ಬೀದರ್: ಮೋಹನ್ ಮಾನೆ ಗಾದಗಿ ರನ್ನು ಬೆಳೆ ಸಮೀಕ್ಷೆದಾರರ ಸಂಘದ ಬೀದರ್ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥಾಪಕರೂ ಆದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಬೀದರ್ ಜಿಲ್ಲೆಯ ಎಲ್ಲ ತಾಲ್ಲೂಕು ಘಟಕ ರಚಿಸಿ, ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಇದನ್ನೂ ಓದಿ: ನವದೆಹಲಿ| ಕಾಲೇಜಿನ ಗ್ರಂಥಾಲಯದಲ್ಲಿ ಅಗ್ನಿ ಅವಘಡ; ಪುಸ್ತಕಗಳು ಸುಟ್ಟು ಕರಕಲು
ನೂತನ ತಾಲ್ಲೂಕು ಪದಾಧಿಕಾರಿಗಳು ನೇಮಕ :
ಬೀದರ ತಾಲೂಕಾ ಅಧ್ಯಕ್ಷರಾಗಿ ಶಿವಕುಮಾರ ಶಿವಗೊಂಡ, ಹುಮನಾಬಾದ ತಾಲೂಕಾ ಅಧ್ಯಕ್ಷರಾಗಿ ಭೀಮಶಾ ಮೇಲಕೇರಿ, ಚಿಟಗುಪ್ಪ ತಾಲೂಕಾ ಅಧ್ಯಕ್ಷರಾಗಿ ವಿನೋದಕುಮಾರ ಸತ್ವರ್, ಭಾಲ್ಕಿ ತಾಲೂಕಾ ಅಧ್ಯಕ್ಷರು ಏಕನಾಥ ಮೇತ್ರೆ, ಬಸವಕಲ್ಯಾಣ ತಾಲೂಕಾ ಅಧ್ಯಕ್ಷರಾಗಿ ಶಂಕರಲಿಂಗ, ಹುಲಸೂರ ತಾಲೂಕಾ ಅಧ್ಯಕ್ಷರು ಪರಮೇಶ್ವರ ಕಾಡಿಪುರ ಹಾಗೂ ಔರಾದ ತಾಲೂಕಾ ಅಧ್ಯಕ್ಷರಾಗಿ ಚಂದ್ರಶೇಖರ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಮೋಹನ್ ಮಾನೆ ತಿಳಿಸಿದ್ದಾರೆ.
ಜಿಲ್ಲೆಯ ರೈತರು ಬೆಳೆದ ವಿವಿಧ ಬೆಳೆಗಳ ಸಮೀಕ್ಷೆಯನ್ನು ಕೃಷಿ ಇಲಾಖೆ ಸಹಕಾರದೊಂದಿಗೆ ಸಮೀಕ್ಷೆ ನಡೆಸುತ್ತೇವೆ. ಮುಂದಿನ ದಿನಗಳಲ್ಲಿ ಗಣತಿದಾರರಿಗೆ ಅಗತ್ಯ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲು ಸಂಘಟನಾತ್ಮಕ ರೀತಿಯಲ್ಲಿ ಕೆಲಸ ಮಾಡುವ ಉದ್ದೇಶದಿಂದ ಸಂಘ ಅಸ್ತಿತ್ವಕ್ಕೆ ತರಲಾಗಿದೆ ಎಂದು ಹೇಳಿದರು.
ಇದನ್ನೂ ನೋಡಿ: 25 ಕೋಟಿ ಜನಸಂಖ್ಯೆಯನ್ನು ಬಡತನದಿಂದ ಹೊರ ತಂದಿರುವುದಾಗಿ ಹೇಳುತ್ತಿರುವ ಮೋದಿ ಸರ್ಕಾರ ? ವಾಸ್ತವವೇನು?