ಮಹಾರಾಷ್ಟ್ರ: ಇಂಡಿಯಾ ಕೂಟ ಮತ್ತೆ ಜಯಭೇರಿ ಬಾರಿಸುವುದೆ? ಭಾಗ -1

– ವಸಂತರಾಜ ಎನ್.ಕೆ

ಮಹಾರಾಷ್ಟ್ರದಲ್ಲಿ ವಿಧಾನಸಬಾ ಚುನಾವಣೆಗಳು ನವೆಂಬರ್ 20ರಂದು ನಡೆಯಲಿದೆ. ರಾಷ್ಟ್ರೀಯವಾಗಿಯೂ ಈ ರಾಜ್ಯದ ಚುನಾವಣೆ ನಿರ್ಣಾಯಕವಾದ್ದು ಮತ್ತು ಮಹತ್ವದ್ದಾಗಿದ್ದು ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಇತ್ತೀಚಿನ ಚುನಾವಣಾ ರಾಜಕೀಯ ಹಿನ್ನೆಲೆ, ಇಂದಿನ ಪರಿಸ್ಥಿತಿ, ಚುನಾವಣಾ ವಿಷಯ ಪ್ರಚಾರ, ಸಂಬಾವ್ಯ ಫಲಿತಾಂಶಗಳ ವಿಶ್ಲೇಷಣೆಯಪ್ರಯತ್ನವಿದು. ಈ ಭಾಗ 1ರಲ್ಲಿ ಇತ್ತೀಚಿನ ಚುನಾವಣಾ ರಾಜಕೀಯ ಹಿನ್ನೆಲೆ, ಇಂದಿನ ಪರಿಸ್ಥಿತಿಗಳ ಪರಿಶೀಲನೆಯಿವೆ.

ಈ ಬಾರಿಯ (2024) ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಅನಿರೀಕ್ಷಿತ (ಕನಿಷ್ಠ ಬಿಜೆಪಿಗೆ) ಮತ್ತು ಬಿಜೆಪಿ ವಿರೋಧಿ ಅಲೆ ಸ್ಪಷ್ಟವಾಗಿ ಕಂಡು ಬಂದಿದ್ದು ಉತ್ತರ ಪ್ರದೇಶ ಬಿಟ್ಟರೆ, ಮಹಾರಾಷ್ಟ್ರದಲ್ಲಿ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಬಹುಮತ ಕಳೆದುಕೊಂಡ ನಂತರ ನಾಲ್ಕು ರಾಜ್ಯಗಳ ಚುನಾವಣೆಯನ್ನು ಒಟ್ಟಿಗೆ ನಡೆಸಲು ಹಿಂಜರಿಯಿತು. ಹರಿಯಾಣ ಮತ್ತು ಜಮ್ಮ-ಕಾಶ್ಮೀರ ಚುನಾವಣೆಗಳನ್ನು ಮೊದಲ ಹಂತದಲ್ಲಿ ಅಕ್ಟೋಬರ್ ನಲ್ಲಿ, ಹಾಗೂ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆಗಳನ್ನು ನವೆಂಬರ್ ನಲ್ಲಿ ನಡೆಸಲು ನಿರ್ಧರಿಸಿತು.

ಸಾಮಾನ್ಯವಾಗಿ ನಾಲ್ಕೂ ಚುನಾವಣೆಗಳನ್ನು ಒಟ್ಟಿಗೆ ನಡೆಸಬೇಕಾಗಿತ್ತು. ಇದರಲ್ಲಿ ಮಹಾರಾಷ್ಟ್ರದ ಚುನಾವಣೆ ಬಿಜೆಪಿ ಗೆ ಅತ್ಯಂತ ಪ್ರಮುಖವಾದ್ದರಿಂದ ಅದಕ್ಕೆ ಗರಿಷ್ಠ ಸಮಯ ತೆಗೆದುಕೊಂಡಿತು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಅಲ್ಲದೆ, ಮಹಾರಾಷ್ಟದಲ್ಲಿ ಪ್ರಾದೇಶಿಕ ಪಕ್ಷಗಳಾದ ಶಿವಸೇನಾ ಮತ್ತು ಕಾಂಗ್ರೆಸ್ ನಿಂದ ಬೇರ್ಪಡೆಯಾದ ಶರದ ಪವಾರ್ ನಾಯಕತ್ವದ ಎನ್.ಸಿ.ಪಿ (ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ) ಪ್ರಮುಖ ಪಕ್ಷಗಳು. ಶಿವಸೇನಾ ಮತ್ತು ಬಿಜೆಪಿ 1989 ಚುನಾವಣೆಗಳಿಂದ ಮೈತ್ರಿಕೂಟ ರಚಿಸಿ ಜೊತೆಗೆ ಚುನಾವಣೆಗೆ ಸ್ಪರ್ಧಿಸಿ ಹಲವು ಬಾರಿ ಜಂಟಿಯಾಗಿ ಸರಕಾರ ರಚಿಸಿದ್ದು, 2019ರಲ್ಲಿ ಅವುಗಳ ಮೈತ್ರಿ ಮುರಿದು ಬಿತ್ತು. ಅದೇ ರೀತಿ ಕಾಂಗ್ರೆಸ್ -ಎನ್,ಸಿ,ಪಿ 1999ರಿಂದ ಸುಮಾರು 25 ವರ್ಷಗಳಿಂದ ಮೈತ್ರಿಕೂಟದಲ್ಲಿವೆ.

