ಮೇ 20ರ ಕಾರ್ಮಿಕ ಮುಷ್ಕರ ಜನರ ಮುಷ್ಕರವಾಗಲಿ – ಡಾ. ಕೆ ಪ್ರಕಾಶ್

ಬೆಂಗಳೂರು : ಮೇ 20 ರಂದು ನಡೆಯುವ ಕಾರ್ಮಿಕರ ಮುಷ್ಕರ ಜನರ ಮುಷ್ಕರವಾಗಿ ಪರಿವರ್ತನೆಯಾಗಬೇಕು. ಆ ನಿಟ್ಟಿನಲ್ಲಿ ಕಾರ್ಮಿಕರು ಜನರ ನಡುವ ಆಳುವ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ತಿಳಿಸುವಂತಾಗಬೇಕು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಡಾ. ಕೆ.ಪ್ರಕಾಶ್‌  ಕರೆ ನೀಡಿದರು.  ಮೇ 

ಪ್ರೀಡಂಪಾರ್ಕ್‌ನಲ್ಲಿ  ಜೆಸಿಟಿಯು ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  ಕೆಲಸದ ಅವಧಿಯನ್ನು ಹೆಚ್ಚಿಸುವ ಕುರಿತು ಬಂಡವಾಳಿಗರು ಮಾತನಾಡುತ್ತಿದ್ದಾರೆ. ಕೆಲಸದ ಅವಧಿಯ ಬಗ್ಗೆ ಮಾತನಾಡುವ ಈ ಬಂಡವಾಳಿಗರು ವೇತನ ಹೆಚ್ಚಿಸುವ ಬಗ್ಗೆ ಮಾತನಾಡುವುದಿಲ್ಲ. ನಾರಾಯಣ ಮೂರ್ತಿಯ ಮೊಮ್ಮನಿಗೆ ನಾಲ್ಕು ಕೋಟಿ ಆಸ್ತಿ ಇದೆ.. ಆದರೆ ಕಾರ್ಮಿಕರಿಗೆ ಕೊಡಲು ಅವರ ಬಳಿ ಹಣ ಇಲ್ಲವೆ? ಕಾರ್ಮಿಕನ‌ ಶ್ರಮದ ಬೆವರ ಹನಿಗೆ ಬೆಲೆ ಕೊಡುವುದಿಲ್ಲವೆ? ಎಂದು ಕುಟುಕಿದರು.

ಲೇಬರ್ ಕೋಡ್ ಗಳಿಗೆ ಮೋದಿ ಸರ್ಕಾರ ತಿದ್ದುಪಡಿ ತರುತ್ತಿದೆ. ಸ್ವದೇಶಿ ಎಂದು ದಾರಿ ತಪ್ಪಿಸುವ ಸರ್ಕಾರ ಬಂಡವಾಳಿಗರ ಜೊತೆ ಸೇರಿ ವಿದೇಶ ಬಂಡಾವಳಿಗರ ಮೂಲಕ ಹೂಡಿಕೆ ಮಾಡುತ್ತಿದೆ. ಮೋದಿ ಸರ್ಕಾರದ ಮುಖವಾಡವನ್ನು ಕಾರ್ಮಿಕರು ಜನರ ಮುಂದೆ ಕಳಚಬೇಕಿದೆ. ಮೇ 20 ರಂದು ನಡೆಯುವ ಮುಷ್ಕರದಲ್ಲಿ ಕಾರ್ಮಿಕರು ಹೆಚ್ಚೆಚ್ಚು ಭಾಗವಹಿಸಬೇಕು, ಪ್ರಚಾರಗೊಳಿಸಬೇಕು ರಾಜ್ಯದ ಪ್ರತಿಯೊಬ್ಬ ಜನರನ್ನು ಈ ಹೋರಾಟ ತಲುಪಬೇಕು ಎಂದರು.

ಇದನ್ನೂ ಓದಿ : ಮೇ ದಿನ: ಚಿಕಾಗೋ ನಗರದ ‘ಹೇಮಾರ್ಕೆಟ್ ಹುತಾತ್ಮರನ್ನು’ ಸ್ಮರಿಸೋಣ ಮೇ 

ವೇದಿಕೆಯ ಮೇಲೆ ಎಐಟಿಯುಸಿಯ ಸತ್ಯಾನಂದ, ಐಎನ್‌ಟಿಯುಸಿಯ ಶಾಮಣ್ಣ ರೆಟ್ಟಿ, ಟಿಯುಸಿಸಿಯ ಶಿವಶಂಕರ್‌, ಎಐಯುಟಿಯುಸಿಯ ರಮಾ, ಎಐಸಿಸಿಟಿಯುನ  ಕ್ಲಿಪ್ಟನ್ ಡಿ, ಸಿಐಟಿಯುನ ಹಿರಿಯ ನಾಯಕ ವಿಜೆಕೆ ನಾಯರ್‌ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ನಾಯಕರು ಭಾಗಿಯಾಗಿದ್ದರು.

ಬೃಹತ್ ಮೆರವಣಿಗೆ : ಕಾರ್ಮಿಕರ ದಿನದ ಭಾಗವಾಗಿ ಟೌನ್‌ ಹಾಲ್‌ನಿಂದ ಫ್ರೀಡಂಪಾರ್ಕ್‌ ವರೆಗೆ ಮೆರವಣಿಗೆ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಕಾರ್ಮಿಕರು ಕೇಂದ್ರ – ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ಖಂಡಿಸಿದರು. ಕೆಲಸದ ಅವಧಿಯ ಹೆಚ್ಚಳ ವಿರೋಧಿಸಿ, ಕನಿಷ್ಠ ವೇತನ ಜಾರಯಾಗಲಿ ಎಂಬ ಘೋಷಣೆಗಳನ್ನು ಮೊಳಗಿಸಿದರು.

ಇದನ್ನೂ ನೋಡಿ : ಮೇ ದಿನದ ವಿಶೇಷ | ಕನಿಷ್ಠ ವೇತನಕ್ಕೆ ಯಾಕಿಷ್ಟು ವಿಳಂಬ – ಮೀನಾಕ್ಷಿ ಸುಂದರಂ Janashakthi Media ಮೇ 

 

 

Donate Janashakthi Media

Leave a Reply

Your email address will not be published. Required fields are marked *