ಜಿ20 ಸಭೆ ನಂತರ ಮಾಧ್ಯಮ ಕೇಂದ್ರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಮಾಡಿದ್ದೇನು?

ದೆಹಲಿ: ಜಿ20 ಶೃಂಗಸಭೆಯ ಕೊನೆಯಲ್ಲಿ ಎಲ್ಲಾ ದ್ವಿಪಕ್ಷೀಯ ಸಭೆಗಳನ್ನು ಮುಗಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂಜೆ ಕಾರ್ಯಕ್ರಮದ ಸ್ಥಳದಲ್ಲಿರುವ ಅಂತರರಾಷ್ಟ್ರೀಯ ಮಾಧ್ಯಮ ಕೇಂದ್ರಕ್ಕೆ ಆಗಮಿಸಿದ್ದಾರೆ. ಆದರೆ ಅವರು ಯಾವುದೆ ಪ್ರಶ್ನೆಗಳಿಗೂ ಉತ್ತರಿಸದೆ ಮತ್ತು ಪತ್ರಿಕಾಗೋಷ್ಠಿಯು ನಡೆಸದೆ ಎಂದಿನಂತೆ ಅಲ್ಲಿ ಸುತ್ತಾಡಿ ಅಲ್ಲಿ ನೆರೆದಿದ್ದ ಪತ್ರಕರ್ತರಿಗೆ ಕೈ ಬೀಸಿ ಅಲ್ಲಿಂದ ಹೊರಟು ಹೋಗಿದ್ದಾರೆ.

ಮಾಧ್ಯಮ ಕೇಂದ್ರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಪತ್ರಕರ್ತರ ಬಳಿಯಿಂದಲೆ ಕೈ ಬೀಸಿ ಹೊರಟು ಹೋಗಿದ್ದಾರೆ. ಈ ವೇಳೆ ಕೆಲವು ಪತ್ರಕರ್ತರು ಅವರ ಮುಖದ ಬಳಿ ಮೈಕ್‌ಗಳನ್ನು ತಂದು ಮಾತನಾಡುವಂತೆ ಕೇಳಿಕೊಂಡರೂ ಪ್ರಧಾನಿ ಮೋದಿ ಅದನ್ನು ಗಮನಿಸದೆ ಮುಂದೆ ಸಾಗಿದ್ದಾರೆ. ಪ್ರಧಾನಿಯ ಹಿಂದೆ ಇದ್ದ ಅಂಗರಕ್ಷಕ ಮಾಧ್ಯಮದ ಮೈಕ್‌ಗಳನ್ನು ಬದಿಗೆ ಸರಿಸುವ ದೃಶ್ಯ ಕೂಡಾ ವಿಡಯೊದಲ್ಲಿ ದಾಖಲಾಗಿದೆ.

ಜಿ20

ಇದನ್ನೂ ಓದಿ: ಭವಿಷ್ಯದ ಭಾರತ ಹಿಂದೂ ಧರ್ಮವಿಲ್ಲದ ಸಮಾನತೆಯ ದೇಶವಾಗಿರಲಿದೆ: ದೆಹಲಿ ಐಐಟಿ ಪ್ರಾಧ್ಯಾಪಕಿ ದಿವ್ಯಾ ದ್ವಿವೇದಿ

ಜಿ20 ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಪದೇ ಪದೇ ಸಮಸ್ಯೆಯಾಗಿದ್ದು ಸುದ್ದಿಯಾಗಿತ್ತು. ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ಭೇಟಿಯ ಸಮಯದಲ್ಲಿ ಮಾಧ್ಯಮಗಳು ಇನ್ನೂ ಹೆಚ್ಚಿನ ಪ್ರವೇಶಕ್ಕಾಗಿ ವಿನಂತಿ ಮಾಡಿದ್ದರೂ ಭಾರತ ಸರ್ಕಾರ ಅದನ್ನು ನಿರಾಕರಿಸಿದೆ ಎಂದು ಯುಎಸ್ ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ. ಸೆಪ್ಟೆಂಬರ್ 8 ರಂದು ಬಿಡೆನ್ ಮತ್ತು ಮೋದಿ ಭೇಟಿಯಾದಾಗ ಅಮೆರಿಕದ ಪ್ರೆಸ್ ಕಾರ್ಪ್ಸ್ ಅನ್ನು ವ್ಯಾನ್‌ನಲ್ಲಿ ಬಂಧಿಸಲಾಯಿತು ಎಂದು ರಾಯಿಟರ್ಸ್ ವರದಿ ಮಾಡಿದೆ.

ಈ ಮಧ್ಯೆ, ಬಿಡೆನ್ ತನ್ನ ಅಂತರರಾಷ್ಟ್ರೀಯ ಪ್ರವಾಸದ ಭಾಗವಾಗಿ ವಿಯೆಟ್ನಾಂಗೆ ತೆರಳಿದ್ದಾರೆ. ಅಲ್ಲಿಗೆ ತೆರಳಿದ ಪ್ರಾರಂಭದಲ್ಲಿಯೇ ಅವರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಜೊತೆಗೆ ತಾನು ಐದು ಪ್ರಶ್ನೆಗಳನ್ನು ಮಾತ್ರ ತೆಗೆದುಕೊಳ್ಳುವುದಾಗಿ ಹೇಳಿದ ಅವರು, ಐದು ಪ್ರಶ್ನೆಗಳ ನಂತರ ಕೂಡಾ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

ಜಿ20

ವಿಡಿಯೊ ನೋಡಿ: ಮುಂದಿನ ಕೆಲವು ವರ್ಷಗಳಲ್ಲಿ ಭಾರತ 3ನೇ ಆರ್ಥಿಕ ದೇಶವಾಗುತ್ತದೆಯೇ?Janashakthi Media

Donate Janashakthi Media

Leave a Reply

Your email address will not be published. Required fields are marked *