ನಾಳೆ ಪೂರ್ಣ ಚಂದ್ರಗ್ರಹಣ: ಭಾರತದ ಕೆಲವೆಡೆ ಮಾತ್ರ ಗೋಚರ

ನವದೆಹಲಿ: ಈ ವರ್ಷದ ಮೊದಲ ಚಂದ್ರಗ್ರಹಣ ನಾಳೆ ಗೋಚರವಾಗಲಿದೆ. ಇದು ಸೂಪರ್ ಮೂನ್ ಗ್ರಹಣವಾಗಿರುವುದರಿಂದ ಇದು ವಿಶೇಷವಾಗಿರುತ್ತದೆ. ಕೆಂಪು ರಕ್ತವರ್ಣದಲ್ಲಿ ಕಾಣಿಸುವ ಚಂದ್ರನನ್ನು ಕಣ್ತುಂಬಿಕೊಳ್ಳಬಹುದು.

ಸಂಪೂರ್ಣ ಚಂದ್ರಗ್ರಹಣವು  ಭಾರತದ ಈಶಾನ್ಯ ಭಾಗ ಸೇರಿದಂತೆ ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಒಡಿಶಾದ ಕರಾವಳಿ ಭಾಗ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅಲ್ಪಪ್ರಮಾಣದಲ್ಲಿ ಕಾಣಿಸಿಕೊಳ್ಳಲಿದೆ.

ಭಾರತ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ದಕ್ಷಿಣ ಅಮೆರಿಕಾ, ಉತ್ತರ ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ಪೆಸಿಫಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರ ಭಾಗದಲ್ಲಿ ಗ್ರಹಣ ಸ್ಪಷ್ಟವಾಗಿ ಕಾಣುವುದು.

ಭಾಗಶಃ ಗ್ರಹಣವು ಮಧ್ಯಾಹ್ನ 3.15 ಕ್ಕೆ ಪ್ರಾರಂಭವಾಗಲಿದ್ದು, ಸಂಜೆ 6.23ಕ್ಕೆ ಕೊನೆಗೊಳ್ಳಲಿದೆ. ಸಂಪೂರ್ಣ ಗ್ರಹಣವು ಸಂಜೆ 4.39 ಕ್ಕೆ ಪ್ರಾರಂಭವಾಗಿ ಸಂಜೆ 4.58ಕ್ಕೆ ಕೊನೆಗೊಳ್ಳಲಿದೆ.

ಸಂಜೆ 5.38 ರಿಂದ ಪೋರ್ಟ್ ಬ್ಲೇರ್‌ನಿಂದ 45 ನಿಮಿಷಗಳಷ್ಟು ಮತ್ತು ಸಂಜೆ 6.21 ರಿಂದ ಪುರಿ ಮತ್ತು ಮಾಲ್ಡಾದಿಂದ ಎರಡು ನಿಮಿಷ ಮಾತ್ರ ಕಾಣಸಿಕೊಳ್ಳುತ್ತದೆ.

‘ಭಾರತದಲ್ಲಿ ಚಂದ್ರೋದಯದ ನಂತರ, ಗ್ರಹಣದ ಭಾಗಶಃ ಅಂತ್ಯವು ಈಶಾನ್ಯ ಭಾಗಗಳಿಂದ (ಸಿಕ್ಕಿಂ ಹೊರತುಪಡಿಸಿ), ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಒಡಿಶಾದ ಕೆಲವು ಭಾಗಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅಲ್ಪಾವಧಿಯಲ್ಲಿ ಗೋಚರಿಸುತ್ತದೆ.’ ಎಂದು ಐಎಂಡಿ ಹೇಳಿದೆ.

ಭೂಮಿ, ಸೂರ್ಯ ಮತ್ತು ಚಂದ್ರನ ನಡುವೆ ಸಮತಲ ಏರ್ಪಟ್ಟಾಗ ಇಂತಹ ಗ್ರಹಣಗಳು ಸಂಭವಿಸುತ್ತವೆ. ನಾಳೆ ನಡೆಯುವ ಚಂದ್ರ ಗ್ರಹಣದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಸೂರ್ಯನ ನೆರಳು ಸ್ವಲ್ಪವೂ ಚಂದ್ರ ಮೇಲೆ ಬೀಳದಿರುವ ಕಾರಣದಿಂದ ಚಂದ್ರ ಸಂಪೂರ್ಣವಾಗಿ ಕೆಂಪಗೆ ಕಾಣಿಸುತ್ತಾನೆ. ಇದನ್ನು ರಕ್ತಚಂದ್ರ ಎಂದು ಕರೆಯಲಾಗುವುದು.

ಭೂಮಿಯ ನೆರಳು ಚಂದ್ರನ ಎಲ್ಲಾ ಅಥವಾ ಅಲ್ಪ ಭಾಗದಲ್ಲಿ ಆವರಿಸಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಇದು ಹುಣ್ಣಿಮೆಯ ಸಮಯದಲ್ಲಿ ಮಾತ್ರ ಸಂಭವಿಸಬಹುದು, ಭೂಮಿಯಂತೆ, ಚಂದ್ರನ ಅರ್ಧದಷ್ಟು ಭಾಗವು ಯಾವುದೇ ಸಮಯದಲ್ಲಿ ಸೂರ್ಯನಿಂದ ಪ್ರಕಾಶಿಸಲ್ಪಡುತ್ತದೆ. ಚಂದ್ರ ಮತ್ತು ಸೂರ್ಯ ಭೂಮಿಯ ಎದುರು ಬದಿಗಳಲ್ಲಿ ಹುಣ್ಣಿಮೆ ಸಂಭವಿಸುತ್ತದೆ. ಚಂದ್ರನು ಸಂಪೂರ್ಣವಾಗಿ ಸಮತಟ್ಟಾದ ಕಕ್ಷೆಯನ್ನು ಹೊಂದಿದ್ದರೆ, ಪ್ರತಿ ಹುಣ್ಣಿಮೆಯು ಚಂದ್ರ ಗ್ರಹಣವಾಗಿರುತ್ತದೆ.

ಗ್ರಹಣ ಕಾಣುವ ದೇಶಗಳಲ್ಲೂ ಸಹ 11 ನಿಮಿಷಗಳ ಕಾಲ ಮಾತ್ರ ಪೂರ್ಣಗ್ರಹಣವನ್ನು ವೀಕ್ಷಿಸಬಹುದಾಗಿದೆ. ಬಾಹ್ಯಾಕಾಶದಲ್ಲಿ ನಡೆಯುವ ಈ ಬದಲಾವಣೆಯಿಂದ ಯಾರಿಗೂ ಅಪಾಯ ಇಲ್ಲ.

ಮುಂದಿನ ಚಂದ್ರ ಗ್ರಹಣವು ನವೆಂಬರ್ 19 ರಂದು ಸಂಭವಿಸಲಿದೆ. ಭಾರತದಲ್ಲಿಯೂ ಇದು ಗೋಚರಿಸುತ್ತದೆ. ಇದು ಭಾಗಶಃ ಚಂದ್ರ ಗ್ರಹಣವಾಗಿರುತ್ತದೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಗಡಿಯಲ್ಲಿ ಚಂದ್ರೋದಯದ ನಂತರ ಭಾಗಶಃ ಹಂತದ ಅಂತ್ಯವು ಅಲ್ಪಾವಧಿಗೆ ಗೋಚರಿಸುತ್ತದೆ.

ಹುಣ್ಣಿಮೆಯ ದಿನದಂದು ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಒಂದೇ ರೇಖೆಯಲ್ಲಿ ಬಂದಾಗ ಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ.

Donate Janashakthi Media

Leave a Reply

Your email address will not be published. Required fields are marked *