ಲೋಕಸಭಾ ಚುನಾವಣೆ 2024 : ಏ 19 ರಿಂದ 7 ಹಂತಗಳಲ್ಲಿ ಮತದಾನ| ಜೂನ್‌ 04ಕ್ಕೆ ಫಲಿತಾಂಶ

ದೇಶದ 543 ಲೋಕಸಭೆ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ

ನವದೆಹಲಿ : ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, 7 ಹಂತಗಳಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗ ಸಿದ್ದತೆ ನಡೆಸಿಕೊಂಡಿದ್ದು, ಜೂನ್‌ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್ ತಿಳಿಸಿದರು. ಲೋಕಸಭಾ ಚುನಾವಣೆ

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಮೊದಲ ಹಂತ 19 ಏಪ್ರಿಲ್ ಮತದಾನ ನಡೆಯಲಿದ್ದು, ಎರಡನೇ ಹಂತ 26 ಏಪ್ರಿಲ್‌ರಂದು ಮತದಾನ ನಡೆಯಲಿದೆ. ಮೂರನೇ ಹಂತ ಮೇ 7 ರಂದು ಮತದಾನ ನಡೆಯಲಿದೆ, ನಾಲ್ಕನೇ ಹಂತ ಮೇ 13 ರಂದು, ಐದನೇ ಹಂತ ಮೇ 20ರಂದು, ಆರನೇ ಹಂತ ಮೇ 25 ರಂದು, ಏಳನೇ ಹಂತ ಜೂನ್ 1 ರಂದು ಮತದಾನ ನಡೆಯಲಿದೆ. ಜೂನ್‌ 04 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು. ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ದೇಶದಲ್ಲಿ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬಂದಿದೆ.

ಮೊದಲ ಹಂತ: ಏಪ್ರಿಲ್‌ 19– 102 ಕ್ಷೇತ್ರಗಳು

2ನೇ ಹಂತ: ಏಪ್ರಿಲ್‌ 26– 89 ಕ್ಷೇತ್ರಗಳು

3ನೇ ಹಂತ: ಮೇ 7– 94 ಕ್ಷೇತ್ರಗಳು

4ನೇ ಹಂತ: ಮೇ 13– 96 ಕ್ಷೇತ್ರಗಳು

5ನೇ ಹಂತ: ಮೇ 20– 49 ಕ್ಷೇತ್ರಗಳು

6ನೇ ಹಂತ: ಮೇ 25– 57 ಕ್ಷೇತ್ರಗಳು

7ನೇ ಹಂತ: ಜೂನ್‌ 1– 57 ಕ್ಷೇತ್ರಗಳು

ಮತದಾನ ಕೇಂದ್ರಗಳಲ್ಲಿ ನೀರು, ಶೌಚಾಲಯ, ಹೆಲ್ಪ್​ಡೆಸ್ಕ್​, ವಿದ್ಯುತ್​ ಸೇರಿ ಮೂಲಕ ಸೌಕರ್ಯಗಳ ವ್ಯವಸ್ಥೆ ಮಾಡಲಾಗುತ್ತದೆ. 85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ವ್ಯವಸ್ಥೆ ಮಾಡಲಾಗುವುದು. 40%ಕ್ಕೂ ಹೆಚ್ಚು ದಿವ್ಯಾಂಗರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಮತದಾನ ಕೇಂದ್ರಗಳಲ್ಲಿ ವ್ಹೀಲ್​ಚೇರ್ ವ್ಯವಸ್ಥೆ ಇರಲಿದ್ದು​, ಸ್ವಯಂಸೇವಕರೂ ಇರಲಿದ್ದಾರೆ ಎಂದರು.

ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಗಳು ಇದ್ದರೆ ಮಾಹಿತಿ ನೀಡಿ, ಸ್ಥಳಿಯ ಪತ್ರಿಕೆಗಳು ಮತ್ತು ಟಿವಿಗಳಲ್ಲಿ ಮಾಹಿತಿ ನೀಡಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದರು. 11 ರಾಜ್ಯಗಳ ಚುನಾವಣೆಯಲ್ಲಿ 3400 ಕೋಟಿ ರೂ. ಸೀಜ್ ಮಾಡಲಾಗಿದೆ. ಚುನಾವಣೆ ವೇಳೆ‌ ವಶಕ್ಕೆ‌ 3400 ಕೋಟಿ ರೂಪಾಯಿ ಸೀಜ್ ಮಾಡಲಾಗಿದೆ. ಮತಗಟ್ಟೆಗಳಲ್ಲಿ ಹಿಂಸಾಚಾರ ನಡೆದರೆ ಜಾಮೀನು ರಹಿತ ಕೇಸ್ ದಾಖಲಿಸಲಾಗುವುದು ಎಂದು ರಾಜೀವ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಲೋಕಸಭಾ ಚುನಾವಣೆ; ಮೊದಲ ಬಾರಿಗೆ ಮನೆಯಿಂದಲೇ ಮತದಾನ ಮಾಡಿ

ಲೋಕಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ 85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. 40 ವರ್ಷ ಮೇಲ್ಪಟ್ಟವರು ಶೇಕಡ 40ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿದವರು ಮನೆಯಿಂದಲೇ ಮತದಾನ ಮಾಡಲು ಬಯಸಿದರೆ ಅವರಿಗೂ ಅವಕಾಶ ಮಾಡಿಕೊಡಲಾಗುತ್ತದೆ. ಇದಕ್ಕೆ ಮೊದಲೇ 12 ಡಿ ಫಾರಂ ಭರ್ತಿ ಮಾಡಿ ಆಯೋಗಕ್ಕೆ ಕೊಡಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದರು.

7 ಹಂತಗಳಲ್ಲಿ ಚುನಾವಣೆ ಏಕೆ? ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಚುನವಾಣಾ ಮುಖ್ಯ ಆಯುಕ್ತ ರಾಜೀವ್‌ ಕುಮಾರ್‌,ದೇಶದ ಪೂರ್ಣ ಭೌಗೋಳಿಕ ವಿಸ್ತೀರ್ಣ ಮತ್ತು ವಾತಾವರಣವನ್ನು ಮನಗೊಂಡು ೭ ಹಂತಗಳಲ್ಲಿ ಚುನಾವಣೆ ಘೋಷಿಸಲಾಗಿದೆ. ಸಾಲುಸಾಲು ಹಬ್ಬಗಳಿವೆ. ದಿನಾಂಕ ಫಿಕ್ಸ್‌ ಮಾಡುವಾಗ ಬಹಳಾನೇ ಅಂತರವಿದೆ. ಸತ್ಯದ ಮೇಲೆ ಪ್ರತಿ ರಾಜ್ಯ ತನ್ನದೇ ಆದ ವ್ಯತ್ಯಾಸವನ್ನು ಹೊಂದಿದೆ. ಭೌಗೋಳಿತ ವಾತಾವರಣವನ್ನು ಹೊಂದಿದೆ. ಅದರದ್ದೇ ಆದ ಐತಿಹಾಸಿಕ ಹಿನ್ನೆಲೆಯ ದಿನಗಳು ಇವೆ.ಅದಕ್ಕಾಗಿಯೇ ೭ ಹಂತಗಳಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ ನಡೆಸಲಾಗುತ್ತಿದೆಯೇ ಹೊರತು ಯಾರ ಪರವಾಗಿಯೂ ಅಲ್ಲ ಎಂದು ಕೇಂದ್ರ ಚುನವಾಣಾ ಮುಖ್ಯ ಆಯುಕ್ತ ರಾಜೀವ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ಘೋಷಣೆ ಬಳಿಕ ಸುದ್ದಿಗಾರರೊಂದಿಗೆ ಅವರ ಪ್ರಶ್ನೆಗಳಿಗೆ ರಾಜೀವ್‌ ಕುಮಾರ್‌ ಉತ್ತರಿಸಿ ಮಾತನಾಡಿದರು. ಇವಿಎಂ ಬಗ್ಗೆ ಹಲವಾರು ಬಾರಿ ಹೇಳಿದ್ದೇನೆ. ದೇಶದಲ್ಲಿ ಅಭಿಯಾನವೂ ನಡೆಯುತಿದೆ. ಈ ಹಿಂದೆಯೂ ೪೦ ಬಾರಿ ಈ ದೇಶದ ಸಾಂವಿಧಾನಿಕ ನ್ಯಾಯಾಲಯಗಳು ಇವಿಎಂ ಮೇಲಿನ ಪ್ರಕರಣಗಳ ಬಗ್ಗೆ ಆರೋಪ ಕೇಳಿಬಂದಿದ್ದರೂ ಯಾವುದೇ ಆರೋಪ ಸತ್ಯವಲ್ಲ ಎಂದು ಸ್ಪಷ್ಟಪಡಿಸಿವೆ. ಯಾವುದೇ ಸಾಕ್ಷ್ಯಪುರಾವೆ ಇಲ್ಲದ ಸುಳ್ಳುಸುಳ್ಳನ್ನು ಇವಿಎಂ ಬಗ್ಗೆ ಅದ್ಯಾವ ತಜ್ಞರೋ ಗೊತ್ತಿಲ್ಲ. ಬಂದು ವಾದ ಮಂಡಿಸುತ್ತಿದ್ದಾರೆ. ರಾಜಕೀಯ ಪಕ್ಷಗಳ ಕೈ ಇವಿಎಂನಲ್ಲಿ ಇಲ್ಲ. ಇವಿಎಂ ಪರೀಕ್ಷೆ 3 ಬಾರಿ ಎಲ್ಲಾ ಪಕ್ಷಗಳ ಎದುರಲ್ಲಿಯೇ ಆಗಿದೆ. ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಎಲ್ಲವೂ ಮಾಹಿತಿ ಇದೆ. ಇವಿಎಂ ಬಗ್ಗೆ ಎಲ್ಲವೂ ಇದೆ. ಪ್ರತಿ ಬಾರಿಯೂ ಇವಿಎಂ ಮೇಲೆಯೇ ಏಕೆ ಆರೋಪ? ಆರೋಪಿಸುವವರ ಪರ ಫಲಿತಾಂಶ ಬಂದಾಗ ಏಕೆ ಮೌನ? ಎಂದು ಸುದ್ದಿಗಾರರ ಪ್ರಶ್ನೆಗೆ ಅವರುಉತ್ತರಿಸಿದರು.

ನಾಲ್ಕು ರಾಜ್ಯಗಳಲ್ಲಿ ಚುನಾವಣೆ : ಆಂಧ್ರಪ್ರದೇಶದಲ್ಲಿ ಮೇ 13ರಂದು ಮತದಾನ ನಡೆಯಲಿದೆ. ಒಡಿಶಾದಲ್ಲಿ ಮೇ 13 ಹಾಗೂ 20ರಂದು ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಲಿದೆ. ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್‌ 19ರಂದು ಮತದಾನ ನಡೆಯಲಿದೆ.

ಕರ್ನಾಟಕ ಲೋಕಸಭಾ ಚುನಾವಣೆ 2024ರ ವೇಳಾಪಟ್ಟಿ ಇಲ್ಲಿದೆ

 

ಮತಗಟ್ಟೆ, ಅಧಿಕಾರಿಗಳು, ಮತದಾರರ ಮಾಹಿತಿ

1.5 ಕೋಟಿ ಮತಗಟ್ಟೆ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು

55 ಲಕ್ಷ ಇವಿಎಂಗಳು

10.5 ಲಕ್ಷ ಮತಗಟ್ಟೆಗಳಲ್ಲಿ ಮತದಾನ

96.8 ಕೋಟಿ ಮತದಾರರು

49.7 ಕೋಟಿ ಪುರುಷ ಮತದಾರರು

47.1 ಕೋಟಿ ಮಹಿಳಾ ಮತದಾರರು

1.8 ಕೋಟಿ ಮೊದಲಬಾರಿಗೆ ಮತದಾನ ಮಾಡುವ ಮತದಾರರು

88.4 ಲಕ್ಷ ಮಂದಿ ಅಂಗವಿಕಲರು

19.1 ಲಕ್ಷ ಸೇವಾ ಮತದಾರರು

82 ಲಕ್ಷ ಮತದಾರರು 85 ವರ್ಷಕ್ಕಿಂತ ಮೇಲ್ಪಟ್ಟವರು

48, 000 ಲಿಂಗತ್ವ ಅಲ್ಪಸಂಖ್ಯಾತ ಮತದಾರರು

19.74 ಕೋಟಿ ಯುವ ಮತದಾರರು (20-29 ವರ್ಷ)

2.18 ಕೋಟಿ ಮಧ್ಯ ವಯಸ್ಕ ಮತದಾರರು (35- 60 ವರ್ಷ)

2.18 ಲಕ್ಷ ಶತಾಯುಷಿ ಮತದಾರರು (100 ವರ್ಷ ದಿಂದ 110 ವರ್ಷ)

Donate Janashakthi Media

Leave a Reply

Your email address will not be published. Required fields are marked *