ಬೀದರ್ : ನೀರು ಜೀವ ಜಲ, ಆಹಾರ ಬೇಕಾದರೆ ಆಮದು ಮಾಡಿಕೊಳ್ಳಬಹುದು, ರಸ್ತೆ ವಿದ್ಯುತ್ ಇಲ್ಲದೆ ಇದ್ದರೆ ನಡೆಯುತ್ತದೆ ಆದರೆ ನೀರು ಇಲ್ಲದೆ ಇದ್ದರೆ ಬದುಕಲಿಕ್ಕೆ ಸಾಧ್ಯವಿಲ್ಲಾ ಮುನುಷ್ಯನಿಗೆ ಗಾಳಿ ಎಷ್ಟು ಮುಖ್ಯವೋ ನೀರು ಸಹ ಅಷ್ಟೆ ಮುಖ್ಯ ಎಂದು ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.
ಇದನ್ನು ಓದಿ :-ಬಿಬಿಎಂಪಿ ಬಜೆಟ್ 2025| ಹಾಲಿ ಬಜೆಟ್‌ನಲ್ಲಿ 19.927 ಕೋಟಿ ರೂ ಯೋಜನೆ ಘೋಷಣೆ
ಅವರು ಹುಮನಾಬಾದ್ ನಗರದ ಥೇರ್ ಮೈದಾನದಲ್ಲಿ ಶನಿವಾರ ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪುರಸಭೆ, ಕೇಂದ್ರ ಪುರಸ್ಕೃತ ಯೋಜನೆಯಡಿ ಹುಮನಾಬಾದ್, ಚಿಟಗುಪ್ಪ ಹಾಗೂ ಹಳ್ಳಿಖೇಡ (ಬಿ) ಇವರ ಸಂಯುಕ್ತಾಶ್ರದಲ್ಲಿ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ಹುಮನಾಬಾದ, ಚಿಟಗುಪ್ಪಾ, ಮತ್ತು ಹಳ್ಳಿಖೇಡ (ಬಿ) ಪಟ್ಟಣಗಳಿಗೆ ಕಾರಂಜಾ ಜಲಾಶಯದಿಂದ ನೀರು ಸರಬರಾಜು ಅಭಿವೃದ್ಧಿ ಯೋಜನೆಯ 1.60 ಕೋಟಿ ಅನುದಾನದ ಕಾಮಗಾರಿಗೆ ಶಂಕು ಸ್ಥಾಪನೆ ಹಾಗೂ ಜೆಸ್ಕಾಂ ವತಿಯಿಂದ ನಿಂಬೂರ ಗ್ರಾಮದಲ್ಲಿ 8.5 ಕೋಟಿ ವೇಚ್ಚದ 33/11 ಕೆ.ವಿ. ವಿದ್ಯುತ್ ಉಪಕೇಂದ್ರ ನಿರ್ಮಾಣ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.
ನಗರಗಳು ನವೀಕರಣಗೊಳ್ಳುತ್ತಿವೆ ಜನರು ಅನೇಕ ಕಾರಣಗಳಿಂದ ಹಳ್ಳಿ ಕಡೆಯಿಂದ ನಗರದ ಕಡೆಗೆ ವಲಸೆ ಬರುತ್ತಿದ್ದಾರೆ. ಉದ್ಯೋಗ, ಮಕ್ಕಳ ಶಿಕ್ಷಣಕ್ಕಾಗಿ ಆರೋಗ್ಯದ ಸಮಸ್ಯಗಳಿಗೆ ಬರುತ್ತಾರೆ. ಇದರಿಂದ ನಗರ ಪ್ರದೇಶದಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಅಧಿಕೃತವಾಗಿ ಅನಧಿಕೃತವಾಗಿ ಬಡವಾಣೆಗಳು ನಿರ್ಮಾಣವಾಗುತ್ತಿವೆ. ಆ ಬಡಾವಣೆಗೆ ಕುಡಿಯುವ ನೀರು, ವಿದ್ಯುತ್ ದೀಪ , ಚರಂಡಿ ವ್ಯವಸ್ಥೆ ಬೇಕು.
ಬೇಸಿಗೆಯಲ್ಲಿ ಭಾವಿಗಳು ಹಾಗೂ ಬೋರವೇಲ್‌ಗಳು ಬತ್ತಿ ಹೋಗಿ ನೀರಿಗೆ ಹಾಹಾಕಾರ ಉಂಟಾಗುವ ನಿಟ್ಟಿನಲ್ಲಿ ಬೀದರ ಜಿಲ್ಲೆಯ ಭಾಲ್ಕಿ, ಹುಮನಾಬಾದ, ಚಿಟಗುಪ್ಪಾ, ಹಳ್ಳಿಖೇಡ ಪಟ್ಟಣಗಳಿಗೆ ಕುಡಿಯುವ ನೀರು ಕಾರಂಜಾ ಜಲಾಶಯದಿಂದ ನೀರು ಸರಬರಾಜು ಆಗುತ್ತಿದೆ. ಹಾಗೂ 28 ಸಾವಿರ ಹೆಕ್ಟರ್ ಭೂಮಿಗೆ ನೀರುಣಿಸಲು ಸಹಕಾರಿಯಾಗಿದೆ. 1500 ಸಾವಿರ ಕೋಟಿ ಅನುದಾನದಲ್ಲಿ ಜಲ ಜೀವನ ಮಿಷನ್ ಅಡಿಯಲ್ಲಿ ಕುಡಿಯುವ ನೀರಿನ ಯೋಜನೆ ರೂಪಿಸಿ 800 ಜನ ವಸತಿ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಕೆಲಸ ಮಾಡುತ್ತಿದ್ದೇವೆ.ಇದಕ್ಕೆ ಮೂಲ ಕಾರಂಜಾ ಜಲಾಶಯ ಎಂದರು.