ಮುಂಬೈ: ಕಳೆದ ಕೆಲ ದಿನಗಳಿಂದ ತಮ್ಮ ಬಗ್ಗೆ ಕೇಳಿಬರುತ್ತಿರುವ ಅಪಪ್ರಚಾರದ ಬಗ್ಗೆ ತೀವ್ರ ತಲ್ಲಣಗೊಂಡಿದ್ದು, ಪರಂ ಬಿರ್ ಸಿಂಗ್ ಅವರ ಆರೋಪದ ನಂತರ ಕಳೆದ ತಿಂಗಳು ಫೆಬ್ರವರಿ ಮಧ್ಯಭಾಗದಲ್ಲಿ ತಾವು ಆಸ್ಪತ್ರೆಯಲ್ಲಿದ್ದೆನು ಎಂದು ನೇರವಾಗಿ ಸಾಬೀತುಪಡಿಸಲು ಇಚ್ಛಿಸುತ್ತೇನೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಹೇಳಿದ್ದಾರೆ.
ಕಳೆದ ತಿಂಗಳು ಫೆಬ್ರವರಿ ಮಧ್ಯಭಾಗದಲ್ಲಿ ಪೊಲೀಸ್ ಅಧಿಕಾರಿ ಸಚಿನ್ ವಾಜೆಯವರನ್ನು ಕರೆದು ಮುಂಬೈಯ ಹೊಟೇಲ್ ಮತ್ತು ಬಾರ್ ಗಳಿಂದ ಹಣ ಸಂಗ್ರಹಿಸುವಂತೆ ಹೇಳಿದ್ದರು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದ ಪತ್ರದಲ್ಲಿ ಹಿಂದಿನ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬಿರ್ ಸಿಂಗ್ ಆರೋಪಿಸಿದ ನಂತರ ಗೃಹ ಸಚಿವ ದೇಶ್ ಮುಖ್ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ಆಗ್ರಹ ಮಾಡಿತ್ತು. ವಿಷಯ ವ್ಯಾಪಕವಾಗಿ ಚರ್ಚೆ ಆಗಿತ್ತು. ಮಹಾರಾಷ್ಟ್ರದ ಎನ್ ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾ ವಿಕಾಸ್ ಅಘಾಡಿ ಸರ್ಕಾರದ ಮಟ್ಟದಲ್ಲೂ ಸಂಚಲನ ಸೃಷ್ಟಿ ಆಗಿತ್ತು. ಎನ್ ಸಿಪಿಯ ಅಗ್ರ ನಾಯಕ ಶರದ್ ಯಾದವ್ ನೇತೃತ್ವದಲ್ಲಿ ಆ ಪಕ್ಷದ ಮುಖಂಡರು ಹಲವು ಸುತ್ತಿನ ಮಾತುಕತೆ ನಡೆಸಿದರು. ಮಿತ್ರಪಕ್ಷಗಳ ಮಟ್ಟದಲ್ಲಿ ಸಮಾಲೋಚನೆ ಆಯಿತು. ಆದರೆ ಇಷ್ಟೆಲ್ಲ ಆದರೂ ಅನಿಲ್ ದೇಶಮುಖ್ ರಾಜೀನಾಮೆ ಪಡೆದುಕೊಂಡಿಲ್ಲ.
ಘಟನೆಯ ಹಿನ್ನಲೆ : ಗೃಹ ಸಚಿವರು ಸಚಿನ್ ವಾಜೆ ಅವರಿಗೆ ತಿಂಗಳಿಗೆ 100 ಕೋಟಿಗಳನ್ನು ಸಂಗ್ರಹಿಸುವ ಗುರಿ ನೀಡಿದ್ದರು. ಗುರಿ ಸಾಧಿಸಲು ಸುಮಾರು 1,750 ಬಾರ್, ರೆಸ್ಟೋರೆಂಟ್ ಮತ್ತು ಇತರ ಅಂಗಡಿ ಮುಂಗಟ್ಟುಗಳನ್ನು ಗುರಿಯಾಗಿಸಿಕೊಳ್ಳಲು ಹೇಳಿದ್ದರು ಎಂದು ಹಿರಿಯ ಅಧಿಕಾರಿ ಪರಮ್ ಬೀರ್ ಸಿಂಗ್ ಆರೋಪಿಸಿದ್ದಾರೆ ಮುಖ್ಯಮಂತ್ರಿಯವರಿಗೆ ಪತ್ರವನ್ನು ಬರೆದಿದ್ದರು.
