ಮತ್ತಷ್ಟು ಕಠಿಣಗೊಂಡ ಕೋವಿಡ್ ನಿಯಮಗಳು: ಮದುವೆಗೆ ಪಾಸ್ ಕಡ್ಡಾಯ, ಜಾತ್ರೆಗೆ ನಿರ್ಬಂಧ

ಬೆಂಗಳೂರು: ‘ಕೋವಿಡ್‌ ತೀವ್ರರೀತಿಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ್ಯಂತ ವಿವಿದೆಡೆ ನಡೆಯಲಿರುವ ಜಾತ್ರೆಗಳನ್ನು ನಿಷೇಧಿಸಲಾಗಿದೆ. ಜಾತ್ರೆಗಳು ನಡೆದರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್‌ ಪರಿಸ್ಥಿತಿ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಜೊತೆ ಜಿಲ್ಲಾಧಿಕಾರಿಗಳೊಂದಿಗೆ ಇಂದು ವಿಡಿಯೊ ಸಂವಾದ ನಡೆಸಿದರು.

ಇದನ್ನು ಓದಿ: ಭಾರತದಲ್ಲಿ ಈಗ ಹೆಚ್ಚು ಕ್ರೂರವಾದ ಎರಡನೇ ಕೊವಿಡ್-19 ಅಲೆ – ಎ.ಐ.ಪಿ.ಎಸ್.ಎನ್

ಮದುವೆ ಹಾಗೂ ಕಾರ್ಯಕ್ರಮಕ್ಕೆ ಬರುವವರ ಬಳಿ ಎಲ್ಲರಿಗೂ ಪಾಸ್‌ ಕಡ್ಡಾಯಗೊಳಿಸಿದ ಸರಕಾರ ಕಲ್ಯಾಣ ಮಂಟಪದ ಒಳಗೆ 100 ಜನ ಹಾಗೂ ಹೊರಗೆ 200 ಜನರು ಮಾತ್ರ ಸೇರಬೇಕೆಂದು ತಿಳಿಸಿದೆ. ನಿಯಮ ಉಲ್ಲಂಘಿಸಿದಲ್ಲಿ ಎಫ್‌ಐಆರ್‌ ದಾಖಲಿಸಲು ತಿಳಿಸಲಾಗಿದೆ. ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ಕಲ್ಯಾಣ ಮಂಟಪಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲು ಸಚಿವ ಆರ್.‌ ಅಶೋಕ ತಿಳಿಸಿದ್ದಾರೆ.

‘ಕಲ್ಯಾಣ ಮಂಟಪ ಬುಕ್‌ ಮಾಡಲು ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯ ಮತ್ತು ನಿಗದಿತ ಸಂಖ್ಯೆಯಲ್ಲಿ ಪಾಸ್‌ಗಳನ್ನು ವಿತರಿಸಲಿದ್ದಾರೆ. ಈಗಾಗಲೇ ಬುಕ್‌ ಮಾಡಿದ್ದರೆ ಸಮಸ್ಯೆ ಇಲ್ಲ, ಅಲ್ಲದೆ ಜನರು ಗುಂಪುಗೂಡುವುದು ಕಂಡು ಬಂದಲ್ಲಿ ಕಠಿಣವಾಗಿ ಕ್ರಮಕೈಗೊಳ್ಳಬೇಕು’ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸತತವಾಗಿ ಎರಡು ಗಂಟೆಗಳಿಂದ ವಿಕಾಸಸೌಧದಲ್ಲಿ ಸಚಿವರ ಸಭೆ ನಡೆಯಿತು.

Donate Janashakthi Media

Leave a Reply

Your email address will not be published. Required fields are marked *