ಮದುರೈ: ಒಂದು ಕೇಂದ್ರೀ ಕೃತ ಏಕ ಘಟಕ ಪ್ರಭುತ್ವವನ್ನು ಸೃಷ್ಟಿಸಲು ಬಯಸುವ ಆರ್ಎಸ್ಎಸ್–ಬಿಜೆಪಿಯ ‘ಒಂದು ರಾಷ್ಟ್ರ, ಒಂದು ಚುನಾವಣೆ‘ ಯ ಧಾವಂತವನ್ನುಮಹಾಧಿವೇಶನ ಬಲವಾಗಿ ವಿರೋಧಿಸಿದೆ. ಇದು ‘ಒಂದು ರಾಷ್ಟ್ರ, ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ನಾಯಕ‘ ಎಂಬ ಅವರ ಘೋಷಣೆಯ ವಿಸ್ತರಣೆಯಾಗಿದೆ, ಅವರು ಹಿಟ್ಲರ್ನ ಫ್ಯಾಸಿಸ್ಟ್ ಯುಗದ ಈ ಘೋಷಣೆಯನ್ನು ಎತ್ತಿಕೊಂಡು ಮಾರ್ಪಡಿಸಿದ್ದಾರೆ ಎಂದು ನಿರ್ಣಯ ಹೇಳುತ್ತದೆ. ಮೋದಿ
ಏಕಕಾಲದಲ್ಲಿ ಚುನಾವಣೆಗಳು ಬಹಳಷ್ಟು ಹಣವನ್ನು ಉಳಿಸುತ್ತದೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಆಗಾಗ್ಗೆ ಅಸ್ತವ್ಯಸ್ತಗೊಳ್ಳದಂತೆ ತಡೆಯುತ್ತದೆ ಎಂದು ಬಿಜೆಪಿ ನಾಯಕರು ತಮ್ಮ ಹಳಸಲುವಾದಗಳನ್ನು ಬಳಸುತ್ತಿದ್ದಾರೆ. 2024 ರ ಸಂಸದೀಯ ಚುನಾವಣೆಗಳಿಗೆ, ಸಂಸತ್ತು ಭಾರತದ ಚುನಾವಣಾ ಆಯೋಗಕ್ಕೆ ನೀಡಿದ ಒಟ್ಟು ಹಂಚಿಕೆ 466 ಕೋಟಿ ರೂ.ಗಳಷ್ಟಿತ್ತು. ರಾಜ್ಯಗಳು ಸಾಗಾಟದ ಅವಶ್ಯಕತೆಗಳಿಗಾಗಿ ಇನ್ನೂ ಸ್ವಲ್ಪಮೊತ್ತವನ್ನು ಖರ್ಚು ಮಾಡುತ್ತವೆ. ಆದರೆ ಇದೆವೆಲ್ಲವೂ ತುಂಬಾ ದೊಡ್ಡ ಮೊತ್ತವೇನಲ್ಲ. ಇತರ ವರ್ಷಗಳಲ್ಲಿ ಈ ವೆಚ್ಚವು ಇನ್ನೂಕಡಿಮೆ.ಇನ್ನು ಅಭಿವೃದ್ಧಿಯ ಬಗ್ಗೆಹೇಳುವುದಾದರೆ, 1967 ರಿಂದ ಇಂದಿನವರೆಗೆ ಭಾರತದಲ್ಲಿ ಕಾಲಕಾಲಕ್ಕೆ ಮತ್ತು ಆಗಾಗ್ಗೆ ಚುನಾವಣೆಗಳು ನಡೆದಿವೆ. ಅವು ಅಭಿವೃದ್ಧಿಯ ಆವೇಗವನ್ನು ನಿಲ್ಲಿಸಿವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಮೋದಿ
‘ಒಂದು ರಾಷ್ಟ್ರ, ಒಂದು ಚುನಾವಣೆ‘ ಮಾದರಿಯು ಸಂವಿಧಾನದ ಎರಡು ಮೂಲಭೂತ ಲಕ್ಷಣಗಳನ್ನು – ಪ್ರಜಾಪ್ರಭುತ್ವ ಮತ್ತು ಒಕ್ಕೂಟತತ್ವವನ್ನು – ದುರ್ಬಲಗೊಳಿಸುತ್ತದೆ. ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು, ಸಂಸತ್ತಿಗೆ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವ ಅಧಿಕಾರವಿಲ್ಲ ಎಂದು ಹೇಳುತ್ತದೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಂದಿನಿಂದ ಈ ಕಲ್ಪನೆಯನ್ನು ಮುಂದಿಟ್ಟಿದ್ದಾರೆ, 2020 ರಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ‘ “ಚರ್ಚೆಯ ವಿಷಯವಲ್ಲ, ಬದಲಿಗೆ ಭಾರತಕ್ಕೆ ಒಂದುಆವಶ್ಯಕತೆ” ಎಂದುಅವರು ಘೋಷಿಸಿದರು. ಮೋದಿ
ವಾಸ್ತವವಾಗಿ, ‘ಒಂದು ರಾಷ್ಟ್ರ, ಒಂದು ಚುನಾವಣೆ‘ ಪ್ರಸ್ತಾಪದಿಂದಾಗಿ ಕೆಲವು ಶಾಸಕಾಂಗ ಸಭೆಗಳ ಜೀವಿತಾವಧಿಯನ್ನು, ಅವುಗಳನ್ನು ಲೋಕಸಭಾ ಚುನಾವಣೆಯೊಂದಿಗೆ ಹೊಂದಿಸಲು ಮೊಟಕುಗೊಳಿಸಿದಂತಾಗುತ್ತದೆ. ಇದಲ್ಲದೆ, ಒಂದು ರಾಜ್ಯ ಸರ್ಕಾರ ಬಿದ್ದು ವಿಧಾನಸಭೆಯನ್ನು ವಿಸರ್ಜಿಸಬೇಕಾದರೆ, ನಂತರ ನಡೆಯುವ ಮಧ್ಯಂತರ ಚುನಾವಣೆಯು ವಿಧಾನಸಭೆಯ ಉಳಿದ ಅವಧಿಗೆ ಮಾತ್ರ ಇರುತ್ತದೆ. ಇದೆಲ್ಲವೂ ಸಂವಿಧಾನದಲ್ಲಿ ಕಲ್ಪಿಸಿದಂತೆ ಐದು ವರ್ಷಗಳ ಅವಧಿಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜನರ ಹಕ್ಕನ್ನು ಉಲ್ಲಂಘಿಸುತ್ತದೆ.
ಎಲ್ಲಾ ಪಂಚಾಯತ್ಗಳು ಮತ್ತು ಪುರಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಕ್ರಮದಿಂದ ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ ಇನ್ನಷ್ಟು ಸ್ಪಷ್ಟವಾಗುತ್ತದೆ. ಇದು ಹಟಮಾರಿ ಕೇಂದ್ರೀಕರಣವಾಗಿದ್ದು, ರಾಜ್ಯ ಸರ್ಕಾರಗಳ ಅಡಿಯಲ್ಲಿ ವಿಕೇಂದ್ರೀಕೃತ ನಿರ್ಧಾರ ತೆಗೆದುಕೊಳ್ಳುವ ಸ್ಥಳೀಯ ಸಂಸ್ಥೆಗಳ ಉದ್ದೇಶಕ್ಕೇವಿರುದ್ಧವಾಗಿದೆ.
ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಒಟ್ಟಿಗೆ ನಡೆಸಲು ಸಂವಿಧಾನದಲ್ಲಿಒಂದುಪ್ರಮುಖತಿದ್ದುಪಡಿಯ ಅಗತ್ಯವಿರುತ್ತದೆ. ಸಂವಿಧಾನಕ್ಕೆ 83ನೇ ವಿಧಿ (ಸದನದ ಅವಧಿ), 85ನೇ ವಿಧಿ (ಲೋಕಸಭೆಯ ವಿಸರ್ಜನೆ), 172ನೇ ವಿಧಿ (ರಾಜ್ಯ ಶಾಸಕಾಂಗಗಳ ಅವಧಿ), 174ನೇ ವಿಧಿ (ರಾಜ್ಯ ಶಾಸಕಾಂಗಗಳ ವಿಸರ್ಜನೆ), 356ನೇ ವಿಧಿ (ಸಾಂವಿಧಾನಿಕ ವ್ಯವಸ್ಥೆಯ ವೈಫಲ್ಯ)ಗಳಿಗೆ ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ, ಜೊತೆಗೆ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಇತರ ನಿಯಮಗಳಿಗೆ ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ.
ಮಹಾಧಿವೇಶನವು ಏಕಕಾಲದಲ್ಲಿ ಚುನಾವಣೆಗಳನ್ನು ತರುವ ಯಾವುದೇ ಕೃತಕ ಪ್ರಯತ್ನವನ್ನು ಸಂಪೂರ್ಣವಾಗಿ ವಿರೋಧಿಸುವುದಾಗಿಹೇಳುತ್ತ, ಈ ಉದ್ದೇಶಕ್ಕಾಗಿ ಸಂವಿಧಾನವನ್ನು ತಿದ್ದುಪಡಿ ಮಾಡುವ ಯಾವುದೇ ಕ್ರಮವನ್ನು ಬಲವಾಗಿ ವಿರೋಧಿಸುವುದಾಗಿಹೇಳಿದೆ. ಪ್ರಜಾಪ್ರಭುತ್ವ, ಬಹುತ್ವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುವ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳುಇದನ್ನು ದೃಢವಾಗಿ ವಿರೋಧಿಸಬೇಕು ಮತ್ತು ಈ ಕೇಡುಂಟು ಮಾಡುವ ನಡೆಯನ್ನು ಒಗ್ಗಟ್ಟಿನಿಂದ ತಡೆಯಬೇಕು. ಈ ಪ್ರಜಾಪ್ರಭುತ್ವ ವಿರೋಧಿ ಮತ್ತು ಒಕ್ಕೂಟ ವಿರೋಧಿ ಧಾವಂತವನ್ನು ವಿರೋಧಿಸಬೇಕು ಎಂದು ಮಹಾಧಿವೇಶನ ಭಾರತದ ಜನರಿಗೆ ಕರೆ ನೀಡಿದೆ.
ಇದನ್ನೂ ನೋಡಿ: ಎಂಪುರನ್ ಸಿನಿಮಾದ 25 ಸೀನ್ ಗಳ ಕತ್ತರಿ: ಅಭಿವ್ಯಕ್ತಿ ಸ್ವಾತಂತ್ರ್ಯದ ಹಿನ್ನಡೆ, ಹಿಂದುತ್ವದ ಮೇಲುಗೈ? Janashakthi