ಮದ್ದೂರು : ಹಾಡು ಹಗಲೇ ವ್ಯಕ್ತಿಯೊರ್ವರನ್ನು ಮಾರಕಾಸ್ತ್ರಗಳಿಂದ ಹಲ್ಲೆ ಗೊಳಿಸಿರುವ ಘಟನೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ತಾಲ್ಲೂಕಿನ ಕೊಪ್ಪ ಹೋಬಳಿಯ ಮರಳಿಗ ಗ್ರಾಮದ ಚನ್ನರಾಜು ಎಂಬುವರೇ ತೀವ್ರವಾಗಿ ಹಲ್ಲೆ ಗೊಳಗಾದ ವ್ಯಕ್ತಿಯಾಗಿದ್ದು, ಅದೇ ಗ್ರಾಮದ ನಂದನ್ ಕುಮಾರ್ ಎಂಬುವವರು ಮಚ್ಚಿನಿಂದ ಹಲ್ಲೆ ಮಾಡಿದವರಾಗಿದ್ದಾರೆ.
ಘಟನೆ ವಿವರ : ಮರಳಿಗ ಗ್ರಾಮದ ಜಮೀನೊಂದಕ್ಕೆ ಸಂಬಂಧಿಸಿದಂತೆ ಕೆಲವು ವರ್ಷಗಳಿಂದ ಪ್ರಕರಣ ಪಟ್ಟಣದ ತಹಶೀಲ್ದಾರ್ ನ್ಯಾಯಾಲಯದಲ್ಲಿ ನಡೆಯುತ್ತಿತ್ತು ಎನ್ನಲಾಗಿದ್ದು, ಅದಕೆ ಸಂಬಂಧಿಸಿದಂತೆ ಇಬ್ಬರು ಎದುರುದಾರರಾದ ಚನ್ನರಾಜು ಹಾಗೂ ನಂದನ್ ಕುಮಾರ್ ಎಂಬುವವರು ಮಂಗಳವಾರ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿರುವ ನ್ಯಾಯಾಲಯದ ಹೊರಗೆ, ಕಲಾಪ ಇನ್ನೂ ಆರಂಭ ಗೊಳ್ಳದ ಹಿನ್ನೆಲೆಯಲ್ಲಿ ಕಾಯುತ್ತಿದ್ದರು, ಈ ವೇಳೆ ನಂದನ್ ಕುಮಾರ್ ಚನ್ನರಾಜು ರ ಕಣ್ಣಿಗೆ ಖಾರದ ಪುಡಿ ಎರಚಿ, ಏಕಾ ಏಕಿ ತಾನು ತಂದಿದ್ದ ಮಚ್ಚಿನಿಂದ 20 ಕ್ಕೂ ಹೆಚ್ಚು ಬಾರಿ ಹಲ್ಲೆ ಮಾಡಿದರಿಂದ ತೀವ್ರ ರಕ್ತ ಸ್ರಾವದಿಂದ ಚನ್ನರಾಜು ಕುಸಿದು ಬೀಳುತ್ತಿದ್ದಂತೆಯೇ ಅಲ್ಲಿದ್ದ ಸಾರ್ವಜನಿಕರು ಸಮಯಪ್ರಜ್ಞೆ ಮೆರೆದು ಹಲ್ಲೆ ಕೊರನಿಗೆ ಕಲ್ಲಿನಿಂದ ಹೊಡೆದು ಪೊಲೀಸ್ ರಿಗೆ ಒಪ್ಪಿಸಿದರು.
ಕತ್ತು ಸೇರಿದಂತೆ ಇತರ ಭಾಗಕ್ಕೆ ತೀವ್ರ ಗಾಯಗೊಂಡ ಚನ್ನರಾಜು ರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಡ್ಯದ ಮಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ತಹಶೀಲ್ದಾರ್ ಕಚೇರಿಯ ಮೊದಲೇ ಮಹಡಿಯಿಂದ ನಂದನ್ ಕುಮಾರ್ ಚನ್ನರಾಜು ಅವರನ್ನು ಮಚ್ಚು ಹಿಡಿಕೊಂಡು ಅಟ್ಟಾಡಿಸಿಕೊಂದು ಬಂದ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಈ ರೀತಿಯ ಭಯನಕವಾಗಿ ಓಡಿ ಬರುತ್ತಿದ್ದಂತೆ ಜನರು ಮತ್ತು ತಾಲ್ಲೂಕು ಕಚೇರಿಯ ಅಧಿಕಾರಿಗಳು ಭಯಭೀತರಾಗಿದ್ದರು. ಈ ಘಟನೆಯಿಂದ ಕೆಲಕಾಲ ತಾಲ್ಲೂಕು ಕಚೇರಿ ಆವರಣ ಸ್ತಬ್ದಗೊಂಡಿತು. ಚನ್ನರಾಜು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಮದ್ದೂರು ಪೊಲೀಸ್ ರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.