ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಸಿ ಸೌದೆ ಒಲೆ ಉರಿಸೆಂದ ಬಿಜೆಪಿ ಸರ್ಕಾರ !

ಬೆಂಗಳೂರು  : ಕೋವಿಡ್‌ ಕಾರಣದಿಂದಾಗಿ ರಾಜ್ಯದ ಜನತೆ ಕಳೆದೊಂದು ವರ್ಷದಿಂದ  ಅಲ್ಪಮಟ್ಟಿಗೆ ಸುಧಾರಿಸಿಕೊಳ್ಳುತ್ತಾ ಬಂದಿರುವ ಹೊತ್ತಿನಲ್ಲಿ ಕೇಂದ್ರ  ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನು ದುಪ್ಪಟ್ಟು ಮಾಡಿ ಜನತೆಗೆ ಪೆಟ್ಟು ನೀಡಿದೆ.

ಹೌದು,2023ರ ಈ ವರ್ಷವೂ ಕೂಡ ಗೃಹೋಪಯೋಗಿ ಗ್ಯಾಸ್‌ ಸಿಲಿಂಡರ್‌ ಬೆಲೆಯನ್ನು  50 ರೂ. ಗೆ ಹೆಚ್ಚಳ ಮಾಡುವುದಲ್ಲದೆ. ವಾಣಿಜ್ಯ ಸಿಲಿಂಡರ್ ಬೆಲೆ 350.50 ರೂಪಾಯಿಗೆ ತಂದು ನಿಲ್ಲಿಸಿದೆ. ಮೂಲಗಳ ಪ್ರಕಾರ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಅತೀ ಹೆಚ್ಚು ಬೆಲೆ ಏರಿಕೆಗಳಿಂದ ಜನ ತತ್ತರಿಸಿ ಹೋಗಿದ್ದಾರೆಂದು  ಹೇಳಲಾಗುತ್ತಿದೆ.

ಗ್ಯಾಸ್‌ ಸಿಲಿಂಡರ್‌ ಬೆಲೆಯ ಏರಿಕೆಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು ಚುನಾವಣೆಯ ಈ ಹೊತ್ತಿನಲ್ಲಿ ಬಿಜೆಪಿ ಜನತೆ ಇಡಿ ಶಾಪ ಹಾಕುತ್ತಿರುವುದು  ಒಂದೆಡೆಯಾದರೆ ಕಾಂಗ್ರೆಸ್‌, ಜೆಡಿಎಸ್‌, ಸಿಪಿಐಎಂ ಮತ್ತಿತರ ಪಕ್ಷಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿವುದಲ್ಲದೆ ಕೇಂದ್ರ ಸರ್ಕಾರದ ಈ ನಡೆಗೆ ಹಲವಾರು ಕಡೆಗಳಲ್ಲಿ ಸೌದೆ ಒಲೆ ಉರಿಸುವ ಮೂಲಕ ವಿನೂತನ ರೀತಿ ಪ್ರತಿಭಟನೆ ನಡೆಸಿ ರಸ್ತೆಯಲ್ಲಿ ಸೌದೆ ಒಲೆ ಉರಿಸಿ ಅಡುಗೆ ಮಾಡಲಾಗಿದೆ.

ಕಳೆದ ಜನವರಿ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ಬರೋಬ್ಬರಿ 25 ರೂ. ಹೆಚ್ಚಳ ಮಾಡಲಾಗಿತ್ತು. ಜೊತೆಗೆ ಕಳೆದ ಒಂದು ವರ್ಷದಲ್ಲಿ ಸಿಲಿಂಡರ್ ಬೆಲೆ 153.5 ರೂ ಹೆಚ್ಚಳ ಮಾಡುತ್ತಾ ಬಂದಿದ್ದು, ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ನ ಬೆಲೆಯಲ್ಲಿ ಕೊನೆಯ ಬದಲಾವಣೆಯನ್ನು ಅಂದರೆ 14.2 ಕೆಜಿ ಸಿಲಿಂಡರ್ ಬೆಲೆಯನ್ನು 6 ಜುಲೈ 2022 ರಂದು ಮಾಡಲಾಗಿತ್ತು.  2022ರ ಮಾರ್ಚ್ ತಿಂಗಳಿನಲ್ಲಿ ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು 50 ರೂಪಾಯಿಗಳಷ್ಟು ಹೆಚ್ಚಿಸಲಾಯಿತು. ನಂತರ ಮೇ ತಿಂಗಳಲ್ಲಿ ಮತ್ತೆ 50 ರೂ.ಏರಿಸಲಾಯಿತು. ಆ ಬಳಿಕ ಮತ್ತೊಮ್ಮೆ ಅದೇ ತಿಂ ಗಳಲ್ಲಿ ಎರಡನೇ ಬಾರಿಗೆ 3.50 ರೂ. ಹೆಚ್ಚಳವಾಯಿತು. ನಂತರ ಜುಲೈನಲ್ಲಿ ಕೊನೆಯ ಬಾರಿಗೆ 50 ರೂ. ಏರಿಕೆ ಮಾಡಲಾಯಿತು. ಇದಾದ ಬಳಿಕ  2022  ಮೇ 7 ರಂದು 50 ರೂ. ಏರಿಕೆಯಾಗಿದ್ದ ಗೃಹಬಳಕೆಯ 14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ದರವನ್ನು 3.5 ರೂ. ಏರಿಕೆ ಮಾಡಲಾಗಿದೆ. ಈ ಮೂಲಕ ಕಳೆದ ಬಾರಿ 999.50 ರೂ.ಗೆ ಏರಿಕೆಯಾಗಿ ಸಾವಿರ ರೂ. ಅಂಚಿಗೆ ತಲುಪಿದ್ದ ಪ್ರತಿ ಸಿಲಿಂಡರ್ ದರ ಇದೀಗ ಸಾವಿರದ ಗಡಿ ದಾಟಿ 1,003 ರೂ.ಗೆ ಮುಟ್ಟಿದೆ.


 

 

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಗೃಹ ಬಳಕೆಯ 14.2 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್ ದರ ಕಳೆದ ಮೂರು ವರ್ಷಗಳಲ್ಲಿ ಹೆಚ್ಚಳ ಕಂಡು  ಬಂದಿದ್ದು ಹೀಗೆ 

2020 ಮೇ – 585 ರೂಪಾಯಿಗಳು

2021 ಜನವರಿ – 697 ರೂಪಾಯಿಗಳು
2021 ಮಾರ್ಚ್ – 822 ರೂಪಾಯಿಗಳು
2022 ಮಾರ್ಚ್ – 902 ರೂಪಾಯಿಗಳು
2023 ಫೆಬ್ರುವರಿ – 1,055 ರೂಪಾಯಿಗಳು
2023 ಮಾರ್ಚ್ – 1,105 ರೂಪಾಯಿಗಳು


 

ಪ್ರಮುಖ ನಗರಗಳತ್ತ ನಾವು ನೋಡುವುದಾದರೆ ಇಂದಿನಿಂದ

ದಿಲ್ಲಿ – 1003 ರೂಪಾಯಿಗಳು

ಮುಂಬೈ – 1,002 ರೂಪಾಯಿಗಳು

ಕೋಲ್ಕತ್ತಾ – 1,029 ರೂಪಾಯಿಗಳು

ಚೆನ್ನೈ – 1,018.5 ರೂಪಾಯಿಗಳು


2022ರ ಮಾರ್ಚ್‌ನಲ್ಲಿ ಬ್ಯಾರಲ್‌ಗೆ ಸುಮಾರು 100 ಡಾಲರ್‌ನಷ್ಟಿದ್ದ ಕಚ್ಚಾತೈಲ ದರ ಈಗ 77 ಡಾಲರ್‌ಗೆ ಕುಸಿದಿದೆ. ಆದಾಗ್ಯೂ, ಎಲ್‌ಪಿಜಿ ಸಿಲಿಂಡರ್‌ ದರವನ್ನು ಏರಿಕೆ ಮಾಡಿದೆ.

 – ಎಲ್‌ಪಿಜಿ ದರ ಹೆಚ್ಚಳದಲ್ಲಿ ವಿಶ್ವದಲ್ಲಿಯೇ ಭಾರತ ಮೊದಲ ಸ್ಥಾನವನ್ನು ಹೊಂದಿದೆ.

–  ವಿಶ್ವದಲ್ಲಿ ಪೆಟ್ರೋಲ್‌ ದರ ಏರಿಕೆಯಲ್ಲಿ ಭಾರತದ 3ನೇ ಸ್ಥಾನವನ್ನು ಹೊಂದಿದೆ. 

– ಪ್ರಪಂಚದಲ್ಲಿ ಡೀಸೆಲ್‌ ದರ ಏರಿಕೆಯ ದೇಶಗಳಲ್ಲಿ ಭಾರತದ 8ನೇ ಸ್ಥಾನವನ್ನು ಹೊಂದಿದೆ.

 


ಕಚ್ಚಾ ತೈಲದ ಏರಿಳಿತ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದ ಏರಿಳಿತಕ್ಕೂ ದೇಶೀಯವಾಗಿ ಪೆಟ್ರೋಲ್‌, ಡೀಸೆಲ್‌ ಮತ್ತು ಎಲ್‌ಪಿಜಿ ಸಿಲಿಂಡರ್‌ ದರಗಳಿಗೆ ನೇರ ಸಂಬಂಧವಿದೆ ಎಂದು ಕೇಂದ್ರ ಸರಕಾರ ಹೇಳುತ್ತದೆ. ಕಚ್ಚಾ ತೈಲ ಏರಿದಾಗಲೆಲ್ಲ ಇಂಧನ ಮತ್ತು ಎಲ್‌ಪಿಜಿ ಸಿಲಿಂಡರ್‌ ದರಗಳು ಏರಿವೆ. ಆದರೆ, ಕಚ್ಚಾ ತೈಲದ ದರ ಇಳಿದಾಗ ಇಷ್ಟೇ ಮಟ್ಟದಲ್ಲಿ ಇಂಧನ ಮತ್ತು ಎಲ್‌ಪಿಜಿ ಸಿಲಿಂಡರ್‌ ದರಗಳು ಇಳಿಕೆಯಾಗಿಲ್ಲ.

ದಿನಾಂಕ ಪ್ರತಿ ಬ್ಯಾರಲ್‌ ದರ (ಡಾಲರ್‌ಗಳಲ್ಲಿ)
2015 ಜ.21 46.50
2016 ಜ.18 28.55
2017 ಜ.12 48.29
2019 ಜ.14 58.80
2020 ಅ.28 37.86
2021 ಏ.9 61.89
2022 ಜ.12 85.83
2022 ಮೇ 26 119.81
2022 ಸೆ.16 89.43
2023 ಮಾ.1 79.74

ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಗೆ ವಿರೋಧ ಪಕ್ಷಗಳ ವಿರೋಧ ಹೀಗಿದೆ ನೋಡಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌

ಬಡತನ ರೇಖೆ ಕೆಳಗಿದ್ದ 27 ಕೋಟಿ ಜನರನ್ನು UPA ಸರ್ಕಾರ ಮೇಲೆತ್ತಿದೆ. ಆದರೆ BJP ಮತ್ತೆ ಅವರನ್ನು ಬಡತನಕ್ಕೆ ತಳ್ಳಿ, ಸೌದೆ ಒಲೆ ಮೊರೆ ಹೋಗುವಂತೆ ಮಾಡಿದೆ.
ಈಗ ಬಡವರು ಸಿಲಿಂಡರ್‌ಗೆ ಊದುಕಡ್ಡಿ, ಹಾರ ಹಾಕಿ ಪೂಜೆ ಮಾಡಬೇಕಾ? ಅಥವಾ ದುಡಿದ ಅರ್ಧ ಭಾಗವನ್ನು LPGಗೆ ಕೊಡಬೇಕಾ?

ಹೆದರದಿರಿ; ಮಾಸಿಕ ₹2000 ನೀಡುವ ಗೃಹ ಲಕ್ಷ್ಮಿ ಗ್ಯಾರಂಟಿ ಬರ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌  ಅವರು ಟ್ವೀಟ್‌ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ

ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿನೇಶ್ ಕುಕ್ಕುಜಡ್ಕ ರವರು ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಯ ಕುರಿತು ರಚಿಸಿರುವ ವ್ಯಂಗ್ಯ ಚಿತ್ರವನ್ನು ತಮ್ಮ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ

ವ್ಯಂಗ್ಯಚಿತ್ರಗಳು ಎಲ್ಲವನ್ನೂ ಬಿಚ್ಚಿಟ್ಟಿವೆ!

ದೇಶ ಶಿಲಾಯುಗದ ಅಚ್ಚೇ ದಿನಗಳತ್ತ…

Cartoons have exposed the truth!!

Country heading towards the good old days of stone age!!

ಅಡುಗೆ ಅನಿಲ ಸಿಲಿಂಡರ್ ದರ ರೂ.55 ಹೆಚ್ಚಳ,
ಹೊಸ ದರ ರೂ.1,105
ಎಂದು  ಟ್ವೀಟ್‌ ಮಾಡುವ ಮೂಲಕ ತಮ್ಮ ಕೇಂದ್ರ ಸರ್ಕಾರದ ನಡೆಗೆ ವಿರೋಧ ಹೊರಹಾಕಿದ್ದಾರೆ.


ಈ ಹೆಚ್ಚಳದಿಂದ, ಹೆಚ್ಚಿನ ಜನರು ಸಬ್ಸಿಡಿ ಹೊಂದಿರುವ ಅಡುಗೆ ಅನಿಲ ಸಿಲಿಂಡರ್‌ ಗಳನ್ನು ಬಳಸುವುದನ್ನು ಬಿಟ್ಟುಬಿಡುತ್ತಾರೆ. ಏಕೆಂದರೆ ಅವರಿಗೆ ಅದನ್ನು ಖರೀದಿಸಿಲು ಸಾಧ್ಯವಾಗುವುದಿಲ್ಲ. ಈಗಾಗಲೇ, ಉಜ್ವಲ ಯೋಜನೆಯಡಿಯಲ್ಲಿ ಶೇಕಡಾ 10 ಕ್ಕಿಂತ ಹೆಚ್ಚು ಜನರು ಕಳೆದ ವರ್ಷದಲ್ಲಿ ಯಾವುದೇ ರೀಫಿಲ್ ಸಿಲಿಂಡರ್‌ಗಳನ್ನು ತೆಗೆದುಕೊಂಡಿಲ್ಲ. ಸುಮಾರು 12 ಶೇ. ಜನರು ಕೇವಲ 1 ರೀಫಿಲ್ ತೆಗೆದುಕೊಂಡರು. ವರ್ಷಕ್ಕೆ 12 ಸಿಲಿಂಡರುಗಳನ್ನು ಪಡೆಯಬಹುದಾಗಿದ್ದರೂ ಮತ್ತು ಸರಾಸರಿಯಾಗಿ ಕನಿಷ್ಟ  7ಕ್ಕಿಂತ ಹೆಚ್ಚು ಸಿಲಿಂಡರುಗಳ ಅಗತ್ಯವಿದ್ದರೂ, ಒಟ್ಟು 56.5ಶೇ.ದಷ್ಟು ಜನರು ಕೇವಲ 4 ಅಥವಾ ಕಡಿಮೆ ರಿಫೀಲ್‍ಗಳನ್ನು ಸಹ ತೆಗೆದುಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *