ತುಮಕೂರು: ಗುತ್ತಿಗೆ ಕಾರ್ಮಿಕರ ಸೇವೆಗಳನ್ನು ಖಾಯಂ ಗೊಳಿಸಬೇಕು, ಸುಪ್ರೀಂ ಕೋರ್ಟ್ ತೀರ್ಪಿನಂತೆ ಗುತ್ತಿಗೆ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಹಾಗೂ ಮತ್ತಲವೂ ಬೇಡಿಕೆಗಳನ್ನು ಪೂರೈಸಬೇಕೆಂದು ಒತ್ತಾಯಿಸಿ, ಸಿಐಟಿಯು ನೇತ್ರತ್ವದಲ್ಲಿ ಮುನಿಸಿಪಲ್ ಮತ್ತು ಅಸ್ವತ್ರೆ ಕಾರ್ಮಿಕರು ತುಮಕೂರು ನಗರದ ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿಗಳ ಕಛೇರಿ ನೂರಾರು ಕಾರ್ಮಿಕರು ಬೃಹತ್ ಮೇರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಛೇರಿ ಎದರು ಧರಣಿ ನಡೆಸಿದರು.
ಎಲ್ಲಾ ಗುತ್ತಿಗೆ ಕಾರ್ಮಿಕರ ಸೇವೆಗಳನ್ನು ಖಾಯಂ ಗೊಳಿಸಬೇಕು, ಗುತ್ತಿಗೆ ಕಾರ್ಮಿಕರಿಗೆ ಸುಪ್ರೀಂ ಕೋರ್ಟ್ ತೀರ್ಪಿನಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಗುತ್ತಿಗೆ ಕಾರ್ಮಿಕರ ಸೇವೆ ಸಹಕಾರಿ ಸಂಘದಡಿಯಲ್ಲಿ ತರುವ ಯೋಜನೆಯನ್ನು ನಿಲ್ಲಿಸಬೇಕು. ಎಲ್ಲಾ ಗುತ್ತಿಗೆ ಕಾರ್ಮಿಕರ ನೇರ ಪಾವತಿಯಡಿಯಲ್ಲಿ ನೇಮಿಸಬೇಕು. ರಾಜ್ಯ ಸರ್ಕಾರ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡುವ ಕಾರ್ಮಿಕ ಇಲಾಖೆ ಸಿದ್ದಪಡಿಸಿರುವ ಗುತ್ತಿಗೆ ಕಾರ್ಮಿಕರ ಖಾಯಂಮಾತಿಗೆ ಸಂಬಂದಿಸಿದ ಕಾಯಿದೆಯನ್ನು ಚಳಿಗಾಲದ ವಿಧಾನ ಸಭಾ ಅಧಿವೇಶನದಲ್ಲಿ ಮಂಡಿಸಿ ಅಂಗೀಕರಿಸ ಬೇಕು. ಹತ್ತಾರು ವರ್ಷ ಕೇಲಸ ಮಾಡಿ ಸೇವೆಯಲ್ಲಿರುವಾಗಲೆ ಮರಣ ಹೋಂದುವ ಕಾರ್ಮಿಕರ ಅವಲಂಬಿತರ ಕುಟುಂಬ ಬೀದಿಗೆ ಬಿಳುವುದನ್ನು ತಡೆದು ಅವಲಂಬಿತರಿಗೆ ಕೆಲಸ ನೀಡಬೇಕು. ಈ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಿನಾಂಕ 09-12- 2024 ರಂದು ಸಿಐಟಿಯು ನೇತ್ರತ್ವದಲ್ಲಿ ಮುನಿಸಿಪಲ್ ಮತ್ತು ಅಸ್ವತ್ರೆ ಕಾರ್ಮಿಕರು ತುಮಕೂರು ನಗರದ ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿಗಳ ಕಛೇರಿ ನೂರಾರು ಕಾರ್ಮಿಕರು ಬೃಹತ್ ಮೇರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಛೇರಿ ಎದರು ಸಂಜೆ 5 ಗಂಟೆಯ ತನಕ ಧರಣಿ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಿನಾಕ್ಷಿ ಸುಂದರಂ, ʼನಿರಂತರ ಸ್ವರೂಪದ ಕೆಲಸಗಳನ್ನು ಗುತ್ತಿಗೆ/ ಹೊರ ಗುತ್ತಿಗೆ ಅಡಿಯಲ್ಲಿ ದುಡಿಸುವ ಮತ್ತು ಗುತ್ತಿಗೆ ಕಾರ್ಮಿಕರಿಗೆ ಸಮಾನ ವೇತನ ನೀಡದೆ ದುಡಿಸುತ್ತಿರುವ ಸರ್ಕಾರದ ಧೊರಣೆಯು ಕಾನೂನು ವಿರೋಧಿ ನಡೆ. ಈ ಕಾರ್ಮಿರನ್ನು ಸಹಕಾರ ಸಂಘದಡಿಯಲ್ಲಿ ತರುವ ಮೂಲಕ ಶಾಶ್ವತವಾಗಿ ಖಾಯಂ ಆಗದೆ ಇರುವಂತೆ ಮಾಡುವುದು ಸರಿಯಲ್ಲ , ಎಲ್ಲಾ ಗುತ್ತಿಗೆ / ಹೊರಗುತ್ತಿಗೆ ಪದ್ದತಿಯಡಿ ದುಡಿಯುತ್ತಿರುವ ಎಲ್ಲಾರ ಸೇವೆಗಳನ್ನು ಖಾಯಂ ಮಾಡುಬೇಕುʼ ಎಂದು ಅಗ್ರಹಿಸಿದರು.
ನೇರ ಪಾವತಿ ಇರುವವಾಗ – ಸಹಕಾರ ಸಂಘ ಯಾಕೆ?
ಮುನಿಸಿಪಾಲಿಟಿಗಳಲ್ಲಿ ನೇರ ಪಾವತಿಯಡಿಯಲ್ಲಿ ಪೌರ ಕಾರ್ಮಿಕರನ್ನು ತಂದು ಖಾಯಂ ಮಾಡಿದಂತೆ ,ಇತರೆ ಕಸದ ವಾಹನ ಚಾಲಕರು, ಸಹಾಯಕರು, ಲೋಡರ್ಸ್, ನೀರು ಸರಬರಾಜು ನೌಕರರು, ಜೆ.ಸಿ.ಬಿ. ವಾಹನ ಚಾಲಕರು, ಘನ ತ್ಯಾಜ್ಯ ವಿಲೇವಾರಿ ಘಟಕದ ಕಾರ್ಮಿಕರು, ಯು.ಜಿ.ಡಿ ಕಾರ್ಮಿಕರು, ಪಾರ್ಕ ಕಾರ್ಮಿಕರು, ಶೌಚಾಲಯ ಕಾರ್ಮಿಕರು, ಕಂಪ್ಯೂಟರ್ ಅಪರೇಟರ್‌ಗಳ ಸೇವೆಗಳನ್ನು ನೇರಪಾವತಿಯಡಿ ತಂದು ಹಂತ ಹಂತವಾಗಿ ಖಾಯಂ ಮಾಡಬೇಕು. ಇದನ್ನು ಮಾಡದೆ ಸಹಕಾರ ಸಂಘದ ಅಡಿಯಲ್ಲಿ ತರುವುದು ಯಾಕಾಗಿ ಎಂದು ಖಾರವಾಗಿ ಪ್ರಶ್ನಿಸಿದರು. ನೀರು ಸರಬರಾಜು ನೌಕರರ ಸಂಘದ ಕೆ. ಕುಮಾರ್ ಮಾತನಾಡಿ ನಮಗೆ ಮಲತಾಯಿ ಧೋರಣೆ ಯಾಕೆ , ನಮ್ಮನ್ಮು ತಾರತಮ್ಯ ಮಾಡಬೇಡಿ ಎಂದು ಮಿನಾಕ್ಷಿ ಸುಂದರಂ ಮನವಿ ಮಾಡಿದರು.
ಇದನ್ನೂ ಓದಿ : ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ವಿಚಾರ: ನ್ಯಾಯಾಲಯದ ಆದೇಶದ ಕುರಿತು ಸದನದಲ್ಲಿ ಮಂಡನೆ
ಕಸದ ಅಟೋಚಾಲಕರು, ಸಹಾಯಕರು, ಲೋಡರ್‍ಗಳು, ಮತ್ತು ಕ್ಲೀನರ್‌ಗಳ ಸಂಘ ಪ್ರಧಾನ ಕಾರ್ಯದರ್ಶಿಗಳಾದ ಮಾರುತಿ ಮಾತನಾಡಿ, ʼನಾವು ಕಸದಲ್ಲೆ ಬದುಕು ಸಾಗಿಸುತ್ತಿದ್ದವೆ. ನಮ್ಮನ್ನು ಕಸದಂತೆ ಕಾಣದೆ ಸರ್ಕಾರ ಸಮಾನ ವೇತನ ನೀಡಿ , ನೇರ ಪಾವತಿಗೆ ತನ್ನಿ.
ವಾಹನ ಚಾಲಕರ ಸಂಘದ ಪ್ರಕಾಶ್, ಯುಜಿಡಿ ಕಾರ್ಮಿಕರ ಸಂಘದ ಸಂಜೀವಯ್ಯ, ಕಂಪ್ಯೂಟರ್ ಅಪ್‍ರೇಟರ್ ಗಳ ಸಂಘದ ಶ್ರೀಮತಿ ಸವಿತಾ ಅಸ್ವತ್ರೆ ಕಾರ್ಮಿಕರ ಸಂಘದ ನೇತ್ರವಾತಿ ,ಮುನಿಪಲ್ ಕಾರ್ಮಿಕರ ಸಂಘದ ರಘು ಬಿಳಿಗೇರೆ , ಸಿರಾ ಪೌರ ಕಾರ್ಮಿಕರ ಸಂಘದ ರಾಮಚಂದ್ರ, ಸಿಐಟಿಯು ಎನ್.ಕೆ. ಸುಬ್ರಮಣ್ಯಂ ಪೀಟ್ ವೇಲ್ ಕಾರ್ಮಿಕರ ಸಂಘ ಪ್ರಧಾನ ಕಾರ್ಯಧರ್ಶಿ ಸುಜೀತ್ ನಾಯಕ್, ರಂಗಧಾಮಯ್ಯ ಅವರ ಮಾತನಾಡಿದರು .
