ಬೆಂಗಳೂರು: ರಾಜ್ಯದಲ್ಲಿ ವಾಣಿಜ್ಯ ಬಳಕೆಗೆ ಅಗತ್ಯವಿರುವ ಎಲ್‌ಪಿಜೆ (LPG) ಸಿಲಿಂಡರ್‌ಗಳ ಪೂರೈಕೆ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಹೊಸ ಹಂಚಿಕೆ ನೀತಿಯನ್ನು ಜಾರಿಗೊಳಿಸಿದೆ. ಈ ಕ್ರಮದ ಮೂಲಕ ಅಗತ್ಯ ಸೇವೆಗಳಿಗೆ ಆದ್ಯತೆಯೊಂದಿಗೆ ಸಿಲಿಂಡರ್‌ಗಳ ಹಂಚಿಕೆಯಾಗಲಿದೆ. ಕರ್ನಾಟಕ
ಸರ್ಕಾರ ಪ್ರಕಟಿಸಿರುವ ಮಾಹಿತಿ ಪ್ರಕಾರ, ಪ್ರತಿದಿನ ಸರಾಸರಿ 7,000 ವಾಣಿಜ್ಯ 19 ಕೆ.ಜಿ ಸಿಲಿಂಡರ್‌ಗಳನ್ನು ಹಂತಬದ್ಧವಾಗಿ ಹಂಚಿಕೆ ಮಾಡಲಾಗುವುದು. ಇದರಲ್ಲಿ:
-
ಆಸ್ಪತ್ರೆಗಳು, ಶಾಲೆಗಳು, ಕಾಲೇಜುಗಳು, ಸಾರ್ವಜನಿಕ ವಸತಿ ಕೇಂದ್ರಗಳು ಮೊದಲಾದ ಉನ್ನತ ಆದ್ಯತಾ ಸೇವೆಗಳಿಗೆ 4,200 ಸಿಲಿಂಡರ್‌ಗಳು ಮೀಸಲಾಗಿವೆ.
-
ವಿಮಾನ ನಿಲ್ದಾಣ, ರೈಲು ಮತ್ತು ಬಸ್ ನಿಲ್ದಾಣದ ಕಾಂಟೀನ್‌ಗಳಿಗೆ 1,200 ಸಿಲಿಂಡರ್‌ಗಳಷ್ಟು ಹಂಚಿಕೆ.
-
ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಉದ್ದಿಮೆಗಳಿಗೆ 1,000 ಸಿಲಿಂಡರ್‌ಗಳು.
-
ಔಷಧ, ಕೃಷಿ, ಮೀನುಗಾರಿಕೆ ಮತ್ತು ಇತರೆ ಕೈಗಾರಿಕಾ ಸೇವೆಗಳಿಗೆ 500 ಸಿಲಿಂಡರ್‌ಗಳಷ್ಟು.
-
ಇತರ ಸಣ್ಣ ಸೇವೆಗಳಿಗೆ 100 ಸಿಲಿಂಡರ್‌ಗಳಷ್ಟು ನಿಯಮಿತ ಹಂಚಿಕೆ.
ಇದನ್ನೂ ನೋಡಿ : ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಗೆ ಖಂಡನೆ: ಸೌದೆ ಒಲೆ ಹಚ್ಚಿ ಸಿಪಿಐ(ಎಂ) ಪ್ರತಿಭಟನೆ Janashakthi Media
ಹಂತಬದ್ಧ ಹಂಚಿಕೆ ನಿಯಮಗಳನ್ನು ತೈಲ ಕಂಪನಿಗಳು (IOCL, BPCL, HPCL) ಅನುಷ್ಠಾನ ಮಾಡುವಂತೆ ನಿರ್ದೇಶಿಸಲಾಗಿದೆ. ನಿಯಮ ಪಾಲನೆ ಆಗದಿದ್ದಲ್ಲಿ ಕಾನೂನಿನಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಹೇಳಿಕೆಯಲ್ಲಿ, ಈ ನಿಯಮವು ವೃದ್ಧಿಸುತ್ತಿರುವ ಜನಸಾಮಾನ್ಯ ಬೇಡಿಕೆ ಮತ್ತು ಪೂರೈಕೆ ನಿರ್ವಹಣೆಯ ಒತ್ತಡದ ಹಿನ್ನೆಲೆಯಲ್ಲಿ ಪರಿಹಾರ ಒದಗಿಸುತ್ತದೆ ಮತ್ತು ಮೂಲಭೂತ ಸೇವೆಗಳಿಗೆ ತೊಂದರೆ ಸಂಭವಿಸದಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಯುದ್ಧದ ಪರಿಣಾಮ: ಭಾರತದಲ್ಲಿ ಅಡುಗೆ ಅನಿಲ ಕೊರತೆ, ಹೋಟೆಲ್‌ಗಳಿಗೆ ಸಂಕಷ್ಟ
