ಮಣಿಪುರ | ಲೂಟಿ ಮಾಡಿದ 4,000 ಶಸ್ತ್ರಾಸ್ತ್ರಗಳು ಇನ್ನೂ ಜನರ ಕೈಯ್ಯಲ್ಲಿ ಇವೆ: ಲೆಫ್ಟಿನೆಂಟ್ ಜನರಲ್ ಆರ್. ಪಿ. ಕಲಿತಾ

ಗುವಾಹಟಿ: ಮಣಿಪುರದಲ್ಲಿ ನಡೆದ ಜನಾಂಗೀಯ ಘರ್ಷಣೆಯನ್ನು “ರಾಜಕೀಯ ಸಮಸ್ಯೆ” ಎಂದು ಬಣ್ಣಿಸಿರುವ ಪೂರ್ವ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಣಾ ಪ್ರತಾಪ್ ಕಲಿತಾ ಅವರು, “ಭದ್ರತಾ ಪಡೆಗಳಿಂದ ಲೂಟಿ ಮಾಡಿದ ಸುಮಾರು 4,000 ಶಸ್ತ್ರಾಸ್ತ್ರಗಳನ್ನು ಸಾಮಾನ್ಯ ಜನರಿಂದ ವಶಪಡಿಸಿಕೊಳ್ಳದ ಹೊರತು ಹಿಂಸಾಚಾರದ ಘಟನೆಗಳು ಮುಂದುವರಿಯುತ್ತವೆ” ಎಂದು ಮಂಗಳವಾರ ಎಚ್ಚರಿಸಿದ್ದಾರೆ.

ಭಾರತವು ಮಿಜೋರಾಂ ಮತ್ತು ಮಣಿಪುರದಲ್ಲಿ ಸಾಮಾನ್ಯ ಗ್ರಾಮಸ್ಥರು, ಸೇನೆ ಅಥವಾ ಪೊಲೀಸರು ಸೇರಿದಂತೆ ಮಯನ್ಮಾರ್‌ನಿಂದ ಆಶ್ರಯ ಪಡೆಯುವ ಯಾರಿಗಾದರೂ ಆಶ್ರಯ ನೀಡುತ್ತಿದೆ, ಆದರೆ ಉಗ್ರಗಾಮಿ ಗುಂಪುಗಳು ಅಥವಾ ಮಾದಕವಸ್ತು ಕಳ್ಳಸಾಗಣೆದಾರರು ಶಸ್ತ್ರಸಜ್ಜಿತರಲ್ಲ ಎಂದು ಈಸ್ಟರ್ನ್ ಕಮಾಂಡ್ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಹೇಳಿದ್ದಾರೆ.

ಇದನ್ನೂ ಓದಿ: ಪರೀಕ್ಷಾಅಕ್ರಮಗಳನ್ನು ಎಸಗುವವರಿಗೆ ಇನ್ನುಂದೆ ₹10 ಕೋಟಿ ದಂಡ, 12 ವರ್ಷ ಶಿಕ್ಷೆ

“ನಮ್ಮ ಪ್ರಯತ್ನಗಳು ಹಿಂಸಾಚಾರವನ್ನು ನಿಯಂತ್ರಿಸುವುದು ಮತ್ತು ರಾಜಕೀಯ ಸಮಸ್ಯೆಯ ಶಾಂತಿಯುತ ಪರಿಹಾರಕ್ಕಾಗಿ ಸಂಘರ್ಷ ನಡೆಸುತ್ತಿರುವ ಎರಡೂ ಕಡೆಯವರನ್ನು ಪ್ರೇರೇಪಿಸುವುದು. ಏಕೆಂದರೆ ಅಂತಿಮವಾಗಿ, ಸಮಸ್ಯೆಗೆ ರಾಜಕೀಯ ಪರಿಹಾರವಿದೆ” ಎಂದು ಮಂಗಳವಾರ ಗುವಾಹಟಿ ಪ್ರೆಸ್ ಕ್ಲಬ್‌ನಲ್ಲಿ ಕಲಿತಾ ಅವರು ಆಯೋಜಿಸಿದ್ದ ಸಂವಾದದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಾಸ್ತವ ಪರಿಸ್ಥಿತಿಗೆ ಸಂಬಂಧಿಸಿದಂತೆ, ಭಾರತೀಯ ಸೇನೆಯ ಆರಂಭಿಕ ಉದ್ದೇಶವು ಮನೆಗಳಿಂದ ಸ್ಥಳಾಂತರಗೊಂಡ ಜನರಿಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುವುದಾಗಿತ್ತು ಎಂದು ಅವರು ಹೇಳಿದ್ದಾರೆ. “ಆನಂತರ, ನಾವು ಹಿಂಸಾಚಾರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೇವೆ. ಅದರಲ್ಲಿ ನಾವು ಹೆಚ್ಚಾಗಿ ಯಶಸ್ವಿಯಾಗಿದ್ದೇವೆ. ಆದರೆ ಎರಡು ಸಮುದಾಯಗಳಾದ ಮೈತಿಗಳು ಮತ್ತು ಕುಕಿಗಳ ನಡುವಿನ ಧ್ರುವೀಕರಣದಿಂದಾಗಿ, ಕೆಲವು ವಿರಳ ಘಟನೆಗಳು ಅಲ್ಲಿ ಇಲ್ಲಿ ನಡೆಯುತ್ತಲೇ ಇರುತ್ತವೆ” ಎಂದು ಕಲಿತಾ ಹೇಳಿದ್ದಾರೆ.

ಘರ್ಷಣೆಗಳು ಆರಂಭವಾಗಿ ಆರೂವರೆ ತಿಂಗಳು ಕಳೆದರೂ ಸಹ ಮಣಿಪುರದಲ್ಲಿ ಏಕೆ ಸಹಜ ಸ್ಥಿತಿಗೆ ಮರಳಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ರಾಜ್ಯದಲ್ಲಿ ವಾಸಿಸುವ ಮೂರು ಸಮುದಾಯಗಳಾದ ಮೈತೆಯಿ, ಕುಕಿ ಮತ್ತು ನಾಗ ನಡುವೆ ಕೆಲವು ಪಾರಂಪರಿಕೆ ಸಮಸ್ಯೆಗಳಿವೆ. 1990 ರ ದಶಕದಲ್ಲಿ ಕುಕಿಗಳು ಮತ್ತು ನಾಗಾಗಳ ನಡುವೆ ಘರ್ಷಣೆಗಳು ನಡೆದಿದ್ದು, ಸುಮಾರು 1,000 ಜನರು ಸಾವನ್ನಪ್ಪಿದ್ದರು” ಎಂದು ಲೆಫ್ಟಿನೆಂಟ್ ಜನರಲ್ ಗಮನಸೆಳೆದಿದ್ದಾರೆ.

ಇದನ್ನೂ ಓದಿ: ಸುಳ್ಳು ಜಾಹಿರಾತು ನೀಡಿ ದಾರಿ ತಪ್ಪಿಸಿದರೆ 1 ಕೋಟಿ ದಂಡ ಹಾಕುತ್ತೇವೆ: ಪತಂಜಲಿಗೆ ಸುಪ್ರೀಂಕೋರ್ಟ್‌ ಎಚ್ಚರಿಕೆ

“ಈಗ ಏನಾಯಿತು ಎಂದರೆ ಎರಡೂ ಸಮುದಾಯಗಳು ಸಂಪೂರ್ಣವಾಗಿ ಧ್ರುವೀಕರಣಗೊಂಡಿವೆ. ಹಿಂಸಾಚಾರದ ಮಟ್ಟ ಕಡಿಮೆಯಾದರೂ, ವಿವಿಧ ಪೊಲೀಸ್ ಠಾಣೆಗಳು ಮತ್ತು ಇತರ ಸ್ಥಳಗಳಿಂದ 5,000 ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗಲಾಗಿದೆ. ಅದರಲ್ಲಿ ಕೇವಲ 1,500 ಶಸ್ತ್ರಾಸ್ತ್ರಗಳನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ. ಹಾಗಾಗಿ, ಸುಮಾರು 4,000 ಶಸ್ತ್ರಾಸ್ತ್ರಗಳು ಇನ್ನೂ ಹೊರಗಿವೆ. ಈ ಶಸ್ತ್ರಾಸ್ತ್ರಗಳು ಸಮಾಜದಲ್ಲಿ ಹೊರಬರುವವರೆಗೂ, ಈ ರೀತಿಯ ವಿರಳ ಹಿಂಸಾತ್ಮಕ ಚಟುವಟಿಕೆಗಳು ಮುಂದುವರೆಯುತ್ತವೆ” ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ಇಂಡೋ-ಮ್ಯಾನ್ಮಾರ್ ಗಡಿಯ ಮೂಲಕ ಮಾದಕವಸ್ತುಗಳ ಜೊತೆಗೆ ಶಸ್ತ್ರಾಸ್ತ್ರ ಕಳ್ಳಸಾಗಣೆಯ ಬಗ್ಗೆ ಪರಿಶೀಲಿಸಲಾಗಿದೆ ಎಂದು ಕಲಿತಾ ಹೇಳಿದ್ದು, ಇವು ಕೆಲವು ಪ್ರತ್ಯೇಕ ಘಟನೆಗಳು ಆಗಿರಬಹುದು. “ಆದರೆ 4,000 ಶಸ್ತ್ರಾಸ್ತ್ರಗಳು ಈಗಾಗಲೇ ಅವರ ಜೊತೆಗೆ ಇವುದರಿಂದ, ಹೊರಗಿನಿಂದ ಶಸ್ತ್ರಾಸ್ತ್ರಗಳು ಬರುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಒತ್ತಿ ಹೇಳಿದ್ದಾರೆ.

ಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗಳು ಪ್ರಾರಂಭವಾದಾಗಿನಿಂದ 180 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನದ ಬೇಡಿಕೆ ಮುಂದಿಟ್ಟು ಮೈತೇಯಿ ಸಮುದಾಯ ಪ್ರತಿಭಟನೆಯನ್ನು ‘ಬುಡಕಟ್ಟು ಐಕ್ಯತಾ ಮೆರವಣಿಗೆ’ ಆಯೋಜಿಸಲಾಗಿತ್ತು. ಇದರ ನಂತರ ಅಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಮಣಿಪುರದ ಜನಸಂಖ್ಯೆಯ ಸುಮಾರು 53% ರಷ್ಟಿರುವ ಮೈತೈಗಳು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗದವರಾದ ನಾಗಾಗಳು ಮತ್ತು ಕುಕಿಗಳು (40%) ಬೆಟ್ಟಗಾಡಿನ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

ವಿಡಿಯೊ ನೋಡಿ: ವಿಶ್ವಕಪ್‌ ಮೇಲೆ ಕಾಲಿಟ್ಟಾಗ ಚುರ್‌ ಎಂದ ಹೃದಯ ದಲಿತರಿಗೆ ಮೂತ್ರ ಕುಡಿಸಿದಾಗ ಯಾಕೆ ಮಿಡಿಯಲಿಲ್ಲ? #worldcup2023

Donate Janashakthi Media

Leave a Reply

Your email address will not be published. Required fields are marked *