ವೇದರಾಜ್ ಎನ್.ಕೆ
ರೈಲ್ವೆ ಮಂಡಳಿಯ ‘ಸೆಲ್ಫಿ’ ಅಭಿಯಾನಕ್ಕೆ ಸರಕಾರ ಮಾಡಿರುವ ವೆಚ್ಚದ ಬಗ್ಗೆ ಕೇಳಿದ ಆರ್ ಟಿ ಐ ಪ್ರಶ್ನೆಗೆ ಒಂದು ವಲಯ ನೀಡಿರುವ ಮಾಹಿತಿಯ ಪ್ರಕಾರ ಒಕ್ಕೂಟ ಸರಕಾರ ಪ್ರತಿ ಶಾಶ್ವತ ಬೂತ್‌ಗೆ 6.25ಲಕ್ಷ ರೂ. ನಂತೆ ಮತ್ತು ತಾತ್ಕಾಲಿಕ ಬೂತ್‌ಗೆ 1.1.25ಲಕ್ಷ ರೂ. ನಂತೆ ದರ ನಿಗದಿ ಮಾಡಿದೆ. ಭಾರತೀಯ ರೈಲ್ವೆಗೆ ನೇರವಾಗಿ ಸೇರಿರದ ಕೊಂಕಣ ರೈಲ್ವೆ ಸೇರಿದಂತೆ 19 ವಲಯಗಳಲ್ಲಿ ಸುಮಾರು 70 ಡಿವಿಷನ್‌ಗಳಿವೆ. ಮೇಲೆ ಹೇಳಿದ ದರಗಳಲ್ಲಿ ರೈಲ್ವೆ ಇಲಾಖೆ ಈ ಪ್ರದರ್ಶನ’ಕ್ಕೆ ಎಷ್ಟು ಖರ್ಚು ಮಾಡುತ್ತಿದೆ ಹಾಗೆಯೇ 822 ಸೆಲ್ಫಿ ಪಾಯಿಂಟುಗಳನ್ನು ನಿರ್ಮಿಸಬೇಕೆಂಧಿರುವ ರಕ್ಷಣಾ ಸಚಿವಾಲಯ ಎಷ್ಟು ಖರ್ಚು ಮಾಡಲಿದೆ ಎಂದೂ ಎಂದು ಅಂದಾಜು ಮಾಡಬಹುದು. ಈಗ ಬಂದಿರುವ ಸುದ್ದಿಯೆಂದರೆ, ಸೆಲ್ಪಿ ಪಾಯಿಂಟುಗಳಿಗೆ ಮಾಡಿದ ವೆಚ್ಚಗಳ ವಿವರಗಳನ್ನು ಬಿಡುಗಡೆ ಮಾಡಿದ ಸೆಂಟ್ರಲ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಬಂಧಗಳ ಅಧಿಕಾರಿ(ಸಿ.ಇ.ಆರ್.ಒ.)ಯನ್ನು ಇದ್ದಕ್ಕಿದ್ದಂತೆ ಯಾವುದೇ ಕಾರಣಕೊಡದೆ ವರ್ಗಮಾಡಲಾಗಿದೆ, ಎಲ್ಲಿಗೆ ವರ್ಗ ಮಾಡಲಾಗಿದೆ ಎಂದೂ ತಿಳಿಸಿಲ್ಲ ಎನ್ನಲಾಗಿದೆ. ಅಮೃತ
ಸಪ್ಟಂಬರ್ 14ರಂದು ರಕ್ಷಣಾ ಮಂತ್ರಿಗಳ ಅಧ್ತಕ್ಷತೆಯಲ್ಲಿ ನಡೆದ ಆ ಇಲಾಖೆಯ ಪರಾಮರ್ಶೆ ಸಭೆ ರಕ್ಷಣಾ ಮಂತ್ರಾಲಯದ ವಿವಿಧ ಕಚೇರಿಗಳು, ಸ್ಮಾರಕಗಳು, ಸಾರ್ವಜನಿಕ ತಾಣಗಳಲ್ಲಿ ತಮ್ಮ ಇಲಾಖೆಯ ವಿವಿಧ ವಿಭಾಗಗಳಲ್ಲಿ, ಸಂಘಟನೆಗಳಲ್ಲಿ, ಸೇವೆಗಳು, ರಕ್ಷಣಾ ಉದ್ದಿಮೆಯ ಘಟಕಗಳು, ಗಡಿ ರಸ್ತೆ ಸಂಘಟನೆ(ಬಿಆರ್‌ಒ)ಗಳು, ಕರಾವಳಿ ರಕ್ಷಣಾ ಪಡೆಗಳು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ(ಡಿಆರ್‌ಡಿಒ), ಸೈನಿಕ ಶಾಲೆಗಳು, ಎನ್‌ಸಿಸಿ ಮುಂತಾದೆಡೆ ಒಟ್ಟು 822 ಸ್ಥಳಗಳಲ್ಲಿ ರಕ್ಷಣಾ ಮಂತ್ರಾಲಯ ಕಳೆದ 9 ವರ್ಷಗಳಲ್ಲಿ ಮಾಡಿದ ಕೆಲಸಗಳನ್ನು ಬಿಂಬಿಸಲು 3-ಡಿ ‘ಸೆಲ್ಫಿ ಪಾಯಿಂಟ್’ ಗಳನ್ನು ನಿರ್ಮಿಸಬೇಕು ಎಂದು ನಿರ್ಧರಿಸಿತು ಎಂದು ವರದಿಯಾಗಿತ್ತು.
ನಂತರ ಸಪ್ಟಂಬರ್ 27ರಂದು ರೈಲ್ವೆ ಮಂಡಳಿಯ ಮಾಹಿತಿ ಮತ್ತು ಪ್ರಚಾರ ನಿರ್ದೇಶಕರು ರೈಲ್ವೆಯ ಎಲ್ಲ 19 ವಲಯ ಜನರಲ್ ಮ್ಯಾನೇಜರುಗಳಿಗೆ ರೈಲ್ವೆ ನಿಲ್ದಾಣಗಳಲ್ಲಿ ಈ ‘ಸೆಲ್ಫಿ’ ಕೆಲಸವನ್ನು ಅತ್ಯಂತ ತುರ್ತಿನಿಂದ ಗರಿಷ್ಟ ಸಂಖ್ಯೆಯಲ್ಲಿ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದರು ಎಂದೂ ವರದಿಯಾಗಿತ್ತು.
ಇದನ್ನೂ ಓದಿ : ಅಮೃತಕಾಲದ ಚುನಾವಣಾ ಕಸರತ್ತಿನಲ್ಲಿ
ಈ ‘ಸೆಲ್ಫಿ ಬೂತ್’ ಗಳು ಹೇಗಿರಬೇಕು ಎಂಬುದರ ಡಿಸೈನ್ ವಿವರಗಳನ್ನೂ ರೈಲ್ವೆ ಮಂಡಳಿಯೇ ಕೊಟ್ಟಿದ್ದು, ಅವು ನೀರಿನ ಸಂಪರ್ಕ, ಗ್ರಾಮೀಣ ವಿದ್ಯುದೀಕರಣ, ಅಡುಗೆ ಅನಿಲ ಸಂಪರ್ಕ, ‘ಮೇಕ್‌ಇನ್ ಇಂಡಿಯ’ ಕೊವಿಡ್-19 ಲಸಿಕೆಗಳು, ಜತೆಗೆ ಇಸ್ರೋದಿಂದ ವಿದೇಶಿ ಉಪಗ್ರಹಗಳ ಉಡಾವಣೆ ಮುಂತಾದ ಮೋದಿ ಸರಕಾರದ ‘ಸಾಧನೆ’ಗಳನ್ನು ಬಿಂಬಿಸುವಂತಿರಬೇಕು ಎಂದು ವಿಧಿಸಲಾಗಿತ್ತು. ರೈಲ್ವೆ ನಿಲ್ದಾಣಗಳ ಒಳಾಂಗಣಗಳಲ್ಲಿ, ಪ್ಲಾಟ್‌ಫಾರ್ಮುಗಳಲ್ಲಿ ‘ನಯಾ ಭಾರತ್’/ ‘ನ್ಯೂ ಇಂಡಿಯ’ ಎಂಬ ಫಲಕಗಳು ಮತ್ತು ಪ್ರಧಾನಿಗಳ ಕಟೌಟ್‌ಗಳೊಂದಿಗೆ ಜನಗಳು ಅವುಗಳೊಂದಿಗೆ ‘ಸೆಲ್ಫಿ’ ತೆಗೆದುಕೊಳ್ಳಲು ಅನುವಾಗುವಂತೆ ಇರಬೇಕು ಎಂದೂ ಇದರ ಡಿಸೈನ್ ವಿಧಿಸಿತ್ತು. ಈ ಸೆಲ್ಫಿ ಬೂತ್‌ಗಳನ್ನು ಬಾಳಿಕೆ ಬರುವ 3 ಆಯಾಮಗಳ ಬಹು ಬಾಳಿಕೆಯ ಫೈಬರ್ ಕಲಾಕೃತಿಗಳಿಂದ ಫೈಬರ್, ಮಣ್ಣು, ಎನ್‌ಐಎಸ್ ಪೈಪ್, ಕಬ್ಬಿಣದ ತಂತಿಗಳಿಂದ ಗಟ್ಟಿಗೊಳಿಸಿದ ಪ್ಲಾಸ್ಟರ್ ಆಫ್ ಪ್ಯಾರಿಸ್ ಮುಂತಾದವುಗಳಿಂದ ಮಾಡಬೇಕು ಎಂದು ರೈಲ್ವೆ ಮಂತ್ರಾಲಯದ ಆದೇಶದಲ್ಲಿ ತಿಳಿಸಲಾಗಿತ್ತು ಎಂದೂ ವರದಿಯಾಗಿತ್ತು.
ಈ ನಿರ್ದೇಶನಗಳನ್ನು ಜಾರಿಗೊಳಿಸಲು ಎಷ್ಟು ಖರ್ಚು ಮಾಡಬೇಕಾದೀತು ಎಂಬ ಪ್ರಶ್ನೆ ಏಳುವುದು ಸಹಜ. ನಿವೃತ್ತ ರೈಲ್ವೆ ನೌಕರ ಅಜಯ್ ಬೋಸ್ ಭಾರತಿಯ ರೈಲ್ವೆಯ 19 ವಲಯಗಳಲ್ಲಿ ಒಂದಾದ ಸೆಂಟ್ರಲ್ ರೈಲ್ವೆಗೆ ಈ ಪ್ರಶ್ನೆಯನ್ನು ಆರ್‌ಟಿಐ ಮೂಲಕ ಕೇಳಿಯೇ ಬಿಟ್ಟಿದ್ದಾರೆ. ಅದಕ್ಕೆ ಸಿಕ್ಕ ಉತ್ತರದ ಪ್ರಕಾರ 5 ಡಿವಿಷನ್‌ಗಳಲ್ಲಿ 50 ಸೆಲ್ಫಿ ಬೂತ್‌ಗಳ ಮೇಲೆ ಸೆಂಟ್ರಲ್ ರೈಲ್ವೆ 1.62 ಕೋಟಿ ರೂ. ಖರ್ಚು ಮಾಡಿದೆ ಎಂದು ಆರ್‌ಟಿಐ ಕೊಟ್ಟ ಮಾಹಿತಿಯ ಲೆಕ್ಕಾಚಾರದಿಂದ ತಿಳಿದು ಬಂದಿದೆ (ದಿ ಹಿಂದು, ಡಿ.27). ಒಕ್ಕೂಟ ಸರಕಾರ ಪ್ರತಿ ಶಾಶ್ವತ ಬೂತ್‌ಗೆ 6.25ಲಕ್ಷ ರೂ. ನಂತೆ ಮತ್ತು ತಾತ್ಕಾಲಿಕ ಬೂತ್‌ಗೆ 1.1.25ಲಕ್ಷ ರೂ. ನಂತೆ ದರ ನಿಗದಿ ಮಾಡಿದೆಯಂತೆ. ಅಮೃತ
ಬೇರೆ ಯಾವ ವಲಯವೂ ವಿವರವಾದ ಉತ್ತರ ನೀಡಿಲ್ಲ
ದಕ್ಷಿಣ ರೈಲ್ವೆಯ 6 ಡಿವಿಶನ್‌ಗಳಲ್ಲಿ ಒಂದು ಮಾತ್ರ ಆರ್‌ಟಿಐ ಪ್ರಶ್ನೆಗೆ ಉತ್ತರ ನೀಡಿದೆ. ಉತ್ತರ ರೈಲ್ವೆ 100 ಸ್ಥಳಗಳಲ್ಲಿ ಈ ಬೂತ್‌ಗಳನ್ನು ಹಾಕಲಾಗುವುದು ಎಂದು ಉತ್ತರಿಸಿದೆ. ಪಶ್ಚಿಮ ರೈಲ್ವೆಯ 5 ಡಿವಿಶನ್‌ಗಳಲ್ಲಿ ಒಂದು ಮಾತ್ರ ಉತ್ತರ ನೀಡಿದೆ. ಭಾರತೀಯ ರೈಲ್ವೆಗೆ ನೇರವಾಗಿ ಸೇರಿರದ ಕೊಂಕಣ ರೈಲ್ವೆ ಸೇರಿದಂತೆ 19 ವಲಯಗಳಲ್ಲಿ ಸುಮಾರು 70 ಡಿವಿಷನ್‌ಗಳಿವೆ. ಮೇಲೆ ಹೇಳಿದ ದರಗಳಲ್ಲಿ ರೈಲ್ವೆ ಇಲಾಖೆ ಈ ಪ್ರದರ್ಶನ’ಕ್ಕೆ ಎಷ್ಟು ಖರ್ಚು ಮಾಡುತ್ತಿದೆ ಎಂದು ಅಂದಾಜು ಮಾಡಬಹುದು.
ಇದೇ ಭಾರತೀಯ ರೈಲ್ವೆ ಎರಡು ವರ್ಷಗಳ ಹಿಂದೆ ಹಿರಿಯ ನಾಗರಿಕರಿಗೆ ರೈಲು ಟಕೆಟಿನಲ್ಲಿ ಕೊಡುತ್ತಿದ್ದ ರಿಯಾಯ್ತಿಗಳನ್ನು ರದ್ದು ಮಾಡಿತು. ಅದರಿಂದಾಗಿ 2022-23ರಲ್ಲಿ ರೈಲ್ವೆಗೆ 2242 ಕೋಟಿ ರೂ. ಆದಾಯ ಹೆಚ್ಚಿತು ಎಂದು ಆರ್.ಟಿ.ಐ.ನ ಉತ್ತರದಿಂದಲೇ ಕೆಲವು ತಿಂಗಳ ಹಿಂದೆ ತಿಳಿದು ಬಂದಿತ್ತು. ಅದನ್ನು ಈ ಸಂದರ್ಭದಲ್ಲಿ ನೆನಪಿಸುತ್ತ ವ್ಯಂಗ್ಯಚಿತ್ರಕಾರ ಸತೀಶ ಆಚಾರ್ಯರವರು ಈ ವ್ಯಂಗ್ಯಚಿತ್ರವನ್ನು ತಮ್ಮ ಫೇಸ್‌ಬುಕ್ ಪೇಜಿನಲ್ಲಿ ಪ್ರಕಟಿಸಿದ್ದಾರೆ. ಅಮೃತ
ಈ ‘ಅಭಿಯಾನ’ದ ಇನ್ನೊಂದು ಆಯಾಮವನ್ನು ಅಲೋಕ್ ನಾಥ್ ರವರ ಈ ವ್ಯಂಗ್ಯಚಿತ್ರ ಬಿಂಬಿಸುತ್ತದೆ.
“ಹೇಳಿ ಸ್ವಾಮಿ..
“ನನ್ನ ಪ್ರಶ್ನೆಗೆ ಉತ್ತರ ಕೊಡಿ”
“ಹೇಳಿ, ಯಾಕೆ ಈ ಟ್ರೇನ್
ಯಾವಾಗಲೂ ಇಷ್ಟೊಂದು ತಡ”
(ಹೇಳಲಾರರು-ಅದು ಸೆಲ್ಫಿ ಪಾಯಿಂಟ್ ಅಷ್ಟೇ!)
ಈಗ ಬಂದಿರುವ ಸುದ್ದಿ: ಸೆಲ್ಪಿ ಪಾಯಿಂಟುಗಳಿಗೆ ಮಾಡಿದ ವೆಚ್ಚಗಳ ವಿವರಗಳನ್ನು ಬಿಡುಗಡೆ ಮಾಡಿದ ಸೆಂಟ್ರಲ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಬಂಧಗಳ ಅಧಿಕಾರಿ (ಸಿ.ಪಿ.ಆರ್.ಒ.) ಶಿವರಾಜ್ ಮನಸ್ಪುರೆಯವರನ್ನು ಇದ್ದಕ್ಕಿದ್ದಂತೆ ವರ್ಗಮಾಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯ ವರದಿ ಮಾಡಿದೆ. ಆ ಹುದ್ದೆಗೆ ಅವರನ್ನು ನೇಮಕ ಮಾಡಿ ಏಳು ತಿಂಗಳಷ್ಟೇ ಆಗಿದೆ, ಈಗ ಯಾವುದೇ ಕಾರಣ ನೀಡದೆ, ಎಲ್ಲಿಗೆ ವರ್ಗ ಮಾಡಲಾಗಿದೆ ಎಂದೂ ತಿಳಿಸದೆ ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ. ತನಗೆ ಮಾಹಿತಿ ಒದಗಿಸಿದ್ದು ಡೆಪ್ಯುಟಿ ಜನರಲ್ ಮ್ಯಾನೇಜರ್ ಅಭಯ್ ಮಿಶ್ರ, ಆದರೆ ಸಿಪಿಆರ್‌ಒ ರನ್ನು ಹೊರ ಕಳಿಸಲಾಗಿದೆ ಎಂದು ಈ ಕುರಿತು ಆರ್.ಟಿ.ಐ. ಅರ್ಜಿ ಹಾಕಿರುವ ಅಜಯ್ ಬೋಸ್ ಹೇಳಿರುವುದಾಗಿಯೂ ವರದಿಯಾಗಿದೆ. ಅಮೃತ
ಈ ವಿಡಿಯೋ ನೋಡಿ : “ಅಮೃತ ಕಾಲದಲ್ಲಿ ಕರ್ನಾಟಕದ ವರ್ತಮಾನ, ಭವಿಷ್ಯ” ಸರಣಿ ಕಾರ್ಯಕ್ರಮ