ಮೇಕೆದಾಟು ಶೀಘ್ರ ಇತ್ಯರ್ಥವಾಗಲಿ

ನಿತ್ಯಾನಂದಸ್ವಾಮಿ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆ ಈ ಮೇಕೆದಾಟು ಯೋಜನೆ. ಮೇಕೆದಾಟು ಬಳಿ ಹರಿಯುವ ಕಾವೇರಿ ನದಿಗೆ ಸಮಾನಂತರ ಜಲಾಶಯ ನಿರ್ಮಾಣ ಮಾಡಿ 66 ಟಿಎಂಸಿ ಹೆಚ್ಚುವರಿ ನೀರನ್ನು ಸಂಗ್ರಹಿಸಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ಇದಾಗಿದೆ. ಈ ಯೋಜನೆಯಿಂದ ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಕೊರತೆಯನ್ನು ನಿವಾರಿಸಿಕೊಳ್ಳುವುದಾಗಿದೆ. ಈಗ ಬೆಂಗಳೂರು ನಗರಕ್ಕೆ 1350 ಎಂಎಲ್‌ಡಿ ಕಾವೇರಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. 2030 ಕ್ಕೆ 2285 ಎಂಎಲ್‌ಡಿ ನೀರು ಬೇಕಾಗುವುದು. ಮೇಕೆದಾಟುನಿಂದ ಬೆಂಗಳೂರು ನಗರ್ ಮತ್ತು ಕೆಲ ಬಯಲು ಸೀಮೆಯ ಜಿಲ್ಲೆಗಳಿಗೆ ನೀರನ್ನು ಪೂರೈಸಿ, ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಇದೇ ವೇಳೆಗೆ ತಮಿಳುನಾಡಿಗೆ ಅದರ ಪಾಲಿನ 177 ಟಿಎಂಸಿ ನೀರನ್ನು ನೀಡಿ ಸಮುದ್ರಕ್ಕೆ ಹರಿದು ವ್ಯರ್ಥವಾಗುವ ನೀರನ್ನು ಮೇಕೆದಾಟುವಿನಲ್ಲಿ ಸಂಗ್ರಹಿಸಿ ಜಲ ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶವಾಗಿದೆ.

ಮೇಕೆದಾಟು ಅಣೆಕಟ್ಟನ್ನು ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗಾಗಿ 5912 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಅಣೆಕಟ್ಟೆಯಲ್ಲಿ 5 ಟಿಎಂಸಿ ನೀರು ಸಂಗ್ರಹಿಸಲಾಗುತ್ತದೆ. 400 ಮೇಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಮೇಕೆದಾಟು ಒಂದು ಪ್ರವಾಸಿ ತಾಣವೂ ಆಗಿರುತ್ತದೆ. ಕಾವೇರಿ ನದಿ ಬಂಡೆಗಳ ನಡುವೆ ಹರಿಯುತ್ತದೆ. ಅಲ್ಲಿ ಬೆಳೆಯುವ ಹುಲ್ಲನ್ನು ತಿನ್ನಲು ಹೋಗುವ ಮೇಕೆಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಮೇಕೆಗಳು ದಾಟುತ್ತಿರುತ್ತವೆ. ಹಾಗಾಗಿ ಈ ಸ್ಥಳಕ್ಕೆ ಮೇಕೆದಾಟು ಎಂಬ ಹೆಸರು ಬಂದಿದೆ.

ಕಾಂಗ್ರೆಸ್‌ನವರು ಈ ವಿಷಯದಲ್ಲಿ ರಾಜಕಾರಣ ಮಾಡಲು ಹೊರಟಿರಬಹುದು. ಚುನಾವಣೆ ಸಮೀಪದಲ್ಲಿರುವ ಕಾರಣ ಅವರ ಕೆಲಸ ಅವರು ಮಾಡುತ್ತಿದ್ದಾರೆ. ಆದರೆ ಕೇಂದ್ರದಲ್ಲಿಯೂ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಯಾಕೆ ಪ್ರಧಾನಿ ಮೋದಿಯವರು ಈ ವಿವಾದವನ್ನು ಏಕೆ ಬಗೆಹರಿಸಲಾರದು?

ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷದಲ್ಲಿ ಡಬ್ಬಲ್ ಎಂಜಿನ್ ಏನು ಮಾಡಿತು ಎಂಬ ಪ್ರಶ್ನೆ.

ಮೇಕೆದಾಟು ವಿಷಯದಲ್ಲಿ ರಾಜಕೀಯ ರಹಿತವಾದ ಒಗ್ಗಟ್ಟು ಪ್ರದರ್ಶಿಸಬೇಕು. ರಾಜ್ಯ ಸರ್ಕಾರದ ಉಸ್ತುವಾರಿಯಲ್ಲಿರುವ `ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ’ ಒಪ್ಪಿಗೆ ನೀಡಿರುವುದರಿಂದ ಅದು ವರ್ಷಗಳು ಕಳೆದರೂ ಯೋಜನೆ ಕಡತದಲ್ಲಿ ಉಳಿಸಿದೆ. ಈ ಯೋಜನೆ ಕುಡಿಯುವ ನೀರಿನ ಯೋಜನೆ. ಇದಕ್ಕೆ ಯಾರೂ ತಕರಾರು ಮಾಡುವಂತಿಲ್ಲ. ಈ ಯೋಜನೆಗೆ ಸುಪ್ರೀಂ ಕೋರ್ಟ್ ನೀಡಿದ ತಡೆಯಾಜ್ಞೆ ತೆರವುಗೊಳಿಸಬೇಕು. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರ ಅಗತ್ಯ. ತಮಿಳುನಾಡಿನ ಸಹಕಾರವನ್ನು ಪಡೆಯಲು ಸಾಧ್ಯವಾಗಬೇಕು.

Donate Janashakthi Media

Leave a Reply

Your email address will not be published. Required fields are marked *