ಮತಾಂಧತೆಯ ಪರಮಾವಧಿ ಇದು; ಅತ್ಯಂತ ಆತಂಕದ ನೋವಿನ ಸುದ್ದಿಯೂ ಕೂಡ..!

ಹ ರಾ ಮಹಿಶ

ಮನುಷ್ಯನು ಇತರ ಮನುಷ್ಯರನ್ನು ಶೋಷಿಸಿ‌‌ ಸುಖಪಡಲು ಸೃಷ್ಟಿಸಿಕೊಂಡ “ಈ ದೇವರು ಧರ್ಮ ಧರ್ಮಗ್ರಂಥ”ಗಳ ಅಮಲೇರಿಸಿಕೊಂಡವರು ಸರ್ಕಾರ ರಚಿಸಿ ದೇಶ ಆಳಿದರೆ ಇಂಥ ಸಾಲುಸಾಲು ದುರಂತಗಳು ಸಂಭವಿಸುತ್ತವೆ..!

ಇವರ ಹೆಸರು ಮಜಿದ್ರೇಜಾ ರೆಹ್ನಾವಾರ್ಡ್. ಇರಾನಿನಲ್ಲಿ ನಡೆಯುತ್ತಿರುವ ಹಿಜಾಬ್ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಇನ್ನೂ ಹತ್ತಾರು ವರ್ಷ ಬಾಳಿ ಬದುಕಬೇಕಾಗಿದ್ದ ಈ 23 ವರ್ಷದ ಕುಸ್ತಿಪಟುವನ್ನು “ಈತ ದೇವರು ಧರ್ಮದ ವಿರುದ್ಧ ಹೋರಾಡುತ್ತಿದ್ದಾನೆ” ಎಂದು ಆರೋಪಿಸಿ ಖುದ್ದು ಇರಾನ್ ಸರ್ಕಾರ ಮೊನ್ನೆ ಈತನನ್ನು ಗಲ್ಲಿಗೇರಿಸಿದೆ..!

ಸಾಯಿಸಿದವರು ನಮ್ಮವರಲ್ಲ; ಸತ್ತವನು ನಮ್ಮವನು.

ಅವರು ಸಾಯಿಸಿ ಸತ್ತರು; ಈತನು ಸತ್ತು ನಮ್ಮೊಳಗೆ ಬದುಕಿದ್ದಾನೆ. ನಮ್ಮ ಹೃದಯ ಮೆದುಳುಗಳಿಗೆ “ಧರ್ಮದ” ಖಾಯಿಲೆ ಹತ್ತದಂತೆ ನೋಡಿಕೊಳ್ಳಬೇಕಿದೆ‌..!

ಭಾರತದ ಸಂವಿಧಾನಕ್ಕೆ ನಿತ್ಯವೂ ಸಾವಿರ ಸಾವಿರದ ಶರಣು ಹೇಳಬೇಕು. ಬಾಬಾಸಾಹೇಬರ ಭಾರತ ಸಂವಿಧಾನ ಇರುವ ಜಾಗದಲ್ಲಿ ಅಕಸ್ಮಾತ್ ಈ ಧರ್ಮ ದೇವರು ಧರ್ಮಗ್ರಂಥಗಳೇನಾದರೂ ಆಕ್ರಮಿಸಿ ಅದರ ಅಮಲೇರಿದರು ದೇಶ ರಾಜ್ಯ ಆಳಿದರೆ ಅಲ್ಲಿಗೆ ಎಲ್ಲರ ಕಥೆಯೂ ಮುಗಿದಂತೆ..!

ಎಲ್ಲರಿಗೂ ಎಲ್ಲದ್ದಕ್ಕೂ ರಕ್ಷೆಯಾಗಿರುವ ನಮ್ಮ ಪವಿತ್ರ  ಸಂವಿಧಾನವನ್ನು ತೆಗೆಯಲು ಮನುವಾದಿಗಳಿಗೆ ಅವರ ರಾಜಕೀಯ ಬಲದಿಂದ ಮಾತ್ರ ಸಾಧ್ಯ..! ನಾವೂ ನಮ್ಮ ಸಂವಿಧಾನವನ್ನು ಉಳಿಸಿಕೊಳ್ಳಲೂ ಬಹುಜನರಿಗೆ ರಾಜಕೀಯ ಬಲವೇ ಬೇಕು..! ಅದೇ ನಮ್ಮ ಉಸಿರಾಟ ಅದೇ ಹೋರಾಟವಾಗಬೇಕು..!

Donate Janashakthi Media

Leave a Reply

Your email address will not be published. Required fields are marked *