ಮಂಡ್ಯ: ಭೂಗಳ್ಳರಿಂದ ಶಾಸಕರಿಗೆ ಜೀವ ಬೆದರಿಕೆ ಇರೋ ವಿಚಾರ ಕೆಡಿಪಿ ಸಭೆಯಲ್ಲಿ ಪ್ರಸ್ತಾಪವಾಗಿದೆ. ಮಂಡ್ಯ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಸಚಿವ ಚಲುವರಾಯ ಸ್ವಾಮಿ ಅಧ್ಯಕ್ಷತೆಯಲ್ಲಿ ಆಗಸ್ಟ್ 2ರಂದು ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಈ ವಿಚಾರ ಪ್ರಸ್ತಾಪಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಶಾಸಕ ನರೇಂದ್ರ ಸ್ವಾಮಿ, ಥ್ರೆಟ್ ಅನ್ನೋದು ಹೊಸ ವಿಚಾರ ಏನಲ್ಲ ಅದನ್ನು ನಾನು ಮುಚ್ಚಿಟ್ಟಿದ್ದೇನೆ. ಬಹಳಷ್ಟು ಜನ ತಮ್ಮದೇ ಆದಂತಹ ತೀರ್ಮಾನದಲ್ಲಿದ್ದಾರೆ. ಅದಕ್ಕೆಲ್ಲ ನಾನು ಹೆದರೋನೋ ಅಲ್ಲ, ಅಂಜೋದು ಅಲ್ಲ. ಅವರು ಏನೇನೂ ಮಾತನಾಡಿದ್ದಾರೆ ನನ್ನತ್ರ ದಾಖಲೆ ಇದೆ. ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ ಮಾಡ್ತೇನೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ದೋಷಿ – ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪು; ಜನವಾದಿ ಮಹಿಳಾ ಸಂಘಟನೆ ಸ್ವಾಗತ
ನಾನು ಮಾಡಿದ ಭೂಗಳ್ಳತನದ ಆರೋಪದ ಬಗ್ಗೆ ಜಿಲ್ಲಾ ಮತ್ತು ರಾಜ್ಯದ ತಂಡ ತನಿಖೆ ಒಂದು ಹಂತಕ್ಕೆ ಬಂದಿದೆ. 50% ತನಿಖೆ ಆದ್ರೂ ಇನ್ನೂ ಇದೆ. ಅದರಲ್ಲಿ ನಕಲಿ ಡಾಕ್ಯುಮೆಂಟ್ ಕಥೆಗಳು. ಪೌತಿ ಆಗಿರುವ ಜಮೀನು ಕೂಡ ಖಾತೆ ಆಗಿದೆ. ಪೂರ್ಣ ದಡ ಮುಟ್ಟಿಸುವ ತನಕ ನಾನು ಸುಮ್ಮನೆ ಬಿಡಲ್ಲ.
ನನಗೆ ದೂರು ಬಂದ ಆಧಾರದ ಮೇಲೆ ಹಲವಾರು ಪ್ರಕರಣ ಇದೆ. ಸಿಕ್ಕಿರೋದು 800ಎಕರೆ, ನಾನು ಆರೋಪ ಮಾಡಿದ್ದು 2500 ಎಕರೆ ಇದರಲ್ಲಿ ನಕಲಿ ಎಷ್ಟು ಅನ್ನೋದು ತನಿಖೆ ಬಳಿಕ ಗೊತ್ತಾಗಲಿದೆ. ತನಿಖೆ ಇನ್ನು ಮುಗಿದಿಲ್ಲ, ಈ ಹಂತದಲ್ಲಿ ನಾನು ಏನು ಮಾತನಾಡಲ್ಲ. ಎಲ್ಲಿ, ಹೇಗೆ ಮಾತನಾಡಿದ್ದಾರೆ ಮೆಸೇಜ್ ಇದೆ ಅನ್ನೋದರ ಬಗ್ಗೆ ಸೂಕ್ತ ಸಂದರ್ಭದಲ್ಲಿ ಮಾತನಾಡ್ತೇನೆ ಎಂದಿದ್ದಾರೆ.
ಇದನ್ನೂ ನೋಡಿ: ಬಲ್ಡೋಟಾ ಕಾರ್ಖಾನೆಯಿಂದ ಕೆರೆ ಒತ್ತುವರಿ; ಜಾನುವಾರು ಸಮೇತ ವಿಭಿನ್ನ ಪ್ರತಿಭಟನೆ | Janashakthi Media
