ಜೈಭೀಮ್‌ ಸಿನಿಮಾ: ನಟ ಸೂರ್ಯ, ನಿರ್ದೇಶಕ ಜ್ಞಾನವೇಲ್‌ ವಿರುದ್ಧ ದಾಖಲಾದ ಪ್ರಕರಣ ರದ್ದು

ಚೆನ್ನೈ: ತಮಿಳಿನ ಜೈಭೀಮ್ ಸಿನಿಮಾದಲ್ಲಿ ವಣ್ಣಿಯಾರ್ ಸಮುದಾಯವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ನಟ ಸೂರ್ಯ ಹಾಗೂ ನಿರ್ದೇಶಕ ಟಿ ಜೆ ಜ್ಞಾನವೇಲ್‌ ರಾಜ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಮದ್ರಾಸ್‌ ಹೈಕೋರ್ಟ್‌ ರದ್ದುಪಡಿಸಿದೆ.

ಸೂರ್ಯ ಹಾಗೂ ಜ್ಞಾನವೇಲ್‌ ರಾಜ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್‌ ಹೈಕೋರ್ಟಿನ ನ್ಯಾಯಮೂರ್ತಿ ಎನ್. ಸತೀಶ್‌ ಕುಮಾರ್ ಈ ತೀರ್ಪು ಪ್ರಕಟಿಸಿದ್ದು, ಪ್ರಕರಣ ರದ್ದುಪಡಿಸಿದ್ದಾರೆ. ಚಿತ್ರದಲ್ಲಿ ವಣ್ಣಿಯಾರ್ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಚೆನ್ನೈ ಮೂಲದ ವಕೀಲ ಕೆ. ಸಂತೋಷ್ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.

ನಟ ಸೂರ್ಯ ಮತ್ತು ನಿರ್ದೇಶಕ ಜ್ಞಾನವೇಲ್ ರಾಜ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡುವಂತೆ ಸೈದಾಪೇಟ್ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಮೇ 6 ರಂದು ಆದೇಶ ಹೊರಡಿಸಿತ್ತು. ನಂತರ ವೆಲಾಚೇರಿ ಪೊಲೀಸರು ಮೇ 17 ರಂದು ಎಫ್‌ಐಆರ್ ದಾಖಲಿಸಿದ್ದರು.

ಸೈದಾಪೇಟ್ ನ್ಯಾಯಾಲಯದ ನಿರ್ದೇಶನದ ಮೇರೆಗೆ ವೇಲಾಚೇರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದರು. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಸೂರ್ಯ ಮತ್ತು ಜ್ಞಾನವೇಲ್ ಮದ್ರಾಸ್ ಹೈಕೋರ್ಟ್‌ಗೆ ಜಂಟಿ ಅರ್ಜಿ ಸಲ್ಲಿಸಿದ್ದಾರೆ.

ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಕೆ. ಚಂದ್ರು ಅವರು ವಕೀಲರಾಗಿದ್ದಾಗ ನಡೆಸಿದ ಪ್ರಕರಣವೊಂದನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಕೆ ಚಂದ್ರು, ಮಾಜಿ ಐಪಿಪಿ ಪೆರುಮಾಳ ಸ್ವಾಮಿ ಹೆಸರು ಹೊರತುಪಡಿಸಿದರೆ ಉಳಿದ ಎಲ್ಲಾ ಪಾತ್ರಗಳ ಹೆಸರುಗಳನ್ನು ಬದಲಾಯಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *