ಬೆಳಗಾವಿ: ನಗರದ ಕಿತ್ತೂರಿನ ಸಮೀಪ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಕಾರು ಅಪಘಾತಕ್ಕೀಡಾಗಿದ್ದ ಪ್ರಕರಣ ಸಂಬಂಧ, ಇದೀಗ ಲಾರಿ ಚಾಲಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ಲಾರಿ ಚಾಲಕನನ್ನು ಮಧುಕರ ಕೊಂಡಿರಾಮ ಸೋಮವಂಶ(65) ಎಂದು ಗುರುತಿಸಲಾದೆ. ಈತ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನ ತಕ್ರಾರವಾಡಿ ಗ್ರಾಮದ ಮೂಲದವನು ಎನ್ನಲಾಗಿದೆ.
ಇದನ್ನೂ ಓದಿ: ಸಂವಿಧಾನ ಚೌಕಟ್ಟಿನಲ್ಲಿ ಎಲ್ಲಾ ಸಮುದಾಯಗಳಿಗೆ ಸಮಾನವಾದ ಅವಕಾಶಗಳನ್ನು ಕಲ್ಪಿಸಬೇಕು ಆಹಾರ ಸಚಿವ:- ಕೆಹೆಚ್.ಮುನಿಯಪ್ಪ
ಜನವರಿ 14ರಂದು ಮುಂಜಾನೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಕಾರಿಗೆ ಅಪಘಾತ ಮಾಡಿ ಚಾಲಕನ ಲಾರಿ ನಿಲ್ಲಿಸದೆ ಪರಾರಿಯಾಗಿದ್ದ.ಹೀಗಾಗಿ ಈತನ ವಿರುದ್ಧ ಕಿತ್ತೂರು ಠಾಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಳರ್ ಅವರ ಕಾರು ಚಾಲಕ ಹಿಟ್ ಆಯಂಡ್ ರನ್ ಪ್ರಕರಣ ದಾಖಲಿಸಿದ್ದರು.
ಈ ಕೇಸ್ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಚಿವರ ಕಾರಿಗೆ ತಾಗಿದ್ದ ಲಾರಿಯ ಬಣ್ಣ ಸೇರಿದಂತೆ ಅಪಘಾತದ ಸ್ಥಳದಲ್ಲಿ ಸಿಕ್ಕ ಎಲ್ಲಾ ಸಾಕ್ಷಿಗಳನ್ನು ಎಫ್‌ಎಸ್‌ಎಲ್ ಗೆ ರವಾನೆ ಮಾಡಿದ್ದರು.ಅಂತಿಮವಾಗಿ ಸಿಸಿಟಿವಿ ದೃಶ್ಯ ಆಧರಿಸಿ ಈಗ ಲಾರಿ ಪತ್ತೆ ಹಚ್ಚಿ ಚಾಲಕನನ್ನು ಬಂಧಿಸಲಾಗಿದೆ.
ಇದನ್ನೂ ನೋಡಿ: ದೇಶಕ್ಕೆ ಸುಂದರವಾದ ವ್ಯಾಕರಣ ಬರೆದವರು ಡಾ. ಬಿ.ಆರ್. ಅಂಬೇಡ್ಕರ್ – ಬಿಳಿಮಲೆ Janashakthi Media