ನೋಟ್‌ ಬ್ಯಾನ್‌ ದುರಂತಕ್ಕೆ 7 ಏಳು ವರ್ಷ | 50 ದಿನ ನೀಡಿ, ತಪ್ಪಾಗಿದ್ದರೆ ಶಿಕ್ಷೆಗೆ ಸಿದ್ದ ಎಂದಿದ್ದ ಮೋದಿ!

ಸರಿಯಾಗಿ ಏಳು ವರ್ಷಗಳ ಹಿಂದೆ 2016ರ ನವೆಂಬರ್ 8 ರಾತ್ರಿ 08:00 ಗಂಟೆಯ ನಂತರ ದೂರದರ್ಶನದಲ್ಲಿ ಕಾಣಿಸಿಕೊಂಡ ಪ್ರಧಾನಿ ಮೋದಿ ಯಾವುದೆ ಮುನ್ನೆಚ್ಚರಿಕೆ ಇಲ್ಲದೆ ಏಕಾಏಕಿಯಾಗಿ 500 ಮತ್ತು 1000 ರೂ. ಗಳ ನೋಟುಗಳನ್ನು ನಿಷೇಧ ಮಾಡಿಬಿಟ್ಟರು. ಅಲ್ಲದೆ, ಈ ನೋಟುಗಳನ್ನು 50 ದಿನಗಳ ಒಳಗೆ ಬ್ಯಾಂಕ್‌ಗೆ ತೆರಳಿ ಬದಲಾಯಿಸಬೇಕು ಎಂದು ಹೇಳಿದ್ದರು. ಈ ವೇಳೆ ಅವರು ನೋಟ್‌ ಬ್ಯಾನ್‌ಗೆ ಹಲವಾರು ಕಾರಣಗಳು ಮತ್ತು ಸಮರ್ಥನೆಗಳನ್ನು ನೀಡಿದ್ದರು. ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, “ಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು ತಡೆಗೆ ಹಾಗೂ ನಗದು ರಹಿತ ಆರ್ಥಿಕತೆಗೆ” ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು.

ಅದಾಗ್ಯೂ ಪ್ರಧಾನಿಯ ಮಾತಿನಿಂತೆ ಅಂತಹ ಯಾವುದೆ ದೊಡ್ಡ ಪವಾಡ ನಡೆಯಲೆ ಇಲ್ಲ. ಅದರ ಬದಲಾಗಿ, ದೇಶದಾದ್ಯಂತ ಇರುವ ಬ್ಯಾಂಕುಗಳಲ್ಲಿ ತಮ್ಮ ನೋಟುಗಳನ್ನು ಬದಲಾಯಿಸಿಕೊಳ್ಳಲು ಸಾಮಾನ್ಯ ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಈ ವೇಳೆ ಹಲವಾರು ಜನರು ಮೃತಪಟ್ಟರು. ತಮ್ಮ ಅಗತ್ಯಗಳಿಗೆ ಬೇಕಾದಷ್ಟು ಹಣವಿಲ್ಲದೆ ಜನರು ಪರದಾಡಬೇಕಾಯಿತು. ಈ ಕ್ರಮಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ 2016 ನವೆಂಬರ್‌ 13 ರಂದು ಗೋವಾದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಐವತ್ತು ದಿನಗಳ ಕಾಲಾವಕಾಶವನ್ನು ದೇಶದ ಜನತೆಯಿಂದ ಕೇಳಿದ್ದರು. ನಂತರವೂ ತಾವು ಕೈಗೊಂಡ ಕ್ರಮದಲ್ಲಿ ಲೋಪದೋಷಗಳಿದ್ದರೆ ದೇಶ ನೀಡುವ ಶಿಕ್ಷೆಗೆ ನಾನು ಸಿದ್ದನಿದ್ದೇನೆ ಎಂದು ಭಾವೋದ್ವೇಗದಿಂದ ಮಾತನಾಡಿದ್ದರು. ನೋಟ್‌ ಬ್ಯಾನ್‌

ಇದನ್ನೂ ಓದಿ: ಚುನಾವಣೆ ವೇಳೆ ಚುನಾವಣಾ ಬಾಂಡ್ ವಿಂಡೋ ಓಪನ್ ಮಾಡಿದ ಕೇಂದ್ರ ಸರ್ಕಾರ | ಭಾರತ ಸರ್ಕಾರದ ಮಾಜಿ ಕಾರ್ಯದರ್ಶಿ ಆಕ್ಷೇಪ

ನೋಟ್‌ ಬ್ಯಾನ್‌ ವೇಳೆ ಪ್ರಧಾನಿ ಪ್ರಮುಖವಾಗಿ ಹೇಳಿದ್ದೇನು ಎಂದು ಪರೀಶೀಲಿಸೋಣ

“ಭ್ರಷ್ಟಾಚಾರ ಮತ್ತು ಕಪ್ಪುಹಣದ ಹಿಡಿತವನ್ನು ಮುರಿಯಲು, ಪ್ರಸ್ತುತ ಬಳಕೆಯಲ್ಲಿರುವ ಐನೂರು ಮತ್ತು ಸಾವಿರ ರೂಪಾಯಿ ಕರೆನ್ಸಿ ನೋಟುಗಳು ಇನ್ನು ಮುಂದೆ ಅಂದರೆ ನವೆಂಬರ್ 8, 2016ರ ಇಂದು ಮಧ್ಯರಾತ್ರಿಯಿಂದ ಕಾನೂನುಬದ್ಧ ಟೆಂಡರ್ ಆಗುವುದಿಲ್ಲ. ದೇಶವಿರೋಧಿಗಳು ಮತ್ತು ಸಮಾಜವಿರೋಧಿಗಳು ಸಂಗ್ರಹಿಸಿರುವ ಐನೂರು ಮತ್ತು ಸಾವಿರ ರೂಪಾಯಿ ನೋಟುಗಳು ಕೇವಲ ನಿಷ್ಪ್ರಯೋಜಕ ಕಾಗದದ ತುಂಡುಗಳಾಗಿ ಪರಿಣಮಿಸುತ್ತದೆ. ಆದರೆ ಪ್ರಾಮಾಣಿಕ, ಕಷ್ಟಪಟ್ಟು ದುಡಿಯುವ ಜನರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ ದೇಶದ ಕೋಟ್ಯಾಂತರ ಜನರು ತಾವು ಕಷ್ಟಪಟ್ಟು ದುಡಿದ ಹಣಕ್ಕಾಗಿ ಬ್ಯಾಂಕ್ ಮುಂದೆ ಸಾಲುಗಟ್ಟಿ ಸಂಕಷ್ಟಕ್ಕೆ ಈಡಾಗಿದ್ದರು.

“ನೋಟ್‌ ಬ್ಯಾನ್‌ ಭ್ರಷ್ಟಾಚಾರ, ಕಪ್ಪುಹಣ ಮತ್ತು ನಕಲಿ ಕರೆನ್ಸಿ ವಿರುದ್ಧದ ಹೋರಾಟದಲ್ಲಿ ಸಾಮಾನ್ಯ ಜನರ ಕೈಗಳನ್ನು ಬಲಪಡಿಸುತ್ತದೆ. ಮುಂದಿನ ದಿನಗಳಲ್ಲಿ ನಾಗರಿಕರ ತೊಂದರೆಗಳನ್ನು ಕಡಿಮೆ ಮಾಡಲು, ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದರು. ಅದಾಗ್ಯೂ ಅಂದಿನಿಂದ ಸಣ್ಣಪುಟ್ಟ ವ್ಯಾಪಾರ ಮತ್ತು ದಿನಕೂಲಿ ಕಾರ್ಮಿಕರು ತಮ್ಮ ಅಂದಿನ ಕೂಲಿಯಿಲ್ಲದೆ ತಿಂಗಳುಗಳ ಕಾಲ ತೀವ್ರವಾಗಿ ಸಂಕಷ್ಟಕ್ಕೀಡಾಗಿದ್ದರು.

“ಐನೂರು ಅಥವಾ ಸಾವಿರ ರೂಪಾಯಿಗಳ ಹಳೆಯ ನೋಟುಗಳನ್ನು ಹೊಂದಿರುವ ವ್ಯಕ್ತಿಗಳು ಈ ನೋಟುಗಳನ್ನು ತಮ್ಮ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆಗಳಲ್ಲಿ 10ನೇ ನವೆಂಬರ್ ನಿಂದ 30ನೇ ಡಿಸೆಂಬರ್‌ರ ವರೆಗೆ ಯಾವುದೇ ಮಿತಿಯಿಲ್ಲದೆ ಜಮಾ ಮಾಡಬಹುದು. ನೋಟುಗಳನ್ನು ಠೇವಣಿ ಮಾಡಲು ನಿಮಗೆ 50 ದಿನಗಳ ಕಾಲಾವಕಾಶವಿರುತ್ತದೆ ಮತ್ತು ಯಾವುದೇ ಭಯಪಡುವ ಅಗತ್ಯವಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ ಬ್ಯಾಂಕ್‌ಗಳಲ್ಲಿ ತೀವ್ರ ಜನಸಂದಣಿ ಏರ್ಪಟ್ಟು ಜನರು ತಮ್ಮ ಕೆಲಸವನ್ನು ಬಿಟ್ಟು ನೋಟ್‌ ಬದಲಾಯಿಸುವುದಕ್ಕೆ ಕಷ್ಟಪಟ್ಟರು. ದೇಶದಾದ್ಯಂತ ಹಲವು ಕಡೆಗಳಲ್ಲಿ ಪೊಲೀಸರು ಜನರಿಗೆ ಲಾಠಿ ಚಾರ್ಜ್‌ ಮಾಡಿರುವ ಘಟನೆ ನಡೆದಿತ್ತು.

ಇದನ್ನೂ ಓದಿ: ಅಸಮರ್ಪಕ ಬಿಸಿಯೂಟ ವಿತರಣೆ: ತರಗತಿ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ ಶಾಲಾ ವಿದ್ಯಾರ್ಥಿಗಳು

ಅಲ್ಲದೆ, ನವೆಂಬರ್ 24ರ ವರೆಗೆ ನಾಲ್ಕು ಸಾವಿರ ರೂಗಳನ್ನು ಮಾತ್ರವೆ ವಿನಿಮಯ ಮಾಡಬಹುದು ಎಂದು ನಿಯಮವನ್ನು ತಂದು ಜನರು ಮತ್ತಷ್ಟು ಸಂಕಷ್ಟಕ್ಕೀಡು ಮಾಡುವಂತೆ ಮಾಡಲಾಗಿತ್ತು. “ನವೆಂಬರ್ 9 ರಂದು ಮತ್ತು ಕೆಲವು ಸ್ಥಳಗಳಲ್ಲಿ ನವೆಂಬರ್ 10 ರಂದು ಸಹ ಎಟಿಎಂಗಳು ಕಾರ್ಯನಿರ್ವಹಿಸುವುದಿಲ್ಲ. ಮೊದಲ ಕೆಲವು ದಿನಗಳಲ್ಲಿ, ಒಂದು ಕಾರ್ಡ್‌ಗೆ ದಿನಕ್ಕೆ ಎರಡು ಸಾವಿರ ರೂಪಾಯಿಗಳ ಮಿತಿ ಇರುತ್ತದೆ” ಎಂದು ಪ್ರಧಾನಿ ಮೋದಿ ಅಂದು ತನ್ನ ಭಾಷಣದಲ್ಲಿ ಹೇಳಿದ್ದರು.

ಭ್ರಷ್ಟಾಚಾರ, ಕಪ್ಪುಹಣ, ನಕಲಿ ನೋಟುಗಳು ಮತ್ತು ಭಯೋತ್ಪಾದನೆ ವಿರುದ್ಧದ ಈ ಹೋರಾಟದಲ್ಲಿ, ನಮ್ಮ ದೇಶವನ್ನು ಶುದ್ಧೀಕರಿಸುವ ಈ ಆಂದೋಲನದಲ್ಲಿ, ನಮ್ಮ ಜನರು ಕೆಲವು ದಿನಗಳವರೆಗೆ ಕಷ್ಟಗಳನ್ನು ಸಹಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದ ಪ್ರಧಾನಿ ಮೋದಿ, “ಈ ಮಹಾಯಜ್ಞದಲ್ಲಿ ಪ್ರತಿಯೊಬ್ಬ ಪ್ರಜೆಯೂ ಎದ್ದುನಿಂತು ಭಾಗವಹಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ” ಎಂದು ಹೇಳಿದ್ದರು.

“ದೀಪಾವಳಿಯ ಸಮಯದಲ್ಲಿ ನೀವು ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಿದಂತೆ ನಮ್ಮ ದೇಶವನ್ನು ಶುದ್ಧೀಕರಿಸುವ ಈ ಮಹಾತ್ಯಾಗಕ್ಕೆ ನಿಮ್ಮ ಕೊಡುಗೆಯನ್ನು ನೀಡಲು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ. ತಾತ್ಕಾಲಿಕ ಸಂಕಷ್ಟವನ್ನು ನಿರ್ಲಕ್ಷಿಸೋಣ. ನಾವು ಈ ಸಮಗ್ರತೆ ಮತ್ತು ವಿಶ್ವಾಸಾರ್ಹತೆಯ ಹಬ್ಬಕ್ಕೆ ಸೇರೋಣ. ಮುಂಬರುವ ಪೀಳಿಗೆಗಳು ತಮ್ಮ ಜೀವನವನ್ನು ಘನತೆಯಿಂದ ಬದುಕಲು ಅನುವು ಮಾಡಿಕೊಡೋಣ. ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಹೋರಾಡೋಣ” ಎಂದು ಪ್ರಧಾನಿ ಹೇಳಿದ್ದರು. ಅದಾಗ್ಯೂ ದೇಶದಲ್ಲಿ ಭ್ರಷ್ಟಾಚಾರ ಇನ್ನೂ ಕಡಿಮೆಯಾಗಿಲ್ಲ, ಕಪ್ಪುಹಣದ ಮೊತ್ತ ಇನ್ನೂ ಹೆಚ್ಚಾಗುತ್ತಲೆ ಇವೆ ಎಂದು ವರದಿಗಳು ಸೂಚಿಸಿವೆ. ನೋಟ್‌ ಬ್ಯಾನ್‌

ವಿಡಿಯೊ ನೋಡಿ: ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿಸಿಡಿದೆದ್ದ ಗ್ರಾಮ ಪಂಚಾಯಿತಿ ನೌಕರರು

Donate Janashakthi Media

Leave a Reply

Your email address will not be published. Required fields are marked *