ಈ ಪತ್ರದಲ್ಲಿ, “ಮುಂಬೈ ಪೊಲೀಸರ ಅಪರಾಧ ವಿಭಾಗದ ಅಪರಾಧ ಗುಪ್ತಚರ ಘಟಕದ ಮುಖ್ಯಸ್ಥರಾಗಿದ್ದ ಸಚಿನ್ ವಾಜೆ ಅವರನ್ನು ಮಹಾರಾಷ್ಟ್ರದ ಗೌರವಾನ್ವಿತ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರು ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಬಾರಿ ತಮ್ಮ ಅಧಿಕೃತ ನಿವಾಸ ದಯಾನೇಶ್ವರಕ್ಕೆ ಕರೆದಿದ್ದರು. ಗೃಹ ಸಚಿವರು ಹಣ ಸಂಗ್ರಹಿಸಲು ಪದೇ ಪದೇ ಸೂಚನೆ ನೀಡುತ್ತಿದ್ದರು” ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
“ಮಾನ್ಯ ಗೃಹ ಸಚಿವರು ಸಚಿನ್ ವಾಜೆ ಅವರಿಗೆ ತಿಂಗಳಿಗೆ 100 ಕೋಟಿಗಳನ್ನು ಸಂಗ್ರಹಿಸುವ ಗುರಿ ನೀಡಿದ್ದರು. ಗುರಿ ಸಾಧಿಸಲು, ಮಾನ್ಯ ಗೃಹ ಸಚಿವರು ವಾಜೆ ಅವರಿಗೆ ಸುಮಾರು 1,750 ಬಾರ್, ರೆಸ್ಟೋರೆಂಟ್ ಮತ್ತು ಇತರ ಅಂಗಡಿ ಮುಂಗಟ್ಟುಗಳನ್ನು ಗುರಿಯಾಗಿಸಿಕೊಳ್ಳಲು ಹೇಳಿದ್ದರು. ಮುಂಬೈನಲ್ಲಿ ಮತ್ತು ಪ್ರತಿಯೊಂದರಿಂದ ತಲಾ 2-3 ಲಕ್ಷವನ್ನು ಸಂಗ್ರಹಿಸಿದರೆ, ಮಾಸಿಕ-40-50 ಕೋಟಿ ಸಂಗ್ರಹವನ್ನು ಸಾಧಿಸಬಹುದಾಗಿದೆ. ಉಳಿದ ಸಂಗ್ರಹವನ್ನು ಇತರರಿಂದ ಮಾಡಬಹುದೆಂದು ಮಾನ್ಯ ಗೃಹ ಸಚಿವರು ಸೂಚಿಸಿದ್ದರು” ಎಂದು ಪರಮ್ ಬೀರ್ ಸಿಂಗ್ ಆರೋಪಿಸಿದ್ದಾರೆ.
ಇಂದು ಸುಪ್ರೀಂನಲ್ಲಿ ವಿಚಾರಣೆ : ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ಗಳಿಂದ ತಿಂಗಳಿಗೆ 100 ಕೋಟಿ ರೂಪಾಯಿ ವಸೂಲಿ ಮಾಡಿಕೊಡುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಎಂಟು ಪುಟಗಳ ಪತ್ರ ಬರೆದಿದ್ದ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಆ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ
ಈ ಎಲ್ಲಾ ಬೆಳವಣಿಗೆಗಳಿಂದ ಮಹಾರಾಷ್ಟ್ರ ಸರಕಾರಕ್ಕೆ ಮತ್ತು ಶಿವಸೇನೆಗೆ ಸಾಕಷ್ಟು ಮುಜುಗರವಾಗಿದೆ. ಪರಮ್ ಬೀರ್ ಸಿಂಗ್ ರವರ ಆರೋಪ ಗೃಹಸಚಿವರ ತಲೆದಂಡವಾಗುವ ಸಾಧ್ಯತೆಗಳು ಹೆಚ್ಚಿರುವುದನ್ನು ತೋರಿಸುತ್ತದೆ.