ಮನವಿ ಸ್ವಿಕರಿಸಲು ಬಾರದ ಅಧಿಕಾರಿಗಳು
ಬೆಳೆಗ್ಗೆಯಿಂದ ಧರಣಿ ನಡೆಸಿದ ಕಾರ್ಮಿಕರ ಮನವಿ ಸ್ವಿಕರಿಸಲು ಜಿಲ್ಲಾಯ ಪ್ರಮುಖ ಅಧಿಕಾರಿಗಳು ಬಾರದೆ ಉಪ ತಹಸಿಲ್ದಾರ್ ಅವರು ಬಂದಾಗ, ಜಿಲ್ಲಾಧಿಕಾರಿಳೇ ಬರಬೇಕು ಎಂದು ಹಿಂದಕ್ಕೆ ಕಳುಹಿಸಿದರು. ಅದಾದ ನಂತರ ಜಿಲ್ಲಾ ಅಡಳಿತಾಧಿಕಾರಿಗಳಾದ ಮೋಹನ್ ಅವರು ಬಂದು ಮನವಿ ಸ್ವೀಕರಿಸಿ ಜಿಲ್ಲಾ ಯೋಜನಾ ನಿರ್ದೇಶಕರ ಕಛೇರಿಯಲ್ಲಿ 5 ಗಂಟೆಗೆ ಸಭೇ ನಡೆಸುವ ಭರವಸೆ ನೀಡಿದರು. ಪ್ರತಿಭಟನಾಕಾರರು ಸಂಜೆ 5 ತನಕ ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿನಡೆಸಿದರು.
ತುಮಕೂರು ಮಹಾನಗರ ಪಾಲಿಕೆಯ ಕಸದ ಅಟೋ ಚಾಲಕರು ಮತ್ತು ಸಹಾಯಕರ ಸಂಘದ ಖಜಾಂಚಿ ಮಂಜುನಾಥ್, ಶ್ರೀನಿವಾಸಮೂರ್ತಿ/ಇರ್ಪಾನ್, ತುಮಕೂರು ಜಿಲ್ಲಾ ನೀರು ಸರಬರಾಜು ನೌಕರರ ಸಂಘ(ರಿ) ಖಜಾಂಚಿ, ಚಂದ್ರಪ್ಪ, ಕಾರ್ಯಧರ್ಶಿ ಮಂಜುನಾರ್ಥ, ಮಹಾ ನಗರ ಪಾಲಿಕೆ ವಾಹನ ಚಾಲಕರ ಸಂಘದ ಕಾರ್ಯಧರ್ಶಿ ಅಪ್ಸರ್, ಖಜಾಂಚಿ, ಎನ್. ನಾಗರಾಜು, ಮತ್ತಿತರರು ಮುಂದಾಳತ್ವ ವಹಿಸಿದ್ದರು.
ಸಂಜೆ 5 ಗಂಟೆ ಜಿಲ್ಲಾ ನಗರಾಭಿವೃದ್ದಿ ಕೋಶದ, ನೀರ್ದೇಶಕರಾದ ಸಿ.ಯೋಗನಂದ ಅವರ ಜೋತೆಯಲ್ಲಿ ಪ್ರತಿಭಟನಾಕಾರರ ಮುಖಂಡರ ಸಭೆ ನಡೆಸಿ ಅಹವಾಲುಗಳನ್ನು ಆಲಿಸಿದರು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಭೆ ನಡೆಸುವುಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಇದಕ್ಕೆ ಮುನ್ನ ಮಹಾ ನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ನಿತ್ಯದ ಸಮಸ್ಯೆಗಳನ್ನು ಬಗೆಹರಿಸಲು 3 ತಿಂಗಳಿಗೆ ಒಮ್ಮೆ ಸಭೆನಡೆಸುವಂತೆ ಮತ್ತು ಕೆಲಸ ಮಾಡುತ್ತ ಮರಣ ಹೋಂದಿರುವವರಿಗೆ ಕೆಲಸ ನೀಡುವಂತೆ , ಉತ್ತಮ ತಿಂಡಿ ನೀಡುವಂತೆ ಒತ್ತಾಯಿಸಿದರು.
ಇದನ್ನೂ ನೋಡಿ : ಪರಿಸರ ಅರಿವು ಅಭಿಯಾನ ಉಪನ್ಯಾಸ|ಹವಾಮಾನ ಬದಲಾವಣೆ : ಕೃಷಿ ಮತ್ತು ಆಹಾರ ಭದ್ರತೆ Janashakthi Media