ಇದನ್ನೂ ಓದಿ: ಮಹಾರಾಷ್ಟ್ರ| ಯೋಗಿ ಆದಿತ್ಯನಾಥ್ ಘೋಷಣೆಯನ್ನು ಟೀಕಿಸಿದ ಉಪಮುಖ್ಯಮಂತ್ರಿ ಅಜಿತ್ ಪವಾರ್ –

ಮಹಾರಾಷ್ಟ್ರದಲ್ಲಿ 1952ರಿಂದ 2009ರ ವರೆಗೆ (1978 ಮತ್ತು 1995 ಹೊರತುಪಡಿಸಿ) ಕಾಂಗ್ರೆಸ್ ಭದ್ರಕೋಟೆಯಾಗಿದ್ದು,1995 ರಲ್ಲಿ ಮೊದಲ ಬಾರಿಗೆ ಶಿವಸೇನಾ-ಬಿಜೆಪಿ ಅಧಿಕಾರಕ್ಕೆ ಬಂದಿತ್ತು. 1999ರಲ್ಲಿ ಕಾಂಗ್ರೆಸ್ ನಿಂದ ಎನ್.ಸಿ.ಪಿ ಬೇರ್ಪಡೆಯಾದರೂ, ಕಾಂಗ್ರೆಸ್ ಜತೆಗೆ ಮೈತ್ರಿಕೂಟದಲ್ಲಿತ್ತು. ಮುಖ್ಯ ಸ್ಪರ್ಧೆ 2019ರ ವರೆಗೆ ಶಿವಸೇನಾ-ಬಿಜೆಪಿ ಮತ್ತು ಕಾಂಗ್ರೆಸ್-ಎನ್.ಸಿ.ಪಿ ಕೂಟಗಳ ನಡುವೆಯೇ ಇತ್ತು. 2014 ಮತ್ತು 2019 ರಲ್ಲಿ ಶಿವಸೇನಾ-ಬಿಜೆಪಿ ಕೂಟ ಗೆಲುವು ಸಾಧಿಸಿತ್ತು.

ಈ ಬಾರಿಯ ಚುನಾವಣಾ ಸ್ಪರ್ಧೆಯಲ್ಲಿ ವಿವಿಧ ಪಕ್ಷಗಳ ಬಲಾಬಲ, ಸಂಭಾವ್ಯ ಫಲಿತಾಂಶ ಅರ್ಥ ಮಾಡಿಕೊಳ್ಳಬೇಕಾದರೆ ಕಳೆದ ದು ದಶಕದ ಚುನಾವಣಾ ಫಲಿತಾಂಶಗಳನ್ನು ಪರಿಶೀಲಿಸಬೇಕು. ಕೋಷ್ಟಕ 1 ರಲ್ಲಿ 2014 ವಿಧಾನಸಭೆ, 2019 ಲೋಕಸಭೆ ಮತ್ತು 2019 ವಿಧಾನಸಭೆಗಳಲ್ಲಿ ಸೀಟು ಮತ್ತು ಮತಗಳಿಕೆಯಲ್ಲಿ ಪಕ್ಷಗಳ ಮತ್ತು ಮೈತ್ರಿಕೂಟಗಳ ಬಲಾಬಲಗಳನ್ನು ಕೊಡಲಾಗಿದೆ.

ಕೋಷ್ಟಕ 1ರಿಂದ ಈ ಕೆಳಗಿನ ಅಂಶಗಳನ್ನು ತಿಳಿಯಬಹುದು

* ಈ ಅವಧಿಯಲ್ಲಿ ಎನ್.ಡಿ.ಎ ಕೂಟ ಯು.ಪಿ.ಎ ಕೂಟಕ್ಕಿಂತ ಮತಗಳಿಕೆಯಲ್ಲಿ ಸ್ಪಷ್ಟವಾಗಿ ಮುಂದಿತ್ತು
* ಆದರೂ ವಿಧಾನ ಸಭೆಯಲ್ಲಿ ಯು.ಪಿ.ಎ ಮತ್ತು ಇತರ ಪಕ್ಷಗಳ ಮತಗಳು ಸೇರಿದರೆ ಎನ್.ಡಿ.ಎ ಕೂಟಕ್ಕಿಂತ ಹೆಚ್ಚಿತ್ತು ಮತ್ತು 2014ರಿಂದ 2019ಕ್ಕೆ ಗಮನಾರ್ಹವಾಗಿ ಇಳಿದಿತ್ತು
* ವಿಧಾನ ಸಭೆಯಲ್ಲಿ ಇತರ ಪಕ್ಷಗಳು ಯಾವುದೇ ಕೂಟದ ಜತೆ ಅಥವಾ ಸ್ವತಂತ್ರವಾಗಿ 13-15% ಮತ ಗಳಿಸುತ್ತಿದ್ದವು. ಅವರ ಸೀಟುಗಳು ಗಮನಾರ್ಹ ಏರಿಕೆ ಕಂಡಿತ್ತು
* 2019ರಲ್ಲಿ ವಿಧಾನ ಸಭಾ ಚುನಾವಣೆಗಳಲ್ಲಿ ಬಹುಪಾಲು ಸೀಟು ಗಳಿಸಿ ಗೆದ್ದಿದ್ದರೂ, ಮುಖ್ಯಮಂತ್ರಿ ಪದಕ್ಕೆ ತಿಕ್ಕಾಟದಲ್ಲಿ ಎನ್.ಡಿ.ಎ ಕೂಟ ಮುರಿದು ಬಿತ್ತು. ಕಾಂಗ್ರೆಸ್ ಮತ್ತು ಎನ್.ಸಿಪಿ ಕೂಟ ಶಿವಸೇನಾ ವನ್ನು ತಮ್ಮ ಕೂಟಕ್ಕೆ ಆಹ್ವಾನಿಸಿ ಅದರ ನಾಯಕ ಉದ್ಭವ ಠಾಕ್ರೆ ಅವರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಿ ‘ಮಹಾ ವಿಕಾಸ ಅಘಾಡಿ’ ಎಂಬ ಹೊಸ ಮೈತ್ರಿಕೂಟ ಸ್ಥಾಪಿಸಿತು.

ಆದರೆ ಜೂನ್ 2022ರಲ್ಲಿ ಬಿಜೆಪಿ ತನ್ನ ಪ್ರಭುತ್ವದ ಬಲ ಮತ್ತು ಧನಬಲಗಳನ್ನು ನಗ್ನವಾಗಿ ಬಳಸಿ ‘ಆಪರೇಷನ್ ಕಮಲ’ ನಡೆಸಿ ಶಿವಸೇನಾ ಮತ್ತು ಎನ್.ಸಿ.ಪಿ ಪಕ್ಷಗಳನ್ನು ಒಡೆದು ‘ಮಹಾ ವಿಕಾಸ ಅಘಾಡಿ’ ಸರಕಾರವನ್ನು ಉರುಳಿಸಿ ‘ಮಹಾಯುತಿ’ ಸರಕಾರ ರಚಿಸಿತು. ಈ ಅಸಂವಿಧಾನಿಕ ಕೃತ್ಯಗಳಲ್ಲಿ ಗವರ್ನರ್ ಜತೆಗೆ, ಸುಪ್ರೀಂ ಕೋರ್ಟು, ಚುನಾವಣಾ ಕಮಿಶನ್ ಸಹ ಶಾಮೀಲಾಗಿದ್ದವು. ಇದರಿಂದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪಕ್ಷಗಳ ಕೂಟಗಳ ಬಲಾಬಲ ಬದಲಾಯಿತು. ಲೋಕಸಭಾ ಚುನಾವಣೆಯ ಹೊತ್ತಿಗೆ (2024 ಎಪ್ರಿಲ್) ಪಕ್ಷಗಳ ಬಲಾಬಲ ಕೋಷ್ಟಕ-2 ರಲ್ಲಿ ತೋರಿಸಿದಂತೆ ಇತ್ತು.

ಕೋಷ್ಟಕ-2

ಆದರೆ 2024 ಲೋಕಸಭಾ ಚುನಾವಣೆಯಲ್ಲಿ ಜನ ಪಕ್ಷಗಳ ಕೂಟಗಳ ಬಲಾಬಲವನ್ನು ತಲೆಕೆಳಗು ಮಾಡಿದರು. ಎನ್.ಡಿ.ಎ ಕೂಟ ಭಾರೀ ಸೋಲು ಅನುಭವಿಸಿತು. ಹಿಂದಿನ 41 ಸೀಟು ಮತ್ತು 51.3% ಮತಗಳಿಕೆಯಿಂದ ಕೇವಲ 17 ಸೀಟು ಮತ್ತು 43.55% ಮತಗಳಿಕೆಗೆ ಕುಸಿಯಿತು.

ಮತಗಳಿಕೆಯಲ್ಲಿ ಎನ್.ಡಿ.ಎ ಗಿಂತ ಅಲ್ಪ ಮುನ್ನಡೆ ಮಾತ್ರ ಸಾಧಿಸಿದ್ದ, ಆದರೆ ಅದರ ಹಿಂದಿನ ಸಾದನೆ 32.6% ನಿಂದ 43.71 ಕ್ಕೆ ಜಿಗಿದು, ಇಂಡಿಯಾ ಕೂಟ ಸೀಟು ಗಳಿಕೆಯನ್ನು 30ಕ್ಕೆ ಏರಿಸಿಕೊಂಡಿತು. ಕೋಷ್ಟಕ-2ರ 3ನೇ ಕಾಲಂನಲ್ಲಿ ತೋರಿಸಿದಂತೆ 151 ವಿಧಾನಸಭಾ ಸೀಟುಗಳಲ್ಲಿ ಮುನ್ನಡೆ ಸಾಧಿಸಿತು. ಎನ್.ಡಿ.ಎ 128 ಸೀಟುಗಳಲ್ಲಿ ಮುನ್ನಡೆ ಸಾಧಿಸಿತು. ಈಗಿನ ತನ್ನ ವಿಧಾನಸಭೆಯ ಸ್ಥಾನಕ್ಕೆ ಹೋಲಿಸಿದರೆ ಶಿವಸೇನಾ(ಶಿಂಧೆ) ಹೆಚ್ಚು ಕಡಿಮೆ ಯಥಾಸ್ಥಿತಿ ಕಾಪಾಡಿಕೊಂಡರೆ, ಬಿಜೆಪಿ 20 ಕ್ಷೇತ್ರಗಳಲ್ಲಿ ಮುನ್ನಡೆ ಕಳೆದುಕೊಂಡಿದೆ. ಅಜಿತ್ ಪವಾರ್ ಎನ್,ಸಿಪಿ ಪಕ್ಷದ ಮುನ್ನಡೆ 40ರಿಂದ 6 ಕ್ಕೆ ಕುಸಿದಿದೆ. ಇಂಡಿಯಾ ಕೂಟ ತನ್ನ ಬಲವನ್ನು (69ರಿಂದ 151ಕ್ಕೆ) ಇಮ್ಮಡಿಗೊಳಿಸಿಕೊಂಡಿದೆ.

ಅದೇ ಸಮಯದಲ್ಲಿ, ಬಿಜೆಪಿಯ ‘ಆಪರೇಶನ್’ ಗೆ ಒಳಗಾದ ಪ್ರಾದೇಶಿಕ ಪಕ್ಷಗಳಾದ ಶಿವಸೇನಾ ಮತ್ತು ಎನ್.ಸಿ,ಪಿ ಯ ಮತಗಳಿಕೆಯ ಮೇಲೆ 2024 ಲೋಕಸಭಾ ಚುನಾವಣೆ ವಿರುದ್ಧ ಪರಿಣಾಮಗಳನ್ನು ತೋರಿಸುತ್ತದೆ. 2019 ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಶಿವಸೇನಾ ಬಣಗಳ ಒಟ್ಟು ಮತಗಳಿಕೆ (16.4% ರಿಂದ 29.5%ಗೆ) ಏರಿದೆ. 2014 ವಿಧಾನಸಭೆ, 2019 ಲೋಕಸಭಾ ಚುನಾವಣೆಗಳಿಗಿಂತಲೂ ಹೆಚ್ಚಾಗಿದೆ. ಆದರೆ ಎನ್.ಸಿ.ಪಿ ಬಣಗಳ ಒಟ್ಟು ಮತಗಳಿಕೆ (13.8%) 2019 ರ ವಿಧಾನಸಭಾ ಚುನಾವಣೆಗೆ (16.7%) ಹೋಲಿಸಿದರೆ ಕುಸಿದಿದೆ. ಬಿಜೆಪಿ ಸೀಟುಗಳಲ್ಲಿ ಹೊಡೆತ ತಿಂದಿದ್ದರೂ, ತನ್ನ ಒಟ್ಟು ಮತಗಳಿಕೆಯನ್ನು ಕಾಯ್ದುಕೊಂಡಿದೆ ಎಂಬುದು ಗಮನಾರ್ಹವಾಗಿದೆ. ಆದರೆ ಇದು ಹೊಸ ಸ್ಥಿತಿಯಲ್ಲಿ ಹೆಚ್ಚು ಸೀಟುಗಳಲ್ಲಿ ಸ್ಪರ್ಧಿಸಿದ್ದರಿಂದಲೂ ಇರಬಹುದು.

ಇದನ್ನೂ ಓದಿ: ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಾಲಾ ಮಾಲೀಕ ಬಂಧನ

ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ಈಗಿನ ಸ್ಪರ್ಧೆಯಲ್ಲಿ ಪಕ್ಷ, ಕೂಟಗಳ ಪಾತ್ರವನ್ನು ಕೋಷ್ಟಕ-2 ರಲ್ಲಿ ಕೊನೆಯ ಕಾಲಂ ಕೊಡುತ್ತದೆ. ಪ್ರತಿ ಪಕ್ಷ ಕೂಟದ ಭಾಗವಾಗಿ ಸ್ಪರ್ಧಿಸುತ್ತಿರುವ ಸೀಟುಗಳ ಸಂಖ್ಯೆ ಕೊಡಲಾಗಿದೆ. + ಎಂದು ಕೊಟ್ಟಿರುವ ಸಂಖ್ಯೆ ಕೂಟದ ಇತರ ಪಕ್ಷಗಳಿಗೆ ಕೊಡಲಾಗಿರುವ ಸೀಟುಗಳಲ್ಲಿ ‘ಸ್ನೇಹಪರ ಪೈಪೋಟಿ’ಯಲ್ಲಿ ಸ್ಪರ್ಧಿಸಿರುವ ಹೆಚ್ಚುವರಿ ಕ್ಷೇತ್ರಗಳು ಬಿಜೆಪಿ ಎನ್,ಡಿ.ಎ ಕೂಟ ಕೊಟ್ಟಿರುವ 141 ಸೀಟುಗಳಲ್ಲದೆ 4 ಇತರ ಸೀಟುಗಳಲ್ಲಿ ಎನ್.ಡಿ.ಎ ಕೂಟದ ಮಿತ್ರ ವಿರುದ್ಧ ಸ್ಪರ್ಧಿಸುತ್ತಿದೆ. ಪ್ರತಿ ಕೂಟವು ಕೆಲವು ಸೀಟುಗಳಲ್ಲಿ ಇತರ ಪಕ್ಷಗಳಿಗೆ ಪಕ್ಷೇತರ ಅಭ್ಯರ್ಥಿಗಳಿಗೆ ಬಿಟ್ಟುಕೊಟ್ಟಿದೆ. ಉದಾಹರಣೆಗೆ ಎನ್.ಡಿ.ಎ ರಾಜಾ ಠಾಕ್ರೆಯ ಎಂ.ಎನ್.ಎಸ್ ಗೆ 2 ಸಿಟುಗಳನ್ನು ಬಿಟ್ಟಿದೆ. ಆದರೆ ಎಂ.ಎನ್.ಎಸ್ 100ಕ್ಕೂ ಹೆಚ್ಚು ಸೀಟುಗಳಲ್ಲಿ ಸ್ಪರ್ಧಿಸುತ್ತಿದೆ. ಎನ್.ಡಿ.ಎ/ಯು.ಪಿ.ಎ ಕೂಟದ ಯಾವ ಪಕ್ಷ ಎದುರಾಳಿ ಕೂಟದ ಯಾವ ಪಕ್ಷದ ವಿರುದ್ಧ ಎಷ್ಟು ಸೀಟು ಗಳಲ್ಲಿ ಸ್ಪರ್ಧಿಸುತ್ತಿದೆ ಎಂಬ ವಿವರ ಕೋಷ್ಟಕ 3 ರಲ್ಲಿದೆ.

ಕೋಷ್ಟಕ 3

ಇಲ್ಲಿ ಕಂಡು ಬಂದಂತೆ ಬಹುಪಾಲು ಪೈಪೋಟಿ ಕಾಂಗ್ರೆ್ಸ್ – ಬಿಜೆಪಿ (75), ಶಿವಸೇನಾ ಬಣಗಳ 50), ಎನ್,ಸಿಪಿ-ಬಿಜೆಪಿ(4), ಎನ್.ಸಿ.ಪಿ ಬಣಗಳ (38) ನಡುವೆ ನಡೆಯಲಿವೆ.

ಇಂಡಿಯಾ ಕೂಟದ ಭಾಗವಾಗಿ ಸಮಾಜವಾದಿ ಪಕ್ಷ (2+7), ಸಿಪಿಐ(ಎಂ) (2+1), ಪಿ.ಡಬ್ಲ್ಯೂ,ಪಿ(3+2), ಸಿಪಿಐ(1) ಸೀಟುಗಳಲ್ಲಿ ಸ್ಪರ್ಧಿಸುತ್ತಿವೆ. (+ಮುಂದಿರುವುದು ಕೂಟದೊಳಗೆ ಸ್ನೇಹಪರ ಸ್ಪರ್ಧೆ)

ಎನ್.ಡಿ.ಎ ಕೂಟದ ಭಾಗವಾಗಿ ಜನ ಸುರಾಜ್ಯಶಕ್ತಿ (2+1), ರಾಷ್ಟ್ರೀಯ ಯುವ ಸ್ವಾಭಿಮಾನ ಪಕ್ಷ, (1+1), ಶಾಹು ವಿಕಾಸ ಅಘಾಢಿ (1) ಸೀಟುಗಳಲ್ಲಿ ಸ್ಪರ್ಧಿಸುತ್ತಿವೆ. (+ ಮುಂದಿರುವುದು ಕೂಟದೊಳಗೆ ಸ್ನೇಹಪರ ಸ್ಪರ್ಧೆ)

ಎರಡೂ ಕೂಟಗಳಲ್ಲಿ ಸೀಟು ಹಂಚಿಕೆ ಭಾರೀ ಸವಾಲಿನದ್ದಾಗಿತ್ತು. ಪಕ್ಷಗಳ ನಡುವೆ ಬಹಿರಂಗ ಮತ್ತು ಮುಸುಕಿನ ಗುದ್ದಾಟ ನಡೆದಿತ್ತು. ಸೀಟು ಹಂಚಿಕೆ, ಆಭ್ಯರ್ಥಿ ಘೋಷಣೆ ಆಗುತ್ತಿದ್ದಂತೆ ಭಿನ್ನ ಮತ ಭುಗಿಲೆದ್ದಿತು. ಹಲವಾರು ಕಡೆ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಹಿರಿಯ ನಾಯಕರ ಮಧ್ಯಪ್ರವೇಶದ ನಂತರವೂ ಹಲವು ‘ಸ್ನೇಹಪರ ಪೈಪೋಟಿ’ ಇರುವುದು ಇದರಿಂದಾಗಿ.

ಈ ಎರಡೂ ಕೂಟಗಳಲ್ಲದೆ ಬಿ.ಎಸ್.ಪಿ (288), ಎಂ.ಎನ್.ಎಸ್ (135), ವಂಚಿತ ಬಹುಜನ ಅಘಾಡಿ (110), ಆಜಾದ್ ಸಮಾಜ (ಕಾಂಶಿರಾಂ) – 40, ಎ.ಐಎಂ.ಐ.ಎಂ (16) ಹಲವು ಸೀಟುಗಳಲ್ಲಿ ಪಕ್ಷಗಳೂ ಕಣದಲ್ಲಿವೆ.

ಈ ಹಿನ್ನೆಲೆಯಲ್ಲಿ ಈ ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆಯನ್ನು ನೋಡಬೇಕಾಗಿದೆ. ಈ ಚುನಾವಣೆ ರಾಷ್ಟ್ರೀಯವಾಗಿ ಸಹ ಅತ್ಯಂತ ನಿರ್ಣಾಯಕವಾಗಿದೆ.

ಇದನೂ ನೋಡಿ: ಯುದ್ಧ : ವಿಶ್ವ ಕಾರ್ಪೊರೇಟ್‌ಗಳ ಸಂಚು – ಡಾ. ಅಮರ್‌ ಕುಮಾರ್‌ Janashakthi Media

Donate Janashakthi Media

Leave a Reply

Your email address will not be published. Required fields are marked *