ಕೋಲಾರ : ಸಂವಿಧಾನದಲ್ಲಿ ಮಕ್ಕಳಿಗೆ ಪ್ರತ್ಯೇಕ ಮೂಲಭೂತ ಹಕ್ಕುಗಳು ಇದ್ದರು ಸಮರ್ಪಕವಾಗಿ ಅನುಷ್ಠನಗೊಳಿಸುವಲ್ಲಿ ವಿಫಲರಾಗಿರುವ ಹಿನ್ನಲೆಯಲ್ಲಿ ಬಾಲಕಾರ್ಮಿಕ ಪದ್ದತಿ ಮತ್ತು ಜೀತ ಪದ್ದತಿ ಇನ್ನು ಜೀವಂತವಾಗಿರುವುದು ವಿಷಾಧನೀಯ ಎಂದು ಒಂದನೆಯ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪವನೇಶ್ ಡಿ. ತಿಳಿಸಿದರು,
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ವತಿಯಿಂದ ಗುರುವಾರ ಬಾಲಕಾರ್ಮಿಕ ಮತ್ತು ಜೀತ ಪದ್ಧತಿಯ ಜಿಲ್ಲಾ ಮಟ್ಟದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು 14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಹಾಕುವುದನ್ನು ನಿಷೇದಿಸಲಾಗಿದೆ, ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸುವುದು ಪೋಷಕರ ಜವಾಬ್ದಾರಿಯಾಗಿದೆ. 14 ವರ್ಷದ ಮೇಲ್ಪಟ್ಟು 18 ವರ್ಷದೊಳಗಿನವರನ್ನು ಅನುಮತಿ ಮೇರೆಗೆ ಸ್ವಂತ ಕೆಲಸಗಳನ್ನು ಮಾಡಿಕೊಳ್ಳಲು ಅನುಮತಿ ಪಡೆಯಬೇಕು 18 ವರ್ಷ ಮೇಲ್ಪಟ್ಟವರು ಮಾತ್ರ ಅಧಿಕೃತವಾಗಿ ಕೆಲಸ ನಿರ್ವಹಿಸಲು ಅರ್ಹರು ಎಂದು ಕಾರ್ಮಿಕ ಕಾಯ್ದೆಯಲ್ಲಿ ತಿಳಿಸಿಲಾಗಿದೆ ಎಂದರು.
ಬಾಲ ಕಾರ್ಮಿಕ ಪದ್ದತಿ ಮತ್ತು ಜೀತಾ ಪದ್ದತಿಗಳ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. 2016 ರಲ್ಲಿ ಕೆಲವೊಂದು ತಿದ್ದುಪಡೆಗಳನ್ನು ಮಾಡಿ ಅನುಷ್ಠಗೊಳಿಸಲು ವಿವಿಧ ಇಲಾಖೆಗಳನ್ನು ರಚಿಸಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಆದರೂ ಈ ಪದ್ದತಿಗಳನ್ನು ಪರಿಪೂರ್ಣವಾಗಿ ನಿರ್ಮೂಲನೆಯಾಗದಿದ್ದರೂ ಸುಧಾರಣೆ ಕಂಡು ಬಂದಿದೆ. ಬಾಲ ಕಾರ್ಮಿಕ ಕಾಯ್ದೆ, ಜೀತಾ ನಿರ್ಮೂಲನೆ ಕಾಯ್ದೆಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಈ ಕಾನೂನುಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವು ಸಂಬಂಧ ಪಟ್ಟ ಇಲಾಖೆಗಳು ಜವಾಬ್ದಾರಿಯಾಗಿದ್ದು ಕಾಯ್ದೆಗಳನ್ನು ಪರಿಪೂರ್ಣವಾಗಿ ಅನುಷ್ಠನಗೊಳಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಮಕ್ಕಳೇ ಈ ದೇಶದ ಭವಿಷ್ಯದ ಪ್ರಜೆಗಳು 18 ವರ್ಷದವರೆಗೆ ಕನಿಷ್ಠ ಶಿಕ್ಷಣ ನೀಡಿ ಅವರನ್ನು ದುಡಿಮೆಗೆ ಕಳುಹಿಸಿದಾಗ ಮಾತ್ರ ದೇಶದ ಅಭಿವೃದ್ದಿ ಕಾಣಲು ಸಾಧ್ಯ. ಕಾಯ್ದೆಗಳನ್ನು ಉಲ್ಲಂಘಿಸುವುದು ಕಾನೂನಿನಲ್ಲಿ ಅಪರಾಧವಾಗಿರುತ್ತದೆ. ಈ ಸಂಬಂಧವಾಗಿ ದೂರುಗಳನ್ನು ಸಲ್ಲಿಸಿದಲ್ಲಿ ಗಂಭೀರವಾಗಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್ ಗಂಗಾದರ್ ಹಡಪದ ಮಾತನಾಡಿ ಬಾಲ ಕಾರ್ಮಿಕ ಪದ್ದತಿ ಮತ್ತು ಜೀತಾ ಪದ್ದತಿಗಳನ್ನು ನಿರ್ಮೂಲ ಮಾಡಲು ಸರ್ಕಾರ ವಿವಿಧ ಇಲಾಖೆಗಳನ್ನು ಸ್ಥಾಪಿಸಿ ಅಧಿಕಾರಿಗಳನ್ನು ನೇಮಿಸಿದೆ., ನಿಷೇಧ ಕಾಯ್ದೆಗಳನ್ನು ಸಮರ್ಪಕವಾಗಿ ಅನುಷ್ಠನಗೊಳಿಸ ಬೇಕಾಗಿರುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಬಡತನ, ದುರ್ಬಲತೆ ಹೊಂದಿರುವ ಕುಟುಂಬಗಳು ಸಾಲದ ಹೊರೆಯನ್ನು ಭರಿಸಲಾಗದೆ ಸಾಲಗಳನ್ನು ತೀರಿಸಲು ಬಾಲ ಕಾರ್ಮಿಕತೆ ಮತ್ತು ಜೀತಕ್ಕೆ ಒಳಗಾಗುತ್ತಿದ್ದಾರೆ. ಈ ಪದ್ದತಿಗಳನ್ನು ನಿಶೇಧಿಸಿ 35 ವರ್ಷಗಳ ಹಿಂದೆ ಕಾನೂನುಗಳನ್ನು ಜಾರಿಗೆ ತಂದು ಕೆಲವೊಂದು ತಿದ್ದಪಡಿಗಳನ್ನು ಮಾಡಿದರೂ ಸಹ ಇನ್ನು ಸುಧಾರಣೆ ಕಾಣದಿರುವುದು ಕಳವಳಕಾರಿಯಾಗಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀಧರ್ ಮಾತನಾಡಿ ಬಾಲಕಾರ್ಮಿಕ ಪದ್ದತಿ ಮತ್ತು ಜೀತ ಪದ್ದತಿಗಳು ಸಮಾಜದಲ್ಲಿ ದೊಡ್ಡ ಪಿಡುಗು ಆಗಿದೆ ನಿಷೇಧ ಕಾಯ್ದೆಗಳು ಜಾರಿ ನಂತರ ಇತ್ತೀಚೆಗೆ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿದೆ. ಗ್ರಾಮೀಣ ಭಾಗದಲ್ಲಿ ಇದಕ್ಕೆ ಸಂಬಂಧ ಪಟ್ಟ ಕಾನೂನುಗಳ ಅರಿವು ಇಲ್ಲದೆ, ಶಿಕ್ಷಣದಿಂದ ಮತ್ತು ವಿವಿಧ ಯೋಜನೆಗಳ ಸೌಲಭ್ಯಗಳಿಂದ ವಂಚಿತರಾಗಿರುವರನ್ನು ಗುರುತಿಸಬೇಕು. ಅವರಿಗೆ ಶಿಕ್ಷಣ ಮತ್ತು ವಿವಿಧ ಸೌಲಭ್ಯಗಳನ್ನು ಕಲ್ಪಿಸಿ ಸಮಾಜದ ಮುಖ್ಯ ವಾಹಿನಿಗೆ ತರಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರಘುಪತಿಗೌಡ, ಬಾಲ ಕಾರ್ಮಿಕ ಕೋಶ ಯೋಜನಾ ನಿರ್ದೇಶಕ ಲಕ್ಷ್ಮೀನಾರಾಯಣ ಎಂ.ಸಿ. ಕಾರ್ಮಿಕ ಅಧಿಕಾರಿ ಶ್ರೀಕಾಂತ್ ಬಿ ಪಾಟೀಲ್, ಕಾರ್ಮೀಕ ನಿರೀಕ್ಷಕ ರೇಣುಕಾ ಪ್ರಸನ್ನ, ಅಧಿಕಾರಿಗಳು ಇದ್ದರು.