ಮೀಸಲು ಕ್ಷೇತ್ರದ ಅಭ್ಯರ್ಥಿಗಿಂತ ಹೆಚ್ಚು ಮತ ಪಡೆದರೆ ಮಾತ್ರ ಸಾಮಾನ್ಯ ಅಭ್ಯರ್ಥಿಗೆ ಗೆಲುವು

ಮೀಸಲು ಕ್ಷೇತ್ರದ ಎದುರಾಳಿ ಎದುರು ಸೋತಿದ್ದರೂ ಸಾಮಾನ್ಯ ಅಭ್ಯರ್ಥಿ ಗಿಂತ ಹೆಚ್ಚು ಮತ ಪಡೆದರೆ ಗೆಲುವು

 

ಬೆಂಗಳೂರು: ಎರಡು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು,
ನಾಳೆ (ಡಿ.30-ಬುಧವಾರ) ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶ ಹೊರಬರಲಿದೆ.

ಮತದಾರರ ಮನವೊಲಿಸುವಲ್ಲಿ ನಿರತರಾಗಿದ್ದ ಅಭ್ಯರ್ಥಿಗಳು, ಮುಖಂಡರು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಎಲ್ಲಾ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಬ್ಯಾಲೆಟ್ ಪತ್ರದಲ್ಲಿ ಬರೆದಿದ್ದಾನೆ.
ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳಿಗೆ, ಮೀಸಲು ಕ್ಷೇತ್ರದ ಅಭ್ಯರ್ಥಿಗಳು ತಲೆನೋವಾಗಿ ಪರಿಣಮಿಸಿದೆ.
ಯಾಕೆಂದರೆ ಮೀಸಲು ಕ್ಷೇತ್ರದ ಅಭ್ಯರ್ಥಿಗಳಿಗಿಂತ ಹೆಚ್ಚು ಮತ ಪಡೆದರೆ ಮಾತ್ರ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಾಧ್ಯ.

