ಮಮತಾ ಬ್ಯಾನರ್ಜಿಯವರ ಶೋಧಗಳು

ಪ್ರಕಾಶ್‌ ಕಾರಟ್‌

ಆರೆಸ್ಸೆಸ್ ಮತ್ತು ಪ್ರಧಾನ ಮಂತ್ರಿಯ ಬಗ್ಗೆ ಹಠಾತ್ ಮೃದುತ್ವವು ಬಹುಶಃ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಸರ್ಕಾರವು ಎದುರಿಸುತ್ತಿರುವ ಗಂಭೀರ ಇಕ್ಕಟ್ಟಿನಿಂದ ಹುಟ್ಟಿಕೊಂಡಿದೆ. ಆರೆಸ್ಸೆಸ್‌ನಲ್ಲಿ ಮತ್ತು ನರೇಂದ್ರ ಮೋದಿಯವರಲ್ಲಿ ಸದ್ಗುಣವನ್ನು ಕಂಡುಕೊಳ್ಳುವುದು ಟಿಎಂಸಿಯ ಭ್ರಷ್ಟ-ಅಪರಾಧಕೂಟವನ್ನು ಹೇಗಾದರೂ ರಕ್ಷಿಸಿಕೊಳ್ಳಬೇಕಾದ ಟಿಎಂಸಿ ಮುಖ್ಯಸ್ಥರ ಹತಾಶೆಯನ್ನು ಸೂಚಿಸುತ್ತದೆ. ಈ ಹೇಳಿಕೆಗಳು ಹಲವಾರು ಜನರಿಗೆ, ಅವರನ್ನು ಫ್ಯಾಸಿಸ್ಟ್ ವಿರೋಧಿ ಹೋರಾಟಗಾರ್ತಿ ಎಂದುಕೊಂಡಿರುವ  ಕೆಲವು ಎಡಪಂಥೀಯರಿಗೂ  ಮುಜುಗರವನ್ನು ಉಂಟುಮಾಡಿರಬೇಕು. ಆದರೆ ಸಿಪಿಐ(ಎಂ) ಮತ್ತುಎಡರಂಗಕ್ಕೆಅಂತಹ ಭ್ರಮೆಗಳೇನೂ ಇರಲಿಲ್ಲ.

 

ಪ್ರಕಾಶ್‌ ಕಾರಟ್‌

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತೀಚೆಗೆ ಕೆಲವು ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಮೊದಲಿಗೆ, ಆರ್‌ಎಸ್‌ಎಸ್ ಅಷ್ಟೇನೂ ಕೆಟ್ಟದ್ದಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇದನ್ನು ಅನುಸರಿಸಿ, ಅವರು ಮತ್ತೊಂದು ಆವಿಷ್ಕಾರವನ್ನು ಮಾಡಿದ್ದಾರೆ–ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ ಕೇಂದ್ರೀಯ ಸಂಸ್ಥೆಗಳ ದುರುಪಯೋಗದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ ಎಂದು ಅವರು ನಂಬುವುದಿಲ್ಲವಂತೆ. ಶಾಸಕಾಂಗ ಸಭೆಯಲ್ಲಿಅವರು, “ಈ ಏಜೆನ್ಸಿಗಳು ಇನ್ನು ಮುಂದೆ ಪ್ರಧಾನಿ ಕಚೇರಿ (ಪಿಎಂಒ) ಅಡಿಯಲ್ಲಿಇರುವುದಿಲ್ಲ ಎಂಬುದು ನಿಮಗೆ ತಿಳಿದಿರಲಿಕ್ಕಿಲ್ಲ. ಅವರು ಈಗ ಕೇಂದ್ರ ಗೃಹ ಸಚಿವಾಲಯದಿಂದ ನಿಯಂತ್ರಿಸಲ್ಪಡುತ್ತಾರೆ”. ಸಿಬಿಐ ಇನ್ನು ಮುಂದೆ ಪ್ರಧಾನಿ ಕಚೇರಿಯಲ್ಲಿಲ್ಲ ಎಂಬ ತೀರ್ಮಾನಕ್ಕೆ ಅವರು ಹೇಗೆ ಬಂದಿದ್ದಾರೆ ಎಂಬುದು ತಿಳಿದಿಲ್ಲ, ಏಕೆಂದರೆ ಅಧಿಕೃತವಾಗಿ ಸಿಬಿಐ ಸಿಬ್ಬಂದಿ ಮತ್ತು ಪಿಎಂಒ ಅಡಿಯಲ್ಲಿ ತರಬೇತಿ ಇಲಾಖೆ ಅಡಿಯಲ್ಲಿದೆ. ಹೀಗಾಗಿ, ವಾಸ್ತವವನ್ನು ತಪ್ಪಾಗಿ ಹೇಳುವ ಮೂಲಕ ಪ್ರಧಾನ ಮಂತ್ರಿಯನ್ನು ದೋಷಮುಕ್ತಗೊಳಿಸಿದರು.

ಉಪರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗೆ ಸಹಾಯ ಮಾಡಲು ಟಿಎಂಸಿ ನಾಯಕಿ ತೆಗೆದುಕೊಂಡ ಮೂರ್ತ ರಾಜಕೀಯ ಹೆಜ್ಜೆಯ ನಂತರ ಈ ಸಮಾಧಾನ ಪಡಿಸುವ ಹೇಳಿಕೆಗಳು ಬಂದಿವೆ. ಉಪರಾಷ್ಟ್ರಪತಿ ಚುನಾವಣೆಗೆ ಸಾಮಾನ್ಯ ಅಭ್ಯರ್ಥಿಯನ್ನು ಹಾಕಲು ಪ್ರತಿಪಕ್ಷಗಳು ನಿರ್ಧರಿಸಿದಾಗ, ಟಿಎಂಸಿ ದೂರವಿರಲು ನಿರ್ಧರಿಸಿತು. ಸರಿಯಾಗಿ ಸಮಾಲೋಚನೆ ನಡೆಸಿಲ್ಲ ಎಂಬ ಕುಂಟು ನೆಪ ಹೇಳಿತು ಆಗ ಪಶ್ಚಿಮ ಬಂಗಾಳದ ಗವರ್ನರ್‌ ಆಗಿದ್ದ ಜಗದೀಪ್‌ ಧನಕರ್  ಬಿಜೆಪಿಯ ಅಭ್ಯರ್ಥಿ ಎಂಬುದು ಅವರ ಈ ನಿರ್ಧಾರವನ್ನು ಅತ್ಯಂತ ವಿಲಕ್ಷಣಗೊಳಿಸಿದೆ.  ಮೂರು ವರ್ಷಗಳ ಕಾಲ ತನ್ನ ಮತ್ತು ತನ್ನ ಸರ್ಕಾರವನ್ನು ಪೀಡಿಸಿದ ವ್ಯಕ್ತಿಯ ವಿರುದ್ಧ ವಿರೋಧ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸದಿರಲು ಮಮತಾ ಬ್ಯಾನರ್ಜಿ ಏಕೆ ನಿರ್ಧರಿಸಿದರು ಎಂಬುದು ಅವರ ಬೆಂಬಲಿಗರೂ ವಿವರಿಸಲು ಸಾಧ್ಯವಿಲ್ಲದ ಸಂಗತಿ.

ಆರೆಸ್ಸೆಸ್ ಮತ್ತು ಪ್ರಧಾನ ಮಂತ್ರಿಯ ಬಗ್ಗೆ ಹಠಾತ್ ಮೃದುತ್ವವು ಬಹುಶಃ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಸರ್ಕಾರವು ಎದುರಿಸುತ್ತಿರುವ ಗಂಭೀರ ಇಕ್ಕಟ್ಟಿನಿಂದ ಹುಟ್ಟಿಕೊಂಡಿದೆ. ಪಾರ್ಥಚಟರ್ಜಿ ಪ್ರಕರಣವು ಸರ್ಕಾರದಲ್ಲಿನ ಹೊಲಸು ಭ್ರಷ್ಟಾಚಾರವನ್ನು ಬಯಲಿಗೆ ತಂದಿದೆ ಮತ್ತು ಸಾರ್ವಜನಿಕರಲ್ಲಿ ವ್ಯಾಪಕ ಅಸಮಾಧಾನ ಮತ್ತು ಕೋಪವನ್ನು ಉಂಟುಮಾಡಿದೆ. ಬಹುಕಾಲದಿಂದ ಇದ್ದಅನುಮಾನ ಅಥವಾ ಗೊತ್ತಿದ್ದದ್ದು ಈಗ ಜನರ ಮುಂದೆ ಕಣ್ಣಿಗೆ ಕಟ್ಟುವಂತೆ ಹೊರಬಂದಿದೆ. ಟಿಎಂಸಿ ಕಪಾಟಿನಿಂದ ಇನ್ನಷ್ಟು ಅಸ್ಥಿಪಂಜರಗಳು  ಹೊರ ಉರುಳುತ್ತಿವೆ. ಕಲ್ಲಿದ್ದಲು ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಇ.ಡಿ. ತನಿಖೆಗಳಿಂದ ಮಮತಾ ಬ್ಯಾನರ್ಜಿ ಆಘಾತಕ್ಕೊಳಗಾಗಿದ್ದಾರೆ, ಇದರಲ್ಲಿಅವರ ಸೋದರಳಿಯ ಮತ್ತು ರಾಜಕೀಯ ಉತ್ತರಾಧಿಕಾರಿ ಅಭಿಷೇಕ್ ಬ್ಯಾನರ್ಜಿ ಮತ್ತುಅವರ ಕುಟುಂಬದ ಸದಸ್ಯರ ವಿಚಾರಣೆ ನಡೆಸಲಾಗುತ್ತಿದೆ.

ಆರೆಸ್ಸೆಸ್‌ನಲ್ಲಿ ಮತ್ತು ನರೇಂದ್ರ ಮೋದಿಯವರಲ್ಲಿ ಸದ್ಗುಣವನ್ನು ಕಂಡುಕೊಳ್ಳುವುದು ಟಿಎಂಸಿಯ ಭ್ರಷ್ಟ-ಅಪರಾಧಕೂಟವನ್ನು ಹೇಗಾದರೂ ರಕ್ಷಿಸಿಕೊಳ್ಳಬೇಕಾದ ಟಿಎಂಸಿ ಮುಖ್ಯಸ್ಥರ ಹತಾಶೆಯನ್ನು ಸೂಚಿಸುತ್ತದೆ. ಆದಾಗ್ಯೂ, ಸಂಘ-ಬಿಜೆಪಿ ಕೂಟದೊಂದಿಗೆ ಇಂತಹ ಮೃದು ಭಾವ ಕಂಡು ಆಶ್ಚರ್ಯಪಡಬೇಕಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಕಮ್ಯುನಿಸ್ಟ್ ವಿರೋಧಿ ಶಕ್ತಿಯಾಗಿ ಬೆಳೆದದ್ದು, ವಾಜಪೇಯಿ ಸರ್ಕಾರದಲ್ಲಿ ಮಮತಾ ಬ್ಯಾನರ್ಜಿ ಸಂಪುಟದಲ್ಲಿ ಮಂತ್ರಿಯಾಗಿರುವುದು ಸೇರಿದಂತೆ ಬಿಜೆಪಿಯೊಂದಿಗಿನ ಮೈತ್ರಿಯ ನೆರಳಲ್ಲಿ ಎಂಬುದು ದಾಖಲಾಗಿರುವ ಸಂಗತಿ.

ಮಮತಾ ಬ್ಯಾನರ್ಜಿಯವರ ಇತ್ತೀಚಿನ ಹೇಳಿಕೆಗಳು ಹಲವಾರು ಜನರಿಗೆ, ಅವರನ್ನು ಫ್ಯಾಸಿಸ್ಟ್ ವಿರೋಧಿ ಹೋರಾಟಗಾರ್ತಿ ಎಂದು ಕಂಡಿರುವ ಕೆಲವು ಎಡಪಂಥೀಯರಿಗೂ ಮುಜುಗರವನ್ನು ಉಂಟುಮಾಡಿರಬೇಕು. ಆದರೆ ಸಿಪಿಐ(ಎಂ) ಮತ್ತು ಎಡರಂಗಕ್ಕೆ ಅಂತಹ ಭ್ರಮೆಗಳೇನೂ ಇರಲಿಲ್ಲ. ಅವರು ಬೃಹತ್ ಭ್ರಷ್ಟಾಚಾರದ ತಪ್ಪಿತಸ್ಥರಿಗೆ ಶಿಕ್ಷೆ ಮತ್ತು ಕ್ರಿಮಿನಲ್-ಭ್ರಷ್ಟಕೂಟವನ್ನು ಕೊನೆಗೊಳಿಸಬೇಕೆಂದು  ಒತ್ತಾಯಿಸಿ ಬೆಳೆಯುತ್ತಿರುವ ಬೃಹತ್ ಪ್ರತಿಭಟನೆಗಳಿಗೆ  ನೇತೃತ್ವಕೊಡುತ್ತಿದ್ದಾರೆ.                                                                                                                                         

Donate Janashakthi Media

Leave a Reply

Your email address will not be published. Required fields are marked *