ಮಧ್ಯಪ್ರದೇಶ: ದಲಿತರಿಗೆ ಮೀಸಲಿಟ್ಟ ಹಣ – ಹಸು, ಧಾರ್ಮಿಕ ಸ್ಥಳಕ್ಕೆ ಬಳಕೆ

ಭೂಪಾಲ್ : ಮಧ್ಯಪ್ರದೇಶ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ನಿಧಿಯ ಒಂದು ಭಾಗವನ್ನು ಧಾರ್ಮಿಕ ಸ್ಥಳಗಳು, ಸ್ಮಾರಕ ರಕ್ಷಣೆ ಹಾಗೂ ಹಸುಗಳ ರಕ್ಷಣೆಗೆ ಖರ್ಚು ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷದ ಈ ನಿರ್ಧಾರಕ್ಕೆ ವ್ಯಾಪಕ ಟೀಕೆಗಳು ಕೇಳಿ ಬಂದಿವೆ. ಗೋ ರಕ್ಷಣೆಗಾಗಿ 95.76 ಕೋಟಿ ರೂ.ಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಗಳಿಂದ ಖರ್ಚು ಮಾಡಿದೆ.

ಅದೇ ರೀತಿ, ಆರು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ 55 ಕೋಟಿ ರೂಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಗಳಿಂದ ಖರ್ಚು ಮಾಡಿದೆ. ಶ್ರೀ ದೇವಿ ಮಹಾಲೋಕ್, ಸೆಹೋರ್‌ನ ಸಲ್ಕಾನ್‌ಪುರ, ಸಂತ ಶ್ರೀ ರವಿದಾಸ್ ಮಹಲೋಕ್, ಸಾಗರ್, ಶ್ರೀ ರಾಮರಾಜ ಮಹಾಲೋಕ್ ಓರ್ಚಾ, ಶ್ರೀ ರಾಮಚಂದ್ರ ವನವಾಸಿ-ಮಹಾಲೋಕ್, ಚಿತ್ರಕೂಟ ಮತ್ತು ಗ್ವಾಲಿಯರ್‌ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಕಕ್ಕಾಗಿ ದಲಿತರ ಹಣವನ್ನು ಖರ್ಚು ಮಾಡುತ್ತಿದೆ.

ಮಧ್ಯಪ್ರದೇಶ್‌, ಕರ್ನಾಟಕದ ನಂತರ SC/ST ಉಪ ಯೋಜನೆಯಿಂದ ಇತರ ಯೋಜನೆಗಳಿಗೆ ಹಣವನ್ನು ಖರ್ಚು ಮಾಡುತ್ತಿರುವ ಎರಡನೇ ರಾಜ್ಯವಾಗಿದೆ. ಕರ್ನಾಟಕ ತನ್ನ ಕಲ್ಯಾಣ ಯೋಜನೆಗೆ ಧನಸಹಾಯಕ್ಕಾಗಿ ಉಪ ಯೋಜನೆಯಿಂದ ₹ 14,000 ಕೋಟಿ ತೆಗೆದುಕೊಳ್ಳಲು ನಿರ್ಧರಿಸಿದೆ.  ಈಗ ಮಧ್ಯ ಪ್ರದೇಶ್‌ ಸರ್ಕಾರವೂ ಕೂಡ ದಲಿತರಿಗೆ ಮೀಸಲಿಟ್ಟ ಹಣವನ್ನು ಇತರ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದಕ್ಕೆ ದಲಿತ ಸಂಘಟನೆ ಹಾಗೂ ಜನಪರ ಸಂಘಟನೆಗಳು ಆಕ್ಷೇಪ ಎತ್ತಿವೆ.

ಇದನ್ನೂ ಓದಿ: ‘ತಾಯಿ’ ಸಹನೆಯ ಕಣಜ

ಬುಡಕಟ್ಟು ಜನಾಂಗದ ನಾಯಕ ವಿನೇಶ್ ಝಾ ಮಧ್ಯಪ್ರದೇಶ್‌ ಸರ್ಕಾರದ ನಡೆಯನ್ನು ವಿರೋಧಿಸಿದ್ದಾರೆ. ಉಪ ಯೋಜನೆಗಾಗಿ ಹಿಂದಿನ ಯೋಜನಾ ಆಯೋಗವು ರೂಪಿಸಿದ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ಟೀಕಿಸಿದ್ದಾರೆ.  ದೇವಾಲಯಗಳು, ವಸ್ತುಸಂಗ್ರಹಾಲಯಗಳು ಮತ್ತು ಗೋಶಾಲೆಗಳ ನಿರ್ಮಾಣಕ್ಕೆ ಎಸ್‌ಸಿ/ಎಸ್‌ಟಿ ಉಪ ಯೋಜನೆ (ಉಪ ಯೋಜನೆ) ಬಳಸುವುದು ಸಮರ್ಥನೀಯವಲ್ಲ ಮತ್ತು ಹಾಗೂ ಯೋಜನೆಯಲ್ಲಿ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.

ಏನಿದು ಎಸ್‌ಸಿ/ಎಸ್‌ಟಿ ಉಪ ಯೋಜನೆ : ಪರಿಶಿಷ್ಟ ಪಂಗಡಗಳ ಉಪ ಯೋಜನೆಯನ್ನು 1974 ರಲ್ಲಿ ಪರಿಚಯಿಸಲಾಯಿತು, ಆದರೆ ಪರಿಶಿಷ್ಟ ಜಾತಿಗಳಿಗೆ 1979 ರಲ್ಲಿ ಪರಿಚಯಿಸಲಾಯಿತು. ಈ ಕ್ರಮಗಳು ಸಂವಿಧಾನದ 46 ನೇ ವಿಧಿಯನ್ನು ಅನುಷ್ಠಾನಗೊಳಿಸುವ ಒಂದು ಮಾರ್ಗವಾಗಿದೆ, ಇದು ರಾಜ್ಯಗಳು ಶಿಕ್ಷಣ ಮತ್ತು ದುರ್ಬಲ ವರ್ಗಗಳ ಆರ್ಥಿಕ ಹಿತಾಸಕ್ತಿಗಳನ್ನು ಉತ್ತೇಜಿಸುವ ಅಗತ್ಯವಿದೆ.

ಇಲ್ಲಿ ಮೀಸಲಿಟ್ಟ ಹಣ ದಲಿತರ ಶಿಕ್ಷಣ ಹಾಗೂ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲು ಮಾತ್ರ ಬಳಸಬೇಕು. ಮೂಲಸೌಕರ್ಯ, ಕಾಮಗಾರಿಗಳಲ್ಲಿ ಇದನ್ನು ಬಳಸುವ ಪರಿಸ್ಥಿತಿ ಎದುರಾದರೆ ವಿಶೇಷ ಸಂದರ್ಭ ಎಂದು ಘೋಷಿಸಲು  ಚರ್ಚೆ ನಡೆಸಿ ಬಳಸಬಹುದಾಗಿದೆ.

ಇದನ್ನೂ ನೋಡಿ: ಶಿರೂರು | ಕಾಳಜಿ ಕೇಂದ್ರಕ್ಕೆ ಜನಪರ ಚಳುವಳಿ ನಾಯಕರ ಭೇಟಿJanashakthi Media

Donate Janashakthi Media

Leave a Reply

Your email address will not be published. Required fields are marked *