ಉದಾಹರಣೆಗೆ ಒಂದು ಕ್ಷೇತ್ರದಲ್ಲಿ ಎಸ್ಟಿ(ಮಹಿಳೆ) ಬಿಸಿಎಂ(ಎ) ಮಹಿಳೆ ಹಾಗೂ ಸಾಮಾನ್ಯ ಮೂರು ಸ್ಥಾನಗಳು ಇವೆ. ಎಸ್.ಟಿ ಕ್ಷೇತ್ರದಿಂದ ಸುಮಿತ್ರ, ಸುಶೀಲಾ, ಹಾಗೂ ಬಿಸಿಎಂ(ಎ) ಕ್ಷೇತ್ರದಿಂದ ರಸೀನಾ, ಸಿಂಧೂ ಹಾಗೂ ಸಾಮಾನ್ಯ ಕ್ಷೇತ್ರದಿಂದ ಮಧುಸೂದನ್ ಹಾಗೂ ಮೊಹಮ್ಮದ್ ರಫಿ ಸ್ಪರ್ಧಿಸಿದ್ದಾರೆ.
ಎಸ್ಟಿ ಅಭ್ಯಸರ್ಥಿಗಳಾದ ಸುಮಿತ್ರ 220 ಮತ ಹಾಗೂ ಸುಶೀಲ 225 ಮತಗಳನ್ನು ಪಡೆದಿದ್ದು, ಹೆಚ್ಚು ಮತ ಪಡೆದ ಸುಶೀಲ ಜಯಶೀಲರಾಗಿದ್ದಾರೆ. ಹಾಗೆಯೇ ಬಿಸಿಎಂ (ಎ) ಕ್ಷೇತ್ರದಿಂದ ಸಿಂಧೂ 210 ಹಾಗೂ ರಸೀನಾ 220 ಮತಗಳನ್ನು ಪಡೆದಿದ್ದು, ಹೆಚ್ಚು ಮತ ಪಡೆದ ರಸೀನಾ ಗೆಲುವು ಸಾಧಿಸಿದ್ದಾರೆ. ಕೊನೆಯದಾಗಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ಮಧುಸೂದನ್ ಹಾಗೂ ಮೊಹಮ್ಮದ್ ರಫಿ ಅವರ ಮತ ಎಣಿಕೆ ಮಾಡಲಾಗುತ್ತದೆ. ಸಾಮಾನ್ಯ ಕ್ಷೇತ್ರದಿಂದ ಕಣಕ್ಕಿಳಿದಿರುವ ಮಧುಸೂದನ್ 170 ಹಾಗೂ ಮೊಹಮ್ಮದ್ ರಫಿ 185 ಮತಗಳನ್ನು ಪಡೆದಿದ್ದಾರೆ. ಹೆಚ್ಚು ಮತ ಪಡೆದ ರಫಿ ಗೆಲುವು ಸಾಧಿಸಬೇಕಿತ್ತು. ಆದರೆ ಗೆಲುವು ಸಾಧಿಸುವುದು ಎಸ್ಟಿ ಕ್ಷೇತ್ರದಿಂದ ಸ್ಪರ್ಧಿಸಿ ಕಡಿಮೆ ಮತ ಪಡೆದ ಸುಮಿತ್ರ. ಯಾಕೆಂದರೆ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಫಿ ಸಾಮಾನ್ಯ ಕ್ಷೇತ್ರದ ಎದುರಾಳಿಗಿಂತ ಹೆಚ್ಚು ಮತ ಪಡೆದರೂ ಮೀಸಲು ಕ್ಷೇತ್ರದ ಅಭ್ಯರ್ಥಿಗಿಂತ ಕಡಿಮೆ ಮತ ಪಡೆದ ಕಾರಣ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವ ಮೊಹಮ್ಮದ್ ರಫಿ ರವರು ಸೋಲು ಅನುಭವಿಸುತ್ತಾ
ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ ಸುಮಿತ್ರ ಹಾಗೂ ಬಿಸಿಎಂ(ಎ) ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡ ಸಿಂಧೂ, ಈ ಎರಡು ಮೀಸಲು ಕ್ಷೇತ್ರದ ಅಭ್ಯರ್ಥಿಗಳನ್ನು ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳು ಎಂದು ಪರಿಗಣಿಸಲಾಗುತ್ತದೆ.
ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ ಅಭ್ಯರ್ಥಿ ಸುಮಿತ್ರ (220 ಮತ) ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಿಂತ ಅತೀ ಹೆಚ್ಚು ಮತಗಳನ್ನು ಪಡೆದುವುದರಿಂದ ಮೀಸಲು ಕ್ಷೇತ್ರದ ಅಭ್ಯರ್ಥಿ, ಸಾಮಾನ್ಯ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾರೆ.

ಅಭ್ಯರ್ಥಿಗಳಿಗೆ ಮಾಹಿತಿಯೇ ಇಲ್ಲ
ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಸೋತ ಅಭ್ಯರ್ಥಿಗಳನ್ನು, ಸಾಮಾನ್ಯ ಕ್ಷೇತ್ರದ ಫಲಿತಾಂಶ ಘೋಷಣೆ ಮಾಡುವ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳು ಎಂದು ಪರಿಗಣಿಸಲಾಗುತ್ತದೆ ಎಂಬ ಮಾಹಿತಿ ಬಹುತೇಕ ಸಾಮಾನ್ಯ ಕ್ಷೇತ್ರ ಹಾಗೂ ಮೀಸಲು ಕ್ಷೇತ್ರದ ಅಭ್ಯರ್ಥಿಗಳಿಗೆ ಇಲ್ಲ.
ಈ ಬಗ್ಗೆ ಮಾಹಿತಿ ಗೊತ್ತಿರುವ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳು ಸಿಂಗಲ್ ವೋಟ್ ಮೊರೆ ಹೋಗಿದ್ದಾರೆ.
ಕೆಲವೊಂದು ಕ್ಷೇತ್ರದಲ್ಲಿ ಮೂರು ಅಥವ ನಾಲ್ಕು ಮತಗಳು ಇವೆ. ಆದರೆ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳು ರಾತ್ರೋರಾತ್ರಿ ತಮ್ಮ ತಂಡದ ಮೀಸಲು ಅಭ್ಯರ್ಥಿಗಳನ್ನು ಬಿಟ್ಟು ಒಬ್ಬರೇ ಮತಯಾಚನೆ ಮಾಡಿದ್ದಾರೆ.
ಮೀಸಲು ಅಭ್ಯರ್ಥಿಗಳು ಮತ ನೀಡಬೇಡಿ, ನನಗೆ ಮಾತ್ರ ವೋಟ್ ಹಾಕಿ ಎಂದು ಸಿಂಗಲ್ ವೋಟ್ ಸ್ಟ್ರಾಟಜಿ ಬಳಸಿದ್ದಾರೆ. ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳು ಹೀಗೆ ಸಿಂಗಲ್ ವೋಟ್ ಕೇಳಿರುವುದರಿಂದ ಮೀಸಲು ಕ್ಷೇತ್ರದ ಅಭ್ಯರ್ಥಿಗಳಿಗೆ ದೊಡ್ಡ ತಲೆ ನೋವಾಗಿದೆ.

ಗೆಲುವಿನ ಘೋಷಣೆ ಹಾಗೂ ಆಯ್ಕೆ

ಒಂದಕ್ಕಿಂತ ಹೆಚ್ಚು ಸ್ಥಾನವಿರುವ ಕ್ಷೇತ್ರದಲ್ಲಿ ಮೀಸಲಿರುವ ಸ್ಥಾನಗಳು ಮತ್ತು ಸಾಮಾನ್ಯ ಸ್ಥಾನಗಳಿಗೆ ಫಲಿತಾಂಶ ಘೋಷಿಸುವಾಗ ಸಾಮಾನ್ಯ ಅಭ್ಯರ್ಥಿಗಳ ಫಲಿತಾಂಶ ಕೊನೆಯಲ್ಲಿ ಘೋಷಣೆ ಮಾಡಲಾಗುತ್ತದೆ.
ಮೊದಲು ಕ್ರಮವಾಗಿ ಎಸ್ಸಿ, ಎಸ್ಟಿ, ಬಿಸಿಎಂ(ಎ), ಬಿಸಿಎಂ(ಬಿ), ಸಾಮಾನ್ಯ ಸ್ಥಾನದ ಘೋಷಣೆಯಾಗುತ್ತದೆ. ಅಂತಿಮವಾಗಿ ಸಾಮಾನ್ಯ ಕ್ಷೇತ್ರದ ವಿಜೇತರ ಘೋಷಣೆ ಪ್ರಕ್ರಿಯೆ ಶುರುವಾಗುತ್ತದೆ. ಆಗ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಸೋತಿರುವ ಅಭ್ಯರ್ಥಿಯನ್ನು ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯನ್ನು ಸಾಮಾನ್ಯ ಕ್ಷೇತ್ರದ ಸ್ಪರ್ಧಿಯೆಂದು ಪರಿಗಣಿಸಲಾಗುತ್ತದೆ.
ಆಗ ಸಾಮಾನ್ಯ ಕ್ಷೇತ್ರದಲ್ಲಿ ಹೆಚ್ಚು ಮತ ಪಡೆದಿದ್ದ ಅಭ್ಯರ್ಥಿ ಗೆದ್ದರೂ ಸಹ ಮೀಸಲು ಕ್ಷೇತ್ರದಿಂದ ಸೋತ ಅಭ್ಯರ್ಥಿಗಿಂತ ಕಡಿಮೆ ಪಡೆದಿದ್ದಲ್ಲಿ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿ ಸೋಲು ಅನುಭವಿಸಬೇಕಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *