3000 ಮಹಿಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ: ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಮೊಟ್ಟ ಮೊದಲ ಬಾರಿಗೆ ಐತಿಹಾಸಿಕ ಕಾರ್ಯಕ್ರಮವೊಂದನ್ನು ರಾಜ್ಯದಲ್ಲಿ ಆಯೋಜಿಸಲಾಗಿದ್ದೂ, 3000 ಮಹಿಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ, ವಿಕಲಚೇತನರಿಗೆ ವಿವಿಧ ಸಲಕರಣೆಗಳ ವಿತರಣೆ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ. ಮಹಿಳೆ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಬೆಳಗವೈಯ ಸಿಪಿಎಡ್ ಮೈದಾನದಲ್ಲಿ ಮಾರ್ಚ್ 24ರಂದು ಬೆಳಿಗ್ಗೆ 3000 ಗರ್ಭಿಣಿಯರಿಗೆ ಸೀರೆ, ಹೂವು, ಹಣ್ಣು ಕಾಯಿ, ಅರಿಶಿನ-ಕುಂಕುಮ, ಬಳೆ ಹೀಗೆ ಪಂಚ ಬಗೆಯ ಮಂಗಳಕರ ಸಾಮಗ್ರಿಗಳನ್ನೊಳಗೊಂಡು ಉಡಿ ತುಂಬುವ ಶಾಸ್ತ್ರದೊಂದಿಗೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಲಾಗುವುದು ಎಂದು ಬೆಳಗಾವಿಯಲ್ಲಿ ಮಾತನಾಡಿದ ಅವರು ತಿಳಿಸಿದ್ದಾರೆ.

ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ 1000 ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಕಾರ್ಯಕ್ರಮದಲ್ಲಿ ಭಾಗವಹಿಸಲ್ಲಿದ್ದು, ವಿಕಲಚೇತನರಿಗೆ – ತ್ರಿಚಕ್ರ ಸ್ಕೂಟರ್ ವಿತರಣೆ ಮಾಡಲಾಗುವುದು.

ಇದನ್ನೂ ಓದಿ: ಕಾಡುವ ವಲಸಿಗ ಫಿಲಂಗಳು -2 : “ದಿ ಪಾರ್ಟಿ ಈಸ್ ಓವರ್” ಮತ್ತು “ಸಾಮಿಯ”

ಸ್ತ್ರೀಶಕ್ತಿ ಗುಂಪುಗಳನ್ನು ಉತ್ತೇಜಿಸಲು ವಿಭಾಗೀಯ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ ಮೇಳವನ್ನು ಆಯೋಜಿಸಲಾಗಿದ್ದು, ಬೆಳಗಾವಿ, ಹಾವೇರಿ, ಬಾಗಲಕೋಟೆ, ವಿಜಯಪುರ, ಕಾರವಾರ, ಗದಗ ಹಾಗೂ ಧಾರವಾಡ ಹೀಗೆ 7 ಜಿಲ್ಲೆಗಳ ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ಮತ್ತು ಜಿಲ್ಲಾ ಪಂಚಾಯತ್ ಎನ್.ಆರ್.ಎಲ್.ಎಮ್ ಅಡಿ ಸ್ತ್ರೀ ಶಕ್ತಿ ಗುಂಪುಗಳು ಪಾಲ್ಗೊಂಡು ಸದರಿ ಮಳಿಗೆಗಳಲ್ಲಿ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ, ಬಟ್ಟೆ ವ್ಯಾಪಾರ, ತಿಂಡಿ-ತಿನಿಸುಗಳ ವ್ಯಾಪಾರ, ಲಂಬಾಣಿ ಉಡುಪು, ಬಿದಿರಿನಿಂದ ತಯಾರಿಸಿದ ವಸ್ತುಗಳು, ವಿವಿಧ ರೀತಿಯ ಬ್ಯಾಗಗಳು ಇತ್ಯಾದಿ ವಸ್ತುಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಬೇಟಿ ಬಚಾವೊ, ಬೇಟಿ ಫಡಾವೊ ಕಾರ್ಯಕ್ರಮದಡಿ ಹೆಣ್ಣು ಮಗುವಿನ ಹೆಸರಿನಲ್ಲಿ ಗಿಡವನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಇದನ್ನೂ ನೋಡಿ: ವಚನಾನುಭವ – 23 ಅನ್ನವ ನೀಡುವವರಿಂಗೆ ಧಾನ್ಯವೇ ಶಿವಲೋಕ | ಅಕ್ಕಮಹಾದೇವಿ ವಚನ Janashakthi Media

Donate Janashakthi Media

One thought on “3000 ಮಹಿಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ: ಲಕ್ಷ್ಮೀ ಹೆಬ್ಬಾಳಕರ್

  1. ಕಾಂಗ್ರೆಸ್ ನಲ್ಲಿ ವೈಚಾರಿಕವಾಗಿ ಮಾತನಾಡುವವರು ಇದ್ದಾರೆ ಎನ್ನುವ ಕಾರಣಕ್ಕೆ ಬುದ್ಧಿಜೀವಿಗಳ ನಡುವೆ ಒಂದಷ್ಟು ಡಿಸ್ಟೆನ್ಸ್ ಕಡಿಮೆ ಇತ್ತು. ಇಂತಹ ಕಾರ್ಯಕ್ರಮಗಳಿಂದ ಅವೆಲ್ಲ ಕಳಚಿ ಬೀಳುತ್ತಿವೆ. ಸೀರೆ, ಬಳೆ, ಹರಿಶಿಣ- ಕುಂಕುಮ, ಹೂ, ಹಣ್ಣು-ಕಾಯಿಗಳಂತಹ ‘ಮಂಗಳಕರ’ ವಸ್ತುಗಳನ್ನು ಕೊಟ್ಟು ಉಡಿ ತುಂಬುವ ಶಾಸ್ತ್ರದೊಂದಿಗೆ ಸೀಮಂತ ಕಾರ್ಯಕ್ರಮ ನಡೆಸಿ ಕೊಡುತ್ತಾರಂತೆ. ಮೊದಲಿನಿಂದಲೂ ಕಾಂಗ್ರೆಸ್ ಸಾಮಾನ್ಯ ಜನರನ್ನು ಯಾಮಾರಿಸಿಕೊಂಡು ಬಂದಿರುವುದು ಹೀಗೆಯೇ. ಅನೇಕ ಹೆಣ್ಣು ಮಕ್ಕಳು ಹೆರಿಗೆಯ ಸಮಯದಲ್ಲಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ತಾಯಿಗೆ ಅಥವಾ ಮಗುವಿಗೆ ತೊಂದರೆ ಆಗಬಹುದು. ಅವೆಲ್ಲ ಸಾವುನೋವುಗಳಲ್ಲಿ ಕೊನೆಗೊಳ್ಳಬಹುದು. ಅಂತಹವರನ್ನು ಗುರುತಿಸಿ ಆರ್ಥಿಕ ಸಹಾಯವನ್ನು ಮಾಡುವುದು ಜನಪರ ಸರಕಾರವೊಂದರ ಕಾರ್ಯಕ್ರಮ ಆಗಬೇಕಿತ್ತಲ್ಲವೆ? ಜನರಲ್ಲಿರುವ ನಂಬಿಕೆಗಳೇ ಬೇರೆ, ಅವರ ಆರ್ಥಿಕ ಸಂಕಷ್ಟಗಳೇ ಬೇರೆ. ವಾಸ್ತವ ತಳಹದಿಯ ಮೇಲೆ ಯೋಜನೆಗಳು ರೂಪುಗೊಳ್ಳಬೇಕು. ನಂಬಿಕೆಯ ಮೇಲಲ್ಲ.

Leave a Reply

Your email address will not be published. Required fields are marked *