ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆ : ಇವಿಎಂನಲ್ಲಿ ಅಕ್ರಮ ಮರುಚುನಾವಣೆಗೆ ಆಗ್ರಹಿಸಿದ ಸಂಸದ ಸಂಜಯ್ ರಾವತ್‌

ಮುಂಬೈ: ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್‌, ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಯ ಮತದಾನದ ಸಂದರ್ಭ ಇವಿಎಂನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದು, ರಾಜ್ಯದಲ್ಲಿ ಮತಪತ್ರಗಳನ್ನು ಬಳಸಿ ಮರು ಮತದಾನ ನಡೆಸುವಂತೆ ಆಗ್ರಹಿಸಿದ್ದಾರೆ. ಮಹಾರಾಷ್ಟ್ರ 

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಇವಿಎಂಗಳ ದೋಷದ ಬಗ್ಗೆ ಹಲವು ದೂರುಗಳು ಬಂದಿವೆ ಎಂದು ಆರೋಪಿಸಿದರು ಹಾಗೂ ಚುನಾವಣೆಯ ಸಮಗ್ರತೆ ಬಗ್ಗೆ ಪ್ರಶ್ನಿಸಿದರು.

“ಇವಿಎಂಗಳಿಗೆ ಸಂಬಂಧಿಸಿ ನಾವು ಸುಮಾರು 450 ದೂರುಗಳನ್ನು ಸ್ವೀಕರಿಸಿದ್ದೇವೆ. ಪದೇ ಪದೇ ಆಕ್ಷೇಪಗಳನ್ನು ಎತ್ತುತ್ತಿರುವ ಹೊರತಾಗಿಯೂ ಈ ಸಮಸ್ಯೆ ಕುರಿತು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಆದುದರಿಂದ ಈ ಚುನಾವಣೆ ಪಾರದರ್ಶಕವಾಗಿ ನಡೆಸಲಾಗಿದೆ ಎಂದು ನಾವು ಹೇಳುವುದು ಹೇಗೆ ? ಆದುದರಿಂದ ಫಲಿತಾಶವನ್ನು ಬದಿಗಿರಿಸಬೇಕು ಹಾಗೂ ಮತ ಪತ್ರಗಳನ್ನು ಬಳಸಿ ಮತ್ತೆ ಮತದಾನ ನಡೆಸಬೇಕು ಎಂದು ನಾನು ಆಗ್ರಹಿಸುತ್ತೇನೆ” ಎಂದು ರಾವತ್ ಹೇಳಿದರು.

ಇದನ್ನೂ ಓದಿ : ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲ್ಲಲು ಬಿಜೆಪಿ, ಜೆಡಿಎಸ್‌ನವರು  ಸಹಕಾರ ನೀಡಿದ್ದಾರೆ: ಎಸ್.ಟಿ ಸೋಮಶೇಖರ್

ಕೆಲವು ನಿದರ್ಶನಗಳನ್ನು ಉಲ್ಲೇಖಿಸಿದ ಅವರು, ನಾಸಿಕ್‌ನ ಅಭ್ಯರ್ಥಿಗೆ ಅವರ ಕುಟುಂಬದ 65 ಮತಗಳು ಸಿಗಬೇಕಿತ್ತು. ಆದರೆ, ಸಿಕ್ಕಿರುವುದು ಕೇವಲ 4 ಮತಗಳು. ಡೊಂಬಿವಿಲಿಯಲ್ಲಿ ಇವಿಎಂ ಮತಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡುಬಂದಿದೆ. ಚುನಾವಣಾಧಿಕಾರಿಗಳು ಈ ಆಕ್ಷೇಪಗಳನ್ನು ಅಂಗೀಕರಿಸಲು ನಿರಾಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಕೆಲವು ಅಭ್ಯರ್ಥಿಗಳ ಪ್ರಚಂಡ ಗೆಲುವಿನ ವಿಶ್ವಾಸಾರ್ಹತೆ ಕುರಿತು ಕೂಡ ಪ್ರಶ್ನಿಸಿದ ರಾವತ್, 1.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ಗಳಿಸಲು ಅವರು ಯಾವ ಕ್ರಾಂತಿಕಾರಿ ಕೆಲಸ ಮಾಡಿದ್ದಾರೆ ? ಇತ್ತೀಚೆಗೆ ಪಕ್ಷಕ್ಕೆ ಸೇರಿದ ನಾಯಕರು ಕೂಡ ಶಾಸಕರಾಗಿದ್ದಾರೆ. ಇದು ಸಂಶಯಕ್ಕೆ ಕಾರಣವಾಗಿದೆ. ಮೊದಲ ಬಾರಿಗೆ ಇವಿಎಂ ಕುರಿತು ಶರದ್ ಪವಾರ್‌ರಂತಹ ಹಿರಿಯ ನಾಯಕರು ಸಂದೇಹ ವ್ಯಕ್ತಪಡಿಸಿದ್ದಾರೆ. ಆದುದರಿಂದ ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ : ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ, ಆರ್ ಡಿಪಿಆರ್ ಇಲಾಖೆಗಳ ಕಾರ್ಯ ನಿರ್ವಹಣೆಯ ಆಳ ಅಗಲ.. Janashakthi Media

Donate Janashakthi Media

Leave a Reply

Your email address will not be published. Required fields are marked *