ ಪ್ರಸಾದ್, ಆರ್ ವೆಂಕಯ್ಯ ಮತ್ತು ಪ್ರೇಮ್ ಸಿಂಗ್ ಗೆಹ್ಲಾವತ್ ಮಾತಾಡಿದರು.
ರೈತರ ಚಳುವಳಿ 2024ರ ಲೋಕಸಭಾ ಚುನಾವಣೆಗಳ ಮೇಲೆ ಪ್ರಭಾವ ಬೀರಿದೆ, “ಬಿಜೆಪಿಯನ್ನು ಬಯಲಿಗೆಳೆಯಿರಿ, ವಿರೋಧಿಸಿ ಮತ್ತು ಶಿಕ್ಷಿಸಿ” ಅಭಿಯಾನ ಮತ್ತು ರೈತರ ಚಳುವಳಿ ವ್ಯಾಪಕವಾಗಿದ್ದು ಸಕ್ರಿಯವಾಗಿದ್ದಲ್ಲೆಲ್ಲ ಬಹಳ ಪ್ರಭಾವ ಬೀರಿದೆ ಎಂದಿರುವ ಎಸ್‍ಕೆಎಂ “ಪಂಜಾಬ್, ಹರ್ಯಾಣ, ಉತ್ತರಪ್ರದೇಶ, ರಾಜಸ್ತಾನ ಮತ್ತು ಮಹಾರಾಷ್ಟ್ರದ 38 ಗ್ರಾಮೀಣ ಕ್ಷೇತ್ರಗಳಲ್ಲಿ ಬಿಜೆಪಿಯ ಸೋಲು, ಕೇಂದ್ರ ಮಂತ್ರಿಗಳಾಗಿದ್ದ ಅಜಯ್ ಮಿಶ್ರ ಥೇನಿ(ರೈತರ ಕೊಲೆಗಡುಕ) ಲಖಿಂಪುರ ಖೇರಿಯಲ್ಲಿ ಮತ್ತು ಕೃಷಿ ಮಂತ್ರಿ ಅರ್ಜುನ್ ಮುಂಡ ಝಾರ್ಖಂಡಿನ ಖುಂತಿಯಲ್ಲಿ ಸೋತಿದ್ದಾರೆ” ಎಂದಿರುವ ಎಸ್‍ಕೆಎಂ ಗ್ರಾಮೀಣ ಪ್ರಾಬಲ್ಯದ 139 ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ ಎಂದು ಹೇಳಿದೆ.
ಇದನ್ನು ಓದಿ : 3 ಹೊಸ ಕ್ರಿಮಿನಲ್ ಕಾನೂನುಗಳು ನೋಟು ರದ್ಧತಿಯಂತಹ ಮತ್ತೊಂದು ಮೂರ್ಖಕ್ರಮ: ಹಿಂತೆಗೆದುಕೊಳ್ಳುವಂತೆ ಕೇಂದ್ರ ಕಾರ್ಮಿಕ ಸಂಘಗಳ ಆಗ್ರಹ
ಎನ್‍ಡಿಎ ಸರಕಾರ ರೈತರ 384 ದಿನಗಳ ಹೋರಾಟ ಮತ್ತು 736 ಹುತಾತ್ಮರ ಸರ್ವೋಚ್ಚ ತ್ಯಾಗದ ನಂತರ ರೈತರೊಂದೊಗೆ ಮಾಡಿಕೊಂಡ ಒಪ್ಪಂದವನ್ನು ಉಲ್ಲಂಘಿಸಿದೆ ಎಂದ ಎಸ್‍ಕೆಎಂ, ಎನ್‍ಡಿಎ ಸರಕಾರ ತನ್ನ ಕಾರ್ಪೊರೇಟ್-ಪರ ಧೋರಣೆಗಳನ್ನು ಬದಲಿಸುತ್ತದೆ ಎಂಬ ಭ್ರಮೆ ಇಟ್ಟುಕೊಳ್ಳಬೇಕಾಗಿಲ್ಲ ಎಂದಿದೆ. ಈ ಚಳುವಳಿಯನ್ನು ಮತ್ತೆ ಪ್ರಾರಂಭಿಸುವುದರ ಭಾಗವಾಗಿ ಎಲ್ಲ ಸಂಸತ್ ಸದಸ್ಯರಿಗೆ ಬೇಡಿಕೆ ಪಟ್ಟಿಯನ್ನು ಸಲ್ಲಿಸಲಿದೆ, ಸಂಬಂಧಪಟ್ಟ ಎಸ್‍ಕೆಎಂ ರಾಜ್ಯ ಮುಖಂಡರುಗಳ ನಿಯೋಗ ಜುಲೈ 16,17 ಮತ್ತು 18ರಂದು ಅವರನ್ನು ನೇರವಾಗಿ ಭೇಟಿಯಾಗಿ ಎನ್‍ಡಿಎ ಸರಕಾರದ ಮೇಲೆ ಈ ಬೇಡಿಕೆಗಳ ಈಡೇರಿಕೆಗೆ ಒತ್ತಡ ಹಾಕಬೇಕು ಎಂದು ಆಗ್ರಹಿಸುತ್ತದೆ. ಎಸ್‍ಕೆಎಂ ಮುಖಂಡರು ಪ್ರಧಾನ ಮಂತ್ರಿಗಳು ಮತ್ತು ವಿಪಕ್ಷ ಮುಖಂಡರೊಂದಿಗೆ ಭೇಟಿಗೆ ಸಮಯ ಕೇಳಿ ಅವರಿಗೆ ಬೇಡಿಕೆ ಪಟ್ಟಿಗಳನ್ನು ಸಲ್ಲಿಸಲಿದೆ .
ಆಗಸ್ಟ್ 9ರ ‘ಕ್ವಿಟ್ ಇಂಡಿಯ ದಿನ” ದಂದು ದೇಶಾದ್ಯಂತ ‘ಕಾರ್ಪೊರೇಟ್ಸ್ ಕ್ವಿಟ್ ಇಂಡಿಯಾ ದಿನ” ವಾಗಿ ಆಚರಿಸಲು ಎಸ್‍ಕೆಎಂ ನಿರ್ಧರಿಸಿದೆ. ಆಗಸ್ಟ್ 17ರಂದು ಎಸ್‍ಕೆಎಂ ಪಂಜಾಬ್ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲ ಮಂತ್ರಿಗಳ ನಿವಾಸದ ಎದುರು 3 ಗಂಟೆಗಳ ಪ್ರತಿಭಟನೆ ನಡೆಯಲಿದೆ. ಅದೇ ದಿನ ಎಲ್ಲ ರಾಜ್ಯಗಳಲ್ಲಿ ನೀರಿನ ಬಿಕ್ಕಟ್ಟು, , ಕೃಷಿಯನ್ನು ತಟ್ಟಿರುವ ಪರಿಸರ ಬದಲಾವಣೆ, ನೀರು, ಭೂಮಿ, ಅರಣ್ಯ ಮತ್ತು ಖನಿಜಗಳು ಮುಂತಾದ ನೈಸರ್ಗಿಕ ಸಂಪನ್ನೂಲಗಳ ಸರಕೀಕರಣದ ಬಗ್ಗೆ ದೊಡ್ಡ ವಿಚಾರ ಸಂಕಿರಣಗಳನ್ನು ನಡೆಸಲಾಗುವುದು ಎಂದು ಎಸ್‍ಕೆಎಂ ಪತ್ರಿಕಾ ಹೇಳಿಕೆ ತಿಳಿಸಿದೆ.
ಪ್ರತ್ಯೇಕ ಒಕ್ಕೂಟ ಕೃಷಿ ಬಜೆಟನ್ನು ಮಂಡಿಸಬೇಕು, ಇದರಲ್ಲಿ ಜಿಡಿಪಿಯ ಸಾಕಷ್ಟು ಪಾಲನ್ನು ಒದಗಿಸಬೇಕು ಎಂದೂ ಎಸ್‍ಕೆಎಂ ಆಗ್ರಹಿಸಿದೆ.
ಇದನ್ನು ನೋಡಿ : ಕತ್ತಿಯ ಎರಡೂ ಬದಿಯ ಅಲಗುಗಳಾದ ಮೋ-ಶಾ ಕ್ರಿಮಿನಲ್ ಕಾಯ್ದೆಗಳ ಆಳ ಅಗಲ Janashakthi Media