ಇಬ್ಬರು ಮುಸ್ಲಿಮರನ್ನು ಸಟ್ಟು ಕೊಂದ ಪ್ರಕರಣದ ಆರೋಪಿ ಮೋನು ಮಾನೇಸರ್‌ ಅರೆಸ್ಟ್

ಹರಿಯಾಣ: ರಾಜ್ಯದಲ್ಲಿ ಇತ್ತೀಚೆಗೆ ಭುಗಿಲೆದ್ದ ಕೋಮುಗಲಭೆಯ ಆರೋಪಿಗಳಲ್ಲಿ ಒಬ್ಬನಾದ, ದನದ ಹೆಸರಿನಲ್ಲಿ ದುಷ್ಕರ್ಮ ಎಸಗುವ ಮೋನು ಮಾನೇಸರ್‌ನನ್ನು ಹರಿಯಾಣ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಿಜೆಪಿ ಬೆಂಬಲಿತ ಸಂಘಟನೆ ಬಜರಂಗದಳದ ಸದಸ್ಯನಾದ ಮೋನು ಮಾನೇಸರ್ ವಿರುದ್ಧ ಫೆಬ್ರವರಿಯಲ್ಲಿ ರಾಜಸ್ಥಾನದ ಇಬ್ಬರು ಮುಸ್ಲಿಮರ ಹತ್ಯೆ ಸಂಬಂಧ ಪ್ರಕರಣ ದಾಖಲಾಗಿತ್ತು.

ಬಂಧನದ ವಿಡಿಯೊವನ್ನು ಇಂಡಿಯಾ ಟುಡೆ ಪ್ರಸಾರ ಮಾಡಿದ್ದು, ಸಿವಿಲ್ ಬಟ್ಟೆ ಧರಿಸಿರುವ ಪೊಲೀಸರು ಹರ್ಯಾಣದಲ್ಲಿ ಮೋನುವನ್ನು ಬಂಧಿಸಿರುವುದು ದಾಖಲಾಗಿದೆ. “ಆಕ್ಷೇಪಾರ್ಹ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮೋನು ಮಾನೇಸರ್‌ನನ್ನು ಬಂಧಿಸಲಾಗಿದೆ” ಎಂದು ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಮಮತಾ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ನೂಹ್‍ನಿಂದ ಗುರುಗ್ರಾಮ್‍ ವರೆಗೆ ಕೋಮುದಳ್ಳುರಿ –“ಕೋಮು ಧ್ರುವೀಕರಣದ ಸಂಘಟಿತ ಪ್ರಯತ್ನ”

ಮೋನು ಮಾನೇಸರ್ ಬೇಕಾಗಿರುವ ಇತರ ರಾಜ್ಯಗಳ ಪೊಲೀಸ್ ಇಲಾಖೆಗೂ ಮಾಹಿತಿ ನೀಡಿದ್ದೇವೆ ಎಂದು ಅವರು ತಿಳಿಸಿದ್ದು, “ರಾಜ್ಯದ ಪೊಲೀಸರು ನ್ಯಾಯಾಲಯದ ಮೂಲಕ ಮೋನು ಮಾನೇಸರ್ ಕಸ್ಟಡಿಗೆ ತೆಗೆದುಕೊಳ್ಳಬಹುದು” ಎಂದು ಹೇಳಿದ್ದಾರೆ.

ಮೋನು ಮನೇಸರ್ ಯಾರು?

ಮೋನು ಮಾನೇಸರ್ ಅಲಿಯಾಸ್ ಮೋಹಿತ್ ಯಾದವ್ ಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂಗದಳದ ಸದಸ್ಯನಾಗಿದ್ದು, ದನಗಳ ರಕ್ಷಣೆಯ ಹೆಸರಿನಲ್ಲಿ ದುಷ್ಕೃತ್ಯಗಳನ್ನು ಎಸಗುವ ಆರೋಪಿಯಾಗಿದ್ದಾನೆ. ಗುರುಗ್ರಾಮ್ ಬಳಿಯ ಮನೇಸರ್ ನಿವಾಸಿಯಾಗಿರುವ ಮೋನು, ಮುಸ್ಲಿಂ ಸಮುದಾಯದ ಇಬ್ಬರು ವ್ಯಕ್ತಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ.

ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಘಾಟ್ಮೀಕಾ ಗ್ರಾಮದ ನಿವಾಸಿಗಳಾದ ನಾಸಿರ್ ಮತ್ತು ಜುನೈದ್ ಅವರನ್ನು ಫೆಬ್ರವರಿ 15 ರಂದು ಬಜರಂಗದಳದ ದುಷ್ಕರ್ಮಿಕಗಳು ಅಪಹರಿಸಿದ್ದರು ಎಂದು ಹೇಳಲಾಗಿದ್ದು, ಮರುದಿನ ಹರಿಯಾಣದ ಭಿವಾನಿಯ ಲೋಹರು ಎಂಬಲ್ಲಿ ಸುಟ್ಟ ಕಾರಿನಲ್ಲಿ ಅವರ ಶವಗಳು ಪತ್ತೆಯಾಗಿವೆ. ಈ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಮೋನು ಮಾನೇಸರ್ ಆರೋಪಿ ಎಂದು ಹೆಸರಿಸಿದ್ದಾರೆ.

ವಿಡಿಯೊ ನೋಡಿ: ಗೌರಿ ಹತ್ಯೆ ಪ್ರಕರಣದ ವಿಚಾರಣೆ ವೇಗವಾಗಿ ನಡೆಯುತ್ತಿದೆ – ಸಿಎಂ ಸಿದ್ದರಾಮಯ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *