ಮೆಕ್ಸಿಕೋ ಸೂಪರ್ ಮಾರ್ಕೆಟ್ ಸ್ಫೋಟ: 23 ಮಂದಿ ಸಾವು

ಮೆಕ್ಸಿಕೋ: ನವೆಂಬರ್‌ 1ರಂದು ಉತ್ತರ ಮೆಕ್ಸಿಕೋದ ಕೇಂದ್ರ ಭಾಗದಲ್ಲಿನ ʻವಾಲ್ಡೊಸ್ ಸ್ಟೋರ್ʼ ನ ಸೂಪರ್ ಮಾರ್ಕೆಟ್ ಸ್ಫೋಟದಲ್ಲಿ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದು, 11 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ಸೊನೊರಾ ರಾಜ್ಯದ ಗವರ್ನರ್ ಅಲ್ಫೊನ್ಸೊ ಡುರಾಜೊ, ನಗರದ ಮಧ್ಯಭಾಗದಲ್ಲಿರುವ ವಾಲ್ಡೋ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದೆ. ದುಃಖಕರವೆಂದರೆ ನಾವು ನೋಡಿದಂತೆ ಮೃತಪಟ್ಟವರಲ್ಲಿ ಹಲವರು ಮಕ್ಕಳಿದ್ದಾರೆ.

ಇದನ್ನೂ ಓದಿ: ನವೆಂಬರ್‌ 2ರಂದು ಮಹಿಳೆಯರ ಏಕದಿನ ವಿಶ್ವಕಪ್ ಫೈನಲ್‌!

ಗಾಯಗೊಂಡವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ದೃಢಪಡಿಸಿದ್ದು, ಘಟನೆಯ ಕಾರಣಗಳನ್ನು ತಿಳಿಯಲು ತನಿಖೆಗೆ ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ನಿರಂಜನ ಶತಮಾನ | ನಿರಂಜನ ಆಧುನಿಕ ಮನಸ್ಸಿನ ಪ್ರಯೋಗಶೀಲ ಸಾಹಿತಿ – ಪ್ರೊ. ರಾಜೇಂದ್ರ ಚೆನ್ನಿ Janashakthi Media

Donate Janashakthi Media

Leave a Reply

Your email address will not be published. Required fields are marked *