ಚಂಡೀಗಢ: ಹರಿಯಾಣದಲ್ಲಿ ಹಿಂಸಾಚಾರ ಮುಂದುವರೆದ ನಡುವೆಯೂ ಬುಧವಾರ ತೌರು ಎಂಬಲ್ಲಿ ಮಸೀದಿಗಳ ಮೇಲೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಪೆಟ್ರೋಲ್ ಮತ್ತು ಇತರೆ ರಾಸಾಯನಿಕಗಳ ಮಿಶ್ರಣ ಎರಚಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಷಯದ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳ ಎರಡೂ ಮಸೀದಿಗಳಲ್ಲಿ ಬೆಂಕಿ ನಂದಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಾರಿಗೂ ಗಾಯಗಳಾಗದ ಬಗ್ಗೆ ವರದಿಯಾಗಿಲ್ಲ.
ಇದನ್ನೂ ಓದಿ:ಹರಿಯಾಣ ಗಲಭೆ: ಗುರುಗ್ರಾಮದ ಸೆಕ್ಟರ್ 57ರಲ್ಲಿ ಮಸೀದಿಗೆ ಬೆಂಕಿ ಹಚ್ಚಿದ ಉದ್ರಿಕ್ತರು
ಪಲ್ವಾಲ್ ಜಿಲ್ಲೆಯ ಮಿನರ್ ಮಾರುಕಟ್ಟೆಯ ಬಳೆ ಅಂಗಡಿಗೂ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ನೂಹ್ ಮತ್ತು ಪಲ್ವಾಲ್ ಎರಡೂ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ.
ಹರಿಯಾಣದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯನ್ನು ತಡೆಯುವ ಪ್ರಯತ್ನ ನೂಹ್ನಲ್ಲಿ ಭುಗಿಲೆದ್ದ ಘರ್ಷಣೆಯಿಂದಾಗಿ ಕಳೆದ ಎರಡು ದಿನಗಳಿಂದ ಗುರುಗ್ರಾಮ ಹಿಂಸಾಚಾರ ಬುಗಿಲೆದ್ದಿದೆ. ಈ ಘರ್ಷಣೆಯಲ್ಲಿ ಒಬ್ಬ ಧರ್ಮಗುರು 2 ಗೃಹ ರಕ್ಷಕದ ಸಿಬ್ಬಂದಿ ಮತ್ತು